Connect with us

DAKSHINA KANNADA

ಮಂಗಳಮುಖಿಯರಲ್ಲಿದೆ ‘ರಂಡೆ ಹುಣ್ಣಿಮೆ’ ವಿಶೇಷ ಆಚರಣೆ-ಮಂಗಳೂರಲ್ಲೂ ಆಚರಿಸಿದ ಬಗೆ ಹೇಗಿತ್ತು ಗೊತ್ತಾ…

Published

on

ಮಂಗಳೂರು: ಮಂಗಳಮುಖಿ ಎಂದರೆ ಹೆಣ್ಣು ಅಲ್ಲದ ಗಂಡು ಅಲ್ಲದ ಒಂದು ವ್ಯಕ್ತಿಯ ಮನಃಸ್ಥಿತಿ. ಇವರನ್ನು ‘ತೃತೀಯ ಲಿಂಗಿ’ ಅಥವಾ ‘ಮಂಗಳಮುಖಿ’ ಎಂದೂ ಕರೆಯುತ್ತಾರೆ. ಅನ್ಯಧರ್ಮದಲ್ಲಿರುವಂತೆ ಇವರಲ್ಲೂ ಕೂಡಾ ವಿಶೇಷ ಆಚಾರ, ಸಂಪ್ರದಾಯಗಳಿವೆ. ಮಂಗಳಮುಖಿಯರು ‘ರಂಡೆ ಹುಣ್ಣಿಮೆ’ ಎನ್ನುವ ವಿಶೇಷ ಆಚರಣೆ ಮಂಗಳೂರಿನಲ್ಲೂ ಮಾಡಿದರು.

ಇವರ ಹಾಡು, ಪೂಜೆ ಮಾಡುವುದು ಕಂಡಾಗ ಇದೇನು ವಿಶೇಷ ಸಂಪ್ರದಾಯ ಎಂದು ನಿಮಗನ್ನಿಸಬಹುದು. ಇವರೆಲ್ಲರೂ ಮಂಗಳಮುಖಿಯರು.


ಮಂಗಳಮುಖಿಯರ ಸಮಾಜದಲ್ಲಿಯೂ ವಿಭಿನ್ನ, ವಿಶೇಷ ಸಂಪ್ರದಾಯವಿದೆ. ಅದರಲ್ಲಿ ಒಂದು ರಂಡೆ ಹುಣ್ಣಿಮೆ ಒಂದು. ಪ್ರಸಿದ್ಧವಾದ ರೇಣುಕಾದೇವಿಯ ಶಕ್ತಿಪೀಠ ಯಲ್ಲಮ್ಮನಗುಡ್ಡದಲ್ಲಿ ಹೊಸ್ತಿಲ ಹುಣ್ಣಿಮೆಯನ್ನು `ರಂಡೆ ಹುಣ್ಣಿಮೆಯಾಗಿ ಆಚರಿಸುವ ಸಂದರ್ಭದಲ್ಲಿಯೇ ಮಂಗಳಮುಖಿಯರು ಈ ಸಂಪ್ರದಾಯ ಆಚರಿಸುತ್ತಿದ್ದು, ಮಂಗಳೂರಿನ ಕುಳಾಯಿಯ ಮಂಗಳಮುಖಿಯರು ಈ ಆಚರಣೆ ನಡೆಸಿದರು.


ಜಮದಗ್ನಿ ಋಷಿ ಅನ್ಯೋನ್ಯವಾಗಿ ಸಂಸಾರ ಮಾಡುತ್ತಿದ್ದ ಸಂದರ್ಭ ರೇಣುಕಾದೇವಿ 5 ಮಂದಿಗೆ ಜನ್ಮ ನೀಡುತ್ತಾರೆ. ಜಮದಗ್ನಿ ಋಷಿಯ ಬಳಿ ಕಾರ್ತವೀರ್ಯಾರ್ಜುನ ಕಾಮಧೇನು ಇರುತ್ತದೆ. ಅದು ಏನು ಬೇಡಿದರೂ ಈ ಭೂಮಿಯಲ್ಲಿ ಕೊಡುವಂತ ಒಂದು ತೆರನಾದ ವರ. ಅದಕ್ಕೆ ಇವರು ಆಸೆ ಬಿದ್ದು ಕಾರ್ತಿಕ ರಾಜನು ಬಿಲ್ಲಿನಲ್ಲಿ ಜಮದಗ್ನಿ ಮುನಿಗಳು ತಪೋನಿರತರಾಗಿದ್ದಾಗ ಅವರ ಶಿರಚ್ಛೇದನ ಮಾಡಿ ಅಪಹರಿಸುವನು.


