ಕಟೀಲು: ಅವರೆಲ್ಲ ಮಿತ್ರರಾದರೂ ಶತ್ರುಗಳಂತೆ ಆವೇಶದಿಂದ ಒಬ್ಬರ ಮೇಲೆ ಒಬ್ಬರು ಬೆಂಕಿಯನ್ನು ಎಸೆಯುತ್ತಿದ್ದರು. ಹಾಗಂತ ಇವರು ವೈರಿಗಳಂತೆ ಹೋರಾಡಿದರೂ ಯಾರಿಗೂ ಏನೂ ಆಗುವುದಿಲ್ಲ. ಯಾಕೆಂದರೆ ಇವರು ಈ ರೀತಿ ಮಾಡುವುದು ಸಂಪ್ರದಾಯವಾಗಿದ್ದು, ಹರಕೆಯ ರೀತಿಯಲ್ಲಿ ಇದು ಪ್ರತಿ ವರ್ಷ ನಡೆಯತ್ತದೆ. ಆದ್ರೆ ಈ ದೃಶ್ಯ ನೋಡಲು ಮಾತ್ರ ಭೀಕರ ಕಾಳಗದಂತೆ ಕಾಣಿಸುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಜನರ ಆರಾಧ್ಯ ದೇವತೆಯಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಸಂತೃಪ್ತಿಗಾಗಿ ನಡೆಯುವ ಒಂದು ಸೇವೆಯಾಗಿ ಸ್ಥಳೀಯವಾಗಿ ತೂಟೆದಾರು ಎಂದು ಪ್ರಸಿದ್ಧಿ ಪಡೆದುಕೊಂಡಿದೆ. ಪ್ರತಿ ವರ್ಷವು ಇಲ್ಲಿನ ಜಾತ್ರೆಯ ಕೊನೆಯ ದಿನ ದೇವಿಯ ಅವಭೃತ ಸ್ನಾನ ನಡೆಯುತ್ತದೆ. ಈ ಸಂದರ್ಭದಲ್ಲಿ ಮೂರು ಕಡೆಗಳಲ್ಲಿ ಈ ರೀತಿಯಾಗಿ ಭಕ್ತರು ಬೆಂಕಿಯನ್ನು ಎಸೆಯುವ ಸಂಪ್ರದಾಯ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ.
ಬೆಂಕಿಯ ಆಟ ಎಂದರೆ ದೇವಿಗೆ ಬಲು ಇಷ್ಟ:
ಪುರಾಣದ ಪ್ರಕಾರ, ಲೋಕ ಕಂಟಕನಾದ ಅರುಣಾಸುರನನ್ನು ಸಂಹರಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರಿಯನ್ನ ಸಂತೃಪ್ತಿಗೊಳಿಸಲು ದೇವತೆಗಳು ಬೆಂಕಿಯ ಮಳೆ ಸುರಿಸಿದ್ರು ಅನ್ನೋ ಪೌರಾಣಿಕ ಕಥೆ ಇದೆ. ಹೀಗಾಗಿ ಪ್ರತಿ ವರ್ಷ ಜಾತ್ರೆಯಲ್ಲಿ ದೇವಿಯು ರಥೋತ್ಸವದ ಬಳಿಕ ಅವಭೃತ ಸ್ನಾನ ಮುಗಿಸಿ ವಾಪಾಸು ಆಗುವಾಗ ಭಕ್ತರು ಈ ಸೇವೆಯನ್ನು ಮಾಡುತ್ತಾರೆ. ಮೈ ಮೇಲೆ ಆವೇಶ ಬಂದವರಂತೆ ಒಬ್ಬರಿಗೊಬ್ಬರು ತೆಂಗಿನ ಗರಿಯಿಂದ ಮಾಡಿದ ಬೆಂಕಿಯ ದೀವಟಿಗೆಯನ್ನು ಒಬ್ಬರ ಮೇಲೊಬ್ಬರು ಎಸೆಯುತ್ತಾ ದೇವಿಯನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳುತ್ತಾರೆ. ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಎಂಟು ದಿನಗಳ ಜಾತ್ರೋತ್ಸವ ನಡೆದು, ಜಾತ್ರೋತ್ಸವದ ಕೊನೆಯ ದಿನ ಈ ತೂಟೆದಾರು ಅನ್ನೋ ಬೆಂಕಿಯ ಆಟ ನಡೆಯುತ್ತದೆ.
