ಮಂಗಳೂರು: ಕೆಲವರೆಲ್ಲಾ ಲಕ್ಷ-ಲಕ್ಷ ಕೊಟ್ಟು ಮೊಬೈಲ್ ತೆಗೆದುಕೊಳ್ಳುತ್ತಾರೆ. ಆದ್ರೆ, ಅದಕ್ಕಿಂತ ಕಡಿಮೆಯಲ್ಲಿ ಸಿಗುವ ಚಾರ್ಜರ್ ತೆಗೆದುಕೊಳ್ಳಲು ಜಿಪುಣತನ ತೋರಿಸುತ್ತಾರೆ. ಹಳೇ ಚಾರ್ಜರ್ ಗಳಿಗೆ ಗಮ್ ಟೇಪ್, ಪ್ಲಾಸ್ಟರ್ ಅಥವಾ ರಬ್ಬರ್ ಹಾಕಿ ಮೊಬೈಲ್ ಚಾರ್ಜ್ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಅಧ್ಯಯನ ಒಂದು ದೃಢ ಪಡಿಸಿದೆ.
ಇದು ತುಂಬಾ ಮನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯವಾಗಿದೆ. ಯುನೈಟೆಡ್ ಕಿಂಗ್ ಡಮ್ ನ ಎಲೆಕ್ಟ್ರಿಕಲ್ ಸೇಫ್ಟಿ ಇನ್ ಸ್ಟಿಟ್ಯೂಟ್ ಈ ಬಗ್ಗೆ ಅಧ್ಯಯನ ನಡೆಸಿದೆ. ಕಳಪೆ ಗುಣಮಟ್ಟದ ಚಾರ್ಜರ್ ಹಾಗೂ ಚೈನೀಸ್ ಚಾರ್ಜರ್ ಗಳಿಂದಲೂ ಅಪಘಾತಗಳು ಸಂಭವಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ, ಅಪಘಾತಗಳಿಗೆ ಗುರಿಯಾಗುವ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳ ಕುರಿತು ವಿವಿಧ ದೇಶಗಳಲ್ಲಿ ಅಧ್ಯಯನಗಳನ್ನು ನಡೆಸಿದೆ.
ನೀವು ಎಷ್ಟೇ ದುಬಾರಿ ಮೊಬೈಲ್ ತೆಗೆದುಕೊಂಡರು ಕೂಡ, ಕಡಿಮೆ ಬೆಲೆಯ ಚಾರ್ಜರ್ ನಿಮ್ಮ ಮೊಬೈಲ್ ಹಾಳು ಮಾಡುತ್ತವೆ. ಇನ್ನೂ, ಚಾರ್ಜರ್ ಖರೀದಿಸುವಾಗ ತೂಕವಿಲ್ಲದೆ ಹಗುರವಾಗಿ ಕಂಡರೆ ಅದು ಒಳ್ಳೆಯದಲ್ಲ. ಬದಲಾಗಿ ಅದು ಉತ್ತಮ ಗುಣಮಟ್ಟದಿಂದ ಕೂಡಿರುವುದಿಲ್ಲ. ಉತ್ತಮವಾದ ಚರ್ಜಾರ್ ಗಳು ಸ್ವಲ್ಪ ಭಾರವಾಗಿರುತ್ತದೆ.
ಇದನ್ನೂ ಓದಿ: ಮದ್ಯಪ್ರಿಯರಿಗೆ ಅಬಕಾರಿ ಇಲಾಖೆಯಿಂದ ಸಿಹಿಸುದ್ಧಿ !!
