Connect with us

ಎತ್ತಿಗೆ ಜ್ವರ ಎಮ್ಮೆಗೆ ಬರೆ : ಬಸ್‌ ಪ್ರಯಾಣಿಕರಿಗೆ ಟೋಲ್ ಸೆಸ್ ಹೇರಿಕೆ

Published

on

ಎತ್ತಿಗೆ ಜ್ವರ ಎಮ್ಮೆಗೆ ಬರೆ : ಬಸ್‌ ಪ್ರಯಾಣಿಕರಿಗೆ ಟೋಲ್ ಸೆಸ್ ಹೇರಿಕೆ.।!

ಮಂಗಳೂರು : ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ ಎನ್ನುವ ಗ್ರಾಮೀಣ ಪ್ರದೇಶದ ನಾಣ್ಣುಡಿಯಂತೆ ತಮ್ಮ ಬಸ್‌ಗಳಿಗೆ ಹಾಕಿದ ಟೋಲ್‌ ಸೆಸ್‌ ಅನ್ನು ಬಸ್‌ ಮಾಲಕರ ಪ್ರಯಾಣಿಕರ ಮೇಲೆ ಹೇರಿ ಟಿಕೆಟ್‌ ದರ ಹೆಚ್ಚಳ ಮಾಡಿದೆ.

ಇದಕ್ಕೆ ಹೆದ್ದಾರಿ ಟೋಲ್ ಹೋರಾಟ ಸಮಿತಿ ತೀವ್ರ ವಿರೋಧ ವ್ಯಕ್ತವಾಗಿದೆ, ಫಾಸ್ಟ್ ಟಾಗ್ ಕಡ್ಡಾಯ, ಟೋಲ್ ದರಗಳ ಹೆಚ್ಚಳವನ್ನು ಮುಂದಿಟ್ಟು ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಬಸ್ ಮಾಲಕರು ಪ್ರತಿ ಸ್ಟೇಜ್ ಗೆ ಟಿಕೇಟ್ ಮೇಲೆ ತಲಾ ಒಂದು ರೂಪಾಯಿ ಪ್ರಯಾಣ ದರ ಹೆಚ್ಚಳ ಮಾಡಿರುವುದು ಖಂಡನೀಯ.

ಜಿಲ್ಲಾಡಳಿತ, ಆರ್ ಟಿ ಎ ಅನುಮತಿ ಪಡೆಯದೆ ಈ ರೀತಿ ಏಕಪಕ್ಷೀಯ, ನಿಯಮ ಬಾಹಿರ ಏರಿಕೆ ಮಾಡುವುದನ್ನು ಒಪ್ಪಲಾಗದು,

ಉಭಯ ಜಿಲ್ಲಾಡಳಿತಗಳು ತಕ್ಷಣ ಮಧ್ಯ ಪ್ರವೇಶಿಸಿ ದರ ಏರಿಕೆಯನ್ನು ತಡೆ ಹಿಡಿದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಆಗ್ರಹಿಸಿದೆ.

ಟೋಲ್ ದರ ಹೆಚ್ಚಳ, ಫಾಸ್ಟ್ ಟಾಗ್ ಹೆಸರಿನ ಸುಲಿಗೆ, ಸುರತ್ಕಲ್ ನಲ್ಲಿ ಅಕ್ರಮ ಟೋಲ್ ವಸೂಲಿಯನ್ನು ಸಂಘಟಿತ ವಿಭಾಗವಾದ ಬಸ್ ಮಾಲಕರ ಒಕ್ಕೂಟಗಳು ಪ್ರತಿಭಟಿಸಬೇಕು.

ಅದರ ಹೊರತಾಗಿ ಟೋಲ್ ದರ ಹೆಚ್ಚಳವನ್ನೇ ನೆಪವಾಗಿಸಿ ಪ್ರಯಾಣಿಕರ ಮೇಲೆ ಯದ್ವಾ ತದ್ವ ದರ ವಿಧಿಸುವುದು ಖಂಡನೀಯ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಟೋಲ್ ಗೇಟ್ ಗಳಲ್ಲಿ ವಿಪರೀತ ದರ ವಸೂಲಿ, ಅಕ್ರಮ ಟೋಲ್ ಗೇಟ್ ಗಳ ವಿರುದ್ದ ನಾಗರಿಕ ಸಂಘಟನೆಗಳು ಹೋರಾಟಗಳನ್ನು ಹಮ್ಮಿಕೊಂಡಾಗ ಬಸ್ ಮಾಲಕರ ಸಂಘಗಳು ಪ್ರತಿಭಟನೆಗಳ ಜೊತೆಗೆ ನಿಲ್ಲಲಿಲ್ಲ.

