ಪುತ್ತೂರು : ಚಾಲಕನ ನಿದ್ದೆ ಮಂಪರಿನಲ್ಲಿ ಕಾರೊಂದು ಕಂ*ದಕಕ್ಕೆ ಬಿ*ದ್ದು, ಮೂವರು ಸ್ಥಳದಲ್ಲೇ ಸಾ*ವನ್ನಪ್ಪಿದ ದಾ*ರುಳ ಘಟನೆ ಪುತ್ತೂರಿನ ಪರ್ಲಡ್ಕದಲ್ಲಿ ಇಂದು (ಡಿ.28) ಮುಂಜಾನೆ ಸಂಭವಿಸಿದೆ.
ಅಣ್ಣು ನಾಯ್ಕ್, ಚಿದಾನಂದ್, ರಮೇಶ್ ನಾಯ್ಕ್ ಮೃ*ತರು ಎಂದು ಗುರುತಿಸಲಾಗಿದೆ.
ಮೃತರು ಸುಳ್ಯ ಜಟ್ಟಿಪಳ್ಳ ನಿವಾಸಿಗಳಾಗಿದ್ದು, ಗೋಂದೊಳ್ ಪೂಜೆಗೆ ಪುತ್ತೂರಿನ ಪುಣಚಕ್ಕೆ ಆಗಮಿಸಿದ್ದರು. ಪೂಜೆ ಮುಗಿಸಿ ಮುಂಜಾನೆ ಹಿಂದಿರುಗುವ ವೇಳೆ ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ಆಲ್ಟೋ ಕಾರು ಕಂ*ದಕಕ್ಕೆ ಬಿದ್ದಿದೆ. ಬೆಳ್ಳಂ ಬೆಳಗ್ಗೆ 4:15 ಕ್ಕೆ ಕಾರು ಅ*ಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾದ ಬಳಿಕ ‘ದಿ ಅಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನೆಮಾ ವಿಚಾರ ಮುನ್ನಲೆಗೆ ಬಂದಿದೆ. ಚಿತ್ರ ನಿರ್ಮಾಪಕರೇ ಇದೊಂದು ಸುಳ್ಳಿನಿಂದ ತುಂಬಿದ್ದ ಸಿನೆಮಾ ಆಗಿತ್ತು ಅಂತ ಒಪ್ಪಿಕೊಂಡಿದ್ದಾರೆ. ಹಿರಿಯ ಪತ್ರಕರ್ತ ವೀರ್ ಸಾಂಘ್ವಿ ಅವರು ಮಾಡಿದ ಸಂದರ್ಶನದಲ್ಲಿ ಈ ವಿಚಾರವಾಗಿ ನಿರ್ಮಾಪಕ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
2019 ರ ರಾಜಕೀಯ ಸಿನೆಮಾವಾದ ‘ದಿ ಅಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿಂಗ್ ಅವರ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಅವರ ಆತ್ಮಚರಿತ್ರೆ ಆಧರಿಸಿ ನಿರ್ಮಿಸಲಾಗಿತ್ತು. ಆದ್ರೆ “ಇದುವೆರೆಗೆ ಮಾಡಿದ ಕೆಟ್ಟ ಹಿಂದಿ ಚಲನಚಿತ್ರಗಳಲ್ಲಿ ಇದು ಒಂದಾಗಿದೆ” ಹೀಗಂತ ನಿರ್ಮಾಪಕರೇ ಒಪ್ಪಿಕೊಂಡಿದ್ದಾರೆ. ಈ ವಿಚಾರವನ್ನು ಪತ್ರಕರ್ತ ಸಾಂಘ್ವಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
“ಮನಮೋಹನ್ ಸಿಂಗ್ ಅವರ ಬಗ್ಗೆ ಹೇಳಲಾದ ಸುಳ್ಳುಗಳನ್ನು ನೀವು ನೆನಪಿಸಿಕೊಳ್ಳಬೇಕಾದರೆ ನೀವು ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಅನ್ನು ಮತ್ತೆ ನೋಡಬೇಕು. ಇದು ಹಿಂದೆಂದೂ ತಯಾರಾದ ಕೆಟ್ಟ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿದ್ದು, ಒಳ್ಳೆಯ ಮನುಷ್ಯನ ಹೆಸರನ್ನು ಹಾಳುಮಾಡಲು ಮಾಧ್ಯಮವನ್ನು ಹೇಗೆ ಬಳಸಲಾಯಿತು ಎಂಬುದಕ್ಕೆ ಉದಾಹರಣೆಯಾಗಿದೆ.” ಅಂತ ಸಾಂಘ್ವಿ X ನಲ್ಲಿ ಬರೆದಿದ್ದಾರೆ.
