Tuesday, November 24, 2020

ಏಳು ಜಿಲ್ಲೆ ದಾಟಿ – 3 ಸಾವಿರ ಕಿ.ಮೀ. ಸುತ್ತಿ ಬಂದ ಹುಲಿರಾಯ..!

ಮಂಗಳೂರು ಯುನಿಟಿ ಆಸ್ಪತ್ರೆ ಎದುರುಗಡೆ ವ್ಯಕ್ತಿಯ ಮೇಲೆ ತಲವಾರು ದಾಳಿ..!

ಮಂಗಳೂರು ಯುನಿಟಿ ಆಸ್ಪತ್ರೆ ಎದುರುಗಡೆ ವ್ಯಕ್ತಿಯ ಮೇಲೆ ತಲವಾರು ದಾಳಿ..! ಮಂಗಳೂರು : ಮಂಗಳೂರು ನಗರಲ್ಲಿ ಮತ್ತೆ ತಲವಾರು ಬೀಸಲಾಗಿದೆ. ನಗರದ ಯುನಿಟಿ ಆಸ್ಪತ್ರೆ ಸಮೀಪ ಯುವಕನ ಮೇಲೆ ತಲವಾರು ದಾಳಿ ನಡೆದಿದೆ.  ನಿನ್ನೆ ಸೋಮವಾರ...

ಕೆಲವೇ ಗಂಟೆಗಳಲ್ಲಿ 50 ಲಕ್ಷ ರೂ ಮೌಲ್ಯದ ಪಾನ್ ಮಸಾಲ ದರೋಡೆ ಪ್ರಕರಣ ಭೇದಿಸಿದ ಪೊಲೀಸರು..!

ಕೆಲವೇ ಗಂಟೆಗಳಲ್ಲಿ 50 ಲಕ್ಷ ರೂ ಮೌಲ್ಯದ ಪಾನ್ ಮಸಾಲ ದರೋಡೆ ಪ್ರಕರಣ ಭೇದಿಸಿದ ಪೊಲೀಸರು..! ಚಾಮರಾಜನಗರ : 50 ಲಕ್ಷ ರೂಪಾಯಿಗು ಹೆಚ್ಚು ಮೌಲ್ಯದ ಪಾನ್ ಮಸಾಲ ಹಾಗು ಟೊಬ್ಯಾಕೋ ದರೋಡೆಯಾದ ಕೆಲವೆ...

ಉಡುಪಿ : ಮೇಲಿಂದ ಬಿದ್ದ ಸೀಲಿಂಗ್ ಫ್ಯಾನ್ – ಕೂದಲೆಳೆಯಂತರದಲ್ಲಿ ಪಾರಾದ ತರಕಾರಿ ಮಳಿಗೆ ಮಾಲಕ

ಉಡುಪಿ : ಮೇಲಿಂದ ಬಿದ್ದ ಸೀಲಿಂಗ್ ಫ್ಯಾನ್ - ಕೂದಲೆಳೆಯಂತರದಲ್ಲಿ ಪಾರಾದ ತರಕಾರಿ ಮಳಿಗೆ ಮಾಲಕ ಉಡುಪಿ : ಮೇಲಿಂದ ಏಕಾಎಕಿ ಬಿದ್ದ ಫ್ಯಾನಿನಿಂದ ಕೂದಲೆಳೆಯ ಅಂತರದಲ್ಲಿ ಅಂಗಡಿ ಮಾಲಿಕ ಪಾರಾದ ಘಟನೆ ಉಡುಪಿ...

ಮುಂಬೈ- ಮಹಾರಾಷ್ಟ್ರ ಹೋಗುವವರು ದಯವಿಟ್ಟು ಗಮನಿಸಿ..!!

ಮುಂಬೈ- ಮಹಾರಾಷ್ಟ್ರ ಹೋಗುವವರು ದಯವಿಟ್ಟು ಗಮನಿಸಿ..!! ಮುಂಬೈ : ಮಹಾರಾಷ್ಟ್ರದಲ್ಲಿ ನೊವೆಲ್ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು ಶಿಸ್ತುಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯದಿಂದ ಹೊರ ಹೋಗುವ...

ರಾಜ್ಯ ಬಂದ್ ಗೆ ಕರೆನೀಡಿದ ಕನ್ನಡ ಸಂಘಟನೆಗಳನ್ನು ಶೂಟ್ ಮಾಡಿ ಬಿಸಾಕಲಿ : ಕಾಳಿ ಶ್ರೀರಿಷಿ ಕುಮಾರ ಸ್ವಾಮೀಜಿ

ರಾಜ್ಯ ಬಂದ್ ಗೆ ಕರೆನೀಡಿದ ಕನ್ನಡ ಸಂಘಟನೆಗಳನ್ನು ಶೂಟ್ ಮಾಡಿ ಬಿಸಾಕಲಿ : ಕಾಳಿ ಶ್ರೀರಿಷಿ ಕುಮಾರ ಸ್ವಾಮೀಜಿ ಮಂಗಳೂರು :  ಡಿಸೆಂಬರ್ 5ರ ಕನ್ನಡ ಸಂಘಟನೆಗಳ ಬಂದ್ ವಿಚಾರವಾಗಿ ಕನ್ನಡ ಸಂಘಟನೆ ವಿರುದ್ಧ...

ಏಳು ಜಿಲ್ಲೆ ದಾಟಿ – 3 ಸಾವಿರ ಕಿ.ಮೀ. ಸುತ್ತಿ ಬಂದ ಹುಲಿರಾಯ..!

