Connect with us

    DAKSHINA KANNADA

    ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮೀ ಹಬ್ಬ.. ಲಕ್ಷ್ಮೀ ದೇವಿಯ ವ್ರತಾಚರಣೆ ಹೇಗೆ?

    Published

    on

    ಇಂದು ಎಲ್ಲಡೆ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಇದು ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ ಇದಾಗಿದ್ದು ಸನಾತನ ಧರ್ಮದಲ್ಲಿ ಲಕ್ಷ್ಮೀ ದೇವಿಯನ್ನು ಸಂಪತ್ತಿನ  ಮುಖ್ಯ ದೇವತೆ ಎಂದು ಆರಾಧಿಸಲಾಗುತ್ತದೆ. ವಿಶೇಷವಾಗಿ ವಾರದ ಶುಕ್ರವಾರದಂದು ಲಕ್ಷ್ಮೀ ದೇವಿಯ ಆರಾಧನೆ ಮಾಡುತ್ತಾರೆ. ಶುಕ್ರವಾರ ಲಕ್ಷ್ಮೀ ದೇವಿಗೆ ಪ್ರಿಯವಾದ ದಿನ ಎಂದು ಹೇಳಲಾಗುತ್ತದೆ.  ಹಿಂದೂ ಕ್ಯಾಲೆಂಡರ್‌ ಪ್ರಕಾರ, ವರಮಹಾಲಕ್ಷ್ಮಿ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಕೊನೆಯ ಶುಕ್ರವಾರದಂದು ಆಚರಿಸಲಾಗುತ್ತದೆ. ಈ ವರ್ಷ ಅಂದರೆ 2024 ರ ವರಮಹಾಲಕ್ಷ್ಮಿ ವ್ರತವನ್ನು ಇಂದು(ಆ 16)  ಆಚರಿಸಲಾಗುತ್ತದೆ.

    ಈ ದಿನದಂದು ಲಕ್ಷ್ಮೀ ದೆವಿಯನ್ನು ವಿಧಿ-ವಿಧಾನಗಳ ಮೂಲಕ ಪೂಜಿಸಿ, ಉಪವಾಸಗೈದು ವ್ರತ ಮಾಡುವುದರಿಂದ ಲಕ್ಷ್ಮೀ ದೇವಿ ಒಲಿಯುತ್ತಾಳೆ. ಉಪವಾಸ ವ್ರತ ಮಾಡುವುದರಿಂದ ಸಂತೋಷ, ಶಾಂತಿ, ಸಂಪತ್ತು ಮತ್ತು ಸಮೃದ್ಧಿಯನ್ನು ಕರುಣಿಸುತ್ತಾಳೆ ಎಂಬ ನಂಬಿಕೆಯಿದೆ.

    ಈ ದಿನ ವ್ರತಾಚರಣೆ ಹೇಗೆ..?
    ಉಪವಾಸ ಮಾಡುವ ಮಹಿಳೆಯರು ಮುಂಜಾನೆ ಬೇಗ ಎದ್ದು ತಲೆಗೆ ಸ್ನಾನ ಮಾಡಬೇಕು. ನಂತರ ಪೂಜಾ ಕೋಣೆಯಲ್ಲಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಪೂಜಾ ಕೋಣೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಮನೆಯ ಬಾಗಿಲನ್ನು ತಳಿರುತೋರಣ ಮತ್ತು ಹೂವುಗಳಿಂದ ಅಲಂಕರಿಸಬೇಕು. ಪೂಜೆ ಮಾಡುವ ಸ್ಥಳದಲ್ಲಿ ಮರದ ಮೇಜಿನ ಮೇಲೆ ಹೊಸ ಕೆಂಪು ಬಟ್ಟೆಯನ್ನು ಹರಡಿ ಮತ್ತು ನಿಮ್ಮ ಮನೆಯಲ್ಲಿ ಲಕ್ಷ್ಮಿ, ಗಣಪತಿಯ ವಿಗ್ರಹ ಅಥವಾ ಚಿತ್ರವನ್ನು ಪ್ರತಿಷ್ಠಾಪಿಸುತ್ತಾರೆ. ದೇವಿಯ ವಿಗ್ರಹದ ಬಳಿ ಅಕ್ಕಿಯನ್ನು ಇರಿಸಿ ಮತ್ತು ಅದರ ಮೇಲೆ ನೀರು ತುಂಬಿದ ಕಲಶವನ್ನು ಜೋಡಿಸಿ ಇಡಲಾಗುತ್ತದೆ. ಲಕ್ಷ್ಮಿ ಮತ್ತು ಗಣಪತಿಯ ವಿಗ್ರಹಗಳಿಗೆ ಹೂವಿನ ಮಾಲೆ ಹಾಕಿ,  ಬಳಿಕ ತುಪ್ಪದಿಂದ ದೀಪವನ್ನು ಹಚ್ಚಿ ಅಗರಬತ್ತಿಗಳನ್ನು ಬೆಳಗಿಸಿ ಮತ್ತು ಮೊದಲು ಗಣಪತಿಯನ್ನು ಪೂಜಿಸುತ್ತಾರೆ. ಹೂವು, ತೆಂಗಿನಕಾಯಿ, ಶ್ರೀಗಂಧ, ಅರಿಶಿನ, ಕುಂಕುಮ, ಅಕ್ಷತೆಗಳನ್ನು ಅರ್ಪಿಸುತ್ತಾರೆ.

