ವಿವಾಹಿತನ ಕಿರುಕುಳಕ್ಕೆ ಬೇಸತ್ತು ಕೆರೆಗೆ ಹಾರವಾದ ಮಧುಶ್ರೀ..!
ಪುತ್ತೂರು : ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿರುವ ಯುವತಿಯೊಬ್ಬಳು ಆತ್ಮಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದ್ದು ವಿವಾಹಿತ ಹಾಗೂ ಮಾಜಿ ಪ್ರಿಯಕರ ನೀಡುತ್ತಿದ್ದ ಮಾನಸಿಕ ಕಿರುಕುಳ ಹಾಗೂ ಜೀವ ಬೆದರಿಕೆಯಿಂದ ಮನನೊಂದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆ ಡೈರಿಯಲ್ಲಿ ಬರೆದುಕೊಂಡಿರುವ ಅಧಾರದಲ್ಲಿ ಹಾಗೂ ಆಕೆಯ ಮಾವ ನೀಡಿದ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿಯಾಗಿದ್ದ 26 ವರ್ಷದ ಮಧುಶ್ರೀ ಮೃತ ತನ್ನ ಅಜ್ಜಿ ಮನೆಯ ಪಕ್ಕದ ಕೆರೆಯಲ್ಲಿ ಸಿಕ್ಕಿತ್ತು. ಈಕೆಯ ಆತ್ಮಹತ್ಯೆಗೆ ದೇವಿಕಿರಣ್ ಎಂಬ ವಿವಾಹಿತನೊಬ್ಬ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಮಧುಶ್ರೀ ತನ್ನ ಬ್ಯಾಗ್ ನಲ್ಲಿದ್ದ ಡೈರಿಯಲ್ಲಿ ಬರೆದುಕೊಂಡಿದ್ದಾರೆ.
ನಾನು ಹಾಗೂ ಸಂಪಾಜೆಯ ದೇವಿಕಿರಣ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಆದರೆ ಕಳೆದ ಜೂನ್ ನಲ್ಲಿ ಆತನಿಗೆ ಬೇರೊಂದು ಯುವತಿಯೊಂದಿಗೆ ವಿವಾಹವಾಗಿತ್ತು. ಹೀಗಿದ್ದರೂ ಆತ ನನ್ನ ಜೊತೆ ಸಂಪರ್ಕದಲ್ಲಿದ್ದ.
ನನಗೆ ಬೇರೆಯವರನ್ನು ಮದುವೆಯಾಗದ್ದಂತೆ ಒತ್ತಾಯ ಮಾಡುತ್ತಿದ್ದ. ಮದುವೆಗೆ ಪ್ರಯತ್ನಿಸಿದರೆ ನನಗೂ ನಿನಗೂ ಸಂಬಂಧ ಇದೆ ಎಂದು ಯುವಕನಿಗೆ ತಿಳಿಸಿ ಮದುವೆ ತಪ್ಪಿಸುವುದಾಗಿ ಬೆದರಿಸಿದ್ದಾನೆ.
ಅಲ್ಲದೇ ಒಂದು ವೇಳೆ ಮದುವೆಯಾದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಆಕೆ ಡೈರಿಯಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಮಧುಶ್ರೀ ಆತ್ಮಹತ್ಯೆಗೆ ದೇವಿಕಿರಣ್ ಕಿರುಕುಳವೇ ಕಾರಣ ಎಂದು ಮಧುಶ್ರೀಯವರ ಮಾವ ವಿಠಲ್ ಗೌಡ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸಂಪ್ಯ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.