LATEST NEWS
ಆಂಬುಲೆನ್ಸ್ ಗೆ ದಾರಿ ಮಾಡಲು 2 ಕಿಮೀ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿದ ಪೇದೆ..!
ಆಂಬುಲೆನ್ಸ್ ಗೆ ದಾರಿ ಮಾಡಲು 2 ಕಿಮೀ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿದ ಪೇದೆ..!
ಹೈದರಾಬಾದ್ : ಆಂಬುಲೆನ್ಸ್ಗೆ ದಾರಿ ಮಾಡಿಕೊಡುವ ಸಲುವಾಗಿ ಸಂಚಾರಿ ಠಾಣೆ ಕಾನ್ಸ್ಟೇಬಲ್ ಒಬ್ಬರು 2 ಕಿಲೋಮೀಟರ್ವರೆಗೆ ಓಡಿ ಟ್ರಾಫಿಕ್ ಕ್ಲಿಯರ್ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಘಟನೆ .ಹೈದರಾಬಾದ್ನ ಅಬಿಡ್ಸ್ ಜಿಪಿಒ ಜಂಕ್ಷನ್ ಬಳಿ ಈ ಘಟನೆ ನಡೆದಿದೆ.
ಪೊಲೀಸ್ ಪೇದೆ ಜಿ. ಬಾಬ್ಜಿ ಎಂಬವರು ಆಂಬುಲೆನ್ಸ್ನಲ್ಲಿದ್ದ ರೋಗಿಯ ಪ್ರಾಣ ಉಳಿಸುವುದಕ್ಕಾಗಿ 2 ಕಿಲೋಮೀಟರ್ವರೆಗೆ ಓಡಿ ಸಂಚಾರ ದಟ್ಟಣೆ ನಿಯಂತ್ರಣಗೊಳಿಸಿದ್ದಾರೆ
ಈ ಘಟನೆ ಸೋಮವಾರ ನಡೆದಿದ್ದು ಪೊಲೀಸರು ಈ ವಿಡಿಯೋವನ್ನ ಬುಧವಾರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಬಳಿಕ ವಿಚಾರ ವೈರಲ್ ಆಗಿದೆ. ಅಂದಹಾಗೆ ಈ ಪೊಲೀಸ್ ಪೇದೆ ಆಂಬುಲೆನ್ಸ್ಗೆ ದಾರಿ ಮಾಡಿಕೊಡುವುದಕ್ಕಾಗಿ ತನ್ನ ಠಾಣಾ ವ್ಯಾಪ್ತಿಯನ್ನ ಮೀರಿ ಸಂಚಾರ ದಟ್ಟಣೆ ನಿಯಂತ್ರಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಬಾಬ್ಜಿ, ನನಗೆ ಆಂಬುಲೆನ್ಸ್ನಲ್ಲಿ ಇದ್ದ ರೋಗಿಯ ಪರಿಚಯವಿರಲಿಲ್ಲ. ಆದರೂ ಒಂದು ಜೀವ ಕಾಪಾಡಬೇಕು ಎಂದು ಈ ಪ್ರಯತ್ನ ಮಾಡಿದೆ ಅಂತಾ ಹೇಳಿದ್ದಾರೆ.
DAKSHINA KANNADA
ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ
ಉಳ್ಳಾಲ : ಇತ್ತೀಚೆಗಿನ ದಿನಗಳಲ್ಲಿ ಹೃದಯಾಘಾ*ತ ಪ್ರಕರಣಗಳು ಹೆಚ್ಚುತ್ತಿವೆ. ಹೃದಯಾಘಾ*ತ ಸಂಭವಿಸಲು ವಯಸ್ಸಿನ ಇತಿ ಮಿತಿ ಎಂಬುದಿಲ್ಲದಂತಾಗಿದೆ. ಇದೀಗ ಕೊಲ್ಯ ಕನೀರುತೋಟ ನಿವಾಸಿ 28 ರ ಹರೆಯದ ವಿವಾಹಿತರೊಬ್ಬರು ಮಲಗಿದ್ದಲ್ಲೇ ಹೃದಯಾಘಾ*ತಕ್ಕೀಡಾಗಿ ಸಾ*ವನ್ನಪ್ಪಿರುವ ಘಟನೆ ಮಂಗಳವಾರ ಸಂಭವಿಸಿದೆ.