ನಿರ್ಮಾಪಕರ ಹೇಳಿಕೆಯನ್ನು ಸಮರ್ಥಿಸಿಕೊಂಡ ಕ್ರಿಯೇಟಿವ್ ಡೈರೆಕ್ಟರ್ ಹನ್ಸಲ್ ಮೆಹ್ತಾ ಕೂಡಾ ಈ ಪೋಸ್ಟ್ ಹಂಚಿಕೊಂಡು 100% ಅಂತ ಸಮರ್ಥಿಸಿಕೊಂಡಿದ್ದಾರೆ. ಮನಮೋಹನ್ ಸಿಂಗ್ ಅವರನ್ನು ಉದ್ದೇಶಿಸಿ ಪೋಸ್ಟ್ ಮಾಡಿದ ಅವರು “ಈ ವಿಚಾರಕ್ಕೆ ಎಲ್ಲರಿಗಿಂತಲೂ ಹೆಚ್ಚಾಗಿ ನಾನು ಅವರಿಗೆ ತಲೆಬಾಗುತ್ತೇನೆ. ಬಲವಂತ ಅಥವಾ ಉದ್ದೇಶ ಏನೇ ಇರಲಿ ತುಂಬಾ ಭಾರವಾದ ಹೃದಯದಿಂದ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಕ್ಷಮಿಸಿ ಸರ್, ಅರ್ಥಶಾಸ್ತ್ರಜ್ಞ, ಹಣಕಾಸು ಮಂತ್ರಿ, ಪ್ರಧಾನ ಮಂತ್ರಿಯಾಗಿ ನಿಮ್ಮ ಸಾಧನೆಗಳ ಜೊತೆಗೆ ನೀವೊಬ್ಬ ಅಪರೂಪದ ಸಂಭಾವಿತ ವ್ಯಕ್ತಿ” ಅಂತ ಬರೆದುಕೊಂಡಿದ್ದಾರೆ. ಮಾಜಿ ಪ್ರಧಾನಿಯ ಅಗಲುವಿಕೆಗೆ ಸಂತಾಪ ಸೂಚಿಸಿ “ರಾಷ್ಟ್ರವು ಅವರಲ್ಲಿ ಕ್ಷಮೆಯಾಚಿಸಬೇಕು”ಎಂದಿದ್ದಾರೆ.
ಈ ಪೋಸ್ಟ್ ಸಿನೆಮಾದಲ್ಲಿ ಮನಮೋಹನ್ ಸಿಂಗ್ ಅವರ ಪಾತ್ರ ನಿರ್ವಹಿಸಿದ್ದ ನಟ ಅನುಪಮ್ ಖೇರ್ ಅವರನ್ನು ಕೆರಳಿಸಿದೆ. ಚಲನಚಿತ್ರ ನಿರ್ಮಾಪಕರನ್ನು ‘ಕಪಟಿ’ ಎಂದು ಕರೆದು “ಇದರಲ್ಲಿ ಸಾಂಘ್ವಿ ಕಪಟವಾದಿಯಲ್ಲ. ಸಿನೆಮಾ ಇಷ್ಟ ಪಡದೆ ಇರುವ ಸ್ವಾತಂತ್ರ್ಯ ಅವರಿಗೆ ಇದೆ. ಆದ್ರೆ ಮೆಹ್ತಾ ಅವರು ದಿ ಅಕ್ಸಿಡೆಂಟಲ್ ಪಿಎಂ ಸಿನಿಮಾದ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದರು. ಇಂಗ್ಲೆಂಡಿನಲ್ಲಿ ಚಿತ್ರದ ಸಂಪೂರ್ಣ ಚಿತ್ರೀಕರಣದಲ್ಲಿ ಹಾಜರಿದ್ದರು. ಸಿನೆಮಾಗೆ ಸೃಜನಶೀಲ ಇನ್‌ಪುಟ್ ಕೊಟ್ಟು ಸಂಭಾವನೆ ಪಡೆದುಕೊಂಡಿರಬೇಕು” ಎಂದು ಬರೆದಿದ್ದಾರೆ. ಸಾಂಘ್ವಿ ಅವರ ಅಭಿಪ್ರಾಯವನ್ನು ನಾನು ಒಪ್ಪದೇ ಇದ್ದರೂ ಕಲಾವಿದರು ಇಂತಹ ತಪ್ಪು ಹಾಗೂ ವ್ಯತ್ಯಾಸ ಇರುವ ಕೆಲಸ ಮಾಡಲು ಸಮರ್ಥರು ಅಂತ ಬರೆದುಕೊಂಡಿದ್ದಾರೆ.
