ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ, ರಾಷ್ಟ್ರಪತಿ ಚುನಾವಣೆಗೆ ಜಾರ್ಖಂಡ್‌ನ ಮಾಜಿ ರಾಜ್ಯಪಾಲೆ ಮತ್ತು ಬುಡಕಟ್ಟು ಸಮುದಾಯದ ನಾಯಕಿ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಇದೇ ಮೊದಲ ಬಾರಿಗೆ ಬುಡಕಟ್ಟು ಸಮುದಾಯದ ಮಹಿಳೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ದೃಷ್ಟಿಯಿಂದ ಸಂಜೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಸದೀಯ ಮಂಡಳಿ ಸಭೆ ನಡೆಯಿತು.
ಸಭೆ ಬಳಿಕ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ನಿರ್ಧಾರವನ್ನು ಪ್ರಕಟಿಸಿದರು.
ವಿಪಕ್ಷಗಳು ತಮ್ಮ ಒಮ್ಮತದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅವರ ಹೆಸರನ್ನು ಘೋಷಿಸಿವೆ.
ಸಂತಲ್ ಸಮುದಾಯದ ದ್ರೌಪದಿ ಮುರ್ಮು 1997ರಲ್ಲಿ ರೈರಂಗ್ಪುರದ ನಗರ ಪಂಚಾಯಿತಿಯ ಕೌನ್ಸಿಲರ್ ಆಗಿ ರಾಜಕೀಯ ಜೀವನ ಆರಂಭಿಸಿದರು.
ಬುದ್ಧಿವಂತಿಕೆ ಮತ್ತು ಚುರುಕಿನ ಆಡಳಿತದಿಂದ ಬಹುಬೇಗ ಮೇಲೇರಿಸಿದರು. 2000ನೇ ಇಸವಿಯಲ್ಲಿ ಒಡಿಶಾ ಸರ್ಕಾರದ ಸಚಿವರಾದರು. 2015ರಲ್ಲಿ ಜಾರ್ಝಂಡ್ ರಾಜ್ಯಪಾಲರಾದರು.
ದ್ರೌಪದಿ ಮುರ್ಮು ಅವರಿಗೆ ಕೇಂದ್ರ ಸರ್ಕಾರ ಬುಧವಾರದಿಂದ ಅನ್ವಯವಾಗುವಂತೆ ಝಡ್ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಿದೆ.
ಕೇಂದ್ರ ಸರ್ಕಾರವು ದ್ರೌಪದಿ ಮುರ್ಮುಗೆ ಕೇಂದ್ರ ಮೀಸಲು ಪೊಲೀಸ್ ಪಡೆಗಳಿಂದ (ಸಿಆರ್‌ಪಿಎಫ್) ಝಡ್ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಿದೆ. ಇಂದಿನಿಂದಲೇ ಇದು ಜಾರಿಗೆ ಬರಲಿದೆ