ಕನೀರುತೋಟ ನಿವಾಸಿ ಜಿತೇಶ್ (28) ಸಾ*ವನ್ನಪ್ಪಿದವರು. ಜಿತೇಶ್ ಸೋಮವಾರ ರಾತ್ರಿ ಊಟ ಮುಗಿಸಿ ಮಲಗಿದ್ದರು. ಯಾವತ್ತೂ ಬೇಗ ಏಳುತ್ತಿದ್ದ ಜಿತೇಶ್ ಇನ್ನೂ ಯಾಕೆ ಎದ್ದಿಲ್ಲ ಎಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಕಬಕ-ಮುರ ರೈಲ್ವೇ ಹಳಿಯಲ್ಲಿ ವ್ಯಕ್ತಿಯ ಶ*ವ ಪತ್ತೆ
ಮಂಗಳೂರಿನ ಕೆಟಿಎಂ ಷೋರೂಮಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿತೇಶ್, ಕೊರೊನಾ ಸಂದರ್ಭ ಪಂಡಿತ್ ಹೌಸ್ ನಿವಾಸಿ ಯುವತಿಯನ್ನು ವಿವಾಹವಾಗಿದ್ದರು. ಮೃ*ತರು ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
FILM
ರಿಯಾಲಿಟಿ ಶೋಗಳಲ್ಲೂ ಕಾಸ್ಟಿಂಗ್ ಕೌಚ್! ಡ್ಯಾನ್ಸಿಂಗ್ ಕ್ವೀನ್ ಬಿಚ್ಚಿಟ್ಟ ಸತ್ಯವೇನು?
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತುಗಳು ಬಹಳ ಸಮಯದಿಂದ ಕೇಳಿ ಬರುತ್ತಿದೆ. ನಟಿಯರು ನಟರ ಬಗ್ಗೆ, ನಿರ್ಮಾಪಕರು, ನಿರ್ದೇಶಕರುಗಳ ಬಗ್ಗೆ ಆರೋಪಗಳನ್ನು ಮಾಡುವ ಸುದ್ದಿಗಳು ಹರಿದಾಡುತ್ತಿರುತ್ತಿವೆ. ಇದೀಗ ರಿಯಾಲಿಟಿ ಶೋ ಸರದಿ.
ಡ್ಯಾನ್ಸಿಂಗ್ ಕ್ವೀನ್ ಮನೀಶಾ ರಾಣಿ ಆರೋಪ:
ಸಿನಿ ಇಂಡಸ್ಟ್ರಿಯಲ್ಲಿದ್ದ ಕಾಸ್ಟಿಂಗ್ ಕೌಚ್ ಈಗ ಟಿವಿ ರಿಯಾಲಿಟಿ ಶೋಗಳಲ್ಲೂ ನಡಿತಾ ಇದೆಯಾ ? ಇಂತಹ ಒಂದು ಆರೋಪವನ್ನು ಡ್ಯಾನ್ಸಿಂಗ್ ರಿಯಾಲಿಟಿ ಶೋ ‘ಝಲಕ್ ದಿಖ್ಲಾಜಾ ‘ ಸೀಸನ್ 11 ಗೆದ್ದಿದ್ದ ಡ್ಯಾನ್ಸಿಂಗ್ ಕ್ವೀನ್ ಮನೀಶಾ ರಾಣಿ ಅವರು ಆರೋಪಿಸಿದ್ದಾರೆ.
ತನ್ನ ಡ್ಯಾನ್ಸ್ ಮೂವ್ಸ್ ಮತ್ತು ಎಲ್ಲರೊಂದಿಗೆ ಬೆರೆಯುವ ಸ್ವಭಾವದಿಂದ ಮನೀಶಾ ರಾಣಿ ಜನರ ಮನ ಗೆದ್ದಿದ್ದರು. ಇತ್ತೀಚೆಗೆ ಬಿಗ್ ಬಾಸ್ ಒಟಿಟಿ ಸೀಸನ್ 2 ನಲ್ಲೂ ಕಾಣಿಸಿಕೊಂಡಿದ್ದ ಮನೀಶಾ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಈ ವೇಳೆ ಒಂದು ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಹೆಸರಿನಲ್ಲಿ ವ್ಯಕ್ತಿಯೊಬ್ಬ ತನ್ನನ್ನು ಮೋಸ ಮಾಡಿದ್ದಾಗಿ ಹೇಳಿದ್ದಾರೆ. ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಬರಲು ಹೇಳುತ್ತಿದ್ದ ಎಂದು ಆರೋಪಿಸಿದ್ದಾರೆ.
