LATEST NEWS
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಆಗುವ ತೊಂದರೆಗಳೇನು ಗೊತ್ತಾ..!
Published
2 weeks agoon
By
NEWS DESK2ಅನೇಕ ಜನರು ನೀರಿನ ಮಹತ್ವವನ್ನು ಕಡಿಮೆ ಅಂದಾಜು ಮಾಡುತ್ತಾರೆ. ದೇಹವು 75 ಪ್ರತಿಶತದಷ್ಟು ನೀರು ಹೊಂದಿದೆ. ಇದರಿಂದ ಆರೋಗ್ಯಕ್ಕೆ ಕುಡಿಯುವ ನೀರು ಎಷ್ಟು ಪ್ರಯೋಜನಕಾರಿ ಎಂದು ತಿಳಿಯಬಹುದು.
ಒಂದು ಅಧ್ಯಯನದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ದಿನಕ್ಕೆ ಸುಮಾರು 5 ಲೀಟರ್ ನೀರನ್ನು ಕುಡಿಯಬೇಕು. ಸಂಶೋಧನೆಯ ಪ್ರಕಾರ, ಅನೇಕ ಜನರು ಬೆಳಿಗ್ಗೆ ಎದ್ದ ನಂತರ ನೀರು ಕುಡಿಯಲು ಬಯಸುತ್ತಾರೆ. ಬೆಳಿಗ್ಗೆ ಎದ್ದ ನಂತರ ನೀರು ಕುಡಿಯುವವರು ಈ ಪೋಸ್ಟ್ ಅನ್ನು ವಿವರವಾಗಿ ಓದಬೇಕು.
ಬೆಳಿಗ್ಗೆ ಎದ್ದ ನಂತರ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು
ನೀವು ಬೆಳಿಗ್ಗೆ ಎದ್ದ ನಂತರ ತಣ್ಣೀರು ಕುಡಿದರೆ, ಅದು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ನೀವು ಆರೋಗ್ಯವಾಗಿರುತ್ತೀರಿ.
ನೀವು ರಾತ್ರಿ ಮಲಗಿದಾಗ ದೇಹದಲ್ಲಿ ನೀರಿನ ಕೊರತೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಬೆಳಿಗ್ಗೆ ಎದ್ದ ನಂತರ ನೀರನ್ನು ಕುಡಿಯಬೇಕು. ಮತ್ತು ಇದು ಎಲ್ಲಾ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ಬೆಳಿಗ್ಗೆ ನಿಮ್ಮ ಹೊಟ್ಟೆಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ನೀವು ಎದ್ದ ತಕ್ಷಣ ನೀರನ್ನು ಕುಡಿಯಬೇಕು ಮತ್ತು ನಂತರ ಫ್ರೆಶ್ ಅಪ್ ಮಾಡಲು ಹೋಗಬೇಕು. ಹೀಗೆ ಮಾಡುವುದರಿಂದ ಹೊಟ್ಟೆ ಸ್ವಚ್ಛವಾಗುತ್ತದೆ. ಮತ್ತು ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳು ಸಹ ದೂರವಾಗುತ್ತವೆ.
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯದಿರುವುದರಿಂದ ಬರುವ ರೋಗಗಳು
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯದಿದ್ದರೆ ತಲೆನೋವು, ದೇಹ ನೋವು, ಸಂಧಿವಾತ, ಹೃದಯ ಬಡಿತ, ಬ್ರಾಂಕೈಟಿಸ್, ಅಸ್ತಮಾ, ಟಿಬಿ, ಮೆನಿಂಜೈಟಿಸ್ ಮತ್ತು ಕಿಡ್ನಿ ಸಂಬಂಧಿ ಕಾಯಿಲೆಗಳು ಬರಬಹುದು. ಇವೆಲ್ಲದರ ಹೊರತಾಗಿ, ನೀರು ಕುಡಿಯದಿರುವುದು ವಾಂತಿ, ಗ್ಯಾಸ್ ಸಮಸ್ಯೆ, ಅತಿಸಾರ, ಪೈಲ್ಸ್, ಮಧುಮೇಹ, ಮಲಬದ್ಧತೆ, ಮುಟ್ಟಿನ ಸಮಸ್ಯೆ ಮತ್ತು ಕಿವಿ, ಮೂಗು ಮತ್ತು ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. ನೀರು ನಮ್ಮ ಜೀವನದ ಮುಖ್ಯ ಆಧಾರ ಎಂದು ನಮಗೆಲ್ಲರಿಗೂ ತಿಳಿದಿದೆ. ಉತ್ತಮ ಆರೋಗ್ಯ ಪಡೆಯಲು ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಅವಶ್ಯಕ. ದಿನಕ್ಕೆ ಕನಿಷ್ಠ 8 ರಿಂದ 10 ಗ್ಲಾಸ್ ನೀರು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಅದರ ಮಹತ್ವವೇ ಬೇರೆ.
