3ಜನ ಪೊಲೀಸ್ ಸಿಬ್ಬಂದಿಗಳಿಂದಲೂ ಟ್ರಾಫಿಕ್ ಜಾಮ್ ನಿಯಂತ್ರಿಸಲಾಗಿಲ್ಲ ಕಾರಣ ಗೊತ್ತಾದ್ರೆ ಬೆಚ್ಚಿ ಬೀಳ್ತೀರಿ..!
Traffic jam is not controlled by the 3 police personnel..
ಉಡುಪಿ: ನಗರದ ಕಲ್ಸಂಕ ಜಂಕ್ಷನ್ ನಲ್ಲಿ ಗುರುವಾರ ಏಕಾಏಕಿ ಟ್ರಾಫಿಕ್ ಜಾಮ್ ಆಯ್ತು. ಜಂಕ್ಷನ್ನಲ್ಲಿ ಮೂರು ಜನ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಇದ್ದರೂ ಜಾಮ್ ಕ್ಲಿಯರ್ ಮಾಡಲು ಸಾಧ್ಯವಾಗಿಲ್ಲ.ಕಾರಣ ಹೇಳಿದ್ರೆ ನೀವು ಅಚ್ಚರಿ ಪಡ್ತೀರ. ಯಾಕಂದರೆ ನಾಗರಾಜ ರೋಡ್ ಕ್ರಾಸ್ ಮಾಡುತ್ತಿದ್ದ. ಅಂಬಾಗಿಲು ರಸ್ತೆ ಕಡೆಯಿಂದ ಕೃಷ್ಣಮಠದ ಪಾರ್ಕಿಂಗ್ ಏರಿಯಾಗೆ ಹೋಗುವ ಕಡೆ ನಾಗರಾಜ ನಿಧಾನಕ್ಕೆ ಚಲಿಸುತ್ತಿದ್ದ.
ಸಿಮೆಂಟ್ ರಸ್ತೆ ಮತ್ತು ವಿಪರೀತ ಬಿಸಿಲಿನ ಝಳಕ್ಕೆ ವೇಗವಾಗಿ ರಸ್ತೆ ದಾಟಲು ನಾಗರಾಜನಿಗೆ ಸಾಧ್ಯವಾಗಿಲ್ಲ. ಹೀಗಾಗಿ ಸ್ಥಳೀಯರು, ವಾಹನ ಸವಾರರು , ಪೊಲೀಸರು ನಾಗರಾಜನಿಗೆ ರಸ್ತೆದಾಟಲು ಅವಕಾಶ ಮಾಡಿಕೊಟ್ಟರು.
ಯಾವುದೇ ವಾಹನಗಳು ಅಡ್ಡ ಚಲಿಸದಂತೆ ನಾಗ ರಾಜನಿಗೆ ಕನ್ ಫ್ಯೂಸ್ ಆಗದಂತೆ ನೋಡಿಕೊಂಡರು. ಕೆಲವು ಎಡಬಿಡಂಗಿ ದ್ವಿಚಕ್ರವಾಹನ ಸವಾರರು ಮಾತ್ರ ನಾಗರಾಜ ದಾಟುವ ಮೊದಲೇ ರಸ್ತೆದಾಟಲು ಪ್ರಯತ್ನಿಸಿದರೂ ಪೊಲೀಸರು ಅಡ್ಡಗಟ್ಟಿ ನಾಗ ರಾಜನಿಗೆ ಸುರಕ್ಷಿತವಾಗಿ ರಸ್ತೆ ದಾಟಿಸಿ ಭೇಷ್ ಅನಿಸಿಕೊಂಡರು..