Connect with us

LATEST NEWS

ನಾಳೆ ಶಾಸಕ ಖಾದರ್ ಹಾಗೂ ಬಿ.ಕೆ ಹರಿಪ್ರಸಾದ್‌ಗೆ ಅಭಿನಂದನಾ ಕಾರ್ಯಕ್ರಮ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯವರಾದ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹಾಗೂ ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಯು.ಟಿ ಖಾದರ್ ಅವರಿಗೆ ಅಭಿನಂದನಾ ಸಮಿತಿ ಆಶ್ರಯದಲ್ಲಿ ನಾಳೆ ಸಂಜೆ 3 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಹಿಸಲಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ರಾಜ್ಯಸಭಾ ಸದಸ್ಯ ಡಾ. ಎಲ್ ಹನುಮಂತಯ್ಯ , ಮಾಜಿ ಸಚಿವ ಬಿ ರಮಾನಾಥ್ ರೈ , ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್, ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

DAKSHINA KANNADA

ಒಂದು ತಿಂಗಳಿನಿಂದ ಮೊಬೈಲ್‌ ಫೋನ್‌ ಸಂಪರ್ಕವಿಲ್ಲದೆ ಪರದಾಡುತ್ತಿದ್ದಾರೆ ಈ ಜನರು..!!

Published

on

ಉಡುಪಿ: ಜಿಲ್ಲೆಯ ಕಟಪಾಡಿ ಪೇಟೆ ಸುತ್ತಮುತ್ತಲಿನ ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಕಳೆದ ಒಂದು  ತಿಂಗಳಿನಿಂದ ಮೊಬೈಲ್ ನೆಟ್ವರ್ಕ್ ಸಂಪೂರ್ಣ ಸ್ಥಗಿತವಾಗಿದ್ದು, ಖಾಸಗಿ ಕಂಪೆನಿಗಳ ಮೊಬೈಲ್ ಫೋನ್ ಮತ್ತು ಇಂಟರ್‌ನೆಟ್ ಬಳಕೆದಾರರು ತೀವ್ರ ಅಡಚಣೆ ಅನುಭವಿಸುತ್ತಿದ್ದಾರೆ.

katapadi

ಮೊಬೈಲ್ ಕಂಪೆನಿ ಹಾಗೂ ಟವರ್ ಅಳವಡಿಸಲಾಗಿರುವ ಜಾಗದ ಮಾಲೀಕರ ನಡುವಿನ ಒಪ್ಪಂದ ಮುಗಿದ ಹಿನ್ನೆಲೆಯಲ್ಲಿ ಏರ್‌ಟೆಲ್, ವಿಐ ಮತ್ತು ಜಿಯೋ ಬಳಕೆದಾರರಿಗೆ ನೆಟ್ ವರ್ಕ್ ಸಿಗದಂತಾಗಿದೆ. ಫೋನ್ ಕರೆ ಮಾಡಲು, ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ, ಆನ್‌ಲೈನ್ ಹಣಕಾಸಿನ ವ್ಯವಹಾರ, ವರ್ಕ್ ಫ್ರಮ್ ಹೋಮ್, ಕಚೇರಿಯ ದೈನಂದಿನ ಕೆಲಸ ನಿರ್ವಹಿಸಲು ಕಷ್ಟಪಡುತ್ತಿದ್ದು, ಜನರ ಗೋಳು ಕೇಳುವವರೇ ಇಲ್ಲವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಮೊಬೈಲ್ ಸೇವೆ ಒದಗಿಸುವ ಕಂಪೆನಿಗಳು ಟವರ್ ಲಭ್ಯವಿಲ್ಲದೆ ನಾವೇನೂ ಮಾಡಲಾಗುತ್ತಿಲ್ಲ. ಸಮೀಪದಲ್ಲಿ ಪರ್ಯಾಯ ಜಾಗವೂ ಸಿಗುತ್ತಿಲ್ಲ ಎಂದು ಹೇಳುತ್ತಿವೆ. ಏರ್‌ಟೆಲ್ ಸಂಸ್ಥೆಯ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ‘ಪರ್ಯಾಯ ಟವರ್‌ಗೆ ವ್ಯವಸ್ಥೆಯಾಗದೆ ಏನೂ ಮಾಡುವಂತಿಲ್ಲ, ಪರ್ಯಾಯ ಜಾಗದ ವ್ಯವಸ್ಥೆ ಆದಲ್ಲಿ ಟವರ್ ನಿರ್ಮಾಣ ಮಾಡುತ್ತೇವೆ’ ಎಂದು ಹೇಳುತ್ತಿದ್ದಾರೆ.

READ MORE..; ಅರ್ಚಕರಿಂದಲೇ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ..!! ವಿಡಿಯೋ ವೈರಲ್

ನೆಟ್ ವರ್ಕ್ ಸಿಗದೆ ಹೈರಾಣಾಗಿರುವ ಸ್ಥಳೀಯರು ಮೊಬೈಲ್ ಸೇವೆ ಕಲ್ಪಿಸುವ ಸಂಸ್ಥೆಗಳ ವಿರುದ್ಧ – ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಜನರಲ್ಲಿ ಕಂಪೆನಿ ವಿರುದ್ದ ಆಕ್ರೋಶ ಹೆಚ್ಚುತ್ತಿದೆ. ಜಾಗದ ಮಾಲೀಕರು ಮತ್ತು ನೆಟ್ವರ್ಕ್ ಸಂಸ್ಥೆಗಳು ಪರಸ್ಪರ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳ ಬೇಕು ಎಂದು ಒತ್ತಾಯಿಸು ತ್ತಿರುವ ಸ್ಥಳೀಯರು ಸಂಘಟಿತ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

