ಮಂಗಳೂರು: ಕರ್ನಾಟಕದ ರಾಜ್ಯದ ನೂತನ ಮುಖ್ಯಮಂತ್ರಿ ಹೆಸರನ್ನು ನಾಳೆಯೇ ಘೋಷಿಸುವ ಸಾಧ್ಯತೆ ಇದ್ದು, ಇದೇ ಗುರುವಾರ ಹೊಸ ಸಿಎಂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ನಾಳೆಯೊಳಗೆ ಹೊಸ ಸಿಎಂ ಹೆಸರು ಘೋಷಣೆ ಮಾಡಲು ಶಾಸಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಬಿಜೆಪಿ ವರಿಷ್ಠರ ಜತೆ ಮಾತುಕತೆ ನಡೆಯಲಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಇಂದು ರಾಜೀನಾಮೆ ಘೋಷಿಸಿದರೂ ಕಳೆದೊಂದು ವಾರದಿಂದಲೇ ಅವರ ಡಾಲರ್ಸ್ ಕಾಲೋನಿ ನಿವಾಸ ಖಾಲಿಯಿತ್ತು ಎಂದು ತಿಳಿದುಬಂದಿದೆ. ಕಳೆದೊಂದು ವಾರದಿಂದ ಸಿ.ಎಂ ಕುಟುಂಬಸ್ಥರು ಯಾರೂ ಈ ನಿವಾಸದಲ್ಲಿಲ್ಲ, ಅಡುಗೆ ಭಟ್ಟರು ಡ್ರೈವರ್ ಹಾಗೂ ಮನೆಕೆಲಸದವರು ಮಾತ್ರ ಇದ್ದಾರೆ ಎನ್ನಲಾಗಿದೆ.