ಕೊಂದಾಗ ಒಂದು ತಿಂಗಳು ಅವರಿಗೆ ಮರಣ ಬರುತ್ತೆ. ಆ ಸಂದರ್ಭ ರೇಣುಕಾದೇವಿ ಮಗ ಪರಶುರಾಮನನ್ನು ಕೂಗುತ್ತಾಳೆ. ಆಗ ಪರಶುರಾಮ ಬಂದು ಏನಾಯ್ತು ಕೇಳಿದಾಗ ಅವಳು ಎಲ್ಲವನ್ನು ವಿವರಿಸುತ್ತಾಳೆ. ಕೂಡಲೇ ತಂದೆಯನ್ನು ಉಳಿಸಿಕೊಳ್ಳಲು ಪರಶುರಾಮ ಕಾಡಿಗೆ ಹೋಗಿ ಸಂಜೀವಿನಿ ಬೇರು ತಂದು ನಂತರ ಜಮದಗ್ನಿ ಋಷಿಯನ್ನು ಕಾಪಾಡುತ್ತಾನೆ.


ಆದರೆ ರೇಣುಕಾದೇವಿ ವರ್ಷದಲ್ಲಿ ಒಂದು ತಿಂಗಳು ರೇಣುಕಾದೇವಿ ವಿಧವೆಯಾಗಿ ಉಳಿದ 11ತಿಂಗಳು ಮುತ್ತೈದೆಯಾಗಿ ಇರುತ್ತಾರೆ ಎಂಬ ನಂಬಿಕೆಯಿದೆ. ರೇಣುಕಾಮಾತೆ ಮುತ್ತೈದೆ ಭಾಗ್ಯ ಕಳೆದುಕೊಂಡು ವಿಧವೆಯಾದಳು ಎಂಬ ಕಾರಣಕ್ಕಾಗಿ ಮಂಗಳಮುಖಿಯರು ಕೂಡಾ ರಂಡೆ ಹುಣ್ಣಿಮೆ ಆಚರಿಸುತ್ತಾರೆ. 41ದಿನದವರೆಗೆ ಇವರು ಕೂಡಾ ವಿಧವೆಯರಂತೆ ಇದ್ದು ಸಂಸ್ಕೃತಿ ಆಚರಿಸುತ್ತಾರೆ.

ಈ ಬಗ್ಗೆ ವಿವರಿಸುವ ಮಂಗಳಮುಖಿ ಸಂಜನಾ ‘ಈ ದಿನ ನಮಗೆ ಏನೂ ಮಾಡುವಂತಿಲ್ಲ. ಇದು ಕರಾಳ ದಿನ. ದೊಡ್ಡವರೆಲ್ಲ ಮಾಡುತ್ತಿದ್ದ ಸಂಪ್ರದಾಯವನ್ನೇ ನಾವು ಮುಂದುವರೆಸಿಕೊಂಡು ಹೋಗ್ತಾ ಇದ್ದೇವೆ. ಮುಖ್ಯವಾಗಿ ಧಾರವಾಡದ ಸವದತ್ತ ಎಲ್ಲಮ್ಮನ ಗುಡಿಯಲ್ಲಿ ಕರ್ನಾಟಕದಲ್ಲಿ ನಡೆಯುತ್ತೆ.
ಆದ್ದರಿಂದ ಜೋಗತಿ ಅನ್ವಯ ರೀತಿಯಲ್ಲಿ ಇರುವ ನಾವು ಈ ಕ್ರಮವನ್ನು ಅನುಸರಿಸುತ್ತೇವೆ. ತಾಯಿ ವಿಧವೆಯಾದ ನಂತರ ನಾವು ಕೂಡಾ ಆಗುತ್ತೇವೆ ಎಂದು ನಮ್ಮ ಪೂರ್ವಜರು ಸಂಪ್ರದಾಯ ಅನುಸರಿಸಿಕೊಂಡು ಬರುತ್ತೇವೆ.


