Connect with us

LATEST NEWS

“ಟಿಪ್ಪು ಸುಲ್ತಾನ – ಹಿಂದೂ , ಕ್ರೈಸ್ತ ವಿರೋಧಿಯೇ?”: ಪುಸ್ತಕ ಬಿಡುಗಡೆ

Published

on

ಮಂಗಳೂರು: ಲೇಖಕರಾದ ಇಸ್ಮತ್ ಫಜೀರ್ ರವರು ಬರೆದ “ಟಿಪ್ಪು ಸುಲ್ತಾನ – ಹಿಂದೂ , ಕ್ರೈಸ್ತ ವಿರೋಧಿಯೇ?” ಸುಳ್ಳು ಸತ್ಯಗಳ ಒಂದು ಪರಾಮರ್ಶೆ ಎಂಬ ಪುಸ್ತಕವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸಹಯೋಗದಲ್ಲಿ ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು.


ದಲಿತ ಮುಖಂಡರಾದ ಆನಂದ ಮಿತ್ತಬೈಲು ಪುಸ್ತಕವನ್ನು ಬಿಡುಗಡೆಗೊಳಿಸಿದರು. ಧರ್ಮದ ನೆಲೆಯಲ್ಲಿ ಒಡೆದುಹೋದ ಸಮಾಜದ ಚರಿತ್ರೆಯನ್ನು ವಕ್ರಕಣ್ಣಿನಿಂದ ನೋಡುವುದು ಸಹಜವಾಗಿರುತ್ತದೆ.

ಧರ್ಮದ ಆಧಾರಿತವಾಗಿ ಸಮಾಜವನ್ನು ಕಟ್ಟುವ ರಾಜಕಾರಣ ಇದ್ದಲ್ಲಿ ಮತೀಯ ನೆಲೆಯಲ್ಲಿ ಚರಿತ್ರೆಯನ್ನು ಪುನರ್ ರೂಪಿಸುವ ಹುನ್ನಾರಗಳು ಅತ್ಯಂತ ವ್ಯವಸ್ಥಿತವಾಗಿ ನಡೆದಿರುತ್ತದೆ.

ಜಾತ್ಯಾತೀತ ತತ್ವವೇ ಸಾಮಾಜಿಕ ಸಂರಚನೆ ಮೌಲ್ಯವೆಂದು ಸಂವಿಧಾನ ರೂಪಿಸಿರುವ ಭಾರತದ ಇತ್ತೀಚಿಗಿನ ದಿನಗಳಲ್ಲಿ ಧರ್ಮಾದಾರಿತ ಮತೀಯ ರಾಜಕಾರಣ ಮುನ್ನಲೆಗೆ ಬಂದು ಭಾರತದ ಅತ್ಯಂತ ಸಮರ್ಥ ರಾಜನಾದ ಟಿಪ್ಪು ಸುಲ್ತಾನರ ಚರಿತ್ರೆಯನ್ನು ರಾಜರ ಚರಿತ್ರೆಯನ್ನಾಗಿ ನೋಡದೆ ಮತೀಯ ದೃಷ್ಟಿಕೋನದಲ್ಲಿ ತಿರುಚುವ ಕೆಲಸವೇ ಪ್ರಧಾನವಾಗಿ ನಡೆದಿದೆ.

ಈ ನಿಟ್ಟಿನಲ್ಲಿ ಟಿಪ್ಪು ಸುಲ್ತಾನರ ಚರಿತ್ರೆಯ ಸತ್ಯಾ ಸತ್ಯತೆ ಜನತೆಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಈ ಪುಸ್ತಕವನ್ನು ಬರೆದಿದ್ದೇನೆ ಎಂದು ಲೇಖಕರಾದ ಇಸ್ಮತ್ ಫಜೀರ್ ರವರು ಹೇಳಿದರು.
ವೇದಿಕೆಯಲ್ಲಿ ಮಾನವ ಹಕ್ಕು ಹೋರಾಟಗಾರರಾದ ಮಹಮ್ಮದ್ ಕಕ್ಕಿಂಜೆ, ಕ್ಯಾಂಪಸ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಉಪಸ್ಥಿತರಿದ್ದರು.

DAKSHINA KANNADA

ಉಳ್ಳಾಲ : ಬಂದೂಕು ತೋರಿಸಿ ಬ್ಯಾಂಕ್ ದರೋಡೆ; ನಗ, ನಗದು ದೋಚಿ ಪರಾರಿಯಾದ ಖದೀಮರು

Published

on

ಉಳ್ಳಾಲ : ಕೋಟೆಕಾರ್ ಬ್ಯಾಂಕ್‌ನ ಕೆ.ಸಿ.ರೋಡ್ ಶಾಖೆಯಿಂದ ಭಾರೀ ದರೋಡೆ ನಡೆದಿದೆ. ಹಾಡಹಗಲೇ ಐದು ಮಂದಿ ಆಗಂತುಕರು ಬಂದೂಕು ತೋರಿಸಿ ಕೃತ್ಯ ಎಸಗಿದ್ದಾರೆ.  ಫಿಯೇಟ್ ಕಾರಿನಲ್ಲಿ ಬಂದ ತಂಡ ಚಿನ್ನ, ನಗದುಗಳನ್ನು ದೋಚಿ ಪರಾರಿಯಾಗಿದೆ.

