Monday, July 4, 2022

ಲವರ್ ಬಿಟ್ಟು ಹೋಗುತ್ತಾನೆಂಬ ಭಯಕ್ಕೆ ತನ್ನ ಕರುಳ ಕುಡಿಯನ್ನೇ ಕೊಂದ ಪಾಪಿ ತಾಯಿ…!

ಕೇರಳ: ತನ್ನ ಪ್ರಿಯಕರ ಬಿಟ್ಟು ಹೋಗುತ್ತಾನೆ ಎಂಬ ಭಯದಿಂದ ಪಾಪಿ ತಾಯಿಯೋರ್ವಳು ತನ್ನ ಮೂರು ವರ್ಷದ ಎಳೆಯ ಕಂದಮ್ಮನನ್ನು ಕೊಲೆ ಮಾಡಿರುವ ಘಟನೆ ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದೆ.


ಮಗುವಿನ ತಾಯಿ ಆಸಿಯಾ ಹಾಗೂ ಆಕೆಯ ಪತಿ ಮೊಹಮ್ಮದ್ ಶಮೀರ್ ಕಳೆದ ಒಂದು ವರ್ಷದಿಂದ ಬೇರ್ಪಟ್ಟಿದ್ದರು. ಇದರ ಬೆನ್ನಲ್ಲೇ ಆಸಿಯಾ ಬೇರೆ ವ್ಯಕ್ತಿ ಜೊತೆ ಸಂಬಂಧವಿಟ್ಟುಕೊಂಡಿದ್ದಳು.

ಆದರೆ ಮಹಿಳೆಗೆ ಮಗುವಿದೆ ಎಂಬ ವಿಚಾರ ಆಸಿಯಾ ಪ್ರಿಯಕರನಿಗೆ ಗೊತ್ತಿರಲಿಲ್ಲ. ಇದರ ಬಗ್ಗೆ ಗೊತ್ತಾಗುತ್ತಿದ್ದಂತೆ ಇಬ್ಬರ ನಡುವೆ ಜಗಳವಾಗಿದೆ. ಆತ ತನ್ನಿಂದ ದೂರ ಹೋಗುತ್ತಾನೆಂಬ ಕಾರಣದಿಂದ ಮಗುವನ್ನು ಕೊಲೆ ಮಾಡಿದ್ದಾಳೆ.

ನಿನ್ನೆ ಬೆಳಗ್ಗೆ 10 ಗಂಟೆಗೆ ಮಗುವಿನ ಮೃತದೇಹ ಪತ್ತೆಯಾಗಿದೆ. ಈ ವೇಳೆ ಪೊಲೀಸರು ವಿಚಾರಣೆ ನಡೆಸಿದಾಗ ಖರ್ಜೂರ ನುಂಗಿ ಅದು ಸಾವನ್ನಪ್ಪಿದ್ದಾಗಿ ಹೇಳಿಕೊಂಡಿದ್ದಾಳೆ.

ಆದರೆ, ಅನುಮಾನಗೊಂಡ ಪೊಲೀಸರು ಆಸಿಯಾಳನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ತಾನೇ ಮಗುವನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

ಆರೋಪಿಯನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿ ಆಸಿಯಾ ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ.

LEAVE A REPLY

Please enter your comment!
Please enter your name here

Hot Topics

ಆಸ್ಟ್ರೇಲಿಯಾದಲ್ಲಿ ತುಳು ಕೂಟ ಸಿಡ್ನಿಯಿಂದ ಜು.17ರಂದು ‘ಆಟಿಡ್‌ ಒಂಜಿ ದಿನ’

ಸಿಡ್ನಿ: ತುಳುನಾಡಿನ ಸಾಂಪ್ರದಾಯಿಕ ತಿಂಡಿಗಳನ್ನು ಆಸ್ಟ್ರೇಲಿಯಾದಲ್ಲಿರುವ ಅನಿವಾಸಿ ತುಳುವರಿಗೆ ಉಣಬಡಿಸುವ ನಿಟ್ಟಿನಲ್ಲಿ 'ತುಳು ಕೂಟ ಸಿಡ್ನಿ'ಯು ಜು.17ರಂದು ಸಿಡ್ನಿಯಲ್ಲಿ 'ಆಟಿಡ್‌ ಒಂಜಿ ದಿನ' ಆಯೋಜಿಸಿದೆ.ಜು.17 ರಂದು ಮಧ್ಯಾಹ್ನ 12 ಗಂಟೆಗೆ ಈ ಕಾರ್ಯಕ್ರಮ...

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರುಪಾಲು-ಓರ್ವನ ರಕ್ಷಣೆ

ಬಂಟ್ವಾಳ: ನದಿಯಲ್ಲಿ ಈಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು ನೀರು ಪಾಲಾಗಿದ್ದು, ಓರ್ವನನ್ನು ಸ್ಥಳೀಯರು ರಕ್ಷಣೆ ಮಾಡಿದರೆ, ಮತ್ತೋರ್ವ ಬಾಲಕ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಳ್ಳಾಲ ತಾಲೂಕಿನ ಸಜಿಪಪಡು...

ಬೆಳ್ತಂಗಡಿ: ಭಾರೀ ಮಳೆ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ದ.ಕ ಡಿಸಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಾದ್ಯಂತ ನಿನ್ನೆ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದ್ದು ಇಲ್ಲಿನ ಸ್ಥಿತಿಗತಿಗಳನ್ನು ಗಮನಿಸಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಂದ ಮಾಹಿತಿಯನ್ನು ಪಡೆದುಕೊಂಡು ಜಿಲ್ಲಾಧಿಕಾರಿಯವರು ತಾಲ್ಲೂಕಿನ ಎಲ್ಲ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಿದ್ದಾರೆ.ಗ್ರಾಮೀಣ...