ತೆಲಂಗಾಣ: ಬಿಸಿನೀರಿಗಾಗಿ ವಾಟರ್ ಹೀಟರ್ ಬಳಸುವವರೇ ಎಚ್ಚರ. ವಾಟರ್ ಹೀಟರ್ ನಿಂದ ವಿದ್ಯುತ್ ಪ್ರವಹಿಸಿ ನವವಧು ಮೃ*ತಪಟ್ಟ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಮದುವೆಯಾಗಿ ಗಂಡನ ಮನೆಯೊಳಗೆ ಕಾಲಿಟ್ಟ 5 ದಿನದಲ್ಲಿ ಈ ಘಟನೆ ನಡೆದಿದೆ. ವಾಟರ್ ಹೀಟರ್ ನಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾ*ವನ್ನಪ್ಪಿದ್ದಾಳೆ. ಮಂಚೇರಿಯಲ್ ಜಿಲ್ಲೆಯ ನೆನ್ನೆಲಾ ಮಂಡಲದ ನಿವಾಸಿಗಳಾದ ಸಿದ್ದು ಮತ್ತು ಜಂಬಿ ಸ್ವಪ್ನಾ ಪರಸ್ಪರ ಪ್ರೀತಿಸುತ್ತಿದ್ದರು. ಕುಟುಂಬ ಸದಸ್ಯರು ಮತ್ತು ಪೋಷಕರು ಮದುವೆಗೆ ಒಪ್ಪದ ಹಿನ್ನೆಲೆ ದಂಪತಿಗಳು ಐದು ದಿನಗಳ ಹಿಂದೆ ಬೆಲ್ಲಂಪಲ್ಲಿಯಲ್ಲಿ ಪ್ರೇಮ ವಿವಾಹವಾಗಿದ್ದರು. ಅತ್ತೆಯ ಮನೆಗೆ ಕಾಲಿಟ್ಟ ಸ್ವಪ್ನಾಗೆ ಸಿದ್ದು ಪೋಷಕರು ಭವ್ಯ ಸ್ವಾಗತ ನೀಡಿದರು. ಆದರೆ ನಂತರ ಸ್ವಪ್ನಾ ಸ್ನಾನ ಮಾಡುವಾಗ ವಿದ್ಯುತ್ ಪ್ರವಹಿಸಿ ಸಾ*ವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಹೀಟರ್ ನೀರಿನಿಂದ ಸ್ನಾನ ಮಾಡುವ ಅನಾನುಕೂಲಗಳು
ಎಲೆಕ್ಟ್ರಿಕ್ ಹೀಟರ್ ಗಳಿಂದಾಗಿ ಬೆಂಕಿ ಅಪಘಾತಗಳ ಸಾಧ್ಯತೆಗಳು ತುಂಬಾ ಹೆಚ್ಚು. ನೀರಿನಲ್ಲಿ ಸರಿಯಾಗಿ ಇರಿಸಿ ಸ್ವಿಚ್ ಆನ್ ಮಾಡದಿದ್ದರೆ, ಅದು ಶಾಟ್ ಸರ್ಕ್ಯೂಟ್ ಗೆ ಕಾರಣವಾಗುವ ಅಪಾಯವಿದೆ. ಈ ಹಿಂದೆ ಜೀವಗಳನ್ನು ಕಳೆದುಕೊಂಡ ಅನೇಕ ಘಟನೆಗಳು ನಡೆದಿವೆ. ಹೀಟರ್ ನೀರನ್ನು ತ್ವರಿತವಾಗಿ ಬಿಸಿ ಮಾಡುತ್ತದೆ. ಅಂತಹ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಚರ್ಮದ ತುರಿಕೆ, ದದ್ದುಗಳು ಮತ್ತು ಸಿಪ್ಪೆ ಸುಲಿಯುವಿಕೆ ಸಂಭವಿಸಬಹುದು.
ಹೀಟರ್ ಅನ್ನು ಆನ್ ಮಾಡಿದಾಗ, ಕಾರ್ಬನ್ ಮೊನೊಕ್ಸೌಡ್ ನಂತಹ ಹಾನಿಕಾರಕ ಅನಿಲಗಳು ಗಾಳಿಗೆ ಬಿಡುಗಡೆಯಾಗುತ್ತವೆ. ಇವು ಉಸಿರಾಟದ ಸಮಸ್ಯೆಗಳನ್ನು ಹೆಚ್ಚಿಸಬಹುದು. ತಲೆನೋವು ಮತ್ತು ವಾಕರಿಕೆಯಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಹೆಚ್ಚು ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಹೃದಯಾಘಾತದ ಸಮಸ್ಯೆಗಳು ಉಂಟಾಗಬಹುದು.
ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಹೀಟರ್ ಗಳನ್ನು ಬಳಸದಿರುವುದು ಉತ್ತಮ. ಏಕೆಂದರೆ ಅದು ಹೀಟರ್ ಎಂದು ತಿಳಿಯದೆ ಮಕ್ಕಳು ಅದರ ಬಳಿ ಹೋಗುವ ಅಪಾಯವಿದೆ. ಹೀಟರ್ ಗಳು ತುಂಬಾ ಬಿಸಿಯಾಗಿರುತ್ತವೆ. ನೀವು ಹೀಟರ್ ಅನ್ನು ಸ್ಪರ್ಶಿಸಿದರೆ, ಚರ್ಮವು ಮೇಲಕ್ಕೆ ಬರುತ್ತದೆ. ಆದ್ದರಿಂದ ಹೀಟರ್ ಗಳನ್ನು ಬಳಸದಿದ್ದರೆ ಉಂಟಾಗುವ ಹಾನಿ ತುಂಬಾ ಕಡಿಮೆ.
ಮಂಗಳೂರು/ಇಂಗ್ಲೆಂಡ್: ಕೇವಲ ಒಂದು ನಿಮಿಷದಲ್ಲಿ 49 ಗ್ರಾಂ. ಕಾಟನ್ ಕ್ಯಾಂಡಿ ತಿನ್ನುವ ಮೂಲಕ ಇಂಗ್ಲೆಂಡ್ ನ ಯೂಟ್ಯೂಬರ್, ಲೀ ಶಟ್ ಕೀವರ್ ಹೊಸ ಗಿನ್ನೆಸ್ ವಿಶ್ವದಾಖಲೆ ಸ್ಥಾಪಿಸಿದ್ದಾರೆ.
ತಿಳಿ ಹಸಿರು ಬಣ್ಣದ ಈ ತಿಂಡಿಯನ್ನು ಲೀ ತಿನ್ನುತ್ತಿರುವ ವೀಡಿಯೋವನ್ನು ಗಿನ್ನೆಸ್ ಸಂಸ್ಥೆಯು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ.
ಮಂಗಳೂರು/ಭೋಪಾಲ್ : ಇಂದು (ಡಿ.25) ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವ. ಅವರ ಬಹುದೊಡ್ಡ ಕನಸನ್ನು ಈಡೇರಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುಂದಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ನದಿಗಳ ಜೋಡಣೆಗೆ ತಯಾರಿ ನಡೆಸಿದೆ. ಇಂದು ಮಧ್ಯಪ್ರದೇಶದ ಖಜ್ರಾಹೋದಲ್ಲಿ ಕೆನ್-ಬೆಟ್ವಾ ನದಿಗಳ ಜೋಡಣೆಗೆ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ.
ಮುಖ್ಯಮಂತ್ರಿ ಡಾ. ಮೋಹನ್ ಯಾದವ್, ಬಿಜೆಪಿ ರಾಜ್ಯಾಧ್ಯಕ್ಷ ವಿ.ಡಿ.ಶರ್ಮಾ, ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ, ಸಚಿವ ಪ್ರಹ್ಲಾದ್ ಪಟೇಲ್, ಉಪಮುಖ್ಯಮಂತ್ರಿ ಜಗದೀಶ್ ದೇವ್ರಾ, ಸಚಿವ ರಾಕೇಶ್ ಸಿಂಗ್, ಜಲಸಂಪನ್ಮೂಲ ಸಚಿವೆ ತುಳಸಿ ಸಿಲಾವತ್, ಕೃಷಿ ಸಚಿವ ಇಂದಲ್ ಸಿಂಗ್ ಕಂಸಾನಾ, ಕೇಂದ್ರ ಕೇಂದ್ರ ಕೃಷಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ ವಾಜಪೇಯಿ ಅವರು ತಮ್ಮ ನದಿಗಳ ಜೋಡಣೆಯ ಯೋಜನೆಯ ಕನಸನ್ನು ಜಾರಿಗೆ ತರಲು ಬಯಸಿದ್ದರು. ಆದರೆ, ಅಗ ಅದು ಸಾಧ್ಯವಾಗಿರಲಿಲ್ಲ. ಈಗ ಅವರ ಕನಸು ಸಾಕಾರಗೊಳ್ಳುತ್ತಿದೆ.
ಕೆನ್-ಬೆಟ್ಟಾ ನದಿಗಳ ಜೋಡಣೆ ಯೋಜನೆಯಿಂದ ವಾರ್ಷಿಕ 10.62 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಮಧ್ಯಪ್ರದೇಶದ ಮತ್ತು ಉತ್ತರಪ್ರದೇಶದ ಸುಮಾರು 62 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. 103 ಮೆಗಾವಾಟ್ ಜಲವಿದ್ಯುತ್ ಉತ್ಪಾದನೆಯಾಗುತ್ತದೆ. ಈ ಯೋಜನೆಗೆ ಸುಮಾರು 44,605 ಕೋಟಿ ವೆಚ್ಚವಾಗುತ್ತದೆ ಎಂದು ಹೇಳಲಾಗಿದೆ.