ಈ ವಿಚಾರವಾಗಿ ಮೆಹ್ತಾ ಹಾಗೂ ಅನುಪಮ್ ಖೇರ್ ಸಮರ ನಡೆದಿದ್ದು, ಸಾಕಷ್ಟು ಪ್ರತಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಸಿನೆಮಾದಲ್ಲಿ ಅನುಪಮ್ ಖೇರ್ ಮನಮೋಹನ್ ಸಿಂಗ್ ಆಗಿ, ಅಕ್ಷಯ್ ಕುಮಾರ್ ಬಾರು ಅವರ ಪಾತ್ರದಲ್ಲಿ ನಟಿಸಿದ್ದಾರೆ. ಮೆಹ್ತಾ ಅವರು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಅತಿಥಿ ಪಾತ್ರ ನಿರ್ವಹಿಸಿದ್ದಾರೆ.
ಮಂಗಳೂರು: ಮಂಗಳೂರಿನಲ್ಲಿ ಕೋಸ್ಟಲ್ ಬಿಗ್ ಭಾಷ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಸಹ್ಯಾದ್ರಿ ಕಾಲೇಜಿನ ಮೈದಾನಲ್ಲಿ ಜನವರಿ ತಿಂಗಳಾಂತ್ಯದಲ್ಲಿ ಆಯೋಜಿಸಲಾಗುವುದು ಎಂದು ಆಯೋಜಕರು ಹೇಳಿದ್ದಾರೆ. ಇದು ಟಿ20 ಫಾರ್ಮ್ಯಾಟ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಇದಾಗಿದ್ದು, ಫ್ರಾಂಚೈಸ್ ಆಧಾರಿತ ಟೂರ್ನಮೆಂಟ್ ಎನ್ನಲಾಗಿದೆ.
ಒಟ್ಟು 6 ತಂಡಗಳು ಕೋಸ್ಟಲ್ ಬಿಗ್ ಭಾಷ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಲಿವೆ. ಪ್ರತೀ ಫ್ರಾಂಚೈಸ್‌ಗೆ 16 ಆಟಗಾರರು ಇರಲಿದ್ದು, ಪ್ರತಿ ತಂಡವು 5 ಲೀಗ್ ಪಂದ್ಯಗಳನ್ನು ಆಡುತ್ತದೆ. ಪ್ರತಿ ಪೂಲ್‌ನಿಂದ ಟಾಪ್ 2 ತಂಡಗಳು ಸೆಮಿಫೈನಲ್‌ಗಾಗಿ ಅರ್ಹರಾಗುವರು. ಈ ಆಟ OTT ಪ್ಲ್ಯಾಟ್‌ಫಾರ್ಮ್ ಒಂದರಲ್ಲಿ ಬಿತ್ತರಗೊಳ್ಳಲಿದೆ. KSCA ಯಿಂದ ವೈಶಿಷ್ಟ್ಯಪೂರ್ಣ ಗುರುತಿನ ಸಂಖ್ಯೆಯು ಇರುವವರು ಮಾತ್ರ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ, ಕರ್ನಾಟಕ ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ಪಾಲ್ಗೊಂಡ 8 ಐಕಾನ್ ಆಟಗಾರರು ಆಡಲಿದ್ದಾರೆ. ನೋಂದಾಯಿತ ಆಟಗಾರರನ್ನು ಹರಾಜು ಪಟ್ಟಿಯಲ್ಲಿ ವಿಂಗಡಿಸಲಾಗುವುದು. ಒಂದು Under-19 ಆಟಗಾರ ಮತ್ತು ಎರಡು Under-23 ವಯೋಮಿತಿಯ ಆಟಗಾರರು ಪ್ಲೇಯಿಂಗ್ 11 ರ ತಂಡದಲ್ಲಿರಬೇಕು. ಪ್ರತಿ ದಿನ 3 ಪಂದ್ಯಗಳು. ಪ್ರೇಕ್ಷಕರು ಪ್ರವೇಶ ಶುಲ್ಕವಿಲ್ಲದೆ ಟೂರ್ನಮೆಂಟ್ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು.
