Home ಪ್ರಮುಖ ಸುದ್ದಿ ಸಮಸ್ಯೆ ಬಗ್ಗೆ ವರದಿ ಮಾಡಿದ್ದಕ್ಕೆ ಪತ್ರಕರ್ತನಿಗೆ ಅವಾಜ್..!!

ಸಮಸ್ಯೆ ಬಗ್ಗೆ ವರದಿ ಮಾಡಿದ್ದಕ್ಕೆ ಪತ್ರಕರ್ತನಿಗೆ ಅವಾಜ್..!!

ಸಮಸ್ಯೆ ಬಗ್ಗೆ ವರದಿ ಮಾಡಿದ್ದಕ್ಕೆ ಪತ್ರಕರ್ತನಿಗೆ ಅವಾಜ್

ಬಂಟ್ವಾಳ: ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ವರದಿ ಮಾಡಿದ ವರದಿಗಾರನಿಗೆ, ಪುರಸಭಾ ಇಂಜಿನಿಯರ್ ಒಬ್ಬರು ಬೆದರಿಕೆ ಒಡ್ಡಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳದ ಜಕ್ರಿಬೆಟ್ಟುವಿನ ಪುರಸಭೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ಸಮಸ್ಯೆ ಉಂಟಾಗಿತ್ತು. ಈ ಬಗ್ಗೆ ಮಹಿಳೆಯಬ್ಬರು ದೂರು ನೀಡಲು ಹೋದಾಗ ದೂರು ಸ್ವೀಕರಿಸದೆ ಅಧಿಕಾರಿಗಳು ದರ್ಪದ ಮಾತು ಆಡಿದ್ದಾರೆ ಎಂದು ಅವರು ಮಾಧ್ಯಮದಲ್ಲಿ ವರದಿ ಬಿತ್ತರಿಸಲಾಗಿತ್ತು. ಈ ವರದಿ ನೋಡಿದ ಅಲ್ಲಿನ ಇಂಜಿನಿಯರ್ ವರದಿಗಾರನಿಗೆ ಪೋನ್ ಮಾಡಿ ಮಹಿಳೆ ಯಾರು, ಅವರಿಗೆ ನಾವು ಯಾರು ಮಾತನಾಡಿಲ್ಲ, ಅವರು ಯಾವ ದೇವಸ್ಥಾನಕ್ಕೆ ಬರುತ್ತಾರೆ ಎಂದು ಕರೆದಿದ್ದಾರೆ, ಅಲ್ಲದೆ ಕುಡಿಯುವ ನೀರು ಸರಬರಾಜು ಅಗದಿದ್ದರೆ ನಿನಗೆ ಏನು, ನಿನೇನು ಜನಪ್ರತಿನಿಧಿಯ, ನಿನ್ನ ಮೇಲೆ ಕೇಸು ಮಾಡುತ್ತೇನೆ, ಈ ಹಿಂದೆಯೂ ಪತ್ರಕರ್ತರ ಮೇಲೆ ಮಾಡಿದ್ದೇನೆ, ಇನ್ನು ಮುಂದೆ ವರದಿ ಮಾಡಿದರೆ ಜಾಗೃತೆ ಎಂದು ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಪುರಸಭೆಯ ಯೋಜನಾಧಿಕಾರಿ ಸಂತೋಷ್ ಅವರಲ್ಲಿ ಮೌಖಿಕವಾಗಿ ತಿಳಿಸಲಾಗಿದ್ದು, ಅವರು ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.

ವಿಡಿಯೋಗಾಗಿ

 

- Advertisment -

RECENT NEWS

ದಿಲ್ಲಿ ಹಿಂಸಾಚಾರ ಪ್ರಕರಣ: ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ

ದಿಲ್ಲಿ ಹಿಂಸಾಚಾರ ಪ್ರಕರಣ: ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ ನವದೆಹಲಿ: ದಿಲ್ಲಿ ಹಿಂಸಾಚಾರದ ವೇಳೆ ಗಂಭೀರ ಗಾಯಗೊಂಡಿದ್ದ ಮತ್ತಷ್ಟು ಮಂದಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದು, ಚರಂಡಿಗಳಿಂದ ಕೆಲ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ....

ಬಿಎಸ್‌ವೈ ಹುಟ್ಟುಹಬ್ಬ ಹಿನ್ನಲೆ 30 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ

ಬಿಎಸ್‌ವೈ ಹುಟ್ಟುಹಬ್ಬ ಹಿನ್ನಲೆ 30 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಉಡುಪಿ: ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣಗುರು ಶಿಕ್ಷಣ ಟ್ರಸ್ಟ್ ಇದರ ಅಂಗಸಂಸ್ಥೆಯಾದ ಶ್ರೀ ನಾರಾಯಣಗುರು ಅನುದಾನಿತ ಪ್ರೌಢಶಾಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರ ಜನ್ಮದಿನದ ಪ್ರಯುಕ್ತ...

ಮ.ನ.ಪಾ ದ ನೂತನ ಮೇಯರ್ ಆಗಿ ದಿವಾಕರ್, ಉಪಮೇಯರ್ ವೇದಾವತಿ ಆಯ್ಕೆ

ಮ.ನ.ಪಾ ದ ನೂತನ ಮೇಯರ್ ಆಗಿ ದಿವಾಕರ್, ಉಪಮೇಯರ್ ವೇದಾವತಿ ಆಯ್ಕೆ ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 21 ನೇ ಅವಧಿಗೆ ಮೇಯರ್-ಉಪಮೇಯರ್ ಚುನಾವಣೆ ನಡೆದಿದ್ದು, ಕಂಟೋನ್ಮೆಂಟ್ ವಾರ್ಡ್ ನ ದಿವಾಕರ್ ಅವರು ಮೇಯರ್...

ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾಗಿ ವಿನಯ್‌ ಎಲ್‌ ಶೆಟ್ಟಿ ಆಯ್ಕೆ

ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾಗಿ ವಿನಯ್‌ ಎಲ್‌ ಶೆಟ್ಟಿ ಆಯ್ಕೆ ಮಂಗಳೂರು: ಮಾಜಿ ಭಜರಂಗ ದಳದ ಜಿಲ್ಲಾ ಸಂಚಾಲಕರೂ ಆಗಿರುವ ವಿನಯ್‌ ಎಲ್‌ ಶೆಟ್ಟಿ ಅವರಿಗೆ ಸರ್ಕಾರ ಹೊಸ ಜವಾಬ್ದಾರಿ ವಹಿಸಿದೆ. ಕರ್ನಾಟಕ...