ಈ ಯೋಜನೆಯು ನೀರಿನ ಅಭಾವದಿಂದ ಬಳಲುತ್ತಿರುವ ಬುಂದೇಲ್ ಖಂಡ್‌ನ ಪ್ರದೇಶಕ್ಕೆ ಅದರಲ್ಲೂ ಪನ್ನಾ, ಟಿಕಮ್‌ಗಡ, ಛತ್ತರ್‌ಪುರ್, ಸಾಗರ್, ದಮೋಹ್, ದಾಟಿಯಾ, ವಿದಿಶಾಮ, ಶಿವಪುರಿ ಮತ್ತು ಮಧ್ಯಪ್ರದೇಶದ ರೈಸನ್, ಉತ್ತರ, ಬಾಂಡಾ, ಮಹೋಬಾ, ಝೂನ್ಸಿ, ಮತ್ತು ಲಲಿತಪುರ ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ ಎನ್ನಲಾಗಿದೆ.
ಮಂಗಳೂರು/ಬೆಂಗಳೂರು : ಗೂಗಲ್ ತಂಡದಿಂದ APAC ಮೂಲಕ ಪ್ರತಿಷ್ಠಿತ ವೆಂಡರ್ ಟಾಕ್ಸ್ ಸರಣಿಗೆ SESIPL ಸಂಸ್ಥೆ ಆಯ್ಕೆಯಾಗಲು ಅವಕಾಶ ಪಡೆದುಕೊಂಡಿದೆ. ಈ ಮೂಲಕ ಏಷ್ಯಾ , ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನ್ನು ಒಳಗೊಂಡಿರುವ ಪ್ರದೇಶದಲ್ಲಿ ಸಂಸ್ಥೆಯ ಅತ್ಯಾಧುನಿಕ ತಂತ್ರಜ್ಞಾನದ ಪರಿಹಾರಗಳನ್ನು ಪ್ರದರ್ಶಿಸಲು ಅವಕಾಶ ಸಿಕ್ಕಿದೆ.
ಕಳೆದ ವರ್ಷದ ತ್ರೈಮಾಸಿಕ ಸರಣಿಯ ಭಾಗವಾಗಿ SESIPLನ ಕೊಡುಗೆಗಳು ಮತ್ತು ಸಂಸ್ಥೆಯ ಶ್ರೇಷ್ಠ ನಿರ್ವಹಣೆಗಾಗಿ ಗುರುತಿಸಿಕೊಂಡಿದೆ. ಈ ಕೊಡುಗೆಗಾಗಿ ಗೂಗಲ್ ತಂಡದ APAC ನೀಡುವ ಪಿನಾಕಲ್ ಪ್ರಶಸ್ತಿಯನ್ನು SESIPL ಸಂಸ್ಥೆ ಪಡೆದುಕೊಂಡಿದೆ.
APAC ನೀಡಿರುವ ಈ ಗೌರವ ಪ್ರಶಸ್ತಿಯ ಸಂಸ್ಥೆಯ ಸ್ಟೇಕ್ ಹೋಲ್ಡರ್‌ಗಳಿಗೆ ಹೊಸ ಹಾಗೂ ಸುಸ್ಥಿರ ತಾಂತ್ರಿಕ ಪರಿಹಾರ ಒದಗಿಸಲು SESIPL ಸಂಸ್ಥೆಗೆ ಇನ್ನಷ್ಟು ಅವಕಾಶ ಸಿಕ್ಕಂತಾಗಿದೆ ಎಂದು ಸಂಸ್ಥೆಯ ಸಿಎಂಡಿ ರಾಜೇಶ್ ಶೆಟ್ಟಿ ಅವರು ಸಂತಸ ಹಂಚಿಕೊಂಡಿದ್ದಾರೆ.
SESIPL ಸಂಸ್ಥೆಯು ಪ್ರಮುಖ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಗುತ್ತಿಗೆದಾರರು ಮತ್ತು ಎಲ್ಲಾ ವಿದ್ಯುತ್ ಕೆಲಸಗಳಲ್ಲಿ ವ್ಯಾಪಕ ಜ್ಞಾನವನ್ನು ಹೊಂದಿರುವ ಸಲಹೆಗಾರರಾಗಿದ್ದಾರೆ. ದೇಶದ ಸುಮಾರು 500 ಕ್ಕೂ ಹೆಚ್ಚಿನ ಕಂಪೆನಿಗಳಿಗೆ ಹಲವಾರು ಎಲೆಕ್ಟ್ರಿಕಲ್ ಇಪಿಸಿ ಯೋಜನೆಯನ್ನು ಈ ಸಂಸ್ಥೆ ಮಾಡಿಕೊಟ್ಟಿದೆ.