ನಿಯಮಗಳ ವಿರುದ್ದವಾಗಿ ಕಿರು ಅಂತರದ ಟೋಲ್ ಕೇಂದ್ರಗಳ ವಿರುದ್ದ ಸ್ವತಂತ್ರ ಹೋರಾಟವನ್ನೂ ಮಾಡಲಿಲ್ಲ‌. ಅದರಲ್ಲೂ ಹೆದ್ದಾರಿ ಪ್ರಾಧಿಕಾರವೇ ಸ್ವತಹ ಮುಚ್ಚಲು ನಿರ್ಧರಿಸಿರುವ ಸುರತ್ಕಲ್ ನ ತಾತ್ಕಾಲಿಕ ಟೋಲ್ ಕೇಂದ್ರದಲ್ಲಿ ಅಕ್ರಮ ಟೋಲ್ ಸಂಗ್ರಹದ ವಿರುದ್ದ ಟೋಲ್ ವಿರೋಧಿ ಹೋರಾಟ ಸಮಿತಿ ಸತತವಾದ ಹೋರಾಟ ನಡೆಸಿದಾಗಲೂ ಬಸ್ ಮಾಲಕರ ಸಂಘ ಹೋರಾಟ ಬೆಂಬಲಿಸಿ ಬೀದಿಗಿಳಿಯಲಿಲ್ಲ.

ಅದರ ಬದಲಿಗೆ ಅಕ್ರಮ ಟೋಲ್ ಸಂಗ್ರಹದ ಹೊರೆಯನ್ನು ಪ್ರಯಾಣಿಕರ ತಲೆಗೆ ವರ್ಗಾಯಿಸಿ ದುಪ್ಪಟ್ಟು ಲಾಭ ಪಡೆಯಿತು.

ಅವಳಿ ಜಿಲ್ಲೆಗಳ ಜೀವನಾಡಿಯಾಗಿರುವ, ಸಂಘಟಿತ, ಪ್ರಬಲ ವಿಭಾಗವಾಗಿರುವ ಖಾಸಾಗಿ ಬಸ್ ಗಳು ಸುರತ್ಕಲ್ ಅಕ್ರಮ ಟೋಲ್ ಕೇಂದ್ರದ ವಿರುದ್ದದ ಹೋರಾಟದಲ್ಲಿ ಕೈ ಜೋಡಿಸಿದ್ದರೆ ಸುರತ್ಕಲ್ ಟೋಲ್ ಮುಚ್ಚದೆ ಸರ್ಕಾರಕ್ಕೆ ಬೇರೆ ದಾರಿ ಇರಲಿಲ್ಲ.

ಈ ಹಿಂದೆ ಟೋಲ್ ಕೇಂದ್ರಗಳು ಆರಂಭಗೊಂಡಾಗ ಪ್ರಯಾಣಿಕರ ಪ್ರತಿ ಟಿಕೆಟ್ ಮೇಲೆ ಬಸ್ ಮಾಲಕರ ಸಂಘ ತಲಾ ಎರಡು ರೂಪಾಯಿ ಟೋಲ್ ಸೆಸ್ ವಿಧಿಸಿತ್ತು.

ಈಗ ಮತ್ತೆ ಟೋಲ್ ದರ ಅಲ್ಪ ಹೆಚ್ಚಳವನ್ನು ಮುಂದಿಟ್ಟು ಪ್ರತಿ ಸ್ಟೇಜ್ ಮೇಲೆ ಟಿಕೆಟ್ ಗೆ ಒಂದು ರೂಪಾಯಿ ಸೆಸ್ ಅನ್ನು ಜಿಲ್ಲಾಡಳಿತ, ಆರ್ ಟಿ ಎ ಅನುಮತಿ ಪಡೆಯದೆ ಏಕಪಕ್ಷೀಯವಾಗಿ ಹೆಚ್ಚುವರಿಯಾಗಿ ವಿಧಿಸಿದೆ.