LATEST NEWS
ಅಮೇರಿಕಾದ ಮಾಜಿ ಅಧ್ಯಕ್ಷರ ನಿ*ಧನಕ್ಕೆ ಭಾರತದ ಗ್ರಾಮದಲ್ಲಿ ರಜೆ..!
Published
5 hours agoon
30/12/2024By
NEWS DESK4ಮಂಗಳೂರು/ಹರಿಯಾಣ : ಡಿಸೆಂಬರ್ 29 ರಂದು ತನ್ನ 100 ನೇ ವಯಸ್ಸಿನಲ್ಲಿ ನಿ*ಧನರಾದ ಯುನೈಟೆಡ್ ಸ್ಟೇಟ್ಸ್‌ನ 39 ನೇ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ಗೌರವಾರ್ಥ ಭಾರತದ ಗ್ರಾಮವೊಂದರಲ್ಲಿ ರಜೆ ಘೋಷಣೆ ಮಾಡಲಾಗಿದೆ. ವಿಶೇಷ ಅಂದರೆ ಈ ಗ್ರಾಮಕ್ಕೆ ಜಿಮ್ಮಿ ಕಾರ್ಟರ್ ಅವರ ಹೆಸರಿಡಲಾಗಿದ್ದು, ಕಾರ್ಟರ್ ಪುರಿ ಅಂತ ಗುರುತಿಸಿಕೊಂಡಿದೆ. ಭಾರತಕ್ಕೆ ಭೇಟಿ ನೀಡಿದ ಅಮೆರಿಕಾದ ಮೂರನೇ ಅಧ್ಯಕ್ಷ ಹಾಗೂ ತುರ್ತು ಪರಿಸ್ಥಿಯ ಬಳಿಕ ಭೇಟಿ ನೀಡಿದ ಮೊದಲ ಅಧ್ಯಕ್ಷ ಜಿಮ್ಮಿ ಕಾರ್ಟರ್.
1978 ರ ಜನವರಿ 3 ರಂದು ಜಿಮ್ಮಿ ಕಾರ್ಟರ್ ಅವರು ಪತ್ನಿ ರೋಸಾಲಿನ್ ಅವರ ಜೊತೆ ಅಧಿಕೃತ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಹರಿಯಾಣದ ಗುರ್ಗಾಂವ್‌ನ ಸಣ್ಣ ಹಳ್ಳಿಯಾಗಿದ್ದ ಚುಮಾ ಖೇರಗಾಂವ್ ಗೆ ಭೇಟಿ ನೀಡಿದ್ದರು. 1960ರ ಸುಮಾರಿಗೆ ಜಿಮ್ಮಿ ಕಾರ್ಟರ್ ಅವರ ತಾಯಿ ಲಿಲಿಯನ್ ಅವರು ಬಾಂಬೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿದ್ದು, ಈ ಗ್ರಾಮದ ಜೊತೆ ನಂಟು ಹೊಂದಿದ್ದರು ಎನ್ನಲಾಗಿದೆ. ಹೀಗಾಗಿ ಈ ಗ್ರಾಮಕ್ಕೆ ಅಮೇರಿಕಾದ ಅಧ್ಯಕ್ಷ ಜಿಮ್ಮಿ ಕಾರ್ಟರ್ ಭೇಟಿ ನೀಡಿದ್ದರು.