ಬ್ಯಾಂಕಿನಿಂದ 15 ಕೋಟಿ ರೂ.ಗೂ ಮಿಕ್ಕಿದ ಚಿನ್ನ ಹಾಗೂ ಐದು ಲಕ್ಷದಷ್ಟು ನಗದನ್ನು ಬ್ಯಾಂಕ್ ಸಿಬ್ಬಂದಿಗೆ ಬಂದೂಕು ಹಾಗೂ ತಲವಾರು ತೋರಿಸಿ ಬೆದರಿಸಿ ದರೋಡೆ ನಡೆಸಿ ಮಂಗಳೂರು ಕಡೆಗೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬ್ಯಾಂಕಿನಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿ ಹಾಗೂ ಓರ್ವ ಪುರುಷ ಸಿಬ್ಬಂದಿ, ಮತ್ತೋರ್ವ ಸಿಸಿಟಿವಿ ಟೆಕ್ನೀಷಿಯನ್‌ಗೆ ಬಂದೂಕು ಹಾಗೂ ತಲವಾರು ತೋರಿಸಿದ ಮಾಸ್ಕ್ ಧರಿಸಿದ್ದ ತಂಡ ಸುಮ್ಮನಿರುವಂತೆ ಬೆದರಿಸಿ, ಇಲ್ಲವಾದಲ್ಲಿ ಕೊಲ್ಲುವ ಬೆದರಿಕೆಯನ್ನು ಒಡ್ಡಿ  ಲಾಕರ್ ನಲ್ಲಿದ್ದ 15  ಕೋಟಿ ರೂ. ಚಿನ್ನ ಹಾಗೂ 5 ಲಕ್ಷ ರೂ ನಷ್ಟು ನಗದು ದೋಚಿ ಗ್ರೇ ಬಣ್ಣದ ಫಿಯೇಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಸದಾ ಜನಜಂಗುಳಿಯಿಂದ ಕೂಡಿರುವ ಕೆ.ಸಿ ರೋಡ್ ಜಂಕ್ಷನ್ ಶುಕ್ರವಾರವಾದ ಹಿನ್ನೆಲೆಯಲ್ಲಿ ಹೆಚ್ಚು ಜನರಿರಲಿಲ್ಲ.

ಇನ್ನು ಸ್ಪೀಕರ್ ಯುಟಿ ಖಾದರ್ ಕೂಡ ತಮ್ಮ ಕ್ಷೇತ್ರದ ಬ್ಯಾಂಕ್‌ನಲ್ಲಿ ನಡೆದ ಘಟನೆ ಗಮನಕ್ಕೆ ಬರುತ್ತಿದ್ದಂತೆ, ಬ್ಯಾಂಕ್ ಗೆ ಭೇಟಿ ನೀಡಿ, ಪ್ರತ್ಯಕ್ಷದರ್ಶಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

Continue Reading

BIG BOSS

ಈ ವಾರಾಂತ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಡಬಲ್ ಧಮಾಕ

Published

on

ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ಬಿಗ್ ಬಾಸ್ ಮನೆಯಿಂದ ಒಬ್ಬೊಬ್ಬರೇ ಎಲಿಮಿನೇಟ್ ಆಗಿ ಮನೆ ಖಾಲಿ ಮಾಡುತ್ತಿದ್ದಾರೆ. ಆದರೆ ದೊಡ್ಮನೆಯಲ್ಲಿ ಉಳಿದಿರುವ 7 ಸ್ಪರ್ಧಿಗಳಲ್ಲಿ 16 ನೇ ವಾರ ಒಬ್ಬರಲ್ಲ, ಇಬ್ಬರೂ ಎಲಿಮಿನೇಟ್ ಆಗಿ ಹೊರ ಬರಬಹುದು ಎಂಬುದು ಖಚಿತವಾಗಿದೆ.

