Connect with us

    LATEST NEWS

    ಟ್ರ್ಯಾಕ್ಟರ್-ಬೈಕ್ ನಡುವೆ ಅ*ಪಘಾತ: ಮೂವರು ಸಾ*ವು

    Published

    on

    ಮಂಗಳೂರು/ತುಮಕೂರು : ಟ್ರ್ಯಾಕ್ಟರ್-ಬೈಕ್ ನಡುವೆ ಅ*ಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ಸಾ*ವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಓಬಳಾಪುರ ಬಳಿ ನಡೆದಿದೆ.

    ಮಹ್ಮದ್ ಆಸೀಫ್, ಮಮ್ತಾಜ್ ಮತ್ತು ಶಾಖೀರ್ ಹುಸೇನ್ ಮೃತ ದುರ್ಧೈವಿಗಳಾಗಿದ್ದು, ಬೈಕ್ ನ ಎದುರುಗಡೆ ಸಾಗುತ್ತಿದ್ದ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಡಿಕ್ಕಿಯಾಗಿ ಈ ದು*ರ್ಘಟನೆ ಸಂಭವಿಸಿದೆ.

    ಇದನ್ನೂ ಓದಿ: ಬೋರ್ ವೆಲ್ ಗೆ ಬಿದ್ದ 18 ವರ್ಷದ ಯುವತಿ !

    ಮೃತರನ್ನು ಮಧುಗಿರಿ ತಾಲೂಕಿನ ಗುಡ್ಡೆನಹಳ್ಳಿ ಗ್ರಾಮದವರು ಎನ್ನಲಾಗಿದೆ. ಸ್ಥಳಕ್ಕೆ ಎಸ್ ಪಿ ಅಶೋಕ್ ವೆಂಕಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಜಾತ್ರೆಯಲ್ಲಿ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಎಸೆದ ಆನೆ; 29 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    Published

    on

    ತಿರುವನಂತಪುರಂ: ದೇವಸ್ಥಾನದ ಉತ್ಸವದ ವೇಳೆ ಆನೆಯೊಂದು ನಿಯಂತ್ರಣ ಕಳೆದುಕೊಂಡು ಏಕಾಏಕಿ ಜನರ ಗುಂಪಿನ ಮೇಲೆ ದಾಳಿ ನಡೆಸಿದ ಪರಿಣಾಮ 29 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರಿನಲ್ಲಿ ನಡೆದಿದೆ.

    ವಾದ್ಯಗಳ ಸದ್ದು, ಜನರ ಗದ್ದಲದ ನಡುವೆ ನಿಯಂತ್ರಣ ಕಳೆದುಕೊಂಡ ಪಾಕ್ಕಾತು ಶ್ರೀಕುಟ್ಟನ್ ಹೆಸರಿನ ಆನೆ, ವ್ಯಕ್ತಿಯೊಬ್ಬನನ್ನ ಎತ್ತಿ ಎಸೆದಿದೆ. ಈ ವೇಳೆ ಗುಂಪಿನಲ್ಲಿದ್ದ ಜನ ಎದ್ನೋ ಬಿದ್ನೋ ಅಂತ ಓಡಿದ್ದಾರೆ. ಕೆಲವರು ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

    ನಸುಕಿನ 2:30ರ ಸುಮಾರಿಗೆ ಮಾವುತ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರಿಂದ ಹೆಚ್ಚಿನ ಹಾನಿ ತಪ್ಪಿದೆ. ಘಟನೆಯಲ್ಲಿ ಸುಮಾರು 29 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

    ತಿರೂರಿನಲ್ಲಿ ನಡೆದ ಪುತಿಯಂಗಡಿ ಉತ್ಸವದಲ್ಲಿ ನೂರಾರು ಮಂದಿ ನೆರೆದಿದ್ದರು. ಉತ್ಸವದಲ್ಲಿ ಕನಿಷ್ಠ ಐದು ಆನೆಗಳು ಅಲಂಕಾರಭೂಷಿತವಾಗಿ ಪಾಲ್ಗೊಂಡಿದ್ದವು. ಈ ವೇಳೆ ಹಠಾತ್ತನೆ ಜನರ ಕಡೆಗೆ ನುಗ್ಗಿದ್ದ ಪಾಕ್ಕಾತು ಶ್ರೀಕುಟ್ಟನ್ ಹೆಸರಿನ ಆನೆ ದಾಳಿ ನಡೆಸಿದೆ. ಈ ಕುರಿತ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಮೂಲಗಳ ಪ್ರಕಾರ, ಆನೆ ದಾಳಿಗೆ ಒಳಗಾದ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಕೋಟಕ್ಕಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

