Connect with us

bangalore

ರಸ್ತೆ ಗುಂಡಿಗೆ ಬಿದ್ದ ಯುವಕನ ಮೇಲೆಯೇ ಹರಿದು ಹೋದ ಟ್ರ್ಯಾಕ್ಟರ್..!

Published

on

ಬೆಂಗಳೂರು: ಮಹಾನಗರ ಪಾಲಿಕೆಯ ರಸ್ತೆ ಗುಂಡಿಗೆ ಬಿದ್ದ ಯುವಕನ ಮೇಲೆ ಟ್ರ್ಯಾಕ್ಟರ್ ಹರಿದು  ಯುವಕ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.

ಕುಮಾರ್ ರಸ್ತೆ ಗುಂಡಿಗೆ ಬಿದ್ದು ಮೃತಪಟ್ಟ ಯುವಕ.


ಈತ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಕುಮಾರ್ ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ. ಈ ವೇಳೆ ಆತ ರಸ್ತೆ ಗುಂಡಿಯಲ್ಲಿ ಬಿದ್ದಿದ್ದಾನೆ.

ಹಿಂಬದಿಯಿಂದ ಬರುತ್ತಿದ್ದ ಟ್ರ್ಯಾಕರ್ ಒಮ್ಮೆಗೆ ಈತನ ಮೇಲೆ ಹರಿದಿದೆ. ಪರಿಣಾಮ ಕುಮಾರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

Click to comment

Leave a Reply

Your email address will not be published. Required fields are marked *

bangalore

ಹಾಫ್ ಸೆಂಚುರಿ ಖುಷಿಯಲ್ಲಿ ಸೀತಾ-ರಾಮ ಸೀರಿಯಲ್

Published

on

ಕನ್ನಡ ಕಿರುತೆರೆಯ ನಂಬರ್ ಒನ್ ಧಾರವಾಹಿ “ಸೀತಾ-ರಾಮ” ಯಶಸ್ವಿ 50 ಸಂಚಿಕೆಗಳನ್ನು ಪೂರೈಸಿದೆ. 

 

ಬೆಂಗಳೂರು : ಕನ್ನಡ ಕಿರುತೆರೆಯಲ್ಲಿ ಸದ್ಯ ಸೀತಾರಾಮ ಧಾರವಾಹಿ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ರಾತ್ರಿ 9.30 ಕ್ಕೆ ಸರಿಯಾಗಿ ಪುಟ್ಟ ಮಕ್ಕಳಿಂದ ಹಿಡಿದು, ಹುಡುಗೀರು, ಆಂಟಿಯಂದಿರು ಟಿವಿ ಮುಂದೆ ಹಾಜರಿರ್ತಾರೆ.

ಇದೀಗ ನಂಬರ್ ಒನ್ ಸೀರಿಯಲ್ ಆಗಿರುವ ಸೀತಾರಾಮ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಕಥೆ ರಿಮೇಕ್ ಆದ್ರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಧಾರವಾಹಿ ಕಥಾ ಹಂದರವನ್ನು ಬಳಸಲಾಗಿದೆ.

ಅದ್ರಲ್ಲೂ ವೈಷ್ಣವಿ ಇದ್ದಾರೆ ಅಂದ್ರೆ ಅಲ್ಲಿ ಟಿ.ಆರ್.ಪಿ ರೇಟ್ ಗಗನಕ್ಕೇರುತ್ತೆ.

ಬಿಗ್ ಬಾಸ್ ಬಳಿಕ ವೈಷ್ಣವಿ ಸೀತಾ ರಾಮ ಪ್ರೋಜೆಕ್ಟ್ ಮೂಲಕ ಜನರ ಮನಸ್ಸನ್ನು ಗೆದ್ದು ಈಗ 50 ಸಂಚಿಕೆಗಳನ್ನು ಪೂರೈಸಿರುವ ಸಂತೋಷದಲ್ಲಿದ್ದಾರೆ.