ಬಿಗ್ ಬಾಸ್ ತಂಡದ ಸದಸ್ಯನಿಂದ ಕರೆ :
ಸಂದರ್ಶನದಲ್ಲಿ ಮಾತನಾಡಿದ ಮನೀಶಾ ರಾಣಿ, “ನಾನು ಮುಂಬೈನಲ್ಲೂ ಕಾಸ್ಟಿಂಗ್ ಕೌಚ್ ಎದುರಿಸಿದ್ದೇನೆ. ನಾನೂ ಸಂಪೂರ್ಣವಾಗಿ ಅದಕ್ಕೆ ಬಲಿಯಾಗದೇ ಇದ್ರೂ ಬಿಗ್ ಬಾಸ್ ತಂಡದ ಸದಸ್ಯ ಎಂದು ಹೇಳಿಕೊಂಡಿದ್ದ ವ್ಯಕ್ತಿ ನನ್ನನ್ನು ಬೇರೆ ಬೇರೆ ಕಡೆಗಳಿಗೆ ಕರೆಸಿಕೊಂಡಿದ್ದ” ಎಂದು ಹೇಳಿದ್ದಾರೆ.
“ಮನೆಗೆ ವಾಪಾಸಾಗಿದ್ದ ಸಮಯದಲ್ಲಿ ಅಡಿಷನ್ ಪ್ರಾರಂಭವಾಗಿದೆ ಎಂದು ಮುಂಬೈಗೆ ಕರೆಸಿಕೊಂಡಿದ್ದ. ಹೀಗಾಗಿ ತರಾತುರಿಯಲ್ಲಿ ನಾನು ಮುಂಬೈಗೆ ಬಂದಿದ್ದೆ. ಆದ್ರೆ ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದು ಅದಕ್ಕೆ ನಾನು ನಿರಾಕರಿಸಿದ್ದೆ. ಅದಕ್ಕೆ ಆತನಿಗೆ ನನ್ನ ಮೇಲೆ ಕೋಪ ಬಂದಿತ್ತು” ಎಂದು ಹೇಳಿದ್ದಾರೆ.
‘ಝಲಕ್ ದಿಖ್ಲಾ ಜಾ’ ಕಾರ್ಯಕ್ರಮ ಮೂಲಕ ಸ್ಟಾರ್ ಪಟ್ಟ
ಮೂಲತಃ ಬಿಹಾರದ ನಿವಾಸಿ ಆಗಿರೋ ಮನೀಶಾ ರಾಣಿ ಅವರು ‘ಝಲಕ್ ದಿಖ್ಲಾಜಾ’ 11 ನೇ ಸೀಸನ್ ಗೆಲ್ಲುವ ಮೂಲಕ ಜನಮನ್ನಣೆ ಗಳಿಸಿದರು. ಮನೀಶಾ ರಾಣಿ ಈ ಪ್ರಶಸ್ತಿ ಗೆಲ್ಲುವುದಕ್ಕೂ ಮೊದಲು ಜೀವನದಲ್ಲಿ ಸಾಕಷ್ಟು ಸಂಘರ್ಷ ಅನುಭವಿಸಿದ್ದಾರೆ.
ತಾಯಿಯನ್ನು ಕಳೆದುಕೊಂಡು ತಂದೆಯ ನೆರಳಲ್ಲಿ ಬೆಳೆದ ಮನೀಶಾ ರಾಣಿ ಡ್ಯಾನ್ಸರ್ ಆಗಲು ಅಡ್ಡಿಯಾಗಿದ್ದೇ ಆಕೆಯ ತಂದೆ. ಹೀಗಾಗಿ 12 ನೇ ತರಗತಿಯಲ್ಲಿ ಮನೆ ಬಿಟ್ಟು ಕೊಲ್ಕತ್ತಾ ಸೇರಿದ ಮನಿಷಾ ಮದುವೆ ಸಮಾರಂಭದಲ್ಲಿ ಊಟ ಬಡಿಸುವ ಕೆಲಸ ಆರಂಭಿಸಿದ್ದರು. ಅಲ್ಲಿಂದ ಬಳಿಕ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಆರಂಭಿಸಿದ ಮನೀಶಾ ಬಳಿಕ ಅದನ್ನೂ ಬಿಟ್ಟು ಟಿಕ್ಟಾಕ್ ಮೂಲಕ ತನ್ನ ನೃತ್ಯವನ್ನು ಜನರಿಗೆ ತೋರಿಸಲು ಆರಂಭಿಸಿದರು.