ಈ ರೀತಿ ಜಿಲ್ಲಾಡಳಿತದ ಅನುಮತಿ ಇಲ್ಲದೆ, ಸಾರ್ವಜನಿಕ ಅಹವಾಲು ಸ್ವೀಕರಿಸಿ ಆರ್ ಟಿ ಎ ಒಪ್ಪಿಗೆ ಸೂಚಿಸದೆ ಬಸ್ ಮಾಲಕರು ದರ ಹೆಚ್ಚಿಸುವುದು ನಿಯಮಗಳಿಗೆ ವಿರುದ್ದವಾಗಿದೆ.

ಈ ಹೆಚ್ಚಳದಿಂದ ಮಂಗಳೂರಿನಿಂದ ಉಡುಪಿ, ಕುಂದಾಪುರದ ಕಡೆಗೆ ಪ್ರಯಾಣಿಸುವ ಪ್ರತಿಯೊಂದು ಟಿಕೇಟ್ ಮೇಲೆ ತಲಾ ಐದು ರೂಪಾಯಿ ಹೆಚ್ಚುವರಿ ಹೊರೆ ಬೀಳುತ್ತದೆ.

ಇದು ಬಡ ಪ್ರಯಾಣಿಕರ ನೇರವಾದ ಅಕ್ರಮ ಸುಲಿಗೆಯಾಗಿದ್ದು, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಬಸ್ ಮಾಲಕರ ಸಂಘದ ಈ ಏಕಪಕ್ಷೀಯ ಸುಲಿಗೆ ನೀತಿಯನ್ನು ತೀವ್ರವಾಗಿ ವಿರೋಧಿಸುತ್ತದೆ.

ಪ್ರಯಾಣಿಕರು ಹೆಚ್ಚುವರಿ ದರ ಪಾವತಿಸದೆ ಪ್ರತಿಭಟಿಸುವಂತೆ ಮನವಿ ಮಾಡುತ್ತದೆ.

ಉಭಯ ಜಿಲ್ಲಾಡಳಿಗಳು ತಕ್ಷಣ ಮಧ್ಯ ಪ್ರವೇಶಿಸಿ ಹೆಚ್ವುವರಿ ಟೋಲ್ ಸೆಸ್ ವಸೂಲಿಗೆ ತಡೆ ವಿಧಿಸುವಂತೆ ಆಗ್ರಹಿಸುತ್ತದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಇದರ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

FILM

ಆತ್ಮಗಳ ಜೊತೆ ಮಾತಾಡ್ತಾರಂತೆ ಕನ್ನಡದ ಈ ನಟಿ..!! ಸಿನೆಮಾ ಬಿಟ್ಟು ಕನಸುಗಳನ್ನು ಟ್ಯ್ರಾಕ್ ಮಾಡಲು ಹೊರಟಿದ್ದು ಯಾಕೆ ಗೊತ್ತಾ?

Published

on

ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದ ನೀತು ಗಾಳಿಪಟ ಸೇರಿದಂತೆ ಕೆಲವು ಬೆರಳೆಣಿಕೆಯ ಹಿಟ್ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆದಾದ ಬಳಿಕ ಖಾಸಗಿ ಯೂಟ್ಯೂಬ್ ಸಂದರ್ಶನಗಳಲ್ಲಿ ಬಿಟ್ಟರೆ  ನೀತು ಸಿನೆಮಾಗಳಿಂದ ದೂರ ಉಳಿದಿದ್ದಾರೆ. ಇದೀಗ ನೀತು ಹೊಸ ವಿದ್ಯೆಯೊಂದನ್ನು ಕಲಿತಿದ್ದಾರಂತೆ. ಸಿನೆಮಾ ಬಿಟ್ಟು ನೀತು ಏನು ಮಾಡುತ್ತಿದ್ದಾರೆ ಅನ್ನೋರಿಗೆ ನೀತು ಹೊಸ ವಿಷಯವೊಂದನ್ನು ಬಿಚ್ಚಿಟ್ಟಿದ್ದಾರೆ. ಹೌದು, ಇವರು ಆತ್ಮಗಳ ಜೊತೆ ಸಂಪರ್ಕಿಸುವ ವಿದ್ಯೆಯನ್ನು ಕಲಿತಿದ್ದು, ಕನಸುಗಳನ್ನು ಟ್ರ್ಯಾಕ್ ಮಾಡುವಲ್ಲಿ ಬಿಸಿಯಾಗಿದ್ದಾರಂತೆ. ಈ ವಿದ್ಯೆಯನ್ನು ಶಮನಿಸಂ ಎಂದು ಕರೀತಾರೆ.