ಮೂಲಭೂತ ಸೌಲಭ್ಯ ವಂಚಿತವಾಗಿದ್ದ ಈ ಹಳ್ಳಿಗೆ ಅಮೇರಿಕಾ ಅಧ್ಯಕ್ಷರು ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಅಂದಿನ ಮೊರಾರ್ಜಿ ದೇಸಾಯಿ ಸರ್ಕಾರ ಗ್ರಾಮದ ರಸ್ತೆಗಳನ್ನು ಉನ್ನತೀಕರಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾಡಿದ್ದರು. ಪ್ರಧಾನಿ ಮೊರಾರ್ಜಿ ದೇಸಾಯಿ ಅವರೇ ಈ ಗ್ರಾಮಕ್ಕೆ ತೆರಳಿ ಅಮೆರಿಕದ ಅಧ್ಯಕ್ಷರನ್ನು ಸ್ವಾಗತಿಸಿದ್ದರು. ಹರಿಯಾನಿ ಪೇಟ ಧರಿಸಿ ಅಮೇರಿಕಾ ಅಧ್ಯಕ್ಷರು ಕಾಣಿಸಿಕೊಂಡರೆ, ಅವರ ಪತ್ನಿ ಸ್ಥಳೀಯ ಉಡುಗೆ ಧರಿಸಿ ಗ್ರಾಮದಲ್ಲಿ ಅಡ್ಡಾಡಿದ್ದರು.
ಅಭಿವೃದ್ದಿ ಕಾಣದೇ ಇದ್ದ ಗ್ರಾಮಕ್ಕೆ ಅಮೇರಿಕಾ ಅಧ್ಯಕ್ಷ ಜಿಮ್ಮಿ ಕಾರ್ಟರ್ ಭೇಟಿಯಿಂದ ಅದೃಷ್ಟ ಖುಲಾಯಿಸಿತ್ತು. ಹೀಗಾಗಿ ಕಾರ್ಟರ್ ಅವರ ಗೌರವಾರ್ಥ ಗ್ರಾಮದ ಹೆಸರನ್ನೇ ‘ಕಾರ್ಟರ್ ಪುರಿ’ ಎಂದು ಮರು ನಾಮಕರಣ ಮಾಡಲಾಗಿತ್ತು.
ಇದನ್ನೂ ಓದಿ : ಕೇರಳ ಮೂಲದ ವಿದ್ಯಾರ್ಥಿನಿಯ ಶ*ವ ಸ್ಕಾಟ್ಲೆಂಡ್ ನದಿಯಲ್ಲಿ ಪತ್ತೆ
ಜಿಮ್ಮಿ ಕಾರ್ಟರ್ ಅವರು ಗ್ರಾಮಕ್ಕೆ ಭೇಟಿ ನೀಡಿದ ಜನವರಿ 3 ರಂದು ಇಂದಿಗೂ ಈ ಗ್ರಾಮದಲ್ಲಿ ರಜಾ ದಿನವಾಗಿ ಸ್ವಾತಂತ್ರ್ಯದಂತೆ ಸಂಭ್ರಮದ ದಿನವಾಗಿ ಆಚರಿಸಲಾಗುತ್ತದೆ. 2002 ರಲ್ಲಿ ಕಾರ್ಟರ್ ಅವರಿಗೆ ನೋಬೆಲ್ ಪ್ರಶಸ್ತಿ ಸಿಕ್ಕಾಗಲೂ ಇಲ್ಲಿ ಸಂಭ್ರಮಾಚರಣೆ ಮಾಡಲಾಗಿತ್ತು. ಇದೀಗ ತನ್ನ 100ನೇ ವಯಸ್ಸಿನಲ್ಲಿ ಅಗಲಿದ ನಾಯಕನಿಗೆ ಗ್ರಾಮದಲ್ಲಿ ಶೃದ್ಧಾಂಜಲಿ ಸಲ್ಲಿಸಿ ರಜೆ ಘೋಷಣೆ ಮಾಡಲಾಗಿದೆ.
