Connect with us

LATEST NEWS

ತಿರುಪತಿ: 27 ಲಕ್ಷದ ಚಿನ್ನದ ಕಿರೀಟ ದೇಣಿಗೆ ನೀಡಿದವರು ಯಾರು ಗೊತ್ತಾ ?

Published

on

ಮಂಗಳೂರು/ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ವ್ಯಾಪ್ತಿಯಲ್ಲಿರುವ ತಾರಿಗೊಂಡದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭಾನುವಾರ ಚಿನ್ನದ ಕಿರೀಟವನ್ನು ದೇಣಿಗೆಯಾಗಿ ನೀಡಲಾಗಿದೆ.

ಚನ್ನೈ ಮೂಲದ ಭಕ್ತರಾದ ವಸಂತ ಲಕ್ಷ್ಮಿ, ಮಾಧವಿ ಮತ್ತು ಮನೋಹರ್ ಅವರು ಸುಮಾರು 27 ಲಕ್ಷ ಮೌಲ್ಯದ 340.930 ಗ್ರಾಂ ತೂಕದ ಚಿನ್ನದ ಕಿರೀಟವನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ಟಿಟಿಡಿ ಪ್ರಕಟನೆ ತಿಳಿಸಿದೆ.

ಇದನ್ನೂ ಓದಿ: 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಕ್ತಾಯ; 5 ನಿರ್ಣಾಯಗಳು ಮಂಡನೆ

ಇನ್ನು, ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ತಿರುಪತಿಯಿಂದ 110 ಕಿ.ಮೀ ದೂರದಲ್ಲಿದೆ.

 

LATEST NEWS

ಪೂಜಾ ಖೇಡ್ಕರ್ ಜಾಮೀನು ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್ !

Published

on

ಮಂಗಳೂರು/ನವದೆಹಲಿ: ನೇಮಕಾತಿ ರದ್ದಾಗಿರುವ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಇಂದು (ಸೋಮವಾರ) ದೆಹಲಿ ಹೈಕೋರ್ಟ್ ನಿರಾಕರಿಸಿದೆ.

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅಂಗವೈಕಲ್ಯತೆ ಸಮಸ್ಯೆಯಿಂದ ಬಳಲುತ್ತಿರುವಂತೆ ನಕಲಿ ದಾಖಲೆಗಳನ್ನು ನೀಡಿ ಮೀಸಲಾತಿಯ ದುರುಪಯೋಗಪಡಿಸಿಕೊಂಡಿರುವ ಆರೋಪ ಪೂಜಾ ಮೇಲಿದೆ.

ಪೂಜಾ ಖೇಡ್ಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ನ್ಯಾಯಮೂರ್ತಿ ಚಂದ್ರಧಾರಿ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಇವರು 50 ವರ್ಷಗಳಿಂದ ಅಂಗಿ ಹಾಕಿಲ್ಲ; ಕಾರಣ ಏನು ಗೊತ್ತಾ ?

ಪೂಜಾ ಖೇಡ್ಕರ್ ಅವರ ವಿರುದ್ದ ಪ್ರಬಲವಾದ ಪ್ರಕರಣ ದಾಖಲಾಗಿದ್ದು, ಪ್ರಕರಣದ ಸತ್ಯಾಸತ್ಯತೆ ತಿಳಿಯಬೇಕಾದರೆ ಸೂಕ್ತ ತನಿಖೆಯ ಅಗತ್ಯವಿದೆ. ಹಾಗಾಗಿ ಪೂಜಾ ಅವರು ತನಿಖೆಗೆ ಸಹಕರಿಸಬೇಕು’ ಎಂದೂ ನ್ಯಾಯಮೂರ್ತಿ ಸಿಂಗ್ ತಿಳಿಸಿದ್ದಾರೆ.

ಯುಪಿಎಸ್ ಸಿ ಪರ ಹಿರಿಯ ವಕೀಲ ನರೇಶ್ ಕೌಶಿಕ್ ಮತ್ತು ವಕೀಲ ವರ್ಧಮಾನ್ ಕೌಶಿಕ್ ವಾದ ಮಂಡಿಸಿದ್ದರು.

