ಮಂಗಳೂರು : ಪ್ಯಾರಿಸ್‌ನಲ್ಲಿ 33ನೇ ಒಲಿಂಪಿಕ್ಸ್ ಕ್ರೀಡಾಕೂಟಗಳು ಆರಂಭವಾಗಿದ್ದು, ಜಗತ್ತಿನ ಬಹುತೇಕ ರಾಷ್ಟ್ರಗಳು ಈ ಕ್ರೀಡಾ ಹಬ್ಬದಲ್ಲಿ ಭಾಗವಹಿಸಿದೆ. ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಈ ಕ್ರೀಡಾ ಜಾತ್ರೆಗೆ ಎರಡು ಸಾವಿರ ವರ್ಷದ ಇತಿಹಾಸವಿದೆ. ಈ ಕ್ರೀಡಾ ಕೂಟ ಮೊದಲು ಆಯೋಜಿಸಿದ್ದು ಯಾರು? ಯಾವ ಉದ್ದೇಶಕ್ಕೆ ಆಯೋಜಿಸಿದ್ರು? ಆಗ ಹೇಗಿತ್ತು? ಈಗ ಹೇಗಾಗಿದೆ? ಈ ಎಲ್ಲಾ ಮಾಹಿತಿ ಇಲ್ಲಿದೆ.
ಒಲಿಂಪಿಕ್ಸ್ ಕ್ರೀಡಾ ಕೂಟ ಆರಂಭವಾದ ಹಿನ್ನಲೆ
ದಾಖಲೆಗಳ ಪ್ರಕಾರ ಕ್ರಿಸ್ತ ಪೂರ್ವ 776ರಲ್ಲಿ ಗ್ರೀಸ್ ದೇಶದಲ್ಲಿ ಈ ಕ್ರೀಡಾಕೂಟವನ್ನು ಆರಂಭಿಸಲಾಗಿತ್ತು. ಪ್ರಾಚೀನ ಒಲಿಂಪಿಯಾ ನಗರದಲ್ಲಿ ಇದು ಆಯೋಜಿಸುತ್ತಿದ್ದ ಕಾರಣ ಇದಕ್ಕೆ ಒಲಿಂಪಿಕ್ಸ್ ಎಂಬ ಹೆಸರು ಬರಲು ಕಾರಣವಾಯ್ತು. ಗ್ರೀಸ್ ದೇಶದ ಕ್ರೀಡಾಪಟುಗಳಿಗೆ ಮಾತ್ರ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಇತ್ತು. ಕ್ರಿಸ್ತಶಕ 393 ರಲ್ಲಿ ರೋಮನ್ ಸಾಮ್ರಾಟ್ ಥಿಯೋಡೋಸಿಯಸ್ ಎಂಬ ಕ್ರೂರ ರಾಜನ ಹಿಂಸೆಯ ಕಾರಣ ಈ ಕ್ರೀಡಾಕೂಟ ಸ್ಥಗಿತಗೊಂಡಿತ್ತು.
1896 ರಿಂದ ಅಸಲಿ ಒಲಿಂಪಿಕ್ಸ್ ಆರಂಭ
ಕ್ರಿಸ್ತಶಕ 393 ರಲ್ಲಿ ನಿಂತು ಹೋಗಿದ್ದ ಈ ಒಲಿಂಪಿಕ್ಸ್ ಕ್ರೀಡಾಕೂಟ ಮತ್ತೆ ಮರು ಜನ್ಮ ಪಡೆದುಕೊಂಡಿದ್ದು 1896 ರಲ್ಲಿ. ಆಧುನಿಕತೆಯೊಂದಿಗೆ ಫ್ರೆಂಚ್ ಪೆಡಗೋಗ್ ಪಿಯರ್ ಡಿ ಕುಬರ್ಟಿನ್ ಎಂಬವರು ಏಥೇನ್ಸ್‌ನಲ್ಲಿ ಮೊದಲ ಅಧಿಕೃತ ಆಧುನಿಕ ಒಲಿಂಪಿಕ್ಸ್ ಆರಂಭಿಸಿದ್ರು. ಐದು ಖಂಡಗಳ ನಡುವಿನ ಶಾಂತಿ, ಸ್ನೇಹ, ಸಮಾನತೆಯ ಸಂಕೇತವಾಗಿ ಈ ಕ್ರೀಡಾಕೂಟವನ್ನು ಆರಂಭಿಸಲಾಗಿತ್ತು. ಆಫ್ರಿಕಾ , ಅಮೇರಿಕಾ, ಏಷ್ಯಾ, ಯೂರೋಪ್, ಓಷನಿಯಾ ಖಂಡಗಳನ್ನು ಒಂದಾಗಿ ಬೆಸೆಯುವ ಉದ್ದೇಶ ಈ ಕ್ರೀಡಾಕೂಟದಲ್ಲಿದೆ. ಇದೇ ಕಾರಣಕ್ಕೆ ಒಲಿಂಪಿಕ್ಸ್ ಲೋಗೋದಲ್ಲಿ ಐದು ರಿಂಗ್‌ಗಳನ್ನು ಬಳಸಿಕೊಳ್ಳಲಾಗಿದೆ.
