Saturday, December 3, 2022

ಕಾರ್ಕಳ: ಕಲ್ಲು ಅನ್‌ಲೋಡ್ ಮಾಡುತ್ತಿದ್ದ ಟಿಪ್ಪರ್‌ ಪಲ್ಟಿಯಾಗಿ ಚಾಲಕ ಸಾವು

ಕಾರ್ಕಳ: ಕಲ್ಲು ಅನ್‌ಲೋಡ್ ಮಾಡುತ್ತಿದ್ದ ವೇಳೆ ಟಿಪ್ಪರ್‌ ಮಗುಚಿ ಬಿದ್ದು ಚಾಲಕ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಸೂಡ ಗ್ರಾಮದ ಓಂ ಕ್ರಶರ್‌ನಲ್ಲಿ ನಿನ್ನೆ ಸಂಭವಿಸಿದೆ.
ಮೃತ ಚಾಲಕನನ್ನು ಆಸೀಫ್ ಎಂದು ಗುರಗುತಿಸಲಾಗಿದೆ.


ಘಟನೆ ವಿವರ
ಕಾರ್ಕಳ ತಾಲೂಕು ಸೂಡ ಗ್ರಾಮದ ಸೂಡ ಎಂಬಲ್ಲಿ ಸುರೇಶ್ ಶೆಟ್ಟಿ ಎಂಬುವವರ ಮಾಲಕತ್ವದ ಓಂ ಕ್ರಶರ್ ಅನ್ನು ಪ್ರಸ್ತುತ ಕೇರಳ ವಾಸಿ ಬಾಸಿತ್ ಎಂಬುವವರು ಲಿಸ್‌ಗೆ ಪಡೆದುಕೊಂಡಿದ್ದರು.

ಆ.2 ರಂದು ಎತ್ತರದ ಜಾಗದಿಂದ ಅನ್ ಲೋಡ್ ಮಾಡುವ ಸಮಯ ನಿರ್ಲಕ್ಷತನದಿಂದ ನಿಗದಿತ ಗುರುತನ್ನು ದಾಟಿ ಅನ್ ಲೋಡ್ ಮಾಡಿದ್ದರಿಂದ ಓಮ್ಮೇಲೇ ಟಿಪ್ಪರ್ 40 ಅಡಿ ಕೆಳಗೆ ಮಗುಚಿ ಬಿದ್ದಿದೆ. ಈ ವೇಳೆ ಚಾಲಕ ಆಸೀಫ್‌ ಅದರಲ್ಲಿ ಸಿಲುಕಿಕೊಂಡು ಗಂಭೀರ ಗಾಯಗೊಂಡಿದ್ದರು.

ತಕ್ಷಣ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಅದಾಗಲೇ ಮೃತಪಟ್ಟಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ನ್ಯೂ ಇಯರ್‌ ಪಾರ್ಟಿ, ಮೋಜಿನ ಕೂಟಕ್ಕೆ ಅನುಮತಿ ಅಗತ್ಯ-ರಾತ್ರಿ 10ಕ್ಕೆ ಮೈಕ್ ಬಂದ್‌: ಕಮಿಷನರ್ ಶಶಿಕುಮಾರ್ ಖಡಕ್ ವಾರ್ನಿಂಗ್

ಮಂಗಳೂರು: ಮಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 2023ರ ಹೊಸ ವರ್ಷಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ, ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಿಗೆ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಂಗಳೂರು ನಗರ...

ಮಂಗಳೂರಿನಲ್ಲಿ ಅಕ್ರಮ ಚಿನ್ನ ಸಾಗಾಟ: 1ತಿಂಗಳಲ್ಲಿ 4ಕೋಟಿ ಮೌಲ್ಯದ ಚಿನ್ನ ವಶ

ಮಂಗಳೂರು: ನ.1ರಿಂದ 30ರವರೆಗೆ ಮಂಗಳೂರು ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಿಂಗಳೊಂದರಲ್ಲಿ ಬರೋಬ್ಬರಿ ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.ವಿವಿಧ ಚಿನ್ನ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ 7,692 ಗ್ರಾಂ...

ಕಾರ್ಕಳದಲ್ಲಿ ನೇಣಿಗೆ ಕೊರಳೊಡ್ಡಿದ ಕಾಲೇಜು ವಿದ್ಯಾರ್ಥಿನಿ

ಕಾರ್ಕಳ: ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಕಾರ್ಕಳದ ನಿಟ್ಟೆ ಗ್ರಾಮದಲ್ಲಿ ನಡೆದಿದೆ.ತೃತೀಯ ಬಿಎ ವಿದ್ಯಾರ್ಥಿನಿ ಕೀರ್ತನಾ (19) ಮೃತ ದುರ್ದೈವಿ.ಈಕೆ ಇಂದು ಬೆಳಿಗ್ಗೆ ಮನೆಯಲ್ಲಿ...