ಈ ಕುರಿತಾಗಿ ಸ್ವತಃ ನೀತುರವರು ಖಾಸಗಿ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡುವ ವೇಳೆ ತಿಳಿಸಿದ್ದಾರೆ. ‘ನಾನು ಶಮನಿಸಂ ಕೋರ್ಸ್ ಮಾಡಿದ್ದೇನೆ ಆದ್ರೆ ಅದು ಡ್ರೀಮ್ ಟ್ರ್ಯಾಕ್ ಅಂತ ಹೋಳೋಕೆ ಆಗಲ್ಲ. ಶಮನಿಸಂ ಅನ್ನೋ ವಿದ್ಯೆಯಲ್ಲಿ ಇದೊಂದು ಭಾಗವಾಗಿರುತ್ತೆ. ಆದ್ರೆ ಇಲ್ಲಿ ಓಜಾ ಬಾಕ್ಸ್ ಇಟ್ಟುಕೊಂಡು ಆತ್ಮಗಳನ್ನು ಕರೆಯೋದಿಲ್ಲ. ಇದೊಂದು ಕೋರ್ಸ್ ಆಗಿದ್ದು ನಾನು ಇದನ್ನು ಇಷ್ಟು ಪ್ರೊಫೆಷನಲ್ ಆಗಿ ತೆಗೆದುಕೊಳ್ತೇನೆ ಅಂತ ಅಂದುಕೊಂಡಿರಲಿಲ್ಲ’ಎಂದು ಹೇಳಿದ್ರು.

Read More..; ಹರ್ಷಿಕಾ ಪೂಣಚ್ಚ – ಭುವನ್ ಗೌಡ ದಂಪತಿ ಮೇಲೆ ಹ*ಲ್ಲೆ; ನಾವು ಪಾಕಿಸ್ತಾನದಲ್ಲಿ ಅಥವಾ ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದೇವೆಯೇ ? ಏಂದು ಕೇಳಿದ ನಟಿ

ಮರಣದ ಬಳಿಕ ಮಗಳಿಗೆ ಕಾಣಿಸಿಕೊಂಡ ತಂದೆ..!

ನೀತು ತಂದೆಯ ಮರಣದ ಬಳಿಕ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ರಂತೆ. ರಾತ್ರಿ ಮಲಗೋ ವೇಳೆ ಯಾರೋ ಮುಂದೆ ಬಂದು ನಿಂತ ಹಾಗೆ ಅನುಭವ. ಆದ್ರೆ ಅದು ಕನಸಾಗಿರಲಿಲ್ಲ ಅಸಲಿಗೆ ಅದು ನನಸಾಗಿತ್ತಂತೆ.  ಕಪ್ಪು ಬಣ್ಣದಲ್ಲಿ ಕಾಣಿಸಿಕೊಂಡ ವ್ಯಕ್ತಿ ಕೈ ಕಟ್ಟಿಕೊಂಡು ತಲೆ ಕೆಳಗೆ ಹಾಕಿ ನಿಂತಿದ್ದರಂತೆ. ನೀತು ಅವರಿಗೆ ರಾತ್ರಿ ವೇಳೆ ನಿದ್ದೆ ಮಾಡಲು ಭಯವಾಗುತ್ತಿತ್ತಂತೆ. ಒಂದು ಕಡೆ ತಂದೆ ಕುರಿತು ಕೇಳುವಾಗ ತಂದೆಗೆ ಇನ್ನೂ ಮೋಕ್ಷ ಸಿಗಲಿಲ್ಲ ಎಂದು ತಿಳಿಯಿತು. ಗುರುವಾಯೂರಿಗೆ ಹೋಗಿ ಅಲ್ಲಿ ತಂದೆಗೆ ಮೋಕ್ಷ ದೊರಕುವಂತೆ ಮಾಡಿದ್ದಾರೆ. ಇದಾದ ನಂತರ ಕನಸುಗಳನ್ನು ಟ್ರ್ಯಾಕ್ ಮಾಡಲು ಪ್ರಾರಂಭಿಸಲು ಮನಸ್ಸು ಮಾಡಿದ್ರಂತೆ.