ಬಡ ಮನೆಯ ಹೆಣ್ಣು ಮಗಳು ಬದುಕಿನ ಹೋರಾಟದಲ್ಲಿ ಎದುರಿಸುವ ನಾನಾ ಸಂಕಷ್ಟಗಳನ್ನುಇಟ್ಟುಕೊಂಡು ಧಾರವಾಹಿಯ ಕಥೆಯನ್ನು ಹೆಣೆಯಲಾಗಿದೆ.

ಹೀರೋ- ಹೀರೋಹಿನ್ ಕೆಮೆಸ್ಟ್ರೀ ಕ್ಲಿಕ್ ಆಗಿದ್ದು, ಇವರಿಬ್ಬರೂ ರಿಯಲ್ ಲೈಫಲ್ಲೂ ಒಂದಾದ್ರೆ ಚೆನ್ನಾಗಿರುತ್ತೆ ಅಲ್ವಾ ಅಂತ ಯೋಚ್ನೆ ಮಾಡ್ತಿದ್ದಾರೆ.

ಧಾರವಾಹಿ ನೂರು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಲಿ ಅನ್ನೋದೆ ಸೀತಾ-ರಾಮ ಧಾರವಾಹಿ ಅಭಿಮಾನಿಗಳ ಆಸೆ. ನಮ್ಮ ಕಡೆಯಿಂದಲೂ ಆಲ್ ದ ವೆರೀ ಬೆಸ್ಟ್.

Continue Reading

bangalore

ಹುಡುಗಿ ಚೇಂಜ್ ಆದ್ರೂ ಡ್ರೆಸ್ ಚೇಂಜ್ ಆಗಿಲ್ಲ ಅಲ್ವಾ ಶೆಟ್ರೇ?

Published

on

ಸೂಪರ್ ಹಿಟ್ ಕಿರಿಕ್ ಪಾರ್ಟಿ ಸಿನಿಮಾದ ಬೆಳಗ್ಗೆದ್ದು ಯಾರ ಮುಖವ ನಾನು ನೋಡಿದೆ ಹಾಡಿನಲ್ಲಿ ರಕ್ಷಿತ್  ವೈಟ್ ಟೀ-ಶರ್ಟ್ ಮೇಲೆ ಬ್ಲೂ ಬಣ್ಣದ ಶರ್ಟ್ ಧರಿಸಿದ್ದರು. ಈ ಲುಕ್ ಇದೀಗ ರಿಪೀಟ್ ಆಗಿದ್ದು ಹುಡುಗಿ ಮಾತ್ರ ಚೇಂಜ್ ಆಗಿದ್ದಾರೆ. 

 

ಬೆಂಗಳೂರು : ಸದ್ಯ ರಕ್ಷಿತ್ ಶೆಟ್ಟಿ ಸುದ್ದಿಯಲ್ಲಿದ್ದಾರೆ. ಅವರ ಸಿನೆಮಾ ಸಪ್ತ ಸಾಗರಾದಾಚೆ ಅಂತೂ ಹೆವ್ವಿ ಸೌಂಡ್ ಮಾಡ್ತಿದ್ದು, ನೆರೆಯ ಭಾಷೆಗಳಿಗೂ ರಿಮೇಕ್ ಆಗಿ ಜನರ ಮನಸ್ಸು ಗೆದ್ದಿದೆ.


ಈ ನಡುವೆ ರಕ್ಷಿತ್ ಶೆಟ್ಟಿ ಮತ್ತೆ ಲವ್ವಲ್ಲಿ ಬಿದ್ರಾ ಅನ್ನೋ ಗುಮಾನಿ ಕೂಡ ಗಾಂಧೀನಗರದ ಗಲ್ಲಿ ಗಲ್ಲಿಗಳಲ್ಲಿ ಚರ್ಚೆಯಾಗುತ್ತಿದೆ.

ರಕ್ಷಿತ್ ಶೆಟ್ಟಿ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತೆ. ಹುಡುಗೀನ ನೋಡಿ ನಕ್ಕಿದ್ರೂ ಅದು ಬಿಗ್ ಹೆಡ್ ಲೈನ್ ಆಗಿ ಬಿಡುತ್ತೆ.

