Sunday, August 14, 2022

 ತಡಂಬೈಲ್ ಶ್ರೀ ಮಾರಿಯಮ್ಮ ದೇವಳದಲ್ಲಿ  ಸಾಂಪ್ರದಾಯಿಕ ಸುಗ್ಗಿ ಹುಗ್ಗಿ ಕಾರ್ಯಕ್ರಮ..! 

ತಡಂಬೈಲ್ ಶ್ರೀ ಮಾರಿಯಮ್ಮ ದೇವಳದಲ್ಲಿ  ಸಾಂಪ್ರದಾಯಿಕ “ಸುಗ್ಗಿ ಹುಗ್ಗಿ” ಕಾರ್ಯಕ್ರಮ..! 

ಮಂಗಳೂರು;  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವಿವಿಧ ಸಂಘಟನೆಗಳ ಸಹಕಾರದಲ್ಲಿ ಸುಗ್ಗಿ ಹುಗ್ಗಿ ಕಾರ್ಯಕ್ರಮ ತಡಂಬೈಲ್ ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಜರುಗಿತು.ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ತೆಂಗಿನ ಹೂವನ್ನು ಅರಳಿಸುವ ಮೂಲಕ ಉದ್ಘಾಟಿಸಲಾಯಿತು.
ಸ್ಥಳೀಯ ಕಾರ್ಪೊರೇಟರ್ ಶ್ವೇತಾ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು.

ನಮ್ಮ ಹಳೆಯ ಸಂಸ್ಕೃತಿ ಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಟಿ.ವಿ,ಟಿಕ್ ಟಾಕ್ ನಂತಹ ಮಾಧ್ಯಮದಲ್ಲಿ ಇಂತಹ ಜನಪದ ಕಲಾ ಸಂಪತ್ತನ್ನು ತೋರಿಸುವುದು ವಿರಳ. ಜನರ ಆಡು ಮಾತುಗಳಿಂದ ಜನಪದ ಬೆಳೆದು ಬಂದಿದೆ.

ಅವರ ಹಳ್ಳಿಗಾಡಿನ ವೈಭವ,ಭಾವನಾತ್ಮಕ ವಿಚಾರಗಳನ್ನು ಒಳಗೊಂಡ ಇಂತಹ ಕಾರ್ಯಕ್ರಮ ನೋಡುವುದು ನಿಜಕ್ಕೂ ಆನಂದ ಉಂಟು ಮಾಡುತ್ತದೆ ಎಂದರು.

ಇದೇ ಸಂದರ್ಭ ಯಕ್ಷಗಾನದಲ್ಲಿ ತಾನು ತರಬೇತಿ ಪಡೆದು ಕಲಾ ಪ್ರದರ್ಶನ ನೀಡಿದ್ದನ್ನು ಸ್ಮರಿಸಿಕೊಂಡರು.
ಕಾರ್ಪೊರೇಟರ್ ಶೋಭಾರಾಜೇಶ್ ಅವರು ಯುವ ಪೀಳಿಗೆಗೆ ಇಂತಹ ಕಲಾ ವೈಭವ ತೋರಿಸಲು ಪೋಷಕರು ಮುಂದಾಗಬೇಕು ಎಂದರು.

ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿಗಾರ್ ಶುಭ ಹಾರೈಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿದರ್ೇಶಕ ರಾಜೇಶ್ ಜಿ., ನವದುಗರ್ಾ ಫ್ರೆಂಡ್ಸ್ ಸರ್ಕಲ್ನ ಅಧ್ಯಕ್ಷ ಹರೀಶ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಜನಪದ ನೃತ್ಯ,ನವಿಲು ನೃತ್ಯ,ಡೊಳ್ಳು ಕುಣಿತ,ಹುಲಿವೇಷ, ಕಂಸಾಳೆ, ಪೂಜಾ ಕುಣಿತ ಸಹಿತ ರಾಜ್ಯದಾದ್ಯಂತ ಬಂದ ಸುಮಾರು 20 ವಿವಿಧ ಕಲಾ ತಂಡವು ಭಾಗವಹಿಸಿ ಪ್ರದರ್ಶನ ನೀಡಿತು.

LEAVE A REPLY

Please enter your comment!
Please enter your name here

Hot Topics

ಸ್ವಾತಂತ್ರ್ಯಕ್ಕೆ ದಾಳಿ ನಡೆಸಲು ಸಂಚು: ನಿಷೇಧಿತ ಸಂಘಟನೆಯ 7 ಉಗ್ರರು ಬಂಧನ

ಇಂಪಾಲ: ಮಣಿಪುರದಲ್ಲಿ ಸ್ವಾತಂತ್ರ್ಯ ದಿನದಂದು ದಾಳಿ ನಡೆಸಲು ಸಂಚು ನಡೆಸಿದ್ದ ನಿಷೇಧಿತ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಸಂಘಟನೆಯ ಏಳು ಉಗ್ರರನ್ನು ರಾಜ್ಯದ ವಿವಿಧ ಸ್ಥಳಗಳಿಂದ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.ಸ್ವಾತಂತ್ರ್ಯ...

ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್ ಥೋರಾಟ್‌ಗೆ 2022ರ ರಾಷ್ಟ್ರಪತಿ ಪದಕ ಘೋಷಣೆ

ಬಂಟ್ವಾಳ: ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ 2022 ರ ರಾಷ್ಟ್ರಪತಿ ಪದಕವನ್ನು ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್ ಥೋರಾಟ್ ಅವರಿಗೆ ನೀಡಲಾಗಿದೆ.ಸೆಂಟ್ರಲ್ ಕ್ರೈಂ ಬ್ರಾಂಚ್ ನ ಸಂಘಟಿತ ಅಪರಾಧ ದಳ ಬೆಂಗಳೂರಿನಲ್ಲಿ ಸುಮಾರು 6...

ಸ್ವಾತಂತ್ರ್ಯಅಮೃತೋತ್ಸವದ ಶುಭಾಶಯ ಕೋರಿದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ಮಂಗಳೂರು: ಮಂಗಳೂರು ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಸರ್ವರಿಗೂ ಭಾರತದ ಸ್ವಾತಂತ್ರ್ಯ ದಿನದ ಅಮೃತೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ.ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ಭಾರತೀಯರಾದ ನಾವು...