Friday, August 12, 2022

ಕಾಸರಗೋಡು: ವಿದೇಶದಲ್ಲಿದ್ದ ಯುವಕನನ್ನು ಕರೆಸಿ ಅಪಹರಿಸಿ ಹತ್ಯೆ ಪ್ರಕರಣ-ಮೂವರ ಬಂಧನ

ಕಾಸರಗೋಡು: ವಿದೇಶದಲ್ಲಿದ್ದ ಯುವಕನನ್ನು ಕರೆಸಿ ತಂಡವೊಂದು ಅಪಹರಿಸಿ ಕಾಸರಗೋಡಿನಲ್ಲಿ  ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.


ಕುಂಬಳೆ ದಿ| ಅಬ್ದುಲ್‌ ರಹ್ಮಾನ್‌ ಎಂಬವರ ಪುತ್ರ ವಿದೇಶದಲ್ಲಿದ್ದ ಅಬೂಬಕ್ಕರ್‌ ಸಿದ್ಧಿಖ್‌ ನನ್ನು ಕರೆಯಿಸಿ ಕಿಡ್ನಾಪ್ ಮಾಡಿ ಹಿಂಸಿಸಿ ಕೊಲೆ ಮಾಡಲಾಗಿತ್ತು.

ಉಪ್ಪಳದಲ್ಲಿ ಚಪ್ಪಲಿ ಅಂಗಡಿ ಹೊಂದಿದ ಅಬೂಬಕ್ಕರ್‌ ಸಿದ್ಧಿಖ್‌ ಅವರ ಕೊಲೆಯ ಸೂತ್ರದಾರರ ಕುರಿತು ಮಾಹಿತಿ ಪಡೆದಿದ್ದ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರನ್ನು ಉಳ್ಳಾಲ ತೊಕ್ಕೊಟ್ಟು ಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿತ್ತು.

ಕೃತ್ಯದಲ್ಲಿ ಪಾಲ್ಗೊಂಡ ಇನ್ನೂ ಐವರ ಬಂಧನ ಆಗಬೇಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕುಂಬಳೆ ಸರ್ಕಲ್ ಇನ್ಸ್‌ ಪೆಕ್ಟರ್ ಪ್ರಮೋದ್‌ ಮತ್ತು ಎಸ್‌.ಐ.ವಿ.ಕೆ. ಅಶ್ರಫ್‌ ನೇತೃತ್ವದಲ್ಲಿ ತನಿಖೆ ಮುಂದುವೆರೆದಿದೆ.

LEAVE A REPLY

Please enter your comment!
Please enter your name here

Hot Topics

ದುಬೈನಿಂದ ಬಂದಿಳಿದ ಓರ್ವನ ನಿಕ್ಕರ್‌ನಲ್ಲಿತ್ತು 43 ಲಕ್ಷದ ಚಿನ್ನ: ಮತ್ತೋರ್ವನಲ್ಲಿ 5 ಲಕ್ಷ ರೂ ಮೌಲ್ಯದ ಫಾರಿನ್‌ ಕರೆನ್ಸಿ..!

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಹಾಗೂ ವಿದೇಶಿ ಕರೆನ್ಸಿ ಸಾಗಾಟ ಪ್ರಕರಣಗಳು ನಡೆದಿವೆದುಬೈಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದ ಕಾಸರಗೋಡಿನ ಪ್ರಯಾಣಿಕರೊಬ್ಬರು ಒಳ...

ಸಂಸದ ಡಾ. ಡಿ.ವಿ ಹೆಗ್ಗಡೆಯವರ ನೂತನ ಕಾರ್ಯಾಲಯ ಉದ್ಘಾಟನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಕ್ಷೇತ್ರದ ಧರ್ಮಾಧಿಕಾರಿಗಳು ಆಗಿರುವ ಹಾಗು ರಾಜ್ಯ ಸಭೆಯ ಸಂಸದರಾಗಿ ಆಯ್ಕೆಯಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೂತನ 'ಸಂಸದರ ಕಾರ್ಯಾಲಯ'ವು ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದ ಬಳಿ ಉದ್ಘಾಟನೆಗೊಂಡಿತು.ಸ್ಥಳೀಯ...

ಸಮುದ್ರ ದಡದಲ್ಲಿ ತೇಲಿ ಬಂತು ರಾಶಿ ಮುರವ (ಗೊಬ್ರ) ಮೀನು

ಉತ್ತರ ಕನ್ನಡ: ಉತ್ತರಕನ್ನಡದ ಮಂಕಿ ಸಮುದ್ರ ದಡದಲ್ಲಿ ರಾಶಿ ಮುರವ (ಗೊಬ್ರ) ಮೀನುಗಳು ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವ ದೃಶ್ಯ ಕಂಡುಬಂದಿದೆ.ಹೆಚ್ಚು ತೂಪಾನ್ ಆದಾಗ ನೀರು ಅತೀ ಹೆಚ್ಚು ಕೋಲ್ಡ್ ಆದಾಗ ಮೀನುಗಳು ಅರೆ...