ಕನಸುಗಳ ಬೆನ್ನುಹತ್ತಿದ್ದ ನೀತು:

ತನಗಾಗಿರುವ ಅನುಭವಗಳಿಂದ ನೀತು ಕನಸುಗಳನ್ನು ಟ್ರ್ಯಾಕ್ ಮಾಡಲು ಬಯಸಿದ್ರಂತೆ. ಈ ವೇಳೆ ಹೈದರಾಬಾದ್ ನ ದಂಪತಿಯ ಭೇಟಿ ಮಾಡ್ತಾರೆ. ಇವರು ಈ ವಿದ್ಯೆಯನ್ನು ಕಲಿಸುತ್ತಾರೆ ಎಂದು ಗೊತ್ತಾಗಿ ಅವರ ಸಂಪರ್ಕದಲ್ಲಿದ್ರಂತೆ ನೀತು.  ಇದು ಕೆಲವರು ಇದನ್ನು ಮೂಡನಂಬಿಕೆ ಎಂದು ಹೆಳ್ತಾರೆ. ಆದರೆ ನಾನು ಇದಕ್ಕೆ ತಲೆ ಕೆಡಿಸಿಕೊಳ್ಳೋದಿಲ್ಲ ಅಂತ ಹೇಳ್ತಾರೆ ನೀತು. ನಂಬಿಕೆ ಹಾಗೂ ವಿಜ್ಞಾನಕ್ಕೆ ಅದರದ್ದೇ ಆದ ಗರುತು ಇದೆ. ಹಾಗಾಗಿ ಯಾರು ಏನು ಅಂದರೂ ನಾನು ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ಹೇಳಿದ್ರು.

 

Continue Reading

LATEST NEWS

VIRAL VIDEO : ಬೈಕ್ ಸವಾರನ ಪ್ರಾ*ಣ ತೆಗೆದ ನೀಲಗಾಯ್

Published

on

ಉತ್ತರ ಪ್ರದೇಶ : ಸಾ*ವು ಯಾವಾಗ? ಹೇಗೆ? ಬರುತ್ತದೆ ಎಂದು ಹೇಳಲಾಗದು. ಬೇರೆ ಬೇರೆ ರೀತಿಯಲ್ಲಿ ಸಾವು ಸಂಭವಿಸಬಹುದು. ಎಷ್ಟೊತ್ತಿಗೆ ಎಲ್ಲಿ ಬೇಕಾದರೂ ಸಂಭವಿಸಬಹುದು. ಯಾವ ರೀತಿಯಲ್ಲೂ ಜವರಾಯ ಅಟ್ಟಹಾಸ ಮೆರೆಯಬಹುದು. ಅಂತೆಯೇ ಇಲ್ಲೂ ನೀಲಗಾಯ್ ರೂಪದಲ್ಲಿ ಬಂದ ಯಮ ಯುವಕನೊಬ್ಬನನ್ನು ಬ*ಲಿ ಪಡೆದಿದ್ದಾನೆ.

ನೀಲಗಾಯ್ ಎಂಬ ಅಪರೂಪದ ಪ್ರಾಣಿಯೊಂದು ಡಿ*ಕ್ಕಿ ಹೊಡೆದು ಬೈಕ್ ಸವಾರ ಯುವಕ ಇಹಲೋಕ ತ್ಯಜಿಸಿ
ಘಟನೆ ಉತ್ತರ ಪ್ರದೇಶದ ಇನಾಯತ್ ನಗರ ಸಮೀಪ ನಡೆದಿದೆ. ಅಯೋಧ್ಯೆಯ ಮುಕೇಶ್(28) ಮೃ*ತ ಯುವಕ.