    ಬಳಿಕ ವರಮಹಾಲಕ್ಷ್ಮಿ ಪೂಜೆಯನ್ನು ಪ್ರಾರಂಭ ಮಾಡುತ್ತಾರೆ. ಪೂಜೆಯ ಸಮಯದಲ್ಲಿ ವರಮಹಾಲಕ್ಷ್ಮಿ ವ್ರತದ ಪುಸ್ತಕವನ್ನು ಓದುವುದರ ಮೂಲಕ ಲಕ್ಷ್ಮೀದೇವಿ ಅಷ್ಟೋತ್ತರ ಶತನಾಮಾವಳಿ ಪಠಿಸುತ್ತಾರೆ. ಕೊನೆಯಲ್ಲಿ ಆರತಿ ಮಾಡಿ ನಂತರ ದೇವಿಗೆ ಹೋಳಿಗೆ, ಗೋಧಿ ಹುಗ್ಗಿ, ಕರ್ಚಿಕಾಯಿ, ಕಡಬು ಹೀಗೆ ಒಂಬತ್ತು ಅಥವಾ ಐದು ಬಗೆಯ ನೈವೇದ್ಯಗಳನ್ನು ಅರ್ಪಿಸಿ. ಮನೆಗೆ ಬಂದವರಿಗೆಲ್ಲ ಪ್ರಸಾದವನ್ನು ಹಂಚುತ್ತಾರೆ.  ಮುತ್ತೈದೆಯರಿಗೆ ಅರಿಶಿಣ, ಕುಂಕುಮ, ಬಳೆ, ಹಣ್ಣು, ತಾಂಬೂಲ ನೀಡಿ ಉಡಿ ತುಂಬುತ್ತಾರೆ.

    1. ವರಮಹಾಲಕ್ಷ್ಮಿ ವ್ರತದ ಮಹತ್ವ:
    ಧಾರ್ಮಿಕ ನಂಬಿಕೆಗಳ ಪ್ರಕಾರ, ಯಾವ ವ್ಯಕ್ತಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತಾನೋ ಅವನು ಅಷ್ಟಲಕ್ಷ್ಮಿಯರ ಅಂದರೆ ಲಕ್ಷ್ಮಿ ದೇವಿಯ 8 ರೂಪಗಳಿಂದ ವಿಶೇಷ ಅನುಗ್ರಹವನ್ನು ಪಡೆದುಕೊಳ್ಳುತ್ತಾನೆ ಎನ್ನುವ ನಂಬಿಕೆಯಿದೆ. ಸಂಪತ್ತು ಮತ್ತು ಸಮೃದ್ಧಿಯ ದೇವತೆಯನ್ನು ಪೂಜಿಸಲು ಈ ದಿನವನ್ನು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಈ ವ್ರತವನ್ನು ಸರಿಯಾದ ವಿಧಿವಿಧಾನಗಳೊಂದಿಗೆ ಆಚರಿಸಿದರೆ, ಲಕ್ಷ್ಮಿ ದೇವಿಯ ಕೃಪೆಯಿಂದ ದುಃಖ ಮತ್ತು ಬಡತನವು ಜೀವನದಿಂದ ದೂರವಿರುತ್ತದೆ. ಈ ದಿನದಂದು ಲಕ್ಷ್ಮಿ ದೇವಿಯು ತನ್ನ ಭಕ್ತರ ಪೂಜೆಯಿಂದ ಶೀಘ್ರದಲ್ಲೇ ಸಂತುಷ್ಟಳಾಗುತ್ತಾಳೆ ಮತ್ತು ತನ್ನ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ.

