Connect with us

ಕರಾವಳಿಯ ಅಲ್ಪಸಂಖ್ಯಾತ ಶಾಸಕನ ಹತ್ಯೆಗೆ ಸ್ಕೆಚ್..!!?

Published

on

ಶಾಸಕ ಯುಟಿ ಖಾದರ್ ಗೆ ಜೀವ ಭಯ: ಹತ್ಯೆಗೆ ಸಂಚು ಹೂಡಿದ ಮೂಲಭೂತವಾದಿ ಸಂಘಟನೆ..!! 

ಬೆಂಗಳೂರು: ಮೈಸೂರು ಶಾಸಕ ತನ್ವೀರ್ ಸೇಠ್ ಅವರ ಹತ್ಯೆಗೆ ಸಂಚು ರೂಪಿಸಿದಂತೆ ಶಾಸಕ ಯುಟಿ ಖಾದರ್ ಅವರ ಹತ್ಯೆಗೆ ಮೂಲಭೂತವಾದಿ ಸಂಘಟನೆ ಸ್ಕೆಚ್ ರೂಪಿಸಿದ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

ಗುಪ್ತಚರ ಇಲಾಖೆ ಸರ್ಕಾರಕ್ಕೆ ಈ ಮಾಹಿತಿ ರವಾನಿಸಿದೆ.

ಗುಪ್ತಚರ ಇಲಾಖೆ ಈ ವಿಚಾರ ತಿಳಿಸಿದ ಬೆನ್ನಲ್ಲೇ ಎಚ್ಚರಗೊಂಡ ಸರ್ಕಾರ, ಖಾದರ್ ಅವರಿಗೆ ಭದ್ರತೆ ಹೆಚ್ಚು ಮಾಡಲು ಸೂಚಿಸಿದೆ.

ಆದರೆ ಖಾದರ್ ನನಗೆ ಯಾವುದೇ ಜೀವಭಯ ಇಲ್ಲ ಎಂದು ಹೇಳಿ ಭದ್ರತೆಯನ್ನು ನಿರಾಕರಿಸಿದ್ದಾರೆ.

ಭದ್ರತೆ ನಿರಾಕರಿಸಿದ ವಿಚಾರ ತಿಳಿದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಿದ್ದರಾಮಯ್ಯ ಮೂಲಕ ಖಾದರ್ ಅವರ ಮನ ಒಲಿಸಲು ಮುಂದಾಗಿದ್ದಾರೆ.

ನನಗೆ ಜೀವ ಬೆದರಿಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖುದ್ದು ಗೃಹ ಸಚಿವರು ನನಗೆ ಕರೆ ಮಾಡಿ ಹೇಳಿ ಭದ್ರತೆ ಪಡೆಯುವಂತೆ ಹೇಳಿದ್ದಾರೆ.

ಆದರೆ ಓರ್ವ ಪೋಲಿಸ್ ಸಿಬ್ಬಂದಿಯನ್ನು ಭದ್ರತೆ ನೀಡಲು ಸರ್ಕಾರ ಮುಂದಾಗಿದೆ.

ಇಂತಹ ಕಾಟಾಚಾರದ ಭದ್ರತೆ ನನಗೆ ಬೇಡ ಅಂತ ನಾನು ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ್ದೇನೆ ಎಂದು ತಿಳಿಸಿದ್ದಾರೆ.

ನಾನು ಶಾಸಕನಾಗಿ ಯಾವತ್ತೂ ಗನ್ ಮ್ಯಾನ್ ಇಟ್ಟುಕೊಂಡಿಲ್ಲ.

ಈಗ ಓರ್ವ ಸಿಬ್ಬಂದಿಯನ್ನು ದಿನದ 8 ಗಂಟೆಯ ಕಾಲ ಜೊತೆಗಿಟ್ಟುಕೊಂಡು ಅವನಿಗೆ ನಾನು ತೊಂದರೆ ನೀಡುವುದಿಲ್ಲ.