ಹೇಗಾಯಿತು ಘಟನೆ?
ನೀಲಗಾಯ್ ಎಂಬುದು ಅಪರೂಪದ ಪ್ರಾಣಿ. ಇದು ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಬೈಕ್ ಸವಾರ ಮುಕೇಶ್ ಇನಾಯತ್ ನಗರದ ಮಾರ್ಕೇಟ್ ಗೆ ಸಾಗುತ್ತಿದ್ದರು. ಈ ವೇಳೆ ರಸ್ತೆ ದಾಟಲು ನೀಲಗಾಯ್ ಅತಿವೇಗದಿಂದ ಹಾರಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅದರ ಕೊಂಬು ಸವಾರನ ಎದೆಗೆ ಚುಚ್ಚಿದೆ. ಅಲ್ಲದೇ, ಅವರು ಬೈಕ್ ನಿಂದ ಕೆಳಕ್ಕೆಸೆಯಲ್ಪಟ್ಟು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ನೀಲಗಾಯ್ ಗೂ ಸಣ್ಣ ಪುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಆಲದ ಮರದ ಪೊಟರೆಯಲ್ಲಿ ಪತ್ತೆಯಾಯ್ತು 64 ಲಕ್ಷ ರೂ.!

ಘಟನೆಯ ದೃಶ್ಯ ಹೆದ್ದಾರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ವೀಡಿಯೋ ವೈರಲ್ ಆಗುತ್ತಿದೆ. 6 ಸೆಕೆಂಡುಗಳ ಈ ಭಯಾನಕ ವೀಡಿಯೋ ಕಂಡು ವೀಕ್ಷಕರು ಬೆಚ್ಚಿ ಬಿದ್ದಿದ್ದಾರೆ.

Continue Reading

LATEST NEWS

ಆಲದ ಮರದ ಪೊಟರೆಯಲ್ಲಿ ಪತ್ತೆಯಾಯ್ತು 64 ಲಕ್ಷ ರೂ.!

Published

on

ಆಂಧ್ರಪ್ರದೇಶ : ಆಲದ ಮರದ ಪೊಟರೆಯಲ್ಲಿ ಬರೋಬ್ಬರಿ 64 ಲಕ್ಷ ರೂ. ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಇದು ಹೇಗೆ ಪತ್ತೆಯಾಯ್ತು? ಮಾಯಾಜಾಲನಾ? ಎಂಬ ಪ್ರನೆ ಮೂಡೋದು ಸಹಜ. ಆದ್ರೆ, ಇಲ್ಲಿ ಸಿಕ್ಕಿರೋದು ಮೇಲಿಂದ ಉದುರಿದ ದುಡ್ಡಲ್ಲ. ಬದಲಿಗೆ ಕಳವುಗೈದ ದುಡ್ಡು.

ಹೌದು, ಎಟಿಎಂಗೆ ಹಣ ತುಂಬಿಸಲು ಹೋದ ವಾಹನದಿಂದ ಹಣವನ್ನು ವ್ಯಕ್ತಿಯೊಬ್ಬ ಕಳವು ಮಾಡಿದ್ದಾನೆ.  ಬಳಿಕ ಆಲದ ಮರದ ಪೊಟರೆಯಲ್ಲಿ ಬಚ್ಚಿಟ್ಟಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬಯಲಾಗಿದೆ.

ಏನಿದು ಘಟನೆ ?

ಸಿಎಂಎಸ್ ಭದ್ರತಾ ಸಂಸ್ಥೆಯ ಸಿಬ್ಬಂದಿ ಗುರುವಾರ ಮಧ್ಯಾಹ್ನ 68 ಲಕ್ಷ ರೂಪಾಯಿಯೊಂದಿಗೆ ಒಂಗೋಲ್ ನಿಂದ ತೆರಳಿದ್ದರು. ಚಿಮಕುರ್ತಿ, ಮರ್ರಿಚೆಟ್ಲಪಾಲೆಂ, ದೊಡ್ಡಾವರಂ, ಗುಂಡ್ಲಪಲ್ಲಿ, ಮಡ್ಡಿಪಾಡು ಪ್ರದೇಶಗಳಲ್ಲಿರುವ ವಿವಿಧ ಎಟಿಎಂ ಯಂತ್ರಗಳಿಗೆ ಹಣ ತುಂಬಿಸಬೇಕಾಗಿತ್ತು.