    2. ಈ ವಸ್ತುಗಳನ್ನು ಮನೆಗೆ ತನ್ನಿ:
    ವರಮಹಾಲಕ್ಷ್ಮಿ ವ್ರತದ ದಿನದಂದು ನೀವು ನಿಮ್ಮ ಮನೆಗೆ ಒಕ್ಕಣ್ಣಿನ ತೆಂಗಿನಕಾಯಿ, ಅಂದರೆ ಏಕಾಕ್ಷಿ ತೆಂಗಿನಕಾಯಿಯನ್ನು ತರಬೇಕು. ಇದನ್ನು ಮನೆಗೆ ತರುವುದರಿಂದ ನೀವು ಲಕ್ಷ್ಮಿ ದೇವಿಯ ಅಪಾರ ಆಶೀರ್ವಾದವನ್ನು ಯಾವುದೇ ಸಂಶಯವಿಲ್ಲದೆ ಪಡೆದುಕೊಳ್ಳುತ್ತೀರಿ. ಈ ದಿನ ನೀವು ಏಕಾಕ್ಷಿ ತೆಂಗಿನಕಾಯಿ ಮಾತ್ರವಲ್ಲದೆ, ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದ ದಕ್ಷಿಣಾವರ್ತಿ ಶಂಖವನ್ನು ಕೂಡ ಮನೆಗೆ ತರಬಹುದು.

    3. ಲಕ್ಷ್ಮಿ ಪೂಜೆಯ ನಂತರ ಈ ಕೆಲಸವನ್ನು ಮಾಡಿ:
    ವರಮಹಾಲಕ್ಷ್ಮಿ ವ್ರತದ ದಿನದಂದು ನೀವು ಮನೆಗೆ ಹಳದಿ ಬಣ್ಣದ ಕವಡೆಗಳನ್ನು ತರಬೇಕು. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಿದ ನಂತರ 11 ಹಳದಿ ಬಣ್ಣದ ಕವಡೆಗಳನ್ನು ಹಳದಿ ಬಣ್ಣದ ಬಟ್ಟೆಯಲ್ಲಿ ಕಟ್ಟಿ ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಇಡಿ. ಈ ಕೆಲಸವನ್ನು ಮಾಡುವುದರಿಂದ ನೀವು ಶೀಘ್ರದಲ್ಲೇ ಆರ್ಥಿಕ ಲಾಭವನ್ನು ಪಡೆದುಕೊಳ್ಳುತ್ತೀರಿ.

    4. ಇದನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ:
    ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಶ್ರೀಯಂತ್ರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವರಮಹಾಲಕ್ಷ್ಮಿ ವ್ರತದ ದಿನದಂದು ಬೆಳಗ್ಗೆ ಶುಭ ಮುಹೂರ್ತದಲ್ಲಿ ಇದನ್ನು ನಿಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಬೇಕು ಮತ್ತು ರಾತ್ರಿ ತುಪ್ಪದ ದೀಪವನ್ನು ಹಚ್ಚಿ ”ಓಂ ಶ್ರೀಂ ಹ್ರೀಂ ಶ್ರೀಂ ನಮಃ” ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ನೀವು ಇದನ್ನು ಮಾಡುವುದರಿಂದ, ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ಎನ್ನುವ ನಂಬಿಕೆಯಿದೆ.