ಕಾಟಾಚಾರದ ಭದ್ರತೆ ನನಗೆ ಬೇಕಿಲ್ಲ. ಕಲ್ಪಿಸಿದರೆ ಸರಿಯಾದ ಭದ್ರತೆ ನೀಡಲಿ ಎಂದು ಹೇಳಿ ಸರ್ಕಾರದ ವಿರುದ್ಧ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸಿಪಿ ಒಬ್ಬರು ಮನೆಗೆ ಬಂದು ಮಾತನಾಡಿದ್ದಾರೆ. ಭದ್ರತೆ ಕೊಟ್ಟರೆ ಸರಿಯಾಗಿ ಕೊಡಬೇಕು.

ಒಬ್ಬ ಪೊಲೀಸರ ಭದ್ರತೆ ಕೊಟ್ಟು ಹೆಚ್ಚು ಕಡಿಮೆಯಾದರೆ ಯಾರು ಹೊಣೆ.? ತನ್ವೀರ್ ಸೇಟ್ ಅವರಿಗೂ ಓರ್ವ ಗನ್ ಮೆನ್ ಕೊಟ್ಟಿದ್ದರು.

ಘಟನೆಯಾದ ನಂತರ ಆ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಇದರಲ್ಲಿ ಆತನ ತಪ್ಪು ಏನು.?.

ಓರ್ವ ಪೊಲೀಸ್ ಭದ್ರತೆಗೆ ನಿಯೋಜಿಸಿದರೆ ಆತ 8 ಗಂಟೆ ಕೆಲಸ ಮುಗಿಸಿ ಹೋಗುತ್ತಾನೆ.

ಆಮೇಲೆ ಏನು ಮಾಡುವುದು? ನನಗೆ ಬೆದರಿಕೆ ಇದೆ ಎಂದು ಗೃಹ ಸಚಿವರೆ ಹೇಳಿದ್ದಾರೆ.

ಆದರೆ ಸೂಕ್ತ ಭದ್ರತೆ ಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಖಾದರ್ ಸರ್ಕಾರದ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

 

Click to comment

Leave a Reply

Your email address will not be published. Required fields are marked *

LATEST NEWS

ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಸಹೋದರ ‘ಚೈತನ್ಯ’ ವಿಧಿವಶ.!

Published

on

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ದಿವಂಗತ ಅಪರ್ಣಾ ಸಹೋದರ ಚೈತನ್ಯ ಇಂದು ನಿಧನರಾಗಿದ್ದಾರೆ ಎಂದು ಅಪರ್ಣಾ ಪತಿ ನಾಗರಾಜ್ ರಾಮಸ್ವಾಮಿ ವಸ್ತಾರೆ ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಅಪರ್ಣೆಯ ಅಣ್ಣ ಚೈತನ್ಯ ನಿನ್ನೆ ನಡುರಾತ್ರಿಯಲ್ಲಿ ಈ ಇಹತೊರೆದು ಸರಿದಿದ್ದಾರೆ. ತೀವ್ರತಮ ವಿಷಾದ. ಕೆಲವು ಹೂವುಗಳು ಅರಳದೆ ಮೊಗ್ಗಾಗಿಯೇ ಉದುರಿಹೋಗುತ್ತವೆ. ಇನ್ನು ಕೆಲವು ಅರಳಿ ಹಣ್ಣಾಗದೆ ಕಮರುತ್ತವೆ. ಇನ್ನೂ ಕೆಲವನ್ನು ಒತ್ತಾಯದಿಂದ ಕೊಯ್ದು ಕತ್ತರಿಸಲಾಗುತ್ತದೆ. ಯಾರು ಯಾವುದೆಂದು ನಾನು ಈವರೆಗೂ ಅರಿತಿಲ್ಲ. ಅರಿಯುವ ಜಿಜ್ಞಾಸೆಯೂ ಈ ಹೊತ್ತಿನದಲ್ಲ. ದಿನದಿಂದ ದಿನಕ್ಕೂ ನಾನು ಹೆಚ್ಚು ಹೆಚ್ಚು ಒಬ್ಬನಾಗುತ್ತಿರುವುದು ಯಾವೊತ್ತಿನ ಸತ್ಯ. ಬಹುಶಃ ಎಲ್ಲರದೂನು ಎಂದು ಹೇಳಿದ್ದಾರೆ.