 

 

Continue Reading

DAKSHINA KANNADA

ಪ್ರತಿಭಾವಂತೆ ವಿದ್ಯಾರ್ಥಿನಿಯನ್ನು ಬಲಿ ಪಡೆದ ಮೆದುಳು ಜ್ವರ

Published

on

ಮೂಡಬಿದಿರೆ: ಮೆದುಳು ಜ್ವರಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಮೂಡಬಿದರೆಯಲ್ಲಿ ನಡೆದಿದೆ. ಶಿರ್ತಾಡಿ ಮೌಂಟ್ ಕಾರ್ಮೆಲ್ ಹೈಸ್ಕೂಲ್‌ನ 10ನೇ ತರಗತಿಯ ಸ್ವಸ್ತಿ ಶೆಟ್ಟಿ (15) ಮೃತ ವಿದ್ಯಾರ್ಥಿನಿ. ಸ್ವಸ್ತಿ ಶೆಟ್ಟಿ ಮೆದುಳು ಜ್ವರ ಉಲ್ಬಣಗೊಂಡ ಪರಿಣಾಮ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

Swasthi

ಉತ್ತಮ ತ್ರೋಬಾಲ್ ಆಟಗಾರ್ತಿಯಾಗಿದ್ದ ಈಕೆ ಉತ್ತಮ ನೃತ್ಯಪಟುವೂ ಆಗಿದ್ದಳು.ತಂದೆ ಸತೀಶ್‌ ಶೆಟ್ಟಿ ಗೋವಾದಲ್ಲಿ ಉದ್ಯೋಗದಲ್ಲಿದ್ದು ತಾಯಿ ಸರಿತಾ ಶೆಟ್ಟಿ ಶಿರ್ತಾಡಿ ನವಮೈತ್ರಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಉದ್ಯೋಗಿ. ಮೂಲತಃ ವಾಲ್ಪಾಡಿಯವರಾದ ಇವರು ಪ್ರಸ್ತುತ ಮೂಡಬಿದಿರೆಯಲ್ಲಿ ನೆಲೆಸಿದ್ದಾರೆ.

READ MORE..; ಪ್ರಚಾರದ ಭರದಲ್ಲಿ ತೇಜಸ್ವಿ ಸೂರ್ಯ ಕಿರಿಕ್‌..! ಸಂಸದರಿಗೆ ಡೌನ್ ಡೌನ್ ಎಂದ ಸಭಿಕರು

Continue Reading

LATEST NEWS

ಅರ್ಚಕರಿಂದಲೇ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ..!! ವಿಡಿಯೋ ವೈರಲ್

Published

on

ಹರಿದ್ವಾರ: ದೇವಸ್ಥಾನದಲ್ಲಿ ವಾಹನ ಪಾರ್ಕಿಂಗ್ ವಿಚಾರದಲ್ಲಿ ಅರ್ಚಕರು ಹಾಗೂ ದೇವಸ್ಥಾನದ ಭಕ್ತರ ನಡುವೆ ಗಲಾಟೆ ನಡೆದ ಘಟನೆ ಉತ್ತಾರಖಂಡದ ಹರಿದವಾರದಲ್ಲಿರುವ ಸಿದ್ಧಪೀಠ ಶ್ರೀ ದಕ್ಷಿಣ ಕಾಳೀ ಮಂದಿರದಲ್ಲಿ ನಡೆದಿದೆ.

halle

ಹರಿದ್ವಾರದಲ್ಲಿನ ಮಂದಿರದಲ್ಲಿ ಈ ಘಟನೆ ನಡೆದಿದ್ದು ಗಲಾಟೆ ಹಿಂಸಾತ್ಮಕವಾಗಿ ನಡೆದಿದ್ದು ಅದರ ವಿಡಿಯೋ ವೈರಲ್ ಆಗಿದೆ.  ಅರ್ಚಕರು ಮತ್ತು  ದೇವಸ್ಥಾನದ ಸಿಬ್ಬಂದಿಗಳು ಭಕ್ತರನ್ನು ದೊಣ್ಣೆಯಿಂದ ಥಳಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಉತ್ತರ ಪ್ರದೇಶದ ಸಹರಾನ್ ಪುರದಿಂದ ಬಂದಿದ್ದ ಭಕ್ತರು ಪಾರ್ಕಿಂಗ್ ಶುಲ್ಕದ ವಿಚಾರದಲ್ಲಿ ತಗಾದೆ ತೆಗೆದಿದ್ದರು. ಈ ವಿಚಾರದಲ್ಲಿ ಅರ್ಚಕರು ಹಾಗೂ ಭಕ್ತರ ನಡುವೆ ಗಲಾಟೆ ಆರಂಭವಾಗಿತ್ತು . ಬಳಿಕ ಅದು ಹಿಂಸಾತ್ಮಕ ರೂಪ ತಾಳಿದ್ದು, ದೊಣ್ಣೆಯಿಂದ ಭಕ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಗಲಾಟೆಯಲ್ಲಿ ಹಲವರು ಭಕ್ತರು ಗಾಯಗೊಂಡಿದ್ದು ಆಸ್ಪತ್ರೆ ಸೇರಿದ್ದಾರೆ. ಸ್ಥಳಕ್ಕೆ ಆಗಮಿಸಿದ ಘಾಟ್ ಚೌಕಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

READ MORE..; ಪ್ರಚಾರದ ಭರದಲ್ಲಿ ತೇಜಸ್ವಿ ಸೂರ್ಯ ಕಿರಿಕ್‌..! ಸಂಸದರಿಗೆ ಡೌನ್ ಡೌನ್ ಎಂದ ಸಭಿಕರು

Continue Reading

LATEST NEWS

Trending