    5. ಪೂಜೆಗೆ ಇಟ್ಟ ಹಣವನ್ನು ವ್ಯರ್ಥ ಖರ್ಚು ಮಾಡಬೇಡಿ:
    ಹಲವರು ವರಮಹಾಲಕ್ಷ್ಮಿ ಪೂಜೆಯಲ್ಲಿ ಹಣವನ್ನು ಇಟ್ಟು ಪೂಜಿಸುತ್ತಾರೆ. ಲಕ್ಷ್ಮಿ ಸಂಪತ್ತಿನ ದೇವತೆಯಾಗಿರುವುದರಿಂದ ಧನ ಇಟ್ಟು ಪೂಜಿಸುವುದು ಉತ್ತಮ ಕಾರ್ಯ. ಆದರೆ ಈ ಹಣವನ್ನು ನೀವು ಎಲ್ಲೆಂದರಲ್ಲಿ ಖರ್ಚು ಮಾಡಬಾರದು. ಈ ಹಣದಿಂದ ಮದ್ಯ ಖರೀದಿಸುವುದು, ಮಾಂಸಹಾರ ಖರೀದಿಸಲು ಬಳಸುವುದು, ಇಲ್ಲವೆ ಈ ಹಣವನ್ನು ತಂಬಾಕು, ಗುಟ್ಕ ಖರೀದಿಗೆ ಬಳಸದಿರುವುದು ಉತ್ತಮ. ನೀವು ಈ ಹಣದಿಂದ ತರಕಾರಿ, ಹಣ್ಣು, ಅಕ್ಕಿ ಖರೀದಿಸಬಹುದು.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ನೆಲ್ಯಾಡಿಯಲ್ಲಿ ವರುಣತಾಂಡವ ; 4 ಮನೆ, 2 ವಿದ್ಯುತ್ ಕಂಬಗಳಿಗೆ ಹಾನಿ

    Published

    on

    ಉಪ್ಪಿನಂಗಡಿ: ಕರಾವಳಿ ಭಾಗದಲ್ಲಿ ಮಳೆಗಾಲ ಜೂನ್ ತಿಂಗಳಿನಿಂದಲೇ ಆರಂಭವಾಗಿದೆ. ಆದರೆ ಮಳೆ ಮಾತ್ರ ಬೇಕೋ ಬೇಡವೋ ಎಂಬಂತೆ ಬರುತ್ತಿದೆ. ಇತ್ತ ಬಿಸಿಲಿದ್ದು, ಅತ್ತ ಕಣ್ಣು ಹಾಯಿಸುವಾಗ ಮಳೆ ಬರುತ್ತದೆ. ಯಾವ ಸಮಯದಲ್ಲಿ ಏನಾಗುವುದು ಎಂದು ಊಹಿಸಲೂ ಅಸಾದ್ಯ. ನಿನ್ನೆ ಉಪ್ಪಿನಂಗಡಿ ಸಮೀಪದ ನೆಲ್ಯಾಡಿಯ ಜನತಾ ಕಾಲನಿ ಪರಿಸರದಲ್ಲಿ ಬೀಸಿದ ಭಾರೀ ಮಳೆಗೆ 4 ಮನೆಗಳ ಛಾವಣಿ ಹಾನಿಗೀಡಾಗಿ 2 ವಿದ್ಯುತ್ ಕಂಬಗಳು ಮುರಿದಿದೆ.

    ನೆಲ್ಯಾಡಿಯ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಬಳಿ ಇರುವ ಕಾಲನಿಯ ನಿವಾಸಿಗರಾದ ಐತ್ತಪ್ಪ, ಐಸುಬು, ಬಾಬು ಆಚಾರಿ, ಲೋಕೇಶ್ ಅವರ ಮನೆಯ ಮೇಲ್ಛಾವಣಿಯು ಗಾಳಿಯ ವೇಗಕ್ಕೆ ಸಿಲುಕಿ ಹಾನಗೀಡಾಗಿದ್ದು, ಸಮೀಪದಲ್ಲಿದ್ದ ಎರಡು ವಿದ್ಯುತ್ ಕಂಬಗಳು ಮುರಿದಿದೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ , ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    DAKSHINA KANNADA

    ಅಬ್ಬರದ ಹೆಜ್ಜೆಯಿಟ್ಟುಕೊಂಡು ಬರುತ್ತಿದೆ ”ಕಲ್ಜಿಗ”

    Published

    on

    ಮಂಗಳೂರು: ಹಿಮಾನಿ ಫಿಲಂಸ್ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ “ಕಲ್ಜಿಗ” ಕನ್ನಡ ಸಿನಿಮಾ ಸೆ.13 ರಂದು ರಾಜ್ಯಾದಂತ್ಯ ತೆರೆಕಾಣಲಿದೆ. ಕುತೂಹಲಕಾರಿಯಾಗಿರುವ ಶೀರ್ಷಿಕೆಯಲ್ಲೇ ಸೆಳೆತವೊಂದನ್ನು ಬಚ್ಚಿಟ್ಟುಕೊಂಡಿರುವ ಈ ಚಿತ್ರದ ಟ್ರೈಲರ್ ಭಾರತ್ ಮಾಲ್‌ನ ಭಾರತ್ ಸಿನಿಮಾಸ್ ನಲ್ಲಿ ಅನಾವರಣಗೊಂಡಿತ್ತು. ಚಿತ್ರದ ಟ್ರೈಲರ್ ಎ2 ಫಿಲ್ಮ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬೆಡುಗಡೆಯಾಗಿದ್ದು, ಜನರಿಂದ ಅದ್ಬುತ ಪ್ತತಿಕ್ರಿಯೆ ದೊರಕಿದೆ ಎಂದು ನಿರ್ದೇಶಕ ಸುಮನ್ ಸುವರ್ಣ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