ಮೊದಲ ಡಿವಿಷನ್ ಆಟಗಾರರು ಮಂಗಳೂರು ಝೋನ್ ಆಡಿದವರು ಕೆಟಗರಿ A ಯಲ್ಲಿ ಸೇರಿಸಲ್ಪಡುತ್ತಾರೆ. KSCA ಮಂಗಳೂರು ಝೋನ್ ಲೀಗ್‌ಗಳನ್ನು ಪ್ರತಿನಿಧಿಸಿದ ಆಟಗಾರರು, ಕಠಿನ ನಿಯಮಗಳು ಮತ್ತು ಭ್ರಷ್ಟಾಚಾರ ವಿರೋಧಿ ಕ್ರಮಗಳನ್ನು ಅನುಸರಿಸಲಾಗುವುದು. ಅದೇ ರೀತಿ ಕೆಟಗರಿ B ಯಲ್ಲಿ ದ್ವಿತೀಯ ಮತ್ತು ತೃತೀಯ ಡಿವಿಷನ್ ಆಟಗಾರರು KSCA ಮಂಗಳೂರು ಝೋನ್ ಲೀಗ್‌ಗಳನ್ನು ಪ್ರತಿನಿಧಿಸಿದ ಆಟಗಾರರು ಆಗಿರಬೇಕು. ಆಟಗಾರರು ಮತ್ತು ಮಂಡಳಿಯ ನಡುವೆ ಅಗ್ರಿಮೆಂಟ್ ಕಡ್ಡಾಯವಾಗಿದೆ, KSCA ಆಡಳಿತ ನಿಯಮಾವಳಿಗಳ ಅಡಿಯಲ್ಲಿ ಟೂರ್ನಮೆಂಟ್ ನಡೆಯಲಿದೆ.ಟೂರ್ನಮೆಂಟ್‌ನ ಅತ್ಯುತ್ತಮ ಆಟಗಾರ, ಟೂರ್ನಮೆಂಟ್‌ನ ಅತ್ಯುತ್ತಮ ಕ್ಯಾಚ್, ಪರ್ಪಲ್ ಕ್ಯಾಪ್, ಆರಂಜ್ ಕ್ಯಾಪ್, Under-23 ಶ್ರೇಣಿಯ ಅತ್ಯುತ್ತಮ ಎಮರ್ಜಿಂಗ್ ಆಟಗಾರ ಹೀಗೆ ಹಲವಾರು ಪ್ರಶಸ್ತಿಗಳು ಇವೆ. KSCA ಪ್ರಮಾಣಿತ ಮ್ಯಾಚ್ ಅಧಿಕೃತರನ್ನು ನೇಮಕ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೀರ್ತಿರಾಜ್ ರೈ (9741931062), ಶೈಖ್ ಮೊಹಮ್ಮದ್ ಅತಿಫ್ (9901683095), ಅಖಿಲೇಶ್ ಶೆಟ್ಟಿ (9594367713) ಇವರನ್ನು ಸಂಪರ್ಕಿಸಬಹುದಾಗಿದೆ.
ಮಂಗಳೂರು : ಡಿ.24ರಂದು ಆರ್‌ಪಿಸಿ ಸ್ಥಗಿತಗೊಂದು ವಂಚನೆ ಬಗ್ಗೆ ವ್ಯಾಪಕ ಸುದ್ದಿಯಾಗಿದ್ದು, ಅದೇ ದಿನ ನಾ*ಪತ್ತೆಯಾಗಿದ್ದ ಯುವಕ ಶ*ವವಾಗಿ ಗುರುವಾರ (ಡಿ.26) ಮಂಗಳೂರಿನ ಮರವೂರು ನದಿಯಲ್ಲಿ ಪ*ತ್ತೆಯಾಗಿದ್ದಾನೆ.