Continue Reading

LATEST NEWS

ತಿರುಪತಿ ದುರಂ*ತಕ್ಕೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸಂ*ತಾಪ

Published

on

ಮಂಗಳೂರು/ನವದೆಹಲಿ :  ತಿರುಪತಿಯಲ್ಲಿ  ದುರಂ*ತವೊಂದು ಸಂಭವಿಸಿದೆ. ವೈಕುಂಠದ್ವಾರ ಸರ್ವದರ್ಶನದ ಟಿಕೆಟ್ ವಿತರಣಾ ಕೇಂದ್ರಗಳಲ್ಲಿ ಉಂಟಾದ ನೂಕುನುಗ್ಗಲಿನಿಂದಾಗಿ 7 ಮಂದಿ ಪ್ರಾ*ಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂ*ತಾಪ ಸೂಚಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಆಂಧ್ರಪ್ರದೇಶದ ತಿರುಪತಿಯಲ್ಲಿ ಸಂಭವಿಸಿದ ಕಾ*ಲ್ತುಳಿತ ಘಟನೆಯಿಂದ ನೋ*ವಾಗಿದೆ. ಘಟನೆಯಲ್ಲಿ ಗಾ*ಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಆಂಧ್ರ ಪ್ರದೇಶ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ಸಂತಾಪ :

ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ದು*ರ್ಘಟನೆಯಲ್ಲಿ ಮೃ*ತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ದೇವರು  ಕುಟುಂಬಸ್ಥರಿಗೆ ತಮ್ಮ ಆಪ್ತರನ್ನು ಕಳೆದುಕೊಂಡ ದು:ಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

ಗುರುವಾರ(ಜ.9) ಬೆಳಗ್ಗೆ 5 ಗಂಟೆಯಿಂದ ಶ್ರೀನಿವಾಸಂ, ಸತ್ಯನಾರಾಯಣಪುರಂ ಮತ್ತು ಬೈರಾಗಿಪಟ್ಟೆಡ ಸೇರಿದಂತೆ 9 ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 94 ಕೌಂಟರ್‌ಗಳ ಮೂಲಕ ವೈಕುಂಠ ದ್ವಾರ ದರ್ಶನ ಟಿಕೆಟ್ ನೀಡಲು ಟಿಟಿಡಿ ನಿರ್ಧರಿಸಿತ್ತು. ಆದರೆ, ಟೋಕನ್‌ಗಳಿಗಾಗಿ ಬುಧವಾರ ಸಂಜೆಯೇ ಭಾರಿ ಜನರು ಜಮಾಯಿಸಿದ್ದರು.

ಇದನ್ನೂ ಓದಿ : ಸೈಬರ್ ವಂಚನೆಯ ನಷ್ಟಕ್ಕೆ ಬ್ಯಾಂಕುಗಳೇ ಹೊಣೆ ಎಂದ ಸುಪ್ರೀಂ ಕೋರ್ಟ್

ಈ ನಡುವೆ ಟಿಕೆಟ್ ಕೌಂಟರ್ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡ ಕಾರಣ ಅವರನ್ನು ಹೊರಕ್ಕೆ ಕರೆದೊಯ್ಯಲು ಗೇಟ್ ತೆರೆದಾಗ ಹೊರಗಿದ್ದವರೆಲ್ಲರೂ ಗುಂಪು ಗುಂಪಾಗಿಒಳನುಗ್ಗುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಕೆಲವರು ಕೆಳಗೆ ಬಿದ್ದಿದ್ದು ಕಾಲ್ತುಳಿತದಿಂದ ಅಸ್ವಸ್ಥಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಅವರಲ್ಲಿ 7 ಭಕ್ತರು ಸಾವನ್ನಪ್ಪಿದ್ದು, ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ.