ಅತ್ತೂರು ಮತ್ತು ಕೊಡೆತ್ತೂರು ಗ್ರಾಮಸ್ಥರ ಕಾದಾಟ:
ಈ ಆಟವನ್ನು ಆಡಲು ಎಲ್ಲರಿಗೂ ಅವಕಾಶ ಇಲ್ಲ. ಅತ್ತೂರು ಹಾಗೂ ಕೊಡೆತ್ತೂರು ಗ್ರಾಮದ ಜನರಿಗೆ ಮಾತ್ರ ಅವಕಾಶ. ಎರಡೂ ಗ್ರಾಮದ ಜನರು ಎದುರೆದುರಾಗಿ ನಿಂತು ತೆಂಗಿನ ಗರಿಗಳಿಂದ ಮಾಡಿದ ಸೂಟೆಗಳನ್ನು ಹಿಡಿದು ಇದನ್ನು ಒಬ್ಬರಿಗೊಬ್ಬರು ಎಸೆಯುತ್ತಾರೆ. ಆದರೆ ವಿಶೇಷ ಅಂದ್ರೆ ಈ ಕಾದಾಟದಲ್ಲಿ ಯಾರಿಗೂ ಗಾಯಗಳಾಗುವುದಿಲ್ಲ ಅಲ್ಲದೆ ಅವರು ಉಟ್ಟ ಬಟ್ಟೆಗೂ ಹಾನಿ ಆಗುವುದಿಲ್ಲ ಅನ್ನೋದೇ ದೇವಿಯ ಮಹಿಮೆ.
ಜಾತ್ರೆಯ ಸಂದರ್ಭದಲ್ಲಿ ಮಾತ್ರ ನಡೆಯುವ ಈ ಬೆಂಕಿಯ ಕಾದಾಟ ಒಂದು ರೀತಿ ಹರಕೆಯ ರೂಪದಲ್ಲಿ ನಡೆಯುತ್ತದೆ. ಮೊದಲಾಗಿ ಈ ಕಾದಾಟದಲ್ಲಿ ಭಾಗವಹಿಸುವ ಭಕ್ತರು ದೇವಿಯ ಕುಂಕುಮ ಪಡೆದು ಮೈಗೆ ಲೇಪಿಸುತ್ತಾರೆ ಮತ್ತು ದೇವಿಯ ಹೂವನ್ನು ತಲೆಗೆ ಕಟ್ಟಿಕೊಂಡು ಈ ಸೇವೆಗೆ ಸಿದ್ಧರಾಗುತ್ತಾರೆ. ಬಳಿಕ ಹೊಸ ಕೇಸರಿ ಬಣ್ಣದ ಪಂಚೆಯನ್ನು ಧರಿಸಿ ಈ ಕಾದಾಟವನ್ನು ಮಾಡುತ್ತಾರೆ. ಈ ವೇಳೆ ಇವರನ್ನು ನಿಯಂತ್ರಿಸಲು ಎರಡೂ ಕಡೆಯಿಂದ ಊರ ಮುಖಂಡರಿದ್ದು, ಕಾದಾಡ ವಿಕೋಪಕ್ಕೆ ಹೋದಾಗ ಅವರೇ ಇವರನ್ನು ನಿಯಂತ್ರಣ ಮಾಡುತ್ತಾರೆ.
ಮನೆಯಿಂದ ತಾವೇ ತಯಾರಿಸಿದ ತೆಂಗಿನ ಗರಿಯ ಸೂಟೆ ತರುತ್ತಾರೆ:
ಎಂಟು ದಿನಗಳ ಕಾಲ ಶುದ್ಧ ಸಸ್ಯಾಹಾರಿಗಳಾಗಿ, ದುಶ್ಚಟವನ್ನು ತ್ಯಜಿಸುತ್ತಾರೆ. ಗ್ರಾವಸ್ಥರು ಬರುವಾಗ ಮನೆಯಿಂದ ತಾವೇ ತಯಾರಿಸಿದ ತೆಂಗಿನ ಗರಿಯ ಸೂಟೆಯನ್ನು ತರುತ್ತಾರೆ. ಬೆಂಕಿಯನ್ನು ಎಸೆಯುವಾಗ ಇರುವ ಆವೇಶ ಈ ಆಟ ಮುಗಿದ ಬಳಿಕ ಇರುವುದಿಲ್ಲ. ಎಲ್ಲರೂ ಒಂದಾಗಿ ದೇವರ ದರ್ಶನ ಮಾಡಿ ಜೊತೆಯಾಗಿ ತಮ್ಮ ಗ್ರಾಮಗಳಿಗೆ ತೆರಳುತ್ತಾರೆ. ಈ ಬೆಂಕಿ ಎಸೆಯುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆಯುತ್ತಾ ಬಂದಿದೆ. ಆದರೆ, ಇದುವರೆಗೆ ಯಾರಿಗೂ ಏನೂ ಆಗದಿರುವುದಕ್ಕೆ ಇಲ್ಲಿನ ದೇವಿಯ ಮಹಿಮೆಯೇ ಕಾರಣ ಎಂಬುದು ಎಲ್ಲರ ನಂಬಿಕೆ.
ಮಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಕರೆ ಮಾಡುವುದಾಗಿ ತಿಳಿಸಿ, ಮೊಬೈಲ್ ಸಿಮ್ ಖರೀದಿಸಿ ಕಾನೂನು ಬಾಹಿರ ಚಟುವಟಿಕೆ ಕುರಿತು ಆರೋಪಿಸಿ 1.71 ಕೋ.ರೂ ವಂಚಿಸಿರುವ ಕುರಿತು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.
ನ.11 ರಂದು ಅಪರಿಚಿತ ವ್ಯಕ್ತಿಯೋರ್ವರು ಟ್ರಾಯ್ ಪ್ರತಿನಿಧಿ ಎಂದು ಕರೆ ಮಾಡಿದ್ದು, ‘ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್ ನಂಬರ್ ರಿಜಿಸ್ಟರ್ ಆಗಿದೆ, ಮುಂಬೈನ ಅಂಧೇರಿ ಯ ಮೂಲಕ ಕಾನೂನು ಬಾಹಿರ ಚಟುವಟಿಕೆ ನಡೆದಿದೆ . ಮಾರ್ಕೆಟಿಂಗ್ ನೆಪದಲ್ಲಿ ಈ ನಂಬರ್ ಮೂಲಕ ಕರೆ ಮಾಡಿ ಕಿರುಕುಳ ನೀಡುತ್ತಿರುವ ಕುರಿತು ಎಫ್‌ಐಆರ್ ದಾಖಲಾಗಿದೆ. ಈಗಲೇ ನೀವು ಅಂಧೇರಿ ಠಾಣೆಯನ್ನು ಸಂಪರ್ಕ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಎರಡು ಮೊಬೈಲ್ ಸೇವೆಯನ್ನು ಕೊನೆಗಳಿಸಲಾಗುವುದು’ ಎಂದು ಹೇಳಿದ್ದಾರೆ.
ಅನಂತರ ವಾಟ್ಸಪ್ ಮೂಲಕ ವೀಡಿಯೋ ಕರೆ ಮಾಡಿದ್ದು, ನ.13 ರಿಂದ 19 ರ ನಡುವೆ 53 ಲಕ್ಷ, 74 ಲಕ್ಷ ರೂ, 44 ಲಕ್ಷ ರೂ, ಹೀಗೆ ಒಟ್ಟು 1.71 ಕೋ.ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ದೂರುದಾರರು ಅಮೆರಿಕಾದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ವಾಪಾಸಾದ ಬಳಿಕ ಮಂಗಳೂರಿನಲ್ಲಿ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದರು. ಅವರು ಅವಿವಾಹಿತರಾಗಿದ್ದು, ಒಬ್ಬರೇ ವಾಸ ಮಾಡುತ್ತಿದ್ದರು. ಉದ್ಯೋಗದ ಮೂಲಕ ಉಳಿತಾಯ ಮಾಡಿದ ಸಂಪಾದನೆಯನ್ನು ಈ ಮೂಲಕ ಕಳೆದುಕೊಂಡಿದ್ದಾರೆ.
ಮಂಗಳೂರು/ಆಂಧ್ರಪ್ರದೇಶ: ಭಕ್ತರು ದೇವರಿಗೆ ಹಾಲಿನ ಅಭಿಷೇಕ, ಹೂವಿನ ಅಭಿಷೇಕ ನೀರು, ಚಂದನ ಅಥವಾ ಗಂಧದ ಅಭಿಷೇಕ ಮುಂತಾದವುಗಳನ್ನು ಅರ್ಪಿಸುವುದು ಸಾಮಾನ್ಯವಾಗಿದೆ. ಆದರೆ, ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಶ್ರೀ ಶಿವದತ್ತ ಸ್ವಾಮಿಜಿ ಭಕ್ತರಿಂದ ಮೆಣಸಿನ ಪುಡಿ ಅಭಿಷೇಕ ಮಾಡಿಸಿಕೊಂಡಿರುವ ಸುದ್ಧಿ ಫುಲ್ ವೈರಲ್ ಆಗುತ್ತಿದೆ.
