ಮಂಗಳೂರು/ ಕೋಲಾರ : ತಮಿಳುನಾಡಿನ ರಾಣಿಪೇಟೆ ಬಳಿ ಭೀ*ಕರ ಅಪ*ಘಾತ ಸಂಭವಿಸಿದ್ದು, ಕೋಲಾರದ ನಾಲ್ವರು ಸೇರಿ ಐವರು ಮೃ*ತಪಟ್ಟಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕ್ಯಾಂಟರ್ ನಡುವೆ ಅಪಘಾ*ತ ಸಂಭವಿಸಿದ್ದು, ಬಸ್ ಚಾಲಕ ಹಾಗೂ ಕ್ಯಾಂಟರ್‌ನಲ್ಲಿದ್ದ ನಾಲ್ವರು ಸಾ*ವನ್ನಪ್ಪಿದ್ದಾರೆ. ಬಸ್‌ನಲ್ಲಿದ್ದ ಓರ್ವ ಮಹಿಳೆ ಗಂ*ಭೀರವಾಗಿ ಗಾ*ಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕ್ಯಾಂಟರ್ ಚಾಲಕ ಮಂಜುನಾಥ್, ಕ್ಲೀನರ್ ಶಂಕರ್, ಸಹಾಯಕ ಸೋಮಶೇಖರ್, ವೆಂಕಟೇಶ್, ಕೃಷ್ಣಪ್ಪ ಮೃ*ತಪಟ್ಟವರು. ನಲ್ಲೂರು ಗ್ರಾಮದ ಸರಸ್ವತಮ್ಮ ಗಂಭೀ*ರವಾಗಿ ಗಾ*ಯಗೊಂಡ ಮಹಿಳೆ.
ಮುಳಬಾಗಿಲು ತಾಲೂಕಿನ ನಲ್ಲೂರು ಗ್ರಾಮದ 50 ಮಂದಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತಮಿಳುನಾಡಿನ ಮೇಲ್ಮರವತ್ತೂರು ಓಂ ಶಕ್ತಿ ದೇವಾಲಯಕ್ಕೆ ಹೋಗಿ ವಾಪಾಸಾಗುತ್ತಿದ್ದರು. ಕ್ಯಾಂಟರ್ ಶ್ರೀನಿವಾಸಪುರ ತಾಲೂಕು ಸೀಗೆಹಳ್ಳಿ ಗ್ರಾಮದಿಂದ ಚೆನ್ನೈಗೆ ತರಕಾರಿ ತುಂಬಿಕೊಂಡು ಹೋಗುತ್ತಿತ್ತು.
ಇದನ್ನೂ ಓದಿ : ಮಗುವಿಗೆ ಸು*ಟ್ಟು ಗಾಯ ಮಾಡಿದ ಪ್ರಕರಣ; ಆರೋಪಿ ತಾಯಿಗೆ ಶಿಕ್ಷೆ ಪ್ರಕಟ
ಗಾ*ಯಾಳುಗಳನ್ನು ವೇಲೂರು ಸಿಎಂಸಿ ಆಸ್ಪತ್ರೆ, ರತ್ನಗಿರಿಯ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ರಾಣಿಪೇಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.