International news
ಕೇರಳ ಮೂಲದ ವಿದ್ಯಾರ್ಥಿನಿಯ ಶ*ವ ಸ್ಕಾಟ್ಲೆಂಡ್ ನದಿಯಲ್ಲಿ ಪತ್ತೆ
Published
5 hours agoon
30/12/2024By
NEWS DESK3ಮಂಗಳೂರು/ಲಂಡನ್: ಡಿಸೆಂಬರ್ 6 ರಿಂದ ನಾಪತ್ತೆಯಾಗಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿನಿಯ ಶ*ವ ಸ್ಕಾಟ್ಲೆಂಡಿನ ನದಿಯೊಂದರಲ್ಲಿ ಪತ್ತೆಯಾಗಿದೆ.
ಕೇರಳದ ಕೋಲೆಂಚೇರಿಯ ಮೂಲದ ಸಂತ್ರಾ ಸಾಜು ಅವರು ಸ್ಕಾಟಿಷ್ ನ ಎಡಿನ್ ಬರ್ಗ್ ನಲ್ಲಿರುವ ಹೆರಿಯಟ್-ವ್ಯಾಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಡಿಸೆಂಬರ್ 6ರ ಸಂಜೆ ಲಿವಿಂಗ್ ಸ್ಟನ್ ನ ಆಲ್ಮಂಡ್ ವೇಲ್ ನಲ್ಲಿರುವ ಅಸ್ಡಾ ಸೂಪರ್ ಮಾರ್ಕೆಟ್ ನಲ್ಲಿ ಕೊನೆಯದಾಗಿ ಸಂತ್ರಾ ಕಾಣಿಸಿಕೊಂಡಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಹಗ್ಗ ತುಂಡಾಗಿ ಬಿದ್ದು ಸಾವು
‘ಡಿಸೆಂಬರ್ 27ರ ಬೆಳಿಗ್ಗೆ 11:55ರ ವೇಳೆ ಎಡಿನ್ ಬರ್ಗ್ ನ ನ್ಯೂಬ್ರಿಡ್ಜ್ ಬಳಿ ನದಿಯಲ್ಲಿ ಯುವತಿಯೊಬ್ಬಳ ಶ*ವ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಸಂತ್ರಾ ಅವರ ಮೃ*ತದೇಹವೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮೃ*ತದೇಹದ ಗುರುತು ಖಚಿತಪಡಿಸಿಕೊಳ್ಳಲು ಸಂತ್ರಾ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ’ ಎಂದು ಸ್ಕಾಟ್ಲೆಂಡ್ ಪೊಲೀಸರು ತಿಳಿಸಿದ್ದಾರೆ.
ಸಂತ್ರಾ ಅವರ ಸಾವಿನ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
LATEST NEWS
ಸಿದ್ಧರಾಮಯ್ಯ ಪರ ಪ್ರತಾಪ್ ಸಿಂಹ ಬ್ಯಾಟಿಂಗ್; ಕಾಂಗ್ರೆಸ್ ಸೇರ್ತಾರಾ ಮಾಜಿ ಸಂಸದ?
Published
6 hours agoon
30/12/2024By
NEWS DESK4ಮಂಗಳೂರು/ಮೈಸೂರು : ಮೈಸೂರಿನ ರಸ್ತೆಯೊಂದಕ್ಕೆ ಸಿಎಂ ಸಿದ್ಧರಾಮಯ್ಯ ಅವರ ಹೆಸರಿಡುವ ವಿಚಾರಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಬೆಂಬಲ ಸೂಚಿಸಿದ್ದರು. ಇದರ ಬೆನ್ನಲ್ಲೇ ಪ್ರತಾಪ್ ಸಿಂಹ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಗಾಸಿಪ್ ಹರಿದಾಡಲಾರಂಭಿಸಿದೆ.