ಮೂಡುಶೆಡ್ಡೆ ನಿವಾಸಿ ಸೂರ್ಯ (24) ಜೀ*ವಾಂತ್ಯಗೊಳಿಸಿದ ಯುವಕ.
ಸೈಬರ್ ಕ್ರೈಮ್ ಗಳ ವಂಚನೆ ಜಾಲ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಡಿಜಿಟಲ್ ಜಗತ್ತಿನಲ್ಲಿ ಆನ್‌ಲೈನ್ ವಂ*ಚನೆಗಳು ಮತ್ತು ಮೋಸದ ಆಟಗಳು ಸಾಮಾನ್ಯವಾಗಿದ್ದು, ಹೆಚ್ಚು ಹೆಚ್ಚು ಜನರು ಇಂತಹ ಬಲೆಗೆ ಬ*ಲಿಯಾಗುತ್ತಿದ್ದಾರೆ. ಮಾಧ್ಯಮ ವರದಿಗಳ ಹೊರತಾಗಿಯೂ, ಈ ಬಗ್ಗೆ ಎಚ್ಚರಿಕೆ ನೀಡಿದರು ಜನರು ಮರುಳಾಗೋದು ಕಮ್ಮಿಯಾಗುತ್ತಿಲ್ಲ. ಸದ್ಯ 24 ವರ್ಷದ ಯುವಕ ಆರ್‌ಪಿಸಿ ವಂಚನೆಯಿoದ ಆ*ತ್ಮಹ*ತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಸೂರ್ಯ ಆರ್‌ಪಿಸಿ ಆ್ಯಪ್‌ನಲ್ಲಿ ಸುಮಾರು 70,000 ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು ಮತ್ತು ಕಂಪನಿಯು ಮುಚ್ಚಲ್ಪಟ್ಟಿದೆ ಎಂದು ತಿಳಿದ ನಂತರ, ಹೂಡಿಕೆಗಾಗಿ ಹಣವನ್ನು ಸಾಲವಾಗಿ ಪಡೆದಿದ್ದರಿಂದ ತನ್ನ ಜೀ*ವ ಕಳೆದುಕೊಂಡಿದ್ದಾನೆ. ಆರ್‌ಪಿಸಿ ಆನ್‌ಲೈನ್ ಆಪ್, ಇದು ಬಳಕೆದಾರರಿಗೆ ವೀಡಿಯೊಗಳನ್ನು ನೋಡುವ ಮೂಲಕ ಹಣ ಗಳಿಸುವ ಅವಕಾಶವನ್ನು ನೀಡುತ್ತದೆ. ಆರಂಭದಲ್ಲಿ, ಹಲವಾರು ವ್ಯಕ್ತಿಗಳು ಸ್ವಲ್ಪ ಹಣವನ್ನು ಗಳಿಸಿದ್ದಾರೆ. ಇದರಿಂದ ಲಾಭದಾಯಕ ಆದಾಯದ ಭರವಸೆಯಿಂದ ವಿಷಪ ವೇಗವಾಗಿ ಹಬ್ಬಿ ದೊಡ್ಡ ಜಾಲವಾಗಿ ಬೆಳೆದುನಿಂತ್ತಿತ್ತು. ಇದರಿಂದ ಹಲವರು ಕೋಟ್ಯಂತರ ರೂ.ಗಳನ್ನು ಈ ಹಗರಣದಲ್ಲಿ ತೊಡಗಿಸಿದ್ದಾರೆ. ಸದ್ಯ ಇದರ ವಂಚನೆ ಬಯಲಾಗಿದೆ. ಕಾವೂರು ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Pingback: ರಾಜ್ಯ ಹೆದ್ದಾರಿಯಲ್ಲಿ ಭೀ*ಕರ ಅ*ಪಘಾ*ತ ; ತಂದೆ-ಮಗಳು ಗಂ*ಭೀರ - NAMMAKUDLA NEWS - ನಮ್ಮಕುಡ್ಲ ನ್ಯೂಸ್