ದೇವಿಯ ಆರಾಧಕರಾದ ಜೋಗಪ್ಪ, ಜೋಗತಿಯರೂ ಸುಮಂಗಲೆಯ ಸಂಕೇತಗಳಾದ ಬಳೆ, ಅರಿಷಿಣ-ಕುಂಕುಮ, ಹೂವು, ಕಾಲುಂಗುರ ಮುಂತಾದಗಳನ್ನು ತೆಗೆಯುತ್ತಾರೆ. ಬಳಿಕ ಜೋಗತಿ ಹಾಡು ಹಾಡುತ್ತಾ ದೇವಿಗೆ ವಿಶೇಷ ಪೂಜೆ ಮಾಡುತ್ತಾರೆ.

ಕಾಯಿ, ಕರ್ಪೂರ, ಹಣ್ಣುಗಳ ಜತೆಗೆ ಹರಕೆ ತೀರಿಸಿ ಪುನೀತರಾಗುತ್ತಾರೆ. ಈ ವರ್ಷವೂ ಇದನ್ನು ನಾವು ಮಾಡಿದ್ದೇವೆ. ಇಂದು ನಮಗೆ ತುಂಬಾ ಬೇಸರದ ದಿನ ಎನ್ನುತ್ತಾರೆ ಮಂಗಳಮುಖಿಯರು.

ವಿಶೇಷವಾಗಿ ಸವದತ್ತಿಯ ಎಲ್ಲಮ್ಮನ ಗುಡ್ಡದಲ್ಲಿ ನಡೆಯುವ ಉತ್ಸವದಲ್ಲಿ ಜೋಗಪ್ಪ ಮತ್ತು ಜೋಗತಿಯರು ಭಾಗವಹಿಸುತ್ತಾರೆ. ಇದನ್ನು ಆಚರಣೆ ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಎನ್ನುವುದು ಮಂಗಳಮುಖಿಯರು ನಂಬಿಕೊಂಡು ಬಂದಿರುವ ಒಂದು ಆರಾಧನೆ.

 

DAKSHINA KANNADA

MANGALURU : ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟು; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿ ಅನಾಹುತ

Published

on

ಮಂಗಳೂರು : ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟಿನಿಂದ ಕಾರಿಗೆ ಪೆಟ್ರೋಲ್ ತುಂಬಿಸುವ ಬದಲು ಡೀಸೆಲ್ ತುಂಬಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪರಿಣಾಮ ಕಾರು ಇಂಜಿನ್ ಸಂಪೂರ್ಣ ಹಾಳಾಗಿ ಲಕ್ಷಾಂತರ ರೂ.ನಷ್ಟವಾಗಿದೆ ಎಂದು ಕಾರು ಮಾಲಕ ಆರೋಪಿಸಿದ್ದಾರೆ.

ಹೊಟೇಲ್ ಉದ್ಯಮಿ ಜೀವನ್ ಶೆಟ್ಟಿ ಎಂಬವರು ತಮ್ಮ ಹುಂಡೈ ಐ 10 ಗ್ರ್ಯಾಂಡ್ ಕಾರ್ ಗೆ ಪೆಟ್ರೋಲ್ ತುಂಬಿಸುವ ಸಲುವಾಗಿ, ಎಪ್ರಿಲ್ 5 ರಂದು ಮಧ್ಯಾಹ್ನ 12 ರ ಸುಮಾರಿಗೆ ಬಲ್ಮಠದ ಜ್ಯೂಸ್ ಜಂಕ್ಷನ್ ಮುಂಭಾಗದ ಹೆಚ್ ಪಿ ಪೆಟ್ರೋಲ್ ಬಂಕ್ ಗೆ ಬಂದಿದ್ದರು. ಕ್ಯಾಪ್ ಮೇಲೆ ಪೆಟ್ರೋಲ್ ಎಂದು ಬರೆದಿದ್ದರೂ, ಸಿಬ್ಬಂದಿ ಮಾತ್ರ ಕಾರಿಗೆ ಡೀಸೆಲ್ ತುಂಬಿಸಿದ್ದಾರೆ.