ಮೈಸೂರು ಪಾಲಿಕೆಯು ಕೆಆರ್‌ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರಿಡುವ ಬಗ್ಗೆ ಬಿಜೆಪಿಯಲ್ಲಿ ವಿರೋಧ ವ್ಯಕ್ತವಾಗಿತ್ತು. ಹೆಸರಿಟ್ಟರೇನು ತಪ್ಪು? ಎಂದು ಮಾಜಿ ಸಂಸದ ಸಿಎಂ ಪರ ಮಾತನಾಡಿದ್ದರು. ಈ ವಿಚಾರ ಸ್ವತಃ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಹುಟ್ಟಿಸಿತ್ತು. ಇದೀಗ ಪ್ರತಾಪ್ ಸಿಂಹ ಕಾಂಗ್ರೆಸ್ ಸೇರ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.
ಏನಂದ್ರು ಪ್ರತಾಪ್ ಸಿಂಹ?
ರಸ್ತೆಗೆ ಸಿದ್ಧರಾಮಯ್ಯರ ಹೆಸರಿಡಿ ಎಂದ ತಕ್ಷಣ ನಾನು ಸಿದ್ಧರಾಮಯ್ಯ ಪರ ಅಂತಲ್ಲ. ಕೆ.ಆರ್.ಎಸ್ ರಸ್ತೆಗೆ ಹೆಸರಿಲ್ಲ ಎಂದು ಕಾರ್ಪೋರೇಷನ್‌ನವರು ಹೇಳಿದ್ದರು. ಹಾಗಾಗಿ ಸಿದ್ಧರಾಮಯ್ಯ ಹೆಸರಿಡಲಿ ಬಿಡಿ ಎಂದಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಮೈಸೂರಿಗೆ ಹಲವು ಕೊಡುಗೆಗಳನ್ನು ಸಿದ್ಧರಾಮಯ್ಯ ನೀಡಿದ್ದಾರೆ. ಹಾಗಾಗಿ ಅವರ ಹೆಸರಿಡುವುದರಲ್ಲಿ ತಪ್ಪಿಲ್ಲ ಎಂದಿದೆ. ಹಾಗೆಂದ ತಕ್ಷಣ ನಾನು ಸಿದ್ಧರಾಮಯ್ಯ ಪರ ಅಂತಲ್ಲ ಎಂದಿದ್ದಾರೆ.
ಕಳೆದ 11 ವರ್ಷದಿಂದ ಸಿದ್ಧರಾಮಯ್ಯರನ್ನು ವಿರೋಧಿಸುತ್ತಿರುವವನು ಪ್ರತಾಪ್ ಸಿಂಹ ಒಬ್ಬನೇ. ಅವರ ಸಿದ್ಧಾಂತಗಳ ವಿರೋಧಿ ನಾನು. ಮೈಸೂರು ಏರ್ಪೋರ್ಟ್‌ಗೆ ಟಿಪ್ಪು ಹೆಸರನ್ನು ಇಡಲು ಸಿದ್ಧರಾಮಯ್ಯ ಹೊರಟಿದ್ದರು. ಅದನ್ನು ಬೊಮ್ಮಾಯಿಗೆ ಹೇಳಿ ತಡೆದೆ. ಇದಕ್ಕೆ ಮೈಸೂರು ಮಹಾರಾಣಿ ಕೂಡ ನನ್ನನ್ನು ಹೊಗಳಿದ್ರು. ಮೈಸೂರು ಬೆಂಗಳೂರು ನಡುವೆ ಟಿಪ್ಪು ಎಕ್ಸ್‌ಪ್ರೆಸ್ ಅಂತ ಇತ್ತು. ಅದನ್ನು ಒಡೆಯರ್ ಎಕ್ಸ್‌ಪ್ರೆಸ್ ಅಂತ ಬದಲಾಯಿಸಿದೆ. ಅಂದು ಕೂಡ ಪ್ರಮೋದಾದೇವಿ ನನ್ನ ಕಾರ್ಯಕ್ಕೆ ಶ್ಲಾಘಿಸಿದ್ರು .
