Sunday, November 27, 2022

ತೋಕೂರು ಚರ್ಚ್‌ನ ಧರ್ಮಗುರು ವ. ಪೀಟರ್‌ ಫೆರ್ನಾಂಡಿಸ್‌ ನಿಧನ

ಮಂಗಳೂರು: ನಗರ ಹೊರವಲಯದ ಮೂಲ್ಕಿ ತೋಕೋರಿನ ಸಂತ ಸೆಬೆಸ್ಟಿಯನ್‌ ಚರ್ಚ್‌ನ ಧರ್ಮಗುರು ವ.ಪೀಟರ್‌ ಫೆರ್ನಾಂಡಿಸ್‌ (74) ನಿಧನ ನಿನ್ನೆ ಹೊಂದಿದ್ದಾರೆ.


ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪೀಟರ್‌ ಫೆರ್ನಾಂಡಿಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 1978 ಮೇ.4 ರಂದು ಧರ್ಮಗುರುವಾಗಿ ದೀಕ್ಷೆ ಪಡೆದುಕೊಂಡ ಅವರು ಕಾಸ್ಸಿಯಾ, ಬಂಟ್ವಾಳ ಹಾಗೂ ಮಡಂತ್ಯಾರಿನಲ್ಲಿ ಸಹಾಯಕ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದರು.

ನಂತರ ಉಕ್ಕಿನಡ್ಕ, ಇಂದಬೆಟ್ಟು, ಬೊರಿಮಾರ್‌, ಕೆಲರಾಯಿ ಹಾಗೂ ನಾರಾವಿ ಚರ್ಚ್‌ಗಳಲ್ಲಿ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದರು. ಎಲಿಯಾರ್‌ಪದವು ಹಾಗೂ ಮಣಿಯಂಪಾರೆ ಚರ್ಚ್‌ನ ಪ್ರಭಾರ ಧರ್ಮಗುರುವಾಗಿದ್ದ ಅವರು 6 ವರ್ಷ ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ ಎಸ್ಟೇಟ್‌ ಮ್ಯಾನೇಜರ್‌ ಆಗಿ ಕಾರ್ಯ ನಿರ್ವಹಿಸಿದ್ದರು.
ಮೃತರ ಅಂತ್ಯಕ್ರಿಯೆಯು ನಾಳೆ (ಸೆ.12) ರಂದು ಮಂಗಳೂರಿನ ವಿನ್ಸೆಂಟ್‌ ಫೆರಾರ್‌ ಚರ್ಚ್‌ನಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here

Hot Topics

ವಿಶ್ವದಲ್ಲೇ ಬೃಹತ್ ಗಾತ್ರದ ಮೂತ್ರಕೋಶದ ಕಲ್ಲು ಹೊರತೆಗೆದ ಮಣಿಪಾಲ ವೈದ್ಯರು..!

ಉಡುಪಿ: ವ್ಯಕ್ತಿಯೋರ್ವರ 11.5 x 7.5 ಸೆಂಮೀ ಅಳತೆಯ 672 ಗ್ರಾಂ ತೂಕದ ಮೂತ್ರಕೋಶದ ಕಲ್ಲನ್ನು ಮಣಿಪಾಲದ ಕಸ್ತೂರಿ ಬಾ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ನಡೆಸಿ ಹೊರೆ ತೆಗೆದಿರುವ ಘಟನೆ ನಡೆದಿದೆ. ಇದು ವಿಶ್ವದಲ್ಲಿ ಇಲ್ಲಿಯವರೆಗೆ...

ಉಡುಪಿ: ಹೊಟೇಲ್‌ನಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅನಾಹುತ….

ಉಡುಪಿ: ಹೊಟೇಲ್‌ವೊಂದರಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅನಾಹುತ ಸಂಭವಿಸಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಸಕಾಲಿಕ ಕಾರ್ಯಾಚರಣೆಯಿಂದ ಸಂಭಾವ್ಯ ಅವಘಡವೊಂದು ತಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.ಇಲ್ಲಿನ ಸಿಟಿ ಬಸ್ ನಿಲ್ದಾಣ ಸಮಿಪದಲ್ಲಿರುವ ಟಾಪ್ ಟೌನ್...

ಮಂಗಳೂರು: ಬೆಳ್ಮ ಬೋಲ್ದನ್‌ ಕುಟುಂಬಿಕರ ನಿವಾಸದಲ್ಲಿ ಕೋಲೋತ್ಸವ

ಮಂಗಳೂರು: ಮಂಗಳೂರು ನಗರ ಹೊರವಲಯದ ದೇರಳಕಟ್ಟೆ ಅಡ್ಕರಮಜಲು ಬೆಳ್ಮದ ಬೋಲ್ದನ್‌ ಕುಟುಂಬಿಕರ ತರವಾಡಿನ ಮನೆಯಲ್ಲಿ ಪಂಜುರ್ಲಿ, ಕಲ್ಲುರ್ಟಿ , ಗುಳಿಗ ದೈವಗಳ ನರ್ತನ ಸೇವೆ ವೈಭವದಿಂದ ಜರುಗಿತು.ನವೆಂಬರ್‌ 24ರಂದು ಬೆಳಿಗ್ಗೆ ತರವಾಡು ಮನೆಯಲ್ಲಿ...