 

ಪರಿಣಾಮ ಕಾರು ಕೆಲವೇ ಕಿಲೋ ಮೀಟರ್ ಸಂಚರಿಸಿ ಮುಂದಕ್ಕೆ ಹೋಗದೆ ನಿಂತಿದೆ. ಪರಿಶೀಲಿಸಿದಾಗ ಬಂಕ್ ಸಿಬ್ಬಂದಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಪೆಟ್ರೋಲ್ ಬಂಕ್ ಮ್ಯಾನೇಜರ್ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾರು ಇಂಜಿನ್ ದುರಸ್ಥಿಗೆ 2 ಲಕ್ಷಕ್ಕೂ ಅಧಿಕ ಖರ್ಚು ಆಗಲಿದೆ. ಆದರೆ, ಪೆಟ್ರೋಲ್ ಬಂಕ್ ಮಾಲಕ ಬರೀ 30 ಸಾವಿರ ಕೊಟ್ಟು ಸುಮ್ಮನಾಗಿದ್ದಾರೆ ಎಂದು ಜೀವನ್ ಶೆಟ್ಟಿ ದೂರಿದ್ದಾರೆ. ಕಡಿಮೆ ಸಂಬಳಕ್ಕೆ ಅನುಭವವಿಲ್ಲದ ಕಾರ್ಮಿಕರನ್ನು ನೇಮಿಸುತ್ತಾರೆ. ಇಂತಹ ಸಮಸ್ಯೆಯಾದಾಗ ತಮ್ಮ ಇನ್ಶೂರೆನ್ಸ್ ನಲ್ಲಿ ಪರಿಹಾರ ನೀಡುವ ಅವಕಾಶವಿದ್ದರೂ ಬಂಕ್ ಮಾಲಕರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ತಾನು ಪರಿಹಾರಕ್ಕಾಗಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗುವುದಾಗಿ ಜೀವನ್ ಶೆಟ್ಟಿ ಹೇಳಿದ್ದಾರೆ.

Continue Reading

DAKSHINA KANNADA

ಹೊತ್ತಿ ಉರಿದು ಭಸ್ಮ*ವಾದ ಸ್ವೀಟ್ ಕಾರ್ನ್ ಸ್ಟಾಲ್‌..!! ಓಡಿ ಜೀವ ಉಳಿಸಿಕೊಂಡ ಸ್ಟಾಲ್ ಮಾಲೀಕ, ಗ್ರಾಹಕರು

Published

on

ಉಳ್ಳಾಲ: ರಸ್ತೆಯ ಬದಿಯಲ್ಲಿ ಇರಿಸಲಾಗಿದ್ದ ಸ್ವೀಟ್ ಕಾರ್ನ್ ಸ್ಟಾಲ್ ಒಂದರಲ್ಲಿ ಆಕಸ್ಮಿ*ಕ ಬೆಂಕಿಯಿಂದಾಗಿ ಸ್ಟಾಲ್ ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ಉಳ್ಳಾಲದ ದೇರಳಕಟ್ಟೆಯಲ್ಲಿ ನಡೆದಿದೆ.

sweet corn burn

ಗ್ಯಾಸ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ. ರಸ್ತೆಯ ಬದಿಯಲ್ಲೇ ಇರಿಸಲಾಗಿದ್ದ ಸ್ವೀಟ್ ಕಾರ್ನ್ ಅಂಗಡಿ ಮಾಲೀಕ ಕಾರ್ನ್ ತಯಾರಿಸುವಾಗ ಈ ಅವಘಡ ಸಂಭವಿಸಿದೆ. ತಕ್ಷಣ ಅಂಗಡಿ ಮಾಲೀಕ ಹಾಗೂ ಸ್ವೀಟ್ ಕಾರ್ನ ತಿನ್ನಲು ಬಂದಿದ್ದ ಗ್ರಾಹಕರು ಓಡಿ ತಪ್ಪಿಸಿಕೊಂಡಿದ್ದಾರೆ. ಸ್ಥಳೀಯರು ತಕ್ಷಣ ಮರಳು ಹಾಗೂ ನೀರನ್ನ ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಸ್ಟಾಲ್ ಉರಿದು ಭಸ್ಮವಾಗಿ ಹೋಗಿದೆ.