    ಶರತ್ ಕುಮಾರ್ ಎ.ಕೆ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. “ಕಲ್ಜಿಗ” ದ ಕಥೆ ಚಿತ್ರಕಥೆ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದು, ಹಂಸಲೇಖ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ನಟ ಅರ್ಜುನ್ ಕಾಪಿಕಾಡ್ ನಾಯಕನಾಗಿ ಹಾಗೂ ಸುಶ್ಮಿತಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ನಟರಾದ ಗೋಪಿನಾಥ್ ಭಟ್, ಜ್ಯೋತಿಷ್ ಶೆಟ್ಟಿ, ಮಾನಸಿ ಸುಧೀರ್, ವಿಜಯ್ ಶೋಭರಾಜ್ ಪಾವೂರ್, ಶ್ಲಾಘಾ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪ್ರಸಾದ್ ಕೆ. ಶೆಟ್ಟಿ ಹಿನ್ನಲೆ ಸಂಗೀತ ನೀಡಿದ್ದಾರೆ.

    ಮಂಗಳೂರು, ಉಡುಪಿ ಸುತ್ತಮುತ್ತಲಿನ ಪ್ರದೆಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆ. 13 ರಂದು ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಡಿಕೇರಿ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಮುಂಬಾಯಿ ಹಾಗೂ ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಟ್ರೈಲರನ್ನು 14 ಲಕ್ಷಕ್ಕಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಮಂಗಳೂರು ಕನ್ನಡ ಭಾಷಾ ಶೈಲಿಯಲ್ಲಿ ಚಿತ್ರ ತಯಾರಾಗಿದೆ. ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ಬಳಿಕ ಘಟಿಸುವ ರೋಚಕ ಕಥನ “ಕಲ್ಜಿಗ”ದಲ್ಲಿದೆ. ಸಚಿನ್ ಶಟ್ಟಿ ಛಾಯಗ್ರಹಣ, ಯಶ್ವಿನ್ ಕೆ. ಶೆಟ್ಟಿಗಾರ್‌ನ ಸಂಕಲನ ಈ ಚಿತ್ರಕ್ಕಿದೆ. ಕಾಂತಾರ ಖ್ಯಾತಿಯ ಸನಲ್ ಗುರು ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಧಾಕೃಷ್ಣ ಮಾಣಿಲ, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸಂದೀಪ್ ಶೆಟ್ಟಿ ಇದ್ದಾರೆ. ಗಿರ್ಗಿಟ್, ಸರ್ಕಸ್, ಗಮ್ಜಾಲ್ ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದ ಸುಮನ್ ಸುವರ್ಣ “ಕಲ್ಜಿಗ” ದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿದ್ದಾರೆ.

    Continue Reading

    DAKSHINA KANNADA

    ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಗೆ ಗೌರವ ಡಾಕ್ಟರೇಟ್ ಪ್ರದಾನ

    Published

    on

    ಮಂಗಳೂರು : ಕರಾವಳಿ ಮೂಲದ ಕನ್ನಡ ಚಲನ ಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ.

    ಬೆಂಗಳೂರು ವಿವಿಯು ಈ ಗೌರವ ಡಾಕ್ಟರೇಟ್ ನೀಡಿ ಗುರುಕಿರಣ್ ಅವರನ್ನು ನೀಡಿ ಗೌರವಿಸಿದೆ. ಸೆಪ್ಟಂಬರ್ 10 ರಂದು ನಡೆದಿದ್ದ ವಿವಿ ಘಟಿಕೋತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

    ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಬೆಂಗಳೂರು ವಿವಿಯ ಈ ಪ್ರಶಸ್ತಿಯಿಂದ  ಗುರು ಕಿರಣ್ ಇನ್ನು ಮುಂದೆ ಡಾಕ್ಟರ್ ಗುರುಕಿರಣ್ ಆಗಲಿದ್ದಾರೆ.

    Continue Reading

    LATEST NEWS

    Trending