ಆದರೆ, ಅದೇ ದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಒಂಗೋಲ್‌ನ ಕರ್ನೂಲ್ ರಸ್ತೆಯಲ್ಲಿರುವ ಭಾರತೀಯ ಪೆಟ್ರೋಲ್ ಬಂಕ್‌ನಲ್ಲಿ ವಾಹನ ನಿಲ್ಲಿಸಿದ್ದಾರೆ. ಮಧ್ಯಾಹ್ನ ಆಗಿದ್ದರಿಂದ ತಾವು ತಂದಿದ್ದ ತಿಂಡಿ ತಿನ್ನಲು ಬಂಕ್ ರೂಮಿಗೆ ಹೋಗಿದ್ದಾರೆ. ಈ ವೇಳೆ ಮಾಸ್ಕ್ ಧರಿಸಿದ್ದ ವಾಚ್ ಮನ್ ಬಂದು ವಾಹನದ ಬೀಗ ಮುರಿದು 64 ಲಕ್ಷ ರೂ.ಮೌಲ್ಯದ 500 ರೂ.ನೋಟುಗಳ ಬಂಡಲ್​ಗಳನ್ನು ಕಳ್ಳತನ ಮಾಡಿದ್ದ.

ಅಷ್ಟರಲ್ಲಿ ಊಟ ಮುಗಿಸಿ ಹಿಂದಿರುಗಿದ ಸಿಬ್ಬಂದಿಗೆ ವಾಹನದ ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಒಳಗೆ ನೋಡಿದಾಗ 100 ರೂಪಾಯಿ ನೋಟುಗಳ ಬಂಡಲ್ ಗಳು ಮಾತ್ರ ಪತ್ತೆಯಾಗಿವೆ. 500 ರೂಪಾಯಿ ನೋಟುಗಳ ಬಂಡಲ್‌ಗಳು ಕಾಣಿಸಲಿಲ್ಲ.
ಅವರು ತಂದಿದ್ದ 68 ಲಕ್ಷ ರೂಪಾಯಿಯಲ್ಲಿ 64 ಲಕ್ಷ ರೂ. ಕಳ್ಳತನವಾಗಿರುವುದು ಗೊತ್ತಾಗಿದೆ.

ಕೂಡಲೇ ಪೊಲೀಸರಿಗೆ ದೂರು ನೀಡಿದ ನಂತರ ಹೆಚ್ಚುವರಿ ಎಸ್ಪಿ (ಅಪರಾಧ) ಎಸ್.ವಿ.ಶ್ರೀಧರ್ ರಾವ್ ಮತ್ತು ತಾಲೂಕು ಸಿಐ ಭಕ್ತವತ್ಸಲ ರೆಡ್ಡಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ಹತ್ತಿರದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಯಿತು. ಮುಸುಕುಧಾರಿಯೊಬ್ಬ ಬೈಕ್‌ನಲ್ಲಿ ಬಂದು ವಾಹನದಲ್ಲಿದ್ದ ನಗದು ದೋಚಿರುವುದು ಕಂಡುಬಂದಿತ್ತು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ : ಹರ್ಷಿಕಾ ಪೂಣಚ್ಚ – ಭುವನ್ ಗೌಡ ದಂಪತಿ ಮೇಲೆ ಹ*ಲ್ಲೆ; ನಾವು ಪಾಕಿಸ್ತಾನದಲ್ಲಿ ಅಥವಾ ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದೇವೆಯೇ ? ಏಂದು ಕೇಳಿದ ನಟಿ

ಆರೋಪಿ ಬಂಧನ :

ಬಂಧಿತ ಆರೋಪಿ ಮಹೇಶ್ ಎಂದು ಗುರುತಿಸಲಾಗಿದೆ. ಆತ ಈ ಹಿಂದೆ ಸಿಎಂಎಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನೋಟುಗಳ ಬಂಡಲ್‌ಗಳ ಜೊತೆಗೆ, ಅವನು ತನ್ನ ಸ್ವಗ್ರಾಮವಾದ ಸಂತನೂತಲಪಾಡು ಮಂಡಲದ ಕಾಮೆಪಲ್ಲಿವಾರಿಪಾಲೆಂನಲ್ಲಿರುವ ತನ್ನ ಮನೆಯ ಸಮೀಪವಿರುವ ಆಲದ ಮರದ ಕಾಂಡದಲ್ಲಿ ಹಣವನ್ನು ಬಚ್ಚಿಟ್ಟಿದ್ದ ಎನ್ನಲಾಗಿದೆ.

ಪೊಲೀಸರ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆಲದ ಮರದ ಬುಡದಲ್ಲಿ ಬಚ್ಚಿಟ್ಟಿದ್ದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Continue Reading

LATEST NEWS

Trending