ಇದನ್ನೂ ಓದಿ : ಅಯ್ಯಪ್ಪ ಮಾಲಾಧಾರಿಗಳು ಕಪ್ಪು ಬಟ್ಟೆ ಯಾಕೆ ಧರಿಸುತ್ತಾರೆ ಗೊತ್ತಾ?
ಸಿದ್ಧರಾಮಯ್ಯ ಸರ್ಕಾರ ನನ್ನ ಮೇಲೆ ಕಳೆದ 3 ತಿಂಗಳಲ್ಲಿ 5 ಎಫ್‌ಐಆರ್ ಹಾಕಿದೆ. ನನ್ನ ಬದ್ಧತೆ ಪ್ರಶ್ನಿಸುವವರು ನನ್ನ ಟ್ರ್ಯಾಕ್ ರೆಕಾರ್ಡ್ ಒಮ್ಮೆ ನೋಡಿ ಎಂದು ವದಂತಿ ಹಬ್ಬಿಸಿದವರಿಗೆ ಟಾಂಗ್ ನೀಡಿದ್ದಾರೆ. ರಸ್ತೆಗೆ ಹೆಸರಿಡುವ ವಿಚಾರವನ್ನು ದೊಡ್ಡದು ಮಾಡೋದು ಬೇಡ. ವಿವಾದ ಮಾಡೋದು ಬೇಡ. ಇದನ್ನು ಇಲ್ಲಿಗೆ ನಿಲ್ಲಿಸೋಣ ಎಂದಿದ್ದಾರೆ.
LATEST NEWS
ಕರಾವಳಿ ಉತ್ಸವ ಪ್ರಯುಕ್ತ ಜ.4, 5 ರಂದು ಕದ್ರಿ ಪಾರ್ಕ್ ನಲ್ಲಿ ಶ್ವಾನ ಪ್ರದರ್ಶನ, ಕಾರ್- ಬೈಕ್ ಎಕ್ಸ್ಪೊ
ಅಯ್ಯಪ್ಪ ಮಾಲಾಧಾರಿಗಳು ಕಪ್ಪು ಬಟ್ಟೆ ಯಾಕೆ ಧರಿಸುತ್ತಾರೆ ಗೊತ್ತಾ?
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಹಗ್ಗ ತುಂಡಾಗಿ ಬಿದ್ದು ಸಾವು
ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಸಮುದ್ರಪಾಲು, ಓರ್ವನ ರಕ್ಷಣೆ
ದಕ್ಷಿಣ ಕೊರಿಯಾದ ವಿಮಾನ ಪತನಕ್ಕೆ ಕಾರಣ ಬಹಿರಂಗ; ಬದುಕುಳಿದ ಇಬ್ಬರು ಹೇಗಿದ್ದಾರೆ ?
ಮದುವೆಗೆ ಹೋಗುವಾಗ ನದಿಗೆ ಟ್ರಕ್ ಬಿದ್ದು ಘೋರ ದುರಂತ : ಮಕ್ಕಳು ಸೇರಿ 60 ಮಂದಿ ಸಾವು
Trending
- DAKSHINA KANNADA3 days ago
ದಿ।ಮನಮೋಹನ್ ಸಿಂಗ್ ಸಹಿ ಇರುವ ರೂ 1ರ ನೋಟು ರೂ.100 ಕ್ಕೆ ಮಾರಾಟ…!
- FILM6 days ago
ಆ ಒಂದು ದೃಶ್ಯದಿಂದ ಪುಷ್ಪ 2 ಚಿತ್ರಕ್ಕೆ ಮತ್ತೆ ಸಂಕಷ್ಟ!
- FILM5 days ago
ಶಿವರಾಜ್ಕುಮಾರ್ಗೆ ಕ್ಯಾನ್ಸರ್ ತಗುಲಿದ್ದು ದೇಹದ ಈ ಭಾಗಕ್ಕೆ
- bangalore6 days ago
ಡಿಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಚಿನ್ನ ಖರೀದಿಸಿ ವಂಚನೆ; ನಟ ಧಮೇಂದ್ರ ವಿರುದ್ದ ಎಫ್ ಐ ಆರ್ ದಾಖಲು !