Read More..; ಬೆಂಕಿ ಹಚ್ಚಿ ಯುವತಿಯ ಬರ್ಬ*ರ ಹ*ತ್ಯೆ..!! ಕತ್ತು ಕೊಯ್ದು ಸು*ಟ್ಟು ಹಾಕಿರುವ ಶಂಕೆ

sweet corn burn 2

Continue Reading

DAKSHINA KANNADA

ಮಂಡ್ಯದಲ್ಲಿ ಅವಳಿ ಮಕ್ಕಳ ಸಾ*ವಿನ ಪ್ರಕರಣಕ್ಕೆ ಟ್ವಿಸ್ಟ್..! ತಾಯಿಯಿಂದ ಕೃತ್ಯ..!

Published

on

ಮಂಗಳೂರು,(ಮಂಡ್ಯ): ಮಂಡ್ಯದಲ್ಲಿ ಐಸ್‌ ಕ್ರೀಮ್‌ ತಿಂದು ಅವಳಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ಬುಧವಾರ ಅವಳಿ ಮಕ್ಕಳು ಸಾವನ್ನಪ್ಪಿದ್ದರು. ಐಸ್ ಕ್ರೀಂ ತಿಂದು ಮಕ್ಕಳು ಇಹಲೋಕ ತ್ಯಜಿಸಿವೆ ಎನ್ನಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶ ಬಯಲಾಗಿದೆ. ತಾಯಿಯೇ ಮಕ್ಕಳಿಗೆ ವಿಷ ಹಾಕಿ ಸಾಯಿಸಿದ್ದಾಳೆ ಎನ್ನುವುದು ಖಚಿತವಾಗಿದೆ.

ಹೆತ್ತ ಮಕ್ಕಳಿಗೆ ವಿಷವಿಕ್ಕಿದ ತಾಯಿ!

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ಪೂಜಾ ಹಾಗೂ ಪ್ರಸನ್ನ ದಂಪತಿಗಳ ಒಂದೂವರೆ ವರ್ಷದ ಅವಳಿ ಕಂದಮ್ಮಗಳು ಸಾವನ್ನಪ್ಪಿದ್ದವು.

ಪೊಲೀಸ್‌ ತನಿಖೆಯ ಬಳಿಕ ತಾಯಿ ಪೂಜಾಳೇ ಮೂವರು ಮಕ್ಕಳಿಗೆ ವಿಷ ಹಾಕಿದ್ದಾಳೆಂಬುದು ಗೊತ್ತಾಗಿದೆ.

ತ್ರಿಶುಲ್, ತ್ರಿಶ ಅವಳಿ ಮಕ್ಕಳು ಹಾಗೂ ಮಗಳು ಬೃಂದಾಗೆ ಪೂಜಾ ಹಾಕಿದ್ದಳು. ಬಳಿಕ ಐಸ್ ಕ್ರೀಂ ತಿಂದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಲಾಗಿತ್ತು. ಇದೀಗ ಪೊಲೀಸ್ ವಿಚಾರಣೆ ವೇಳೆ ಸತ್ಯಾಂಶ ಬಯಲಾಗಿದೆ.

ಪೂಜಾ ಪತಿ ಪ್ರಸನ್ನ ಪದೇ ಪದೇ ಜಗಳವಾಡುತ್ತಿದ್ದರು. ಈ ಜಗಳದಿಂದ ಬೇಸತ್ತು ಬುಧವಾರ ಮಕ್ಕಳಿಗೆ ತಾಯಿ ವಿಷ ಉಣಿಸಿದ್ದಾಳೆ. ಬಳಿಕ ತಾನೂ ಸೇವಿಸಿದ್ದಳು. ಕೂಡಲೇ ಮಕ್ಕಳು ಹಾಗೂ ಪೂಜಾಳನ್ನು ಮಂಡ್ಯ‌ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿ, ಆಸ್ಪತ್ರೆಯಲ್ಲಿ ಅವಳಿ ಜವಳಿ ಕಂದಮ್ಮಗಳು ಕೊನೆಯುಸಿರೆಳೆದಿದ್ದವು.

ಸದ್ಯ ತಾಯಿ ಹಾಗೂ ಮೊದಲ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Continue Reading

LATEST NEWS

Trending