ಪ್ರಕರಣ ಸಂಬಂಧ ಕೆಲವು ದಿನಗಳ ಹಿಂದೆ ಪೂಜಾ ಖೇಡ್ಕರ್ ವಿರುದ್ದ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ವಿಕಲಚೇತನರ ಹಕ್ಕು ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಿದ್ದರು.

 

Continue Reading

BELTHANGADY

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕುಟುಂಬ ಭೇಟಿ

Published

on

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಡಿ.23 ರಂದು ಮಧ್ಯಾಹ್ನ ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪತ್ನಿ ಗೀತಾ ಖಂಡ್ರೆ ಮಗ ಬಿದ‌ರ್ ಸಂಸದ ಸಾಗರ್ ಖಂಡ್ರೆ ಹಾಗೂ ಪತ್ನಿ ಗೀತಾ ಖಂಡ್ರೆ ಸಹೋದರರಾದ ಹೈಕೋರ್ಟ್‌ ಎಸ್.ಪಿ.ಪಿ ವಿಜಯ್ ಕುಮಾರ್ ಮಜ್ಜಿಗೆ ಹಾಗೂ ವಕೀಲ ಗಂಗಾಧರ್ ಮಜ್ಜಿಗೆ, ಕಾಂಗ್ರೆಸ್ SC ಮೋರ್ಚಾದ ಅಧ್ಯಕ್ಷ ಲಕ್ಷ್ಮಿ ನಾರಾಯಣ ಸ್ವಾಮಿ ಭೇಟಿ ನೀಡಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈಶ್ವರ್ ಖಂಡ್ರೆ ಮತ್ತು ಮಗ ಸಾಗರ್ ಖಂಡ್ರೆ ಬೆಲ್ಲ ಮತ್ತು ಕಡ್ಲೆ ಬೇಳೆಯಿಂದ ಧರ್ಮಾಧಿಕಾರಿಗಳ ಮುಂದೆ ತುಲಭಾರ ಸೇವೆ ಮಾಡಿಸಿದರು. ಬಳಿಕ ಡಾ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಸಚಿವರ ಭೇಟಿ ವೇಳೆ ಮಂಗಳೂರು ಡಿಸಿಎಫ್ ಮರಿಯಪ್ಪ ಕರಿಕಳನ್, ಅರಣ್ಯ ಇಲಾಖೆಯ (FMS) ಮಂಗಳೂರು DCF ಶ್ರೀಕಾಂತ್‌ ಖಣದಾಳಿ ಬೆಳ್ತಂಗಡಿ ಆರ್.ಎಫ್.ಓ ತ್ಯಾಗರಾಜ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಗೌಡ ಮತ್ತಿತರ ಕಾರ್ಯಕರ್ತರು ಭಾಗಿಯಾಗಿದ್ದರು.

Continue Reading

BIG BOSS

ಎಲಿಮಿನೇಷನ್ ಹೈಡ್ರಾಮಾ: ಬಿಗ್ ಬಾಸ್‌ನಿಂದ ಹೊರಬಂದ ತ್ರಿವಿಕ್ರಮ್!

Published

on

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ ಬಾಸ್ ಸೀಸನ್ 11 ಇವತ್ತು ಮತ್ತೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಕಳೆದ ವಾರದ ಎಲಿಮಿನೇಷನ್ ಟ್ವಿಸ್ಟ್‌ಗೆ ಇವತ್ತು ಮೆಗಾ ಕ್ಲೈಮ್ಯಾಕ್ಸ್‌ ಕಾದಿದೆ. ಬಿಗ್ ಬಾಸ್ ವೀಕ್ಷಕರ ಕುತೂಹಲ ಹಾಗೂ ಕಾಡುತ್ತಿರುವ ಪ್ರಶ್ನೆಗೆ ಕೆಲವೇ ಕ್ಷಣದಲ್ಲಿ ಉತ್ತರ ಸಿಗುತ್ತಿದೆ.

ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳ ಜಿದ್ದಾಜಿದ್ದಿ ಜೋರಾಗಿದೆ. 12ನೇ ವಾರದಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ. ಸೂಪರ್ ಸಂಡೇ ವಿತ್ ಬಾದ್ ಷಾ ಎಪಿಸೋಡ್‌ನಲ್ಲಿ ಐಶ್ವರ್ಯ ಹಾಗೂ ತ್ರಿವಿಕ್ರಮ್‌ ಡೇಂಜರ್ ಝೋನ್ ತಲುಪಿದ್ದರು. ಕೊನೆಗೆ ತ್ರಿವಿಕ್ರಮ್ ಅವರೇ ಎಲಿಮಿನೇಟ್ ಎಂದು ಘೋಷಣೆ ಮಾಡಲಾಗಿದ್ದು, ಬಿಗ್ ಬಾಸ್ ಆದೇಶದಂತೆ ತ್ರಿವಿಕ್ರಮ್ ಬಿಗ್ ಬಾಸ್ ಗೇಟ್ ಓಪನ್ ಮಾಡಲಾಗಿದೆ.

ತ್ರಿವಿಕ್ರಮ್ ಅವರು ಈ ವಾರ ಎಲಿಮಿನೇಟ್ ಆಗಿದ್ದಾರಾ ಅನ್ನೋದು ಸದ್ಯ ಕುತೂಹಲಕ್ಕೆ ಕಾರಣವಾಗಿದೆ. ಬಿಗ್ ಬಾಸ್ ವೀಕ್ಷಕರಿಗೆ ಇವತ್ತು ಮೆಗಾ ಟ್ವಿಸ್ಟ್ ಕಾದಿದೆ. ಬಿಗ್ ಬಾಸ್ ಮನೆಯ ಸದಸ್ಯರು ಕೂಡ ತ್ರಿವಿಕ್ರಮ್ ಈ ವಾರ ಎಲಿಮಿನೇಟ್ ಆಗಿದ್ದಾರೆ ಅನ್ನೋದನ್ನ ಈಗಲೂ ನಂಬುತ್ತಿಲ್ಲ. ಮತ್ತೊಂದು ಸರ್‌ಪ್ರೈಸ್ ಕಾದಿದೆ ಅಂದುಕೊಂಡೇ ಕಾಲ ಕಳೆಯುತ್ತಿದ್ದಾರೆ.

ಮೂಲಗಳ ಪ್ರಕಾರ ತ್ರಿವಿಕ್ರಮ್‌ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗೋ ಸಾಧ್ಯತೆ ಕಡಿಮೆ ಇದೆ. ಪ್ರತಿ ಸೀಸನ್ ಅಂತೆ ತ್ರಿವಿಕ್ರಮ್ ಅವರನ್ನ ಬಿಗ್ ಬಾಸ್ ಸೀಕ್ರೆಟ್ ರೂಮ್‌ಗೆ ಕಳುಹಿಸಿರುವ ಸಾಧ್ಯತೆ ಇದೆ. ಮನೆಯವರ ಮಾತುಗಳನ್ನ ಕೇಳಿಸಿಕೊಂಡು ತ್ರಿವಿಕ್ರಮ್ ಅವರು ಬಿಗ್ ಬಾಸ್ ಮನೆಯಲ್ಲಿ ಸರ್‌ಪ್ರೈಸ್ ಆಗಿ ಎಂಟ್ರಿ ಕೊಡಬಹುದು ಎನ್ನಲಾಗಿದೆ.

ಬಿಗ್ ಬಾಸ್ ಕೊಟ್ಟ ಎಲ್ಲಾ ಟಾಸ್ಕ್‌ಗಳಲ್ಲೂ ತ್ರಿವಿಕ್ರಮ್ ಅವರು ಚೆನ್ನಾಗಿಯೇ ಆಟ ಆಡಿಕೊಂಡು ಬಂದಿದ್ದಾರೆ. ಇದರ ಜೊತೆಗೆ ಈ ವಾರ ಬಿಗ್ ಬಾಸ್ ಎಲಿಮಿನೇಷನ್‌ನಿಂದ ವೀಕ್ಷಕರ ವೋಟಿಂಗ್ ಕೂಡ ಓಪನ್ ಆಗಿಲ್ಲ. ಹೀಗಾಗಿ ತ್ರಿವಿಕ್ರಮ್ ಅವರು ಎಲ್ಲರ ನಿರೀಕ್ಷೆಯಂತೆ ಎಲಿಮಿನೇಟ್ ಆಗದೆ ಇಂದು ಮತ್ತೆ ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಡುವ ಸಾಧ್ಯತೆ ಇದೆ.

Continue Reading

LATEST NEWS

Trending

Exit mobile version