Wednesday, October 5, 2022

ಸುಳ್ಯ: ಹಲ್ಲೆ ಪ್ರಕರಣ, ಕೆಳ ನ್ಯಾಯಾಲಯದ ತೀರ್ಪನ್ನು ಅಮಾನತ್ತಿನಲ್ಲಿರಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ

ಸುಳ್ಯ: ವಿಧಾನಸಭಾ ಚುನಾವಣೆಯ ಸಂದರ್ಭ ಜಿ.ಪಂ ಸದಸ್ಯೆ ಸರಸ್ವತಿ ಕಾಮತ್ ಮತ್ತು ಇತರ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿ ಮತ್ತು ಅವರ ಜತೆಗಿದ್ದ ಬಿಜೆಪಿ ಕಾರ್ಯಕರ್ತರು ಮರ್ಕಂಜದಲ್ಲಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ನ್ಯಾಯಾಲಯ ನೀಡಿದ ಜೈಲು ಶಿಕ್ಷೆಯ ತೀರ್ಪನ್ನು ಪುತ್ತೂರು ಅಪರ ಜಿಲ್ಲಾ ನ್ಯಾಯಾಲಯ ಅಮಾನತ್ತಿನಲ್ಲಿರಿಸಿದೆ.

2013 ಮೇ 4 ರಂದು ಮರ್ಕಂಜ ಗ್ರಾಮದ ಕುದ್ಕಳಿ ಎಂಬಲ್ಲಿ ಹರೀಶ್ ಕಂಜಿಪಿಲಿ ನೇತೃತ್ವದ ಬಿಜೆಪಿ ಕಾರ್ಯಕರ್ತರ ತಂಡ ಆಗಿನ ಜಿ.ಪಂ ಸದಸ್ಯೆ ಸರಸ್ವತಿ ಕಾಮತ್ ಹಾಗೂ ಇತರ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಸುಳ್ಯ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸೆ.9ರಂದು ನ್ಯಾಯಾಲಯ ತೀರ್ಪು ನೀಡಿತ್ತು.

ಪ್ರಕರಣದ ಆರೋಪಿಗಳಾದ ಹರೀಶ್ ಕಂಜಿಪಿಲಿ, ಈಶ್ವರಪ್ಪ ಗೌಡ ಹರ್ಲಡ್ಕ, ರವಿಚಂದ್ರ ಕೊಡಪಾಲ, ಸವಿನ್ ಕೊಡಪಾಲ, ದಿವಾಕರ ನಾಯಕ್ ಎರ್ಮೆಟ್ಟಿ, ದಿನೇಶ ಚೆನ್ನೂರು, ರಾಮಚಂದ್ರ ಹಲ್ಲಡ್ಕ, ಷಣ್ಣುಖ ಸೂಟೆಗದ್ದೆ, ಧನಂಜಯ ಬೈಕಾಡಿ, ಬಾಲಕೃಷ್ಣ ಕಂಜಿಪಿಲಿ, ಮನೋಹರ, ದೀಪಕ್ ಎಲಿಮಲೆ ಮನೋಜ್ ಎಂ.ಕೆ. ಮತ್ತು ವಿಶ್ವನಾಥ ಸಿ.ಎಲ್. ಯಾನೆ ವಿಕಾಸ್ ರವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ಕೆಲವು ಸಾವಿರ ರೂ. ದಂಡವಿಧಿಸಿದ್ದರು.

ಈ ತೀರ್ಪು ಘೋಷಿಸಿದ ಸುಳ್ಯ ನ್ಯಾಯಾಲಯವು ಆರೋಪಿಗಳಿಗೆ ಮೇಲ್ಮನವಿಗೆ  1ತಿಂಗಳ ಕಾಲಾವಕಾಶ ನೀಡಿ ಜಾಮೀನು ನೀಡಿತ್ತು.

ಇದೀಗ ಆರೋಪಿಗಳು ಅಡಿಶನಲ್ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಇವರ ವಿರುದ್ಧ ಸುಳ್ಯದ ಟ್ರಾಯಲ್‌ ನ್ಯಾಯಾಲವು ನೀಡಿದ ತೀರ್ಪನ್ನು ಅಮಾನತ್ತಿನಲ್ಲಿರಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಶಿಕ್ಷೆ ಘೋಷಿಸಲ್ಪಟ್ಟ ಅಪರಾಧಿಗಳು ಹದಿನೈದು ದಿನಗಳೊಳಗೆ ಟ್ರಯಲ್ ಕೋರ್ಟ್‌ನಲ್ಲಿ ಅವರಿಗೆ ವಿಧಿಸಿದ ದಂಡವನ್ನು ಡಿಪಾಸಿಟ್ ರೂಪದಲ್ಲಿ ಕಟ್ಟಬೇಕು ಮತ್ತು ಪ್ರತಿಯೊಬ್ಬ ಆರೋಪಿ ಕೂಡ ತಲಾ ಐವತ್ತು ಸಾವಿರ ರೂ. ವೈಯಕ್ತಿಕ ಬಾಂಡ್ ಕೋರ್ಟಿಗೆ ಸಲ್ಲಿಸಬೇಕು ಮತ್ತು ತಲಾ ಒಬ್ಬರ ಶೂರಿಟಿ ಒದಗಿಸಬೇಕು ಎಂದು ಜಿಲ್ಲಾ ಸೆಷನ್ಸ್‌ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