ಮುಂಬೈ: ಚಿತ್ರದಲ್ಲಿ ಕಾಣಿಸುತ್ತಿರುವ ಮಹಾರಾಷ್ಟ್ರದ ಈ ಹುಲಿರಾಯ ಸಾಧಾರಣನಲ್ಲ. ಇದನ್ನು ನೋಡಿದ ಅರಣ್ಯಾಧಿಕಾರಿಗಳೇ ಅಬ್ಬಬ್ಬಾ ಎಂದು ಬಾಯ್ದೆರೆದಿದ್ದಾರೆ.

ಅಂಥ ಸಾಧನೆ ಮಾಡಿರುವ ಅಪರೂಪದ ಹುಲಿ ಇದು. ಭಾರತದ ಯಾವ ಹುಲಿಯೂ ಮಾಡಿರದ ಸಾಧನೆ ಮಾಡಿದೆ ಈ ಹುಲಿ.

ಮೂರೂವರೆ ವರ್ಷದ ಈ ಹುಲಿ ಏನು ಸಾಧನೆ ಮಾಡಿದೆ ಎನ್ನುವ ಮೊದಲು ಈ ಹುಲಿಯ ಹೆಸರು ಹೇಳುವುದಾದರೆ ವಾಕರ್‌.

ಈ ಹುಲಿ ಮಾಡಿರುವ ಸಾಧನೆಗೂ ಈ ಹೆಸರಿಗೂ ಸಂಬಂಧವೂ ಇದೆ. ಅದಕ್ಕಾಗಿಯೇ ಅರಣ್ಯಾಧಿಕಾರಿಗಳು ವಾಕರ್ ಎಂದು ಇದಕ್ಕೆ ನಾಮಕರಣ ಮಾಡಿದ್ದಾರೆ.

ಅಂದ ಹಾಗೆ ಈ ಹುಲಿ ಮಾಡಿರುವ ಸಾಧನೆ ಏನು ಗೊತ್ತಾ? 9 ತಿಂಗಳಲ್ಲಿ ಬರೋಬ್ಬರಿ ಮೂರು ಸಾವಿರ ಕಿ.ಮೀ. ಅಡ್ಡಾಡಿ ಬಂದಿದೆ!

ಮಹಾರಾಷ್ಟ್ರದ ಏಳು ಜಿಲ್ಲೆಗಳನ್ನು ದಾಟಿ ಪಕ್ಕದ ತೆಲಂಗಾಣದಲ್ಲಿ ಓಡಾಡಿ ಬಂದಿರುವ ಹುಲಿ ಕ್ರಮಿಸಿರುವ ಒಟ್ಟು ದೂರ ಬರೋಬ್ಬರಿ ಮೂರು ಸಾವಿರ ಕಿ.ಮೀ ಎಂದಿದ್ದಾರೆ ಅರಣ್ಯಾಧಿಕಾರಿಗಳು.

2019ರ ಜೂನ್‌ ತಿಂಗಳಿನಲ್ಲಿ ಮಹಾರಾಷ್ಟ್ರದ ಅಭಯಾರಣ್ಯದಿಂದ ಹೊರಟಿದ್ದ ವಾಕರ್‌ 2020ರ ಮಾರ್ಚ್‌ ತಿಂಗಳಿನಲ್ಲಿ ಅಂದರೆ ಒಂಬತ್ತು ತಿಂಗಳು ಬಳಿಕ ಮಹಾರಾಷ್ಟ್ರಕ್ಕೆ ಮರಳಿ ಬಂದಿದೆ.

ಈ ಒಂಬತ್ತು ತಿಂಗಳ ಅವಧಿಯಲ್ಲಿ ಇದು ಕ್ರಮಿಸಿರುವ ದೂರ ಮೂರು ಸಾವಿರ ಕಿಲೋಮೀಟರ್‌. ಈ ಹುಲಿಗೆ ಕಾಲರ್ ಐಡಿ ಅಳವಡಿಸಲಾಗಿತ್ತು.

ಅದರ ಮೂಲಕ ಹುಲಿಯ ಚಲನವಲನಗಳನ್ನು ಪತ್ತೆ ಹಚ್ಚಲಾಗಿತ್ತು. ಆಹಾರಕ್ಕಾಗಿ, ಸಂಗಾತಿ ಹುಡುಕಲು, ತಾನು ನೆಲೆಸಲು ಜಾಗ ಹುಡುಕಲು… ಹೀಗೆ ಎಲ್ಲವೂ ಸೇರಿ ಇಷ್ಟು ದೂರ ಕ್ರಮಿಸಿರುವುದಾಗಿ ಅರಣ್ಯಾಧಿಕಾರಿಗಳು ಹೇಳುತ್ತಾರೆ.

ಇದುವರೆಗೆ ಇಷ್ಟು ದೂರ ಈ ಅವಧಿಯಲ್ಲಿ ಯಾವ ಹುಲಿಯೂ ಕ್ರಮಿಸಿರಲಿಲ್ಲವಂತೆ. ಆದ್ದರಿಂದ ವಾಕರ್‌ ದಾಖಲೆ ಮಾಡಿದೆ.

ಸದ್ಯ 205 ಚ.ಕಿ.ಮೀ ವ್ಯಾಪ್ತಿಯ ಜ್ಞಾನಗಂಗಾ ಅಭಯಾರಣ್ಯದಲ್ಲಿ ನೆಲೆಸಿರುವ ವಾಕರ್ ಈ ಭಾಗದಲ್ಲಿ ನೆಲೆಸಿರುವ ಏಕೈಕ ಹುಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.