ಇದೀಗ ನೆಟ್ಟಿಗರು ಎಷ್ಟು ಸ್ಮಾರ್ಟ್ ಆಗಿದ್ದಾರೆ  ಅಂದ್ರೆ 4-5 ವರ್ಷಗಳ ಹಿಂದಿನ ರಕ್ಷಿತ್ ಶೆಟ್ಟಿ ಫೋಟೋ ಹುಡುಕಿ ಈಗ ಸ್ವೀಟ್ ಮೀಮ್ಸ್ ಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿ ಬಿಡುತ್ತಿದ್ದಾರೆ.

ಹೌದು! ಸೂಪರ್ ಹಿಟ್ ಕಿರಿಕ್ ಪಾರ್ಟಿ ಸಿನಿಮಾದ ಬೆಳಗ್ಗೆದ್ದು ಯಾರ ಮುಖವ ನಾನು ನೋಡಿದೆ ಹಾಡಿನಲ್ಲಿ ರಕ್ಷಿತ್  ವೈಟ್ ಟೀ-ಶರ್ಟ್ ಮೇಲೆ ಬ್ಲೂ ಬಣ್ಣದ ಶರ್ಟ್ ಧರಿಸಿದ್ದರು.

ಈ ಲುಕ್ ಇದೀಗ ರಿಪೀಟ್ ಆಗಿದ್ದು ಹುಡುಗಿ ಮಾತ್ರ ಚೇಂಜ್ ಆಗಿದ್ದಾರೆ.

ಅಂದು ಪಕ್ಕದಲ್ಲಿ ರಶ್ಮಿಕ ಮಂದಣ್ಣ ಇದ್ರೆ ಇಂದು ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ.

ರೊಮ್ಯಾಂಟಿಕ್ ಆಕ್ಷನ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಕ್ಷಿತ್ ಮತ್ತು ರಕ್ಮಿಣಿ ವಸಂತ್ ನಟಿಸಿದ್ದು , ಸಿನಿಮಾ ಹಿಟ್ ಆದ ಬೆನ್ನಲ್ಲೆ ಸಾಕಷ್ಟು ಪ್ರೆಸ್‌ಮೀಟ್ ಮತ್ತು ಸಕ್ಸಸ್ ಮೀಟ್ ಗಳಲ್ಲಿ ಈ ಜೋಡಿ ಕಾಣಿಸಿಕೊಳ್ಳೋದು ಮಾಮೂಲು.

ಆದ್ರೆ ಕಿರಿಕ್ ಪಾರ್ಟಿ ಟೈಮಲ್ಲಿ ಹಾಕಿದ ಬಟ್ಟೆಯನ್ನೇ ಇದೀಗ ಮತ್ತೆ ಶೆಟ್ರು ರಿಪೀಟ್ ಮಾಡಿರೋದನ್ನ ನೋಡಿ ಶೆಟ್ರು ಸೋ ಸಿಂಪಲ್ ಅಂತಿದ್ದಾರೆ.

ಒಟ್ನಲ್ಲಿ ಇದನ್ನು ನೋಡಿದ ನೆಟ್ಟಿಗರು ಹುಡುಗಿ ಚೇಂಜ್ ಆದ್ರೂ  ಡ್ರೆಸ್ ಇನ್ನೂ ಚೇಂಜ್ ಆಗಿಲ್ಲ ಅಲ್ವಾ ಎಂದು ಟ್ರೋಲ್ ಮಾಡುತ್ತಿದ್ದಾರೆ. ಆದ್ರೆ ಅಂದು ರಕ್ಷಿತ್ ಶೆಟ್ಟಿ ಹಾಕಿದ ಶರ್ಟಿಗೂ ಈಗ ವೈರಲ್ ಆಗುತ್ತಿರುವ ಶರ್ಟಿಗೂ ವ್ಯತ್ಯಾಸ ಇರೋದಂತೂ ಅಕ್ಷರಶಃ ಸತ್ಯ.

