Connect with us

    FILM

    ‘ನನ್ನ ಅರ್ಹತೆಗಿಂತ ಹೆಚ್ಚಿನದ್ದನ್ನು ನೀಡಿದ್ದೀರಿ’ ಬಿಗ್ ಬಿ ಹೀಗಂದಿದ್ದು ಯಾರಿಗೆ?

    Published

    on

    ಮಂಗಳೂರು/ಮುಂಬೈ : ಸದ್ಯ ದೇಶದಲ್ಲಿ ಪುಷ್ಪ – 2  ದಿ ರೂಲ್ ಭಾರೀ ಸದ್ದು ಮಾಡುತ್ತಿದೆ. ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ಇದೀಗ ಅಮಿತಾಬ್ ಬಚ್ಚನ್ ಅಲ್ಲು ಅರ್ಜುನ್ ಅವರನ್ನು ಹೊಗಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಗ್ ಬಿ ಅಲ್ಲು ಸ್ಪೂರ್ತಿ ಎಂದಿದ್ದಾರೆ.

    ಕಳೆದ ವಾರ ಸುದ್ದಿಗೋಷ್ಟಿವೊಂದರಲ್ಲಿ ಅಲ್ಲು ಅರ್ಜುನ್ ಬಳಿ ಬಾಲಿವುಡ್‌ನ ಯಾವ ನಟ ನಿಮಗೆ ಸ್ಫೂರ್ತಿ? ಎಂಬ ಪ್ರಶ್ನೆ ಕೇಳಿದಾಗ, ಅವರು ನಟ ಅಮಿತಾಬ್ ಬಚ್ಚನ್ ನನಗೆ ಸ್ಫೂರ್ತಿ. ಅವರು ಸಿನಿಮಾರಂಗದಲ್ಲಿ ಬೆಳೆಯುತ್ತಿರುವ ನಮ್ಮಂತಹವರ ಮೇಲೆ ಅಗಾಧ ಪ್ರಭಾವ ಬೀರಿದ್ದಾರೆ ಎಂದು ಬಿಗ್ ಬಿಯನ್ನು ಹೊಗಳಿದ್ದರು.

    ಈ ವೀಡಿಯೋವನ್ನು ಎಕ್ಸ್ ಖಾತೆಯಲ್ಲಿ ಒಬ್ಬರು ಹಂಚಿಕೊಂಡಿದ್ದರು. ಇದರಲ್ಲಿ ಬಚ್ಚನ್‌ರನ್ನು ಟ್ಯಾಗ್ ಮಾಡಲಾಗಿತ್ತು. ಇದನ್ನು ರೀ ಟ್ವೀಟ್ ಮಾಡಿರುವ ಬಿಗ್ ಬಿ, ನಿಮ್ಮ ಮಾತುಗಳಿಂದ ವಿನಮ್ರನಾಗಿದ್ದೇನೆ. ನನ್ನ ಅರ್ಹತೆಗಿಂತ ಹೆಚ್ಚಿನದನ್ನು ನೀಡಿದ್ದೀರಿ. ನಾವು ನಿಮ್ಮ ಕೆಲಸ ಮತ್ತು ಪ್ರತಿಭೆಗೆ ಅಭಿಮಾನಿಯಾಗಿದ್ದೇವೆ. ನಮಗೆಲ್ಲರಿಗೂ ನೀವು ಸ್ಫೂರ್ತಿಯಾಗಿದ್ದೀರಿ. ನಿಮ್ಮ ಯಶಸ್ಸು ಮುಂದುವರಿಯಲಿ ಎಂಬುದು ನನ್ನ ಪ್ರಾರ್ಥನೆ ಹಾಗೂ ಹಾರೈಕೆ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ : ಇದು ವಿಶ್ವದಲ್ಲೇ ಇರುವ ಅತ್ಯಂತ ದುಬಾರಿ ನೀರಿನ ಬಾಟಲ್… ಇದರ ಬೆಲೆ ಸಾವಿರ ಅಲ್ಲ ಲಕ್ಷ, ಲಕ್ಷ!