ವಿಕೇಂಡ್ ನಲ್ಲಿ ಡಬಲ್ ಎಲಿಮಿನೇಷನ್ ಎಂಬುದು ಬಿಗ್ ಬಾಸ್ ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಈಗಗಾಲೇ ಹನುಮಂತ ಫೈನಲ್ ಪ್ರವೇಶಿಸಿದ್ದು, ರಜತ್, ತ್ರಿವಿಕ್ರಮ್, ಮೋಕ್ಷಿತಾ, ಗೌತಮಿ, ಭವ್ಯಾ, ಮಂಜು, ಧನರಾಜ್ ಇವರಲ್ಲಿ ಯಾರು ಟಾಪ್ 5ರಲ್ಲಿ ಉಳಿಯುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಅಚ್ಚರಿ ಎಂಬಂತೆ ವಾರದ ಕೊನೆಯ ಟಾಸ್ಕ್​ನಲ್ಲಿ ಧನರಾಜ್​ ಆಚಾರ್ಯ ಗೆದ್ದುಕೊಂಡು ಈ ವಾರದ ನಾಮಿನೇಷನ್​ನಿಂದ ಸೇಫ್​ ಆಗಿದ್ದರು. ಬಿಗ್​ಬಾಸ್​ ಕೊಟ್ಟ ಕೊನೆಯ ಟಾಸ್ಕ್​ನಲ್ಲಿ ಧನರಾಜ್​ ಕನ್ನಡಿಯನ್ನು ನೋಡಿ ಫಜಲ್​ ಗೇಮ್ ಆಡಿದ್ದು ಬೆಳಕಿಗೆ ಬಂದಿತ್ತು. ಹೀಗಾಗಿ ಬಿಗ್​ಬಾಸ್​ ಮಿಡ್​ ವೀಕ್​ ಎಲಿಮಿನೇಷನ್​ ತಡೆ ಹಿಡಿದಿದ್ದರು.

ಇದನ್ನೂ ಓದಿ: ಫಿನಾಲೆಗೆ ಡೇಟ್‌ ಫಿಕ್ಸ್; ಈ ಸಲ ಬಿಗ್ ಬಾಸ್ ಗೆಲ್ಲುವವರು ಯಾರು ?

ಆದರೆ ವೀಕೆಂಡ್ ಡಬಲ್ ಎಲಿಮಿನೇಷನ್ ಸ್ಪರ್ಧಿಗಳ ಎದೆ ಬಡಿತ ಹೆಚ್ಚಿಸುವಂತೆ ಮಾಡಿದೆ. ನಾಳೆ ನಡೆಯುವ ಕಿಚ್ಚನ ಪಂಚಾಯ್ತಿಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆಯಾಗಲಿದ್ದು, ಏಳು ಸ್ಪರ್ಧಿಗಳ ಪೈಕಿ ಯಾವ ಇಬ್ಬರೂ ಸ್ಪರ್ಧಿಗಳು ತಮ್ಮ ಆಟ ಅಂತ್ಯಗೊಳಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

Continue Reading

DAKSHINA KANNADA

ದ.ಕ : ಪ್ರತ್ಯೇಕ ಅಪ*ಘಾತ ಪ್ರಕರಣ; ಇಬ್ಬರು ಬೈಕ್ ಸವಾರರು ಸಾ*ವು

Published

on

ಮಂಗಳೂರು/ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿ ಬೈಕೊಂದು ಉರುಳಿಬಿದ್ದ ಪರಿಣಾಮ ಯುವಕ ಸಾ*ವನ್ನಪ್ಪಿರುವ ಘಟನೆ ಕಲ್ಮಂಜ ನಿಡಿಗಲ್ ಬಳಿ ಸಂಭವಿಸಿದೆ. ಧರ್ಮಸ್ಥಳ ಗ್ರಾಮದ ಮುಂಡ್ರುಪಾಡಿ ನಿವಾಸಿ, ಮಿಥುನ್ ಕರ್ಕೇರ(25) ಮೃ*ತ ಬೈಕ್ ಸವಾರ.

ಮಿಥುನ್, ಮಂಗಳೂರಿಗೆ ಕಾರ್ಯಕ್ರಮಕ್ಕೆಂದು ತೆರಳಿ ಅಲ್ಲಿಂದ  ತನ್ನ ಊರಿಗೆ ಬೈಕ್‌ನಲ್ಲಿ ವಾಪಾಸಾಗುತ್ತಿದ್ದಾಗ ಈ ದುರಂ*ತ ಸಂಭವಿಸಿದೆ. ಬೈಕ್ ಸ್ಕಿ*ಡ್ ಆಗಿ ಗಂಭೀ*ರ ಗಾ*ಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಕೊಣಾಜೆ : ಸ್ಕೂಟರ್ – ಟೆಂಪೋ ನಡುವೆ ಅಪ*ಘಾತ; ಸವಾರ ಸಾವು

ಓವರ್ ಟೇಕ್‌ಗೆ ಬ*ಲಿ :

ಇನ್ನು ಓವರ್ ಟೇಕ್ ಮಾಡಲು ಹೋದ ಬೈಕ್ ಸವಾರ ಲಾರಿಯ ಅಡಿಗೆ ಬಿದ್ದು ಮೃ*ತಪಟ್ಟ ಘಟನೆ ಮಂಗಳೂರಿನ ಬಂಗ್ರ ಕೂಳೂರು ಎಂಬಲ್ಲಿ ನಡೆದಿದೆ. ಸುರತ್ಕಲ್ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ವೇಳೆ ಈ ಅಪ*ಘಾತ ಸಂಭವಿಸಿದ್ದು, ಬೈಕ್ ಚಾಲಕ ಸ್ಥಳದಲ್ಲೇ ಮೃ*ತ ಪಟ್ಟಿದ್ದಾರೆ.

Continue Reading

LATEST NEWS

Trending

Exit mobile version