 

Continue Reading

bangalore

ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಡೇಟ್ ಫಿಕ್ಸ್…

Published

on

ಬೆಂಗಳೂರು : ಕೊನೆಗೂ ಕನ್ನಡ ಕಿರುತೆರೆಯ ವೀಕ್ಷಕರು ಕಾಯುತ್ತಿದ್ದ ಕನ್ನಡದ ಬಿಗ್ ಬಾಸ್ ಸೀಸನ್ 10 ಶೋ ಕುರಿತ ಬಿಗ್ ಅಪ್ ಡೇಟ್ ಸಿಕ್ಕಿದ್ದು, ಅಕ್ಟೋಬರ್ 7 ಮತ್ತು 8 ರಂದು ಎರಡು ದಿನಗಳ ಕಾಲ ಪ್ರವೇಶದ ಸಂಚಿಕೆಗಳು ಪ್ರಸಾರವಾಗಲಿದೆ.

ಕಿಚ್ಚ ಸುದೀಪ್ ನಿರಂತರವಾಗಿ ಹೋಸ್ಟ್ ಮಾಡಿಕೊಂಡು ಬಂದಿರುವ ಬಿಗ್ ಬಾಸ್ ಕನ್ನಡ ರಿಲಯಾಲಿಟಿ ಶೋ ಈ ಬಾರಿ ಸಾಕಷ್ಟು ಕುತೂಹಲವನ್ನು ಉಂಟು ಮಾಡಿದೆ.

ಸಿನೆಮಾ, ರಾಜಕೀಯ, ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿ ಸುದ್ದಿಯಾದವರನ್ನು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೋಡ್ಬೋದು ಎಂಬ ಮಾತುಗಳು ಕೇಳಿ ಬರುತ್ತಿದೆ.

ಕೆಜಿಎಫ್ ಖ್ಯಾತಿಯ ರೂಪ ರಾಯಪ್ಪ,ನಾಗಿಣಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಸೀರಿಯಲ್ ನಟಿ ನಮ್ರತಾ ಗೌಡ, ರೀಲ್ಸ್ ಮಾಡುತ್ತಾ ಜನಪ್ರಿಯತೆ ಪಡೆದ ಭೂಮಿ ಬಸವರಾಜ್ ಸೇರಿದಂತೆ, ಬುಲೆಟ್ಪ್ರಕಾಶ್ ಪುತ್ರ ರಕ್ಷಕ್,

ಲಕ್ಷ್ಮಣ ಧಾರವಾಹಿ ನಟಿ ಸುಕೃತ ನಾಗ್, ಗೀತಾ ಸೀರಿಯಲ್ ನ ಪ್ರಮುಖ ಪಾತ್ರಧಾರಿ ಭವ್ಯಾ ಗೌಡ, ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಬ್ರೇಕಪ್ ಸುದ್ದಿ ಹರಿದಾಡಿಸಿ ಸುದ್ದಿಯಾದ ವರುಣ್ -ವರ್ಷಾ ಹೆಸರು ಕೂಡ ಬಿಗ್ ಬಾಸ್ ರೇಸ್ ನಲ್ಲಿದೆ.


ಇದೀಗ ಅಧಿಕೃತವಾಗಿ ವಾಹಿನಿ ಪ್ರೋಮೋ ವೊಂದನ್ನು ರಿಲೀಸ್ ಮಾಡಿದ್ದು, ಬಿಗ್ ಬಾಸ್ 10ರ ಶೋಗೆ ಕ್ಷಣಗಣನೆ ಶುರುವಾಗಿದೆ.

ಅ.7 ಮತ್ತು 8 ರಂದು ಎರಡು ದಿನಗಳ ಕಾಲ ಪ್ರವೇಶದ ಸಂಚಿಕೆಗಳು ಪ್ರಸಾರವಾಗಲಿದ್ದು, ಅ. 9ರಿಂದ ಬಿಗ್ ಬಾಸ್ ಮನೆಯಲ್ಲಿ ನಿಜವಾದ ಆಟ ಶುರುವಾಗಲಿದೆ.

Continue Reading

LATEST NEWS

Trending