    ಅಂದಹಾಗೆ, ಪುಷ್ಪ 2, 2021ರಂದು ತೆರೆಗೆ ಬಂದ ಪುಷ್ಪ ದಿ ರೈಸ್‌ನ ಮುಂದುವರಿದ ಭಾಗ. ನಿರೀಕ್ಷೆಯಂತೆಯೇ ಚಿತ್ರ ಭಾರೀ ಸದ್ದು ಮಾಡುತ್ತಿದ್ದು, ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ. ಭರ್ಜರಿ ಕಲೆಕ್ಷನ್ ಮಾಡಿರುವ ಪುಷ್ಪ 2ವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸುಕುಮಾರ್ ನಿರ್ದೇಶಿಸಿದ್ದಾರೆ.

    DAKSHINA KANNADA

    ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕದ ದಸ್ಕತ್‌ ಚಲನಚಿತ್ರ ತೆರೆಗೆ !!

    Published

    on

    ಉಡುಪಿ: ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಅರ್ಪಿಸುವ ತುಳು ಚಲನಚಿತ್ರ ‘ದಸ್ಕತ್’ ಡಿಸೆಂಬರ್ 13ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ವೇಣೂರು ತಿಳಿಸಿದ್ದಾರೆ.

    ಉಡುಪಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕವನ್ನು ಚಿತ್ರಿಸುವ ‘ದಸ್ಕತ್’ ನೈಜ ಘಟನೆಯನ್ನಾಧರಿಸಿದ ಚಿತ್ರವಾಗಿದ್ದು, ಬೆಳ್ತಂಗಡಿ ತಾಲೂಕಿನ ವೇಣೂರು, ನಾರಾವಿ, ಅಂಡಿಂಜೆ, ಕೊಕ್ರಾಡಿ ಮುಂತಾದ ಪ್ರದೇಶಗಳಲ್ಲಿ ಚಿತ್ರಿತವಾಗಿದೆ ಎಂದು ಚಿತ್ರಕಥೆಯನ್ನು ಬರೆದಿರುವ ಅನೀಶ್ ಪೂಜಾರಿ ತಿಳಿಸಿದರು. ರಾಘವೇಂದ್ರ ಕುಡ್ವ ಚಿತ್ರದ ನಿರ್ಮಾಪಕರಾಗಿದ್ದು, ಸಂತೋಷ್ ಆಚಾರ್ಯ ಗುಂಪಲಾಜಿ ಅವರ ಛಾಯಾಗ್ರಹಣವಿದೆ. ಸಮರ್ಥನ ಎಸ್.ರಾವ್ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ.

    ಚಿತ್ರದ ತಾರಾಗಣದಲ್ಲಿ ದೀಕ್ಷಿತ್ ಕೆ.ಅಂಡಿಂಜೆ, ನೀರಜ್ ಕುಂಜರ್ಪ, ಮೋಹನ್ ಶೇಣಿ, ಮಿಥುನ್ ರಾಜ್, ಭವ್ಯ ಪೂಜಾರಿ, ಚಂದ್ರಹಾಸ ಉಲ್ಲಾಳ್, ನವೀನ್ ಬೋಂದೇಲ್, ಯೋಗೀಶ್ ಶೆಟ್ಟಿ ಚೇತನ್ ಪೀಲಾರ್, ತಿಮ್ಮಪ್ಪ ಕುಲಾಲ್ ಮುಂತಾದವರು ನಟಿಸಿದ್ದಾರೆ ಎಂದರು. ಡಿ.13ರಂದು ಉಡುಪಿ, ಮಂಗಳೂರು, ಪುತ್ತೂರು, ಕಾರ್ಕಳ, ಬೆಳ್ತಂಗಡಿಗಳ ಸುಮಾರು 15 ಸಿಂಗಲ್ ಥಿಯೇಟರ್ ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಟ ಅರ್ಜುನ್ ಕಾಪಿಕಾಡ್, ಚಿತ್ರ ವಿತರಕ ಸಚಿನ್ ಉಪ್ಪಿನಂಗಡಿ, ನಿರ್ಮಾಫಕ ರಾಘವೇಂದ್ರ ಪುತ್ರ ರಾಹುಲ್ ಕುಡ್ವ, ನಟ ದೀಕ್ಷಿತ್‌ , ನಟಿ ಭವ್ಯಾ ಪೂಜಾರಿ, ಕಾರ್ಯಕಾರಿ ನಿರ್ಮಾಪಕ ಪ್ರಜ್ಞೇಶ್‌ ಶೆಟ್ಟಿ ಮೊದಲಾದವರಿದ್ದರು.