ಇತ್ತೀಚೆಗೆ, ಪ್ರಪಂಚದಾದ್ಯಂತ ಸೆಲ್ ಫೋನ್ ಗಳು ಸ್ಪೋಟಗೊಳ್ಳುವುದನ್ನು ಕೇಳಿರಬಹುದು. ಇದಕ್ಕೆ ಮುಖ್ಯ ಕಾರಣ ಚಾರ್ಜರ್ ಗಳು ಎಂದು ಹೇಳಿದರೆ ನೀವು ನಂಬಲೇ ಬೇಕು. ಹಳೆಯ ಚಾರ್ಜರ್ ಗಳನ್ನು ಜನರು ಬಳಸಲು ಇನ್ನೊಂದು ಕಾರಣ, ಮೊಬೈಲ್ ಕಂಪನಿಗಳು ಫೋನ್ ಜೊತೆ ಚಾರ್ಜರ್ ಕೊಡುವುದನ್ನು ನಿಲ್ಲಿಸಿದೆ. ಇದರಿಂದ ಹಳೆಯ ಚಾರ್ಜರ್ ಗಳಿಗೆ ಗಮ್ ಟೇಪ್, ಪ್ಲಾಸ್ಟರ್ ಸುತ್ತಿ ಅಥವಾ ಲಬ್ಬರ್ ಸುತ್ತಿ ಮತ್ತೆ ಮತ್ತೆ ಉಪಯೋಗಿಸುತ್ತಾರೆ. ಇಂತಹ ಚಾರ್ಜರ್ ಗಳನ್ನು ಬಳಸುವುದರಿಂದ ವಿದ್ಯುತ್ ಅಪಘಾತ ಸಂಭವಿಸಬಹುದು ಎಂದು ಅಧ್ಯಯನ ಹೇಳಿದೆ.
ಗಮ್ ಟೇಪ್ ಅಥವಾ ಪ್ಲಾಸ್ಟರ್ ಸುತ್ತಿದ ಚಾರ್ಜಿಂಗ್ ಕೇಬಲ್ ವೈರ್ ಗಳಿಂದ ಶಾರ್ಟ್ ಸರ್ಕ್ಯೂಟ್ ಉಂಟಾದ ಘಟನೆಗಳು ನಡೆದಿವೆ. ಒಂದು ವೇಳೆ ಚಾರ್ಜಿಂಗ್ ಕೇಬಲ್ ಎಲ್ಲಿಯಾದರೂ ಕತ್ತರಿಸಲ್ಪಟ್ಟರೆ ಮತ್ತು ಅದರ ಒಳ ಭಾಗವು ತುಂಬಾ ಕಾಣುತ್ತಿದ್ದರೆ, ಅದನ್ನು ಬಳಸುವುದನ್ನು ನಿಲ್ಲಿಸಿ.
ಈ ಕತ್ತರಿಸಲ್ಪಟ್ಟ ಚಾರ್ಜಿಂಗ್ ಕೇಬಲ್ ವೈರ್ ಗಳಿಂದ ಶಾರ್ಟ್ ಸರ್ಕ್ಯೂಟ್ ಗಳಂತಹ ಘಟನೆಗಳು ಸಂಭವಿಸಿದೆ. ಮೊಬೈಲ್ ಫೋನ್ ಗಳು ಮಾತ್ರವಲ್ಲದೆ, ಟ್ಯಾಬ್, ಲ್ಯಾಪ್ ಟಾಪ್, ಟ್ರಿಮ್ಮರ್ ಹಾಗೂ ಇನ್ನಿತರೆ ಯಂತ್ರೋಪಕರಣಗಳಲ್ಲಿಯೂ ಹಾನಿಗೊಳಗಾದ ಕೇಬಲ್ ಗಳಿರುವ ಹಳೆಯ ಚಾರ್ಜರ್ ಗಳನ್ನು ಉಪಯೋಗಿಸಬಾರದು.
ಆದಷ್ಟು ಉತ್ತಮ ಚಾರ್ಜರ್ ಕೇಬಲ್ ಗಳನ್ನು ಬಳಸುವುದರಿಂದ ಮೊಬೈಲ್ ಸುರಕ್ಷಿತವಾಗಿರುತ್ತದೆ ಮತ್ತು ಜಾಸ್ತಿ ಬಾಳಿಕೆ ಬರುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನೀವು ಸುರಕ್ಷಿತವಾಗಿರುತ್ತಿರ.
