ವಿಮಾನಯಾನಿಗಳಿಗೆ ಟಿಆರ್ ಪಿಎಸ್ ಆರ್ ಟೆಸ್ಟ್ ಕಡ್ಡಾಯ: ರಾಜ್ಯದಲ್ಲಿ ಬ್ರಿಟನ್ ಕೊರೊನಾ ಭಯ..!
ಬೆಂಗಳೂರು: ರಾಜ್ಯದಲ್ಲಿ ಡೆಡ್ಲಿ ಕೊರೊನಾ ಮಹಾಮಾರಿ ಬಹಳಷ್ಟು ಕಾಡಿತ್ತು ಇದರ ಬೆನ್ನಲ್ಲೇ ಇದೀಗ ಮತ್ತೆ ಕೊರೊನಾದ ರೂಪಾಂತರಿತ ಹೊಸ ಅಲೆಯ ಭೀತಿ ಶುರುವಾಗಿದೆ.
ಈಗಾಗಲೇ ಕೊರೊನಾದ ಎರಡನೇ ಅಲೆಯ ಬಿಸಿ ಭಾರತಕ್ಕೂ ತಟ್ಟಿದೆ. ಭಾರತ ಸೇರಿದಂತೆ, ಇತರ ದೇಶಗಳು ಇಂಗ್ಲಂಡ್‍ನಿಂದ ಬರುವ ಹಾಗೂ ಅಲ್ಲಿಗೆ ಹೋಗುವ ವಿಮಾನ ಸಂಚಾರವನ್ನು ನಿರ್ಬಂಧಿಸಿವೆ.
ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಟನ್‍ನಿಂದ ಡಿಸೆಂಬರ್ 7 ಹಾಗು 22 ರಂದು ಒಟ್ಟು 58 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ ಮಾಹಿತಿ ಲಭ್ಯವಾಗಿದೆ.
ಬ್ರಿಟನ್‌ನಲ್ಲಿ ಕೊರೊನಾದ ಎರಡನೇ ಅಲೆ ಇರುವಂತಹ ಹಿನ್ನಲೆಯಲ್ಲಿ ಪ್ರಯಾಣಿಕರ ಸ್ವ್ಯಾಬ್ ಟೆಸ್ಟ್ ಆರೋಗ್ಯ ಇಲಾಖೆ ಆರಂಭಿಸಿದೆ.
ಇವರಲ್ಲಿ ಈಗಾಗಲೇ ಮೂರು ಮಂದಿಯ ಕೊರೊನಾ ವರದಿ ನೆಗೆಟಿವ್ ಬಂದಿದ್ದು, 14 ದಿನಗಳ ಕಾಲ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಉಳಿದ ಪ್ರಯಾಣಿಕರ ಕೊರೊನಾ ವರದಿ ನಿರೀಕ್ಷೆ ಮಾಡಲಾಗ್ತ ಇದೆ.
ಇನ್ನು ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಲಾಗುತ್ತದೆ ಎಂದು ಜಿಲ್ಲಾಡಳಿತ ಹಾಗು ಆರೋಗ್ಯ ಇಲಾಖೆ ತಿಳಿಸಿದೆ.