    Continue Reading

    LATEST NEWS

    ಆಯ್ಕೆ ಸಮಿತಿಗೆ ಎಚ್ಚರಿಕೆ ನೀಡಿದ ಬಿಸಿಸಿಐ ಕಾರ್ಯದರ್ಶಿ

    Published

    on

    ಮಂಗಳೂರು/ಮುಂಬೈ : ಕಳೆದ 8 ಟೆಸ್ಟ್ ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿರುವ ಟೀಂ ಇಂಡಿಯಾದ ಸ್ಥಿತಿ ಚಿಂತಾಜನಕವಾಗಿದೆ.

    ನ್ಯೂಜಿಲೆಂಡ್ ವಿರುದ್ದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯನ್ನು ಬಿಟ್ಟುಕೊಟ್ಟಿತು. ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 3-1 ಅಂತರದಿಂದ ಗೆದ್ದುಕೊಂಡಿತು. ಇದು ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗಿದ್ದು, ಆಯ್ಕೆ ಸಮಿತಿಗೆ ಸರಿಯಾದ ತಂಡವನ್ನು ಆಯ್ಕೆ ಮಾಡುವಂತೆ ಸೂಚನೆ ಕೊಟ್ಟಿದೆ. ಜಯ್ ಶಾ ಬದಲಿಗೆ ಬಿಸಿಸಿಐನಲ್ಲಿ ಕಾರ್ಯದರ್ಶಿ ಹುದ್ದೆ ಅಲಂಕರಿಸಿರುವ ದೇವಜಿತ್ ಸೈಕಿಯಾ, ಆಯ್ಕೆ ಸಮಿತಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ.

    ಇದನ್ನೂ ಓದಿ: ಶಾರುಖ್ ಪತ್ನಿ ಗೌರಿ ಮತಾಂತರ? 

    ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೀಕೆಗಳನ್ನು ಎದುರಿಸಿದ್ದರು. ಪರ್ತ್ ಟೆಸ್ಟ್ ನಲ್ಲಿ ಕೊಹ್ಲಿ ಶತಕ ಬಾರಿಸಿ ಮಿಂಚಿದರು. ಇದರ ಹೊರತಾಗಿ ಇಡೀ ಸರಣಿಯಲ್ಲಿ ಕೇವಲ 190 ರನ್ ಗಳಿಸಿದರು. ರೋಹಿತ್ ಶರ್ಮಾ ಸ್ಥಿತಿ ಅದಕ್ಕಿಂತ ಕೆಟ್ಟದಾಗಿತ್ತು. 5 ಇನ್ನಿಂಗ್ಸ್ ಗಳಲ್ಲಿ ಕೇವಲ 31 ರನ್ ಗಳಿಸಿದರು. ಸೆಪ್ಟೆಂಬರ್ ನಿಂದ ಆಡಿದ 8 ಟೆಸ್ಟ್ ಪಂದ್ಯಗಳಲ್ಲಿ ಅವರು ಕೇವಲ 164 ರನ್ ಗಳಿಸಿದ್ದಾರೆ.

    ಬಿಸಿಸಿಐನ ವಿಶೇಷ ಸಾಮಾನ್ಯ ಸಭೆ ಜನವರಿ 12 ರಂದು ನಡೆಯಲಿದೆ. ಕ್ರಿಕೆಟ್ ಜಗತ್ತಿಗೆ ತುಂಬಾ ತಪ್ಪು ಸಂದೇಶ ರವಾನೆ ಆಗುತ್ತಿದೆ. ಬಿಸಿಸಿಐ ಕ್ರಿಕೆಟ್ ಅನ್ನು ಎತ್ತರಕ್ಕೆ ಕೊಂಡೊಯ್ಯಬೇಕು. ಈಗ ಅದಕ್ಕೆ ಸಮಯ ಬಂದಿದೆ. ಆಟಗಾರರಿಗೆ ಬಿಸಿಸಿಐನ ಕಟ್ಟುನಿಟ್ಟಿನ ಸಂದೇಶ ನೀಡಬೇಕು. ಯಾವುದೇ ಆಟಗಾರ ಆಟಕ್ಕಿಂತ ಮೇಲ್ಪಟ್ಟವನಲ್ಲ. ಅದಕ್ಕೆ ಹೊಸ ತಂಡವನ್ನು ಆಯ್ಕೆ ಮಾಡುವ ಅವಶ್ಯಕತೆ ಇದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    Continue Reading