ಉಡುಪಿ : ಉಡುಪಿ ಜಿಲ್ಲೆಯ ಅರಣ್ಯದ ಅಂಚಿನ ಪ್ರದೇಶಗಳಲ್ಲಿ ಚಿರತೆಯ ಕಾಟ ಜೋರಾಗಿದೆ. ಆಹಾರ ಅರಸಿ ಬರುವ ಚಿರತೆಗಳು ಗ್ರಾಮಸ್ಥರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿವೆ.
ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಎರ್ಮಂಜಪಲ್ಲ ಬಳಿಯ ಬಾಗಿ ಎನ್ನುವವರ ಮನೆಯ ಬಾವಿಗೆ ರಾತ್ರಿ ಚಿರತೆಯೊಂದು ಬಿದ್ದಿತ್ತು. ಬಾವಿಯ ಪೊಟರೆಯಲ್ಲಿ ಅವಿತು ಕುಳಿತುಕೊಂಡಿದ್ದ ಚಿರತೆಯನ್ನು ಮೇಲಕ್ಕೆ ಬರುವಂತೆ ಮಾಡಲು, ಅರಣ್ಯ ಇಲಾಖೆ ಹರ ಸಾಹಸ ಪಡುವಂತಾಯ್ತು.
ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಬೋನಿನ ಮೂಲಕ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ಸು ಕಂಡಿದ್ದಾರೆ. ಅರಣ್ಯ ಇಲಾಖೆಯ ಕಾರ್ಯ ದಕ್ಷತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಮಂಗಳೂರು/ಮಂಡ್ಯ: ರಾಜ್ಯದಲ್ಲಿ ಕಳ್ಳತನ ಎನ್ನುವುದು ಸಾಮಾನ್ಯವಾಗಿದೆ. ಕಳ್ಳರು ಕದ್ದ ಚಿನ್ನಾಭಾರಣಗಳನ್ನು ಎಲ್ಲಿಯಾದರೂ ಮಾರಿ ಬಿಡುತ್ತಾರೆ. ಆದರೆ ಕಳ್ಳರಲ್ಲೂ ಪ್ರಾಮಾಣಿಕತೆ ಇದೆ ಎಂದು ಮಂಡ್ಯದಲ್ಲಿ ಸಾಕ್ಷಿಯಾಗಿದೆ.
ಈ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದೇಗೌಡ ಎಂಬುವವರ ಕುಟುಂಬ ಮನೆದೇವರ ಪೂಜೆಗೆಂದು ಹೋಗಿದ್ದರು. ಈ ವೇಳೆ ಮನೆಯ ಹೆಂಚುಗಳನ್ನು ತೆಗೆದು ಒಳನುಗ್ಗಿದ್ದ ಕಳ್ಳರು ಬೀರುವನ್ನು ಒಡೆದು ಕಳ್ಳತನ ಮಾಡಿದ್ದರು. ಈ ವೇಳೆ 50 ಗ್ರಾಂ ಚಿನ್ನದ ಸರ, 10 ಗ್ರಾಂ ಚೈನ್, 15 ಗ್ರಾಂನ ಮೂರು ಜೊತೆ ಓಲೆಗಳು ಸೇರಿ ಒಟ್ಟು 75 ಗ್ರಾಂನಷ್ಟು ಚಿನ್ನಾಭರಣ ಕದ್ದಿದ್ದರು.
ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ಕೂಡ ನೀಡಿದ್ದರು. ಕಳ್ಳರಿಗೆ ಪೊಲೀಸರ ಭಯವೋ ಅಥವಾ ಮನೆದೇವರ ಆಶೀರ್ವಾದವೋ ಗೊತ್ತಿಲ್ಲ, ಪೊಲೀಸರಿಗೆ ದೂರು ನೀಡಿದ ಎರಡು ದಿನಗಳ ನಂತರ ಕಳ್ಳರು ಮನೆಯ ಮುಂಭಾಗದ ಜಗಲಿಯ ಮೇಲೆ ಚಿನ್ನಾಭರಣಗಳನ್ನು ಇಟ್ಟು ಹೋಗಿದ್ದಾರೆ.