Continue Reading

LATEST NEWS

ಕೆಲಸದ ಒತ್ತಡಕ್ಕೆ ಬೇಸತ್ತು ಬಿಲ್ ಕಲೆಕ್ಟರ್ ಆತ್ಮಹತ್ಯೆ

Published

on

ವಿಜಯನಗರ: ಕೆಲಸದ ಒತ್ತಡದಿಂದ ಬೇಸತ್ತ ನಗರ ಸಭೆಯ ಬಿಲ್ ಕಲೆಕ್ಟರ್ ಒಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.

ಮೃತರನ್ನು ಮಂಜುನಾಥ್ ಎಂದು ತಿಳಿದುಬಂದಿದೆ. ಮಂಜುನಾಥ್‌ ಅವರು ಹೊಸ ವರ್ಷದ ಆರಂಭದ ದಿನವೇ ತಮಗೆ ಕೆಲಸದ ಒತ್ತಡದ ಇದೆ ಎಂದು ಹೇಳಿ ಪ್ಲಂಬಿಂಗ್‌ಗೆ ಬಳಸುವ ಗಮ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಮಾರ್ಜ್ ಆದ ಬಳಿಕ ಅವರು ಇಂದು ಮತ್ತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೂ ಮೊದಲು ಆತ್ಮಹತ್ಯೆಗೆ ಯತ್ನಿಸಿದ್ದ ಮಂಜುನಾಥ್ ಮೊಬೈಲ್ ನಲ್ಲಿ ಡೆತ್ ನೋಟ್ ಕುರಿತು ಉಲ್ಲೇಖಿಸಿದ್ದರು.

“ನನ್ನ ಸಾವಿಗೆ ನಗರಸಭೆಯ ಆಯುಕ್ತ ಚಂದ್ರಪ್ಪ ಮತ್ತು ಕಂದಾಯ ಅಧಿಕಾರಿ ನಾಗರಾಜ್ ಕಾರಣ. ಕೆಲಸದಿಂದ ಬೇರೆಡೆ ನಿಯೋಜಿಸಲು ಒಂದು ತಿಂಗಳಿಂದ ಹೇಳುತ್ತಿದ್ದರೂ ತೆಗೆಯುತ್ತಿಲ್ಲ. ರಾತ್ರಿ ನಿದ್ದೆ ಬರುತ್ತಿಲ್ಲ, ಅಧಿಕ ಒತ್ತಡ ಇರುವುದರಿಂದ ನಾನು ಸಾವಿಗೆ ಶರಣಾಗಿದ್ದೀನಿ” ಎಂಬ ಸಂದೇಶವನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಕಳುಹಿಸಿ ಮಂಜುನಾಥ ಬುಧವಾರ ಬೆಳಿಗ್ಗೆ ನಾಪತ್ತೆಯಾಗಿದ್ದರು. ಹಂಪಿ ರಸ್ತೆಯಲ್ಲಿ ಅವರನ್ನು ಪತ್ತೆ ಮಾಡಿ, ಆಸ್ಪತ್ರೆಗೆ ದಾಖಲಿಸಲಾಯಿತು.

ಆದರೆ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಂಜುನಾಥ್ ಇಂದು ಮತ್ತೆ ಹೊಸಪೇಟೆ ತಾಲೂಕಿನ ಕಡ್ಡಿರಾಂಪುರದಲ್ಲಿ ಖಾಸಗಿ ಹೋಂ ಸ್ಟೇ ನಲ್ಲಿ ಮಂಜುನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೇಲಾಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ. ಘಟನಾ ಸ್ಥಳಕ್ಕೆ ಹಂಪಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

LATEST NEWS

Trending

Exit mobile version