    Continue Reading

    BIG BOSS

    ಮುನಿಸು ಮರೆತು ಒಂದಾಗ್ತಾರಾ ಗೌತಮಿ, ಮೋಕ್ಷಿತಾ; ಮತ್ತೆ ರೌದ್ರವತಾರ ತಾಳಿದ ಮಂಜು !

    Published

    on

    ಮಂಗಳೂರು/ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಉತ್ತಮ ಗೆಳೆತನ ಹೊಂದಿದ್ದ ಗೌತಮಿ ಹಾಗೂ ಮಂಜು ಈಗ ವೈರಿಗಳಾಗಿದ್ದಾರೆ. ಅದರಲ್ಲೂ ಕಳೆದ ಮೂರು ವಾರಗಳಿಂದ ಬಿಗ್ ಬಾಸ್ ಮನೆಯಲ್ಲಿ ಮಂಜು, ಗೌತಮಿ ವರ್ಸಸ್ ಮೋಕ್ಷಿತಾ ಎನ್ನುವಂತಾಗಿತ್ತು.

    ಮಹಾರಾಜ ಮತ್ತು ಯುವರಾಣಿ ಟಾಸ್ಕ್ ನಿಂದ ಆರಂಭವಾಗಿದ್ದ ಇವರ ಜಿದ್ದಾಜಿದ್ದಿನ ಈ ಫೈಟ್ ಗೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.

    ಇಂದು ಕಲರ್ಸ್‌ ಕನ್ನಡ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಮಂಜುಗೆ ಗೌತಮಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಕೂತು ಮಾತನಾಡುವ ವೇಳೆ ಗೌತಮಿ ಮಂಜುಗೆ ಬುದ್ದಿ ಹೇಳಿದ್ದಾರೆ. ಮಂಜುಗೆ ಮೋಕ್ಷಿತಾ ಬಗ್ಗೆ ವಿಚಾರಿಸಿದ್ದಾರೆ. ಮೋಕ್ಷಿತಾ ಅವರು ಏನು ಹೇಳಿದರು? ಅವರು ಇಬ್ಬರೇ ಮಾತನಾಡುತ್ತಾರೆ ಎಂದು ಆರೋಪಿಸಿದರು.

    ಇದನ್ನೂ ಓದಿ: ದೊಡ್ಮನೆಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ?

    ನಾವು ಇಬ್ಬರೇ ಇರಬೇಕಾದರೂ ಕೂಡ ನೀವೇ ಮಾತನಾಡುತ್ತೀರಿ ಎಂದು ನನಗೆ ಅನಿಸಿತ್ತು. ಅವರು ಹೇಳಿದ ಲೈನ್ ಗಳು ಕೂಡ ನನಗೆ ಸರಿಯಾಗಿ ಹೊಂದಾಣಿಕೆ ಇದೆ ಎಂದು ಅನಿಸಿತ್ತು. ನೀವು ಹೇಳಿದ ಹಾಗೆ ನೀವೇ ಇಲ್ಲ. ಇಲ್ಲಿ ಗೆಳೆಯ, ಗೆಳತಿ ಗೆಳತನ ಇರಲ್ಲ ಎಂದಿದ್ದಾರೆ ಗೌತಮಿ.

    ಇಷ್ಟಕ್ಕೂ ಮಂಜು ಅವರ ಕೋಪಕ್ಕೆ ಕಾರಣ, ಗೌತಮಿ ಮಂಜು ಅವರನ್ನು ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರಗಿಟ್ಟಿರುವುದು. ಇದು ಮಂಜು ಅವರನ್ನು ಗೌತಮಿ ವಿರುದ್ದ ಮತ್ತಷ್ಟು ಕೆರಳಿಸುವಂತೆ ಮಾಡಿದೆ.

    ಇನ್ನೊಂದು ಕಡೆ ಗೌತಮಿ, ಮೋಕ್ಷಿತಾ ಬಗ್ಗೆ ತುಂಬಾ ಸಹನೆಯ ಮಾತುಗಳನ್ನಾಡಿದ್ದಾರೆ. ಹೀಗಾಗಿ, ಗೌತಮಿ ಮತ್ತು ಮೋಕ್ಷಿತಾ ಮತ್ತೆ ಒಂದಾಗ್ತಾರಾ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

    Continue Reading

    BIG BOSS

    ದೊಡ್ಮನೆಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ?