ಚಿನ್ನಾಭರಣ ವಾಪಸ್ಸು ಸಿಕ್ಕ ಖುಷಿಯಲ್ಲಿ ಸಿದ್ದೇಗೌಡರ ಕುಟುಂಬ ನಿರಾಳವಾಗಿದೆ.
ಮಂಗಳೂರು/ಕಾನ್ಪುರ : ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ರೈಲು ಹತ್ತುವ ವೇಳೆ ಅಥವಾ ಇಳಿಯುವ ವೇಳೆ ಆಯತಪ್ಪಿ ಬಿದ್ದ ಘಟನೆಗಳು ಸಂಭವಿಸಿವೆ. ಕೆಲವೊಮ್ಮೆ ಅದೃಷ್ಟವಶಾತ್, ಪಾರಾಗಿರುವುದಿದೆ. ರೈಲ್ವೇ ಸಿಬ್ಬಂದಿ ರಕ್ಷಿಸಿರುವ ಘಟನೆಗಳೂ ಇವೆ. ಇಂತಹ ಹಲವು ವೀಡಿಯೋಗಳು ವೈರಲ್ ಆಗಿವೆ. ಇದೀಗ ಮತ್ತೊಂದು ಅಂತಹುದೇ ವೀಡಿಯೋ ವೈರಲ್ ಆಗಿದೆ.
ರೈಲು ಬಂದು ನಿಂತಿತ್ತು. ಮಹಿಳೆ ರೈಲು ಹತ್ತಿದ್ದರು. ಆದರೆ, ಮಕ್ಕಳು ಪ್ಲಾಟ್ ಫಾರ್ಮ್ ನಲ್ಲಿಯೇ ಉಳಿದಿದ್ದರು. ಮಕ್ಕಳು ಅಲ್ಲೇ ಇರುವುದನ್ನು ನೋಡಿ ಮಹಿಳೆ ಮಕ್ಕಳನ್ನು ಕರೆದಿದ್ದಾರೆ. ಅವರು ಬರದೇ ಇದ್ದಾಗ ರೈಲಿನಿಂದ ಕೆಳಗೆ ಹಾರಲು ಯತ್ನಿಸಿದ್ದಾರೆ. ಈ ವೇಳೆ ಆಯತಪ್ಪಿ ರೈಲು ಹಾಗೂ ಪ್ಲಾರ್ಟ್ ಫಾರ್ಮ್ ನಡುವೆ ಸಿಲುಕಿಕೊಂಡಿದ್ದಾರೆ. ತಕ್ಷಣ ರೈಲ್ಬೇ ಪೊಲೀಸರು ಆಕೆಯನ್ನು ರಕ್ಷಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.
ಸದ್ಯ ಘಟನೆಯ ವೀಡಿಯೋ ವೈರಲ್ ಆಗಿದ್ದು, ಇದು ಕಾನ್ಪುರ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಮಹಿಳೆಯನ್ನು ಜಿಆರ್‌ಪಿ ಸಬ್‌ಇನ್ಸ್‌ಪೆಕ್ಟರ್ ಶಿವ ಸಾಗರ್ ಶುಕ್ಲಾ ಮತ್ತು ಕಾನ್‌ಸ್ಟೇಬಲ್ ಅನೂಪ್ ಕುಮಾರ್ ಪ್ರಜಾಪತಿ ರಕ್ಷಿಸಿದ್ದಾರೆ.
11 ಸೆಕೆಂಡುಗಳಈ ವೀಡಿಯೋದಲ್ಲಿ ಇಬ್ಬರು ರೈಲ್ವೆ ಸಿಬ್ಬಂದಿ ರೈಲಿನಿಂದ ಜಿಗಿದ ಮಹಿಳೆಯನ್ನು ರಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ. ಆಕೆ ಬಿದ್ದ ಕೆಲವೇ ಕ್ಷಣಗಳಲ್ಲಿ ಜಿಆರ್‌ಪಿ ಸಿಬ್ಬಂದಿ ಆಕೆಯನ್ನು ಹಿಡಿದು ರಕ್ಷಿಸಿದ್ದು, ವ್ಯಾಪಕ ಮೆಚ್ಚುಗೆ ಗಳಿಸಿದೆ.