Thursday, January 27, 2022

ಅಪರೂಪದ ನಕ್ಷತ್ರ ಆಮೆ ಮಾರಾಟಕ್ಕೆ ಯತ್ನ ಮಡಿಕೇರಿಯಲ್ಲಿ ಮೂವರು ಆರೋಪಿಗಳು ಬಂಧನ..!

ಅಪರೂಪದ ನಕ್ಷತ್ರ ಆಮೆ ಮಾರಾಟಕ್ಕೆ ಯತ್ನ ಮಡಿಕೇರಿಯಲ್ಲಿ ಮೂವರು ಆರೋಪಿಗಳು ಬಂಧನ..!

ಮಡಿಕೇರಿ : ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ವಿರಾಜಪೇಟೆಯ ಅರಣ್ಯ ವಿಭಾಗದ ಫಾರೆಸ್ಟ್ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ರಾಮಮೂರ್ತಿ, ರಮೇಶ್ ಮತ್ತು ಯೋಗೇಶ್ ಎಂಬ ಆರೋಪಿಗಳನ್ನು ವಿರಾಜಪೇಟೆ ತಾಲೂಕಿನ ಚೆನ್ನಂಗೊಲ್ಲಿಯ ಗ್ರಾಮದಲ್ಲಿ ಬಂಧಿಸಲಾಗಿದೆ.

ಜೊತೆಗೆ ಆರೋಪಿಗಳಿಂದ ಬಳಿ ಇದ್ದ ಎರಡು ಜೀವಂತ ನಕ್ಷತ್ರ ಆಮೆ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ನಕ್ಷತ್ರ ಆಮೆಗಳನ್ನು ಐದು ಲಕ್ಷ ರೂಪಾಯಿ ಮಾರಾಟ ಮಾಡುತ್ತಾರೆ ಎಂಬ ಖಚಿತ ಮಾಹಿತಿ ಆಧಾರದ ಮೇರೆಗೆ ಎಚ್ಚೆತ್ತುಕೊಂಡ ವಿರಾಜಪೇಟೆಯ ಅರಣ್ಯ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅಲ್ಲದೇ ಪೊಲೀಸರು ಎರಡು ಆಮೆಯನ್ನು ರಕ್ಷಣೆ ಮಾಡಿದ್ದಾರೆ. ಈ ಕುರಿತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Hot Topics