    DAKSHINA KANNADA

    ನಕ್ಸಲರ ಶರಣಾಗತಿ; ಈ ಪ್ರಕ್ರಿಯೆ ಮೊದಲೇ ನಡೆಯಬೇಕಿತ್ತು ಎಂದ ವಿಕ್ರಂ ಗೌಡನ ಸಹೋದರ

    Published

    on

    ನವೆಂಬರ್ 18 ರಂದು ನಡೆದಿದ್ದ ನಕ್ಸಲ್ ವಿಕ್ರಮ್ ಗೌಡ ಎನ್ಕೌಂಟರ್ ಬಳಿಕ ನಡೆದ ಬೆಳವಣಿಗೆಯಲ್ಲಿ ಇದೀಗ ಆರು ಜನ ನಕ್ಸಲರು ಮುಖ್ಯವಾಹಿನಿಗೆ ಕಾಲಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶರಣಾಗತಿ ಆಗುವ ಮೂಲಕ ನಕ್ಸಲ್ ಹೋರಾಟಕ್ಕೆ ಅಂತ್ಯ ಹಾಡಿದ್ದಾರೆ.

    ನಾಗರಿಕ ಸಮಿತಿ ಮತ್ತು ಶರಣಾಗತಿ ಸಮಿತಿ ಸರ್ಕಾರದ ಜೊತೆ ಮಾತುಕತೆ ನಡೆಸಿ ಈ ಶರಣಾಗತಿ ಮಾಡಿಸಿದ್ದಾರೆ. ಆದರೆ ಇದು ವಿಕ್ರಂ ಗೌಡ ಅವರ ಸಹೋದರ ಹಾಗೂ ಸಹೋದರಿಯರಿಗೆ ಬೇಸರ ತರಿಸಿದ್ದು, ನಮ್ಮ ಅಣ್ಣ ಜೀವಂತವಾಗಿದ್ದಾಗ ಈ ಪ್ರಕ್ರಿಯೆ ನಡೆಯಬೇಕಿತ್ತು ಎಂದಿದ್ದಾರೆ. ನಕ್ಸಲರು ಶರಣಾಗುತ್ತಿರುವುದು ಒಳ್ಳೆಯ ವಿಚಾರವಾಗಿದ್ದು, ಅವರೂ ನಮ್ಮಂತೆ ಜೀವಿಸಲಿ ಎಂದಿರುವ ಸಹೋದರ ಸುರೇಶ್ ಗೌಡ ಈ ಯೋಜನೆ ಮೊದಲೇ ತಂದಿದ್ದರೆ ನನ್ನ ಅಣ್ಣ ಕೂಡಾ ಬದುಕಿ ಉಳಿಯುತ್ತಿದ್ದ ಎಂದು ಹೇಳಿದ್ದಾರೆ.

    ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವಿಕ್ರಂ ಗೌಡ ಸಹೋದರಿ ಸುಗುಣ ನಕ್ಸಲ್ ಶರಣಾಗತಿ ಪ್ಯಾಕೇಜ್ ನಮಗೂ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಶರಣಾಗತಿಗೆ ಸಮಿತಿಯವರು ಮೊದಲೇ ಪ್ರಯತ್ನಿಸಿದ್ದರೆ ನನ್ನ ಅಣ್ಣನ ಜೀವ ಉಳಿಯುತ್ತಿತ್ತು. ಜೈಲಿನಲ್ಲಿಯಾದರೂ ಆತ ಇರುತ್ತಿದ್ದ. ಆದರೆ ಆತನನ್ನು ಎನ್ಕೌಂಟರ್ ಮಾಡಿದ ಕಾರಣ ಇಂದು ಆತ ನಮ್ಮೊಂದಿಗಿಲ್ಲ. ನಾವು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕಷ್ಟದ ಜೀವನ ನಡೆಸುತ್ತಿದ್ದೇವೆ. ನಮ್ಮನ್ನು ಯಾವ ಸಮಿತಿಯೂ ಬಂದು ಭೇಟಿ ಮಾಡಿಲ್ಲ. ನಮಗೂ ನಕ್ಸಲ್ ಶರಣಾಗತಿಯ ಪ್ಯಾಕೇಜ್ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    Continue Reading

    LATEST NEWS

    Trending