ಇದನ್ನೂ ಓದಿ : ಶೋಬಿತಾ ಜೊತೆ ಕಾಡಿನಲ್ಲಿ ಕಾಣಿಸಿಕೊಂಡ್ರ ನಾಗಚೈತನ್ಯ..! ಫ್ಯಾನ್ಸ್ ಏನಂದ್ರು..?
ಇದು ಗುಡಿಯಾ ಹಮಾರಿ ಸಭಿ ಪೆ ಭಾರಿ ತಯಾರಕರ ಗಮನಕ್ಕೆ ಬಂದು ಆಕೆಗೆ ಅವಕಾಶ ನೀಡಿದ್ರು. ಅಲ್ಲಿಂದ ಆರಂಭವಾದ ಮನೀಷಾ ರಾಣಿ ಜರ್ನಿ ಇಂದು ಆಕೆಯನ್ನು ಟಿವಿ ಲೋಕದ ಸ್ಟಾರ್ ಆಗಿ ಮಾಡಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್ ಆಗಿರೋ ಮನಿಷಾ 12.5 ಮಿಲಿಯನ್ಗಿಂತಲೂ ಹೆಚ್ಚು ಜನ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
DAKSHINA KANNADA
ಕಬಕ-ಮುರ ರೈಲ್ವೇ ಹಳಿಯಲ್ಲಿ ವ್ಯಕ್ತಿಯ ಶ*ವ ಪತ್ತೆ
ಪುತ್ತೂರು: ಇಲ್ಲಿನ ಮುರ ಎಂಬಲ್ಲಿ ಕಬಕ-ಪುತ್ತೂರು ರೈಲು ಸಂಚಾರದ ರೈಲ್ವೇ ಹಳಿಯಲ್ಲಿ ವ್ಯಕ್ತಿಯೊಬ್ಬರ ಮೃ*ತದೇಹ ಪತ್ತೆಯಾಗಿರುವ ಘಟನೆ ಎ.23ರಂದು ಬೆಳಗಿನ ಜಾವ ಬೆಳಕಿಗೆ ಬಂದಿದೆ.
ಮೃತಪಟ್ಟ ವ್ಯಕ್ತಿಯ ದೇಹ ಹಳಿಯಿಂದ ಸ್ವಲ್ಪ ದೂರಕ್ಕೆ ಎಸೆಯಲ್ಪಟ್ಟಿದ್ದು ಕಾಲು ತುಂಡಾದ ಸ್ಥಿತಿಯಲ್ಲಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹ*ತ್ಯೆಯೋ? ಅಥವಾ ರೈಲು ಡಿಕ್ಕಿಯಾಗಿ ಸಂಭವಿಸಿದ ಘಟನೆಯೋ ಅನ್ನುವುದು ತನಿಖೆ ವೇಳೆ ಬೆಳಕಿಗೆ ಬರಲಿದೆ.
ಮುಂದೆ ಓದಿ..; ಬೆಳ್ತಂಗಡಿ: ಕೆರೆಗೆ ಬಿದ್ದು ಕಾಡುಕೋಣ ಸಾವು.. ಸಾರ್ವಜನಿಕರಿಂದ ಅಂತ್ಯಸಂಸ್ಕಾರ
- DAKSHINA KANNADA6 days ago
ಮಂಗಳೂರು : ಬೈಕ್ಗೆ ಕಾರು ಡಿಕ್ಕಿ; ಇಹಲೋಕ ತ್ಯಜಿಸಿದ ವಿದ್ಯಾರ್ಥಿ
- DAKSHINA KANNADA6 days ago
ಸೀರೆ ಉಟ್ರೆ ಕ್ಯಾನ್ಸರ್ ಬರುತ್ತಂತೆ..! ಏನಿದು ಸೀರೆ ಕ್ಯಾನ್ಸರ್?
- DAKSHINA KANNADA7 days ago
ದಂತ ವೈದ್ಯೆಯಾಗಿ ಸೇವೆ ಆರಂಭದ ದಿನವೇ ವಿಧಿಯಾಟ..! ಯುವ ವೈದ್ಯೆ ಸಾ*ವು..!
- DAKSHINA KANNADA6 days ago
ಬಿಜೆಪಿಯಿಂದ ಬಿಲ್ಲವ ನಾಯಕ ಔಟ್..? ನಾರಾಯಣ ಗುರು ಹೈಜಾಕ್..!