ಸುಳ್ಯದ ನ್ಯಾಯಾಲಯದಿಂದ ತರಿಸಲ್ಪಟ್ಟಿ ದಾಖಲೆಗಳ ಆಧಾರದಲ್ಲಿ ನ.8 ರಿಂದ ವಿಚಾರಣೆ ನಡೆಸುವುದಾಗಿ ಪುತ್ತೂರು ಜಿಲ್ಲಾ ನ್ಯಾಯಾಲಯ ತಿಳಿಸಿದೆ.

ಹರೀಶ್ ಕಂಜಿಪಿಲಿ ಮತ್ತವರ ತ೦ಡದ ಪರವಾಗಿ ಪುತ್ತೂರಿನ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದಲ್ಲಿ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು.

LEAVE A REPLY

Please enter your comment!
Please enter your name here

Hot Topics

‘ಆದಿಪುರುಷ’ ನಿಗೆ ಆರಂಭದಲ್ಲೇ ಕಂಟಕ : ರಾಮಾಯಣಕ್ಕೆ ಅವಮಾನ ಮಾಡಿದಕ್ಕೆ ಬಾಹುಬಲಿ ನಟ ಪ್ರಭಾಸ್ ಅಂಡ್ ಟೀಮ್ ವಿರುದ್ದ ಗೃಹ ಸಚಿವರು ಗರಂ..!

ಹೈದ್ರಾಬಾದ್ :  ಬಾಹುಬಲಿ ಫೇಮ್‌ ನ ಪ್ರಭಾಸ್ ನಟಿಸಿರುವ ‘ಆದಿಪುರುಷ್’ ಸಿನಿಮಾದಲ್ಲಿ ರಾಮಾಯಣಕ್ಕೆ ಅಪಮಾನ ಮಾಡಿದ್ದಾರೆಂದು ಹಿಂದೂ ಪರ ಸಂಘಟನೆಗಳು ಆರೋಪಿಸಿದ್ದು ಸಿನಿಮಾವನ್ನು ಬಹಿಷ್ಕರಿಸಲು ಕರೆ ನೀಡಿವೆ .ರಾಮಾಯಣದ ಪಾತ್ರಗಳನ್ನು ತಿರುಚಿ ತಮಗಿಷ್ಟ...

ಉಡುಪಿಯಲ್ಲಿ ಬೋನಿಗೆ ಬಿದ್ದ ಚಿರತೆ: ಮತ್ತೆ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

ಉಡುಪಿ: ಜಿಲ್ಲೆಯ ಮಟಪಾಡಿ ಗ್ರಾಮದಲ್ಲಿ ಊರಿನ ಜನರು ಅರಣ್ಯ ಇಲಾಖೆ ಮೂಲಕ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.ಮಟಪಾಡಿ ಗ್ರಾಮದಲ್ಲಿ ಬಹಳಷ್ಟು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಮೂಲಕ ಬೋನನ್ನು...

ದೇವಳದ ಅಂಗಳದಲ್ಲಿ ಐಟಂ ಸಾಂಗ್‍ಗೆ ಡ್ಯಾನ್ಸ್ – ಯುವತಿ ವಿರುದ್ಧ FIR

ಭೋಪಾಲ್: ಯುವತಿಯೊಬ್ಬಳು ದೇವಸ್ಥಾನವೊಂದರ ಆವರದಲ್ಲಿ ಐಟಂ ಸಾಂಗ್‍ವೊಂದಕ್ಕೆ ಡ್ಯಾನ್ಸ್ ಮಾಡಿ ಕೆಂಗಣ್ದಣಿಗೆ ಗುರಿಯಾದ ಘಟನೆ  ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.ಇನ್‍ಸ್ಟಾಗ್ರಾಮ್‍ನಲ್ಲಿ 4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೋಮದಿರುವ ನೇಹಾ ಎಂಬಾಕೆ ದೇವಸ್ಥಾನದಲ್ಲಿ ಮುನ್ನಿ...