ಕತಾರ್: ನಾಳೆ ಫುಟ್ಬಾಲ್ ವಿಶ್ವಕಪ್ ಫೈನಲ್ ಫೈಟ್ ನಡೆಯಲಿದೆ. ಯಾವ ದೇಶ ಚಾಂಪಿಯನ್ ಆಗಲಿದೆ ಎಂಬ ಕುತೂಹಲದ ನಡುವೆ ಪ್ರಸಿದ್ಧ ಬ್ರೆಜಿಲಿಯನ್ ಜ್ಯೋತಿಷಿ ಅಥೋಸ್ ಸಲೋಮಿ ಚಾಂಪಿಯನ್ ತಂಡದ ಹೆಸರನ್ನು ಹೇಳಿದ್ದಾರೆ.
ವಿಶ್ವಕಪ್ ಬಗ್ಗೆ ಅವರ ಎಲ್ಲಾ ಭವಿಷ್ಯವಾಣಿಗಳು ನಿಜವಾಗಿವೆ. ರಾಣಿ ಎಲಿಜಬೆತ್ II ರ ಸಾವಿನಿಂದ ಹಿಡಿದು ಪ್ರಪಂಚದಲ್ಲಿ ಕೊರೋನಾ ಸಾಂಕ್ರಾಮಿಕ ರೋಗವು ಪ್ರಾರಂಭವಾಗುವವರೆಗೆ, ಬ್ರೆಜಿಲಿಯನ್ ವಿಶ್ವ ಪ್ರಸಿದ್ಧ ಭವಿಷ್ಯ ಹೇಳುವವರು ಮತ್ತು ಜ್ಯೋತಿಷಿ ಅಥೋಸ್ ಸಲೋಮಿ ಎಲ್ಲವನ್ನೂ ನಿಖರವಾಗಿ ಭವಿಷ್ಯ ನುಡಿದಿದ್ದಾರೆ.
ವಿಶ್ವಕಪ್ ಆರಂಭಕ್ಕೂ ಮುನ್ನ ಅಥೋಸ್ ಸಲೋಮಿ ಅವರು ಅರ್ಜೆಂಟೀನಾದ ವಿಶ್ವಕಪ್ ಅಭಿಯಾನ ಉತ್ತಮವಾಗಿ ಆರಂಭವಾಗದಿದ್ದರೂ ಮೆಸ್ಸಿ ತಂಡವೇ ಫೈನಲ್ ಆಡಲಿದೆ ಎಂದು ಹೇಳಿದ್ದರು.
ಜೊತೆಗೆ ಅವರು ಫ್ರಾನ್ಸ್ vs ಅರ್ಜೆಂಟೀನಾ ಫೈನಲ್ ಎಂದೂ ಸಹ ಮೊದಲೇ ಹೇಳಿದ್ದರು. ಬ್ರೆಜಿಲ್ ತಂಡವು ಗುಂಪು ಹಂತದಲ್ಲಿ ಉತ್ತಮವಾಗಿ ಆಡಿದರೂ, ನಾಕೌಟ್ ಹಂತದಲ್ಲಿ ಸೆಮಿಫೈನಲ್ ತಲುಪಲು ಸಾಧ್ಯವಿಲ್ಲ ಎಂದು ಸಲೋಮಿ ಹೇಳಿದ್ದರು. ಜತೆಗೆ ಬೆಲ್ಜಿಯಂ, ಕ್ರೊವೇಷಿಯಾ, ಜರ್ಮನಿ ಫಲಿತಾಂಶ ಚೆನ್ನಾಗಿರುವುದಿಲ್ಲ ಅಂತಾ ಸಲೋಮಿ ಹೇಳಿದ್ದರು.
ಆದರೆ, ವಿಶ್ವಕಪ್‌ನಲ್ಲಿ ಫ್ರಾನ್ಸ್ ಮತ್ತು ಅರ್ಜೆಂಟೀನಾ ತಂಡಗಳು ಫೈನಲ್‌ಗೆ ಬರಲಿವೆ ಎಂದು ಮೊದಲೇ ಘೋಷಿಸಿದ್ದರೂ ಅಥೋಸ್ ಸಲೋಮಿ ಚಾಂಪಿಯನ್ ಯಾರು ಎಂದು ಘೋಷಿಸಿರಲಿಲ್ಲ. ಈಗ ಅವರು 2022 ರ ಕತಾರ್ ವಿಶ್ವಕಪ್ ಟ್ರೋಫಿಯನ್ನು ಯಾವ ದೇಶ ಗೆಲ್ಲಲಿದೆ ಎಂದು ಹೇಳಿದ್ದಾರೆ.
ಮೆಸ್ಸಿ ಕೊನೆಯ ವಿಶ್ವಕಪ್‌ನಲ್ಲಿ ಕಣ್ಣೀರಿನೊಂದಿಗೆ ನಿರ್ಗಮಿಸಲಿದ್ದಾರೆ. ತಾನು ಅರ್ಜೆಂಟೀನಾ ಬೆಂಬಲಿಗನಾಗಿದ್ದರೂ, ಫೈನಲ್‌ನಲ್ಲಿ ಫ್ರಾನ್ಸ್ ಗೆಲ್ಲುವ ಸಾಧ್ಯತೆ ತುಂಬಾ ಹೆಚ್ಚಾಗಿದೆ ಎಂದು ಸಲೋಮಿ ಹೇಳಿದ್ದಾರೆ.ಸಲೋಮಿ ಲೆಕ್ಕಾಚಾರದ ಪ್ರಕಾರ ವಿಶ್ವಕಪ್ ಫೈನಲ್ ನಲ್ಲಿ ಉಭಯ ತಂಡಗಳ ನಡುವೆ ಕಠಿಣ ಹೋರಾಟ ನಡೆಯಬಹುದು.
ಪಂದ್ಯದ ಹಣೆಬರಹವನ್ನು ಟೈ ಬ್ರೇಕರ್‌ನಲ್ಲಿ ನಿರ್ಧರಿಸಬಹುದು. ಆದರೆ ಫ್ರಾನ್ಸ್ ಗೆಲ್ಲುವ ಸಾಧ್ಯತೆ ಹೆಚ್ಚು. ಫ್ರಾನ್ಸ್ ಸತತ ಎರಡನೇ ಬಾರಿಗೆ ವಿಶ್ವಕಪ್ ಗೆಲ್ಲಲಿದೆ ಎಂದಿದ್ದಾರೆ.
ಹಾಗೆಯೇ ಅಂದು ತಿಥಿ-ನಕ್ಷತ್ರದ ಸ್ಥಾನ ಬದಲಾದರೆ ಅರ್ಜೆಂಟೀನಾ ಕೂಡ ಗೆಲ್ಲಬಹುದು. ಆದರೆ, ಅವಕಾಶ ಕಡಿಮೆ ಎಂದು ಸಲೋಮಿ ಹೇಳಿದ್ದಾರೆ