ಆಂಧ್ರಪ್ರದೇಶದ ಪ್ರತ್ಯಂಗಿರ ಆಶ್ರಮದಲ್ಲಿ ಈ ವಿಶಿಷ್ಟವಾದ ಅಭಿಷೇಕ ನಡೆದಿದ್ದು, ಸುಮಾರು 100 ಕೆಜಿ ಮೆನಸಿನಕಾಯಿಯನ್ನು ಬಳಸಲಾಗಿದ್ದು, ಇದನ್ನು ಮಾಡುವುದರಿಂದ ಭಕ್ತರ ಕಷ್ಟಗಳು ದೂವಾಗುತ್ತದೆ ಎಂಬ ನಂಬಿಕೆ ಇದೆ. ಪ್ರತ್ಯಂಗಿರಿ ದೇವಿಗೆ ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ದೇವಿಯ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗಿದ್ದು, ಇದನ್ನು ‘ಕರಂ ಅಭಿಷೇಕ’ ಎಂದು ಕೂಡ ಕರೆಯಲಾಗುತ್ತದೆ.
ಕಳೆದ 14 ವರ್ಷಗಳಿಂದ ಪ್ರತ್ಯಂಗಿರ ಆಶ್ರಮದಲ್ಲಿ ಮೆಣಸಿನಕಾಯಿಯಿಂದ ಅಭಿಷೇಕ ನಡೆಸಿಕೊಂಡು ಬರುತ್ತಿದೆ. ಪ್ರತೀ ವರ್ಷ ಈ ಅಭಿಷೇಕದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮೆಣಸಿನ ಪುಡಿ ಸಮರ್ಪಿಸುತ್ತಾರೆ. ಈ ಕ್ರಮ ಭಕ್ತರ ನಂಬಿಕೆಯೋ, ದೇವರ ಪವಾಡವೋ ಗೋತ್ತಿಲ್ಲ, ಆದರೆ ಇಂತಹ ಆಚರಣೆ ಆಧುನಿಕ ಯುಗದಲ್ಲಿ ಎಷ್ಟು ಸರಿ ಎಂಬುವುದು ಚಿಂತಾದಾಯಕ ವಿಷಯವಾಗಿದೆ.
ಮಂಗಳೂರು/ಬೆಂಗಳೂರು: ಕಾಂಗ್ರೇಸ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣ ಸ್ಟಾಪ್ ಆಗುತ್ತಾ ಅನ್ನುವಂತಹ ಭಯ ಯಜಮಾನಿಯರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ, ರಾಜ್ಯದಲ್ಲಿ ಕೆಲವು ದಿನಗಳಿಂದ ಚರ್ಚೆಯಲ್ಲಿರುವ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ.
ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಬಾರಿ ಸದ್ದು ಮಾಡುತ್ತಿದೆ. ಇದರ ನಡುವೆ ಮಹಿಳೆಯರಿಗೆ ಬಿಪಿಎಲ್ ಕಾರ್ಡ್ ರದ್ದಾದರೆ ಅಥವಾ ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಗೆ ವರ್ಗಾವಣೆಯಾದರೆ 2000 ರೂ. ಬರುತ್ತೋ, ಇಲ್ಲವೋ ಎಂಬುವುದು ರಾಜ್ಯದ ಮಹಿಳೆಯರ ತಲೆನೋವಿಗೆ ಕಾರಣವಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಮೀ ಹೆಬ್ಬಾಳ್ಕರ್, ರಾಜ್ಯದಲ್ಲಿ ಬಿಪಿಎಲ್ ಗೆ ಅರ್ಹವಲ್ಲದ ಸುಮಾರು 80,000 ಕಾರ್ಡುಗಳನ್ನು ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು ಯಾವುದೇ ರೀತಿಯ ಗೊಂದಲ ಪಡುವುದು ಬೇಡ. ಅಕ್ರಮ ಬಿಪಿಎಲ್ ಕಾರ್ಡ್ ರದ್ದಾದ ಕೂಡಲೇ ಗೃಹಲಕ್ಷ್ಮಿಯರ ಖಾತೆಗೆ 2000 ರೂ. ಹಣ ಜಮೆ ಆಗುವುದು. ತೆರಿಗೆ ಪಾವತಿಸುವವರಿಗೆ ಮಾತ್ರ 2000 ರೂ. ಹಣ ಬರುವುದಿಲ್ಲ. ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾದರೂ ಹಣ ಬರುತ್ತದೆ, ಆದರೆ ಅಂತವರು ತೆರಿಗೆ ಪಾವತಿಸದಿದ್ದರೆ ಮಾತ್ರ ಬರುವುದು ಎಂದು ಹೇಳಿದ್ದಾರೆ.