    Published

    on

    ಮಂಗಳೂರು/ಬೆಂಗಳೂರು: ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 11’ ದಿನಕ್ಕೊಂದು ಹೊಸ ಹೊಸ ತಿರುವು ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ವಾರ ದೊಡ್ಮನೆಯಲ್ಲಿ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆ ಹೆಚ್ಚಿದೆ. ಈ ಹಿಂದಿನ ಸೀಸನ್ ಗಳಲ್ಲಿಯೂ ಡಬಲ್ ಎಲಿಮಿನೇಷನ್ ಪದ್ದತಿ ಇತ್ತು.

    ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಈ ವಾರ ಭಿನ್ನವಾಗಿ ನಾಮಿನೇಷನ್ ಪ್ರಕ್ರಿಯೆ ನಡೆಸಲಾಗಿದೆ. ಕಳೆದ ಸೀಸನ್ ನ ಸ್ಪರ್ಧಿಗಳು ಬಂದು ನಾಮಿನೇಷನ್ ಪ್ರಕ್ರಿಯೆ ನಡೆಸಿಕೊಟ್ಟಿದ್ದಾರೆ. ಕಾರ್ತಿಕ್ ಮಹೇಶ್, ನಮ್ರತಾ ಗೌಡ, ವರ್ತೂರ್ ಸಂತೋಷ್, ತುಕಾಲಿ ಸಂತೋಷ್ ಮೊದಲಾದವರು ಬಿಗ್ ಬಾಸ್ ಮನೆ ಒಳಗೆ ಬಂದಿದ್ದರು. ಅವರುಗಳು ಫನ್ ಮಾಡುವುದರ ಜೊತೆಗೆ, ಅವರ ನೇತೃತ್ವದಲ್ಲಿ ನಾಮಿನೇಷನ್ ಪ್ರಕ್ರೀಯೆ ನಡೆದಿದೆ.

    ಇದನ್ನೂ ಓದಿ: ಭಾರತದ ಯುದ್ದ ನೌಕೆ ಹಸ್ತಾಂತರ ವೇಳೆ ಒಗ್ಗೂಡಿದ ರಷ್ಯಾ- ಉಕ್ರೇನ್ !

    ಈ ವಾರ ಡಬಲ್ ಎಲಿಮಿನೇಷನ್ ನಡೆಯಬಹುದೇ ಎನ್ನುವ ಪ್ರಶ್ನೆಯೂ ಕಾಡಿದೆ. ಸದ್ಯ ದೊಡ್ಮನೆಯಲ್ಲಿ 12 ಸ್ಪರ್ಧಿಗಳು ಇದ್ದಾರೆ. ಎಲಿಮಿನೇಷನ್ ನಡೆದರೆ ದೊಡ್ಮನೆಯ ಸ್ಪರ್ಧಿಗಳ ಸಂಖ್ಯೆ 10ಕ್ಕೆ ಇಳಿಕೆ ಆಗಲಿದೆ. ಆ ಬಳಿಕ ಆಟ ಮತ್ತಷ್ಟು ದುರ್ಗಮ ಆಗಲಿದೆ.

    ದೊಡ್ಮನೆಯಲ್ಲಿರುವ 11 ಸ್ಪರ್ಧಿಗಳ ಪೈಕಿ ಈ ವಾರ ಬಹುತೇಕ ಘಟಾನುಘಟಿಗಳು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್ ಆಚಾರ್, ಶಿಶಿರ್, ರಜತ್ ಕಿಶನ್, ಹನುಮಂತ, ಚೈತ್ರಾ ಹಾಗೂ ಮೋಕ್ಷಿತಾ ನಾಮಿನೇಟ್ ಲಿಸ್ಟ್ ನಲ್ಲಿದ್ದಾರೆ. ಈ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ಧನರಾಜ್, ಶಿಶೀರ್ ಹಾಗೂ ಚೈತ್ರಾಗೆ ಹೆಚ್ಚಿನ ಭಯ ಇದೆ.

    ಒಂದು ವೇಳೆ ಡಬಲ್ ಎಲಿಮಿನೇಷನ್ ನಡೆದರೆ ಯಾವ ಇಬ್ಬರು ಸ್ಪರ್ಧಿಗಳು ಹೊರಕ್ಕೆ ಬರಬಹುದು ಎಂಬ ಪ್ರಶ್ನೆ ಬಿಗ್ ಬಾಸ್ ನ ವಿಕ್ಷಕರಲ್ಲಿ ಕೂತುಹಲ ಕೆರಳಿಸಿದೆ.

     

    Continue Reading

    LATEST NEWS

    Trending