Home ಪ್ರಮುಖ ಸುದ್ದಿ ಲಾಕ್ ಡೌನ್ ಟೈಮಲ್ಲಿ ಹೇಯಕೃತ್ಯ: ನದಿಗೆ ವಿಷಪ್ರಾಶನ ನವೀಲು ಸೇರಿದಂತೆ ಸಾವಿರಾರು ಮೀನುಗಳ ಮಾರಣಹೋಮ

ಲಾಕ್ ಡೌನ್ ಟೈಮಲ್ಲಿ ಹೇಯಕೃತ್ಯ: ನದಿಗೆ ವಿಷಪ್ರಾಶನ ನವೀಲು ಸೇರಿದಂತೆ ಸಾವಿರಾರು ಮೀನುಗಳ ಮಾರಣಹೋಮ

ಲಾಕ್ ಡೌನ್ ಟೈಮಲ್ಲಿ ಹೇಯಕೃತ್ಯ: ನದಿಗೆ ವಿಷಪ್ರಾಶನ ನವೀಲು ಸೇರಿದಂತೆ ಸಾವಿರಾರು ಮೀನುಗಳ ಮಾರಣಹೋಮ‌

ಬೆಳ್ತಂಗಡಿ: ನೆರಿಯ ಗ್ರಾಮದ ಕೊಲ್ನ ನದಿ ಕಿನಾರೆಯಲ್ಲಿ ದುಷ್ಕರ್ಮಿಗಳು ಮೀನು ಹಿಡಿಯಲು ನದಿಗೆ ವಿಷಪದಾರ್ಥ ಬೆರೆಸಿದ್ದರಿಂದ ಸಾವಿರಾರು ಮೀನುಗಳ ಮಾರಣಹೋಮವಾಗಿದೆ.

ಸ್ಥಳೀಯರು ಹೇಳುವಂತೆ ಮಾರ್ಚ್ 30ರ, ಸೋಮವಾರ ರಾತ್ರಿ 5 ಕೆ.ಜಿ.ಗೂ ಅಧಿಕ, ಅಡಕೆ ತೋಟಕ್ಕೆ ಬಳಸುವ ಮೈಲುತುತ್ತು ದ್ರಾವಣ ಬಳಸಿರುವ ಶಂಕೆ ವ್ಯಕ್ತಪಡಿಸಿದ್ದು, ಸದಿಯಲ್ಲಿ ಸುಮಾರು 2 ಕಿ.ಮೀ. ದೂರದವರೆಗೂ ಮೀನುಗಳು ಸಾವನ್ನಪ್ಪಿವೆ.

ಇದೇ ನೀರನ್ನು ಕುಡಿದು ನವಿಲು ಕೂಡ ಸಾವನ್ನಪ್ಪಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊರೊನಾ ಭೀತಿಯಿಂದ ನಲುಗಿರುವ ನಡುವೆಯೇ ಕೆಲವು ದುಷ್ಕರ್ಮಿಗಳು ನದಿಗೆ ವಿಷಪ್ರಾಶನ ಮಾಡಿ ಮೀನು ಹಿಡಿಯಲು ಮುಂದಾಗುವ ಮೂಲಕ ಅಮಾನುಷ ವರ್ತನೆ ತೋರಿದ್ದಾರೆ.

ನೆರಿಯ ಕೊಲ್ನ ನದಿಯಲ್ಲಿ ಹೊರ ಪ್ರದೇಶದಿಂದ ಬಂದ ಕೆಲವರು ವಿದ್ಯುತ್ ಇನ್ ವರ್ಟರ್ ಬಳಸಿ ಮೀನು ಹಿಡಿಯುತ್ತಿರುವ ಆರೋಪವೂ ಕೇಳಿ ಬಂದಿದೆ.

ಸುತ್ತಮುತ್ತಲಿನ ಪ್ರದೇಶವಾದ ಅಣಿಯೂರು, ಪಿಲಿಕಳ, ನೆರಿಯಾ ಉಂಬಾಜೆ ಪರಿಸರದ ಮಂದಿ ಇದೇ ನೀರನ್ನು ದಿನಬಳಕೆಗೆ ಅವಲಂಬಿಸಿದ್ದಾರೆ.

ಸದ್ಯ ಈ ಕುರಿತು ಸೂಕ್ತ ತನಿಖೆಯನ್ನು ನಡೆಸಿ ಆರೋಪಿಗಳ ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.

- Advertisment -

RECENT NEWS

ಉಡುಪಿ ಕೊರೊನಾಘಾತ ಒಂದೇ ದಿನ 83 ಪ್ರದೇಶ ಸೀಲ್ ಡೌನ್

ಜಿಲ್ಲೆಯಲ್ಲಿ ಈವರೆಗೆ 201 ಪ್ರದೇಶಗಳು ಸೀಲ್ ಡೌನ್ ಉಡುಪಿ ಜೂ.5: ಉಡುಪಿಯಲ್ಲಿ ಇಂದು ದಾಖಲಾದ 204 ಕೊರೊನಾ ಪ್ರಕರಣಗಳಿಂದಾಗಿ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 83 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ರಾಜ್ಯದಲ್ಲೇ...

ಪ್ರಧಾನಿ ದೇಶದ ಜನರಿಗೆ ಬರೆದಿರೋ “ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಸಾಧನೆ ಹಂಚಿದ ಕಟೀಲ್

“ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಪ್ರಧಾನಿಗಳ ಸಾಧನೆಯ ಸಾರಾಂಶ ಮನೆಮನೆಗೆ ಹಂಚಿದ ಸಂಸದ ಕಟೀಲ್ ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ...

ಕಡಬಕ್ಕೂ ವಕ್ಕರಿಸಿದ ಮಹಾಮಾರಿ ಕೊರೊನಾ ವೈರಸ್.. ಶಿಕ್ಷಕನಿಗೆ ಪಾಸಿಟಿವ್

45 ವರ್ಷದ ಶಿಕ್ಷಕನಿಗೆ ಕೊರೊನಾ ಪಾಸಿಟಿವ್: ಆತಂಕದಲ್ಲಿ ಕಡಬ ಜನತೆ ಕಡಬ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಮಹಾಮಾರಿ ಇದೀಗ ಕಡಬಕ್ಕೂ ಕಾಲಿಟ್ಟಿದೆ. ಕಡಬದ 42 ವರ್ಷದ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಈಗಾಗಲೇ...

ದೇಶದಲ್ಲಿ ಕೊರೊನಾ ಹಂಚಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ: ಸಂಸದೆ ಶೋಭಾ ಗಂಭೀರ ಆರೋಪ..!

ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು: ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಉಡುಪಿ: ಶಾಂತವಾಗಿದ್ದ ಉಡುಪಿ ಜಿಲ್ಲೆಯಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದಿಂದ ಕೊರೊನಾ ಹಬ್ಬಿದೆ. ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು ಎಂದು ಉಡುಪಿ-ಚಿಕ್ಕಮಗಳೂರು...