ಕ್ರೀಡಾಕೂಟದಲ್ಲಿ ಭಾಗವಹಿಸಲು ಮಾನ್ಯತೆ ಅಗತ್ಯ..!
ಒಲಿಂಪಿಕ್ಸ್ ನಲ್ಲಿ ಎಲ್ಲಾ ಸ್ವತಂತ್ರ ರಾಷ್ಟ್ರಗಳಿಗೆ ಮತ್ತು ಆಂತರಿಕವಾಗಿ ಸ್ವಾಯತ್ತ ಪ್ರದೇಶಗಳಿಗೆ ಭಾಗವಹಿಸಲು ಅವಕಾಶವಿದೆ, ಆದರೆ, ಕೆಲವು ಕಾರಣಗಳಿಂದ ಕೆಲವೊಂದು ದೇಶಗಳಿಗೆ ಅಥವಾ ಪ್ರದೇಶಗಳಿಗೆ ಪ್ರವೇಶ ನೀಡಲಾಗುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಮಾನ್ಯತೆ ಇಲ್ಲದಿರುವುದು. ಕೆಲವು ದೇಶಗಳಿಗೆ IOCಯಿಂದ ಅಧಿಕೃತ ಮಾನ್ಯತೆ ಇಲ್ಲದಿದ್ದರೆ ಅವರು ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.
ಉದಾಹರಣೆಗೆ, ಕಾಸೋವೊ ದೇಶ 2014ರಲ್ಲಿ IOCಯಿಂದ ಮಾನ್ಯತೆ ಪಡೆದುಕೊಂಡು 2016 ರಿಯೋ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಭಾಗವಹಿಸಿತು.
ಅದೇ ರೀತಿ ದಕ್ಷಿಣ ಆಫ್ರಿಕಾ ದೇಶ ಅಲ್ಲಿನ ವರ್ಣಭೇದ ನೀತಿಯಿಂದಾಗಿ 1964 ರಿಂದ 1988 ರ ತನಕ ಒಲಿಂಪಿಕ್ಸ್ ನಿರ್ಬಂಧಕ್ಕೆ ಒಳಪಟ್ಟಿತ್ತು. ಭಾರತ ಮೊದಲು 1900ರಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತ್ತು. ನಾರ್ಮನ್ ಪ್ರೀಚರ್ಡ್ ಎಂಬ ಬ್ರಿಟನ್ ಮೂಲದ ಭಾರತೀಯ ಸಂಜಾತ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಪದಕ ಪಡೆದಿದ್ದರು. ಆದ್ರೆ, ಆ ವೇಳೆ ಭಾರತ ಬ್ರಿಟೀಷ್ ಆಳ್ವಿಕೆಯಲ್ಲಿ ಇದ್ದ ಕಾರಣ ಆ ದಾಖಲೆಯ ವಿಚಾರದಲ್ಲಿ ಇಂದಿಗೂ ಗೊಂದಲವಿದೆ.
ಮಂಗಳೂರು/ಸೌದಿ ಅರೇಬಿಯಾ: ಐಪಿಎಲ್ ಸೀಸನ್ 18ರ ಹರಾಜು ಪ್ರಕ್ರಿಯೆ ನಿನ್ನೆಯಿಂದಲೇ ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯುತ್ತಿದೆ. ನಿನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 72 ಆಟಗಾರರು ಹರಾಜಾಗಿದ್ದು, ಅದರಲ್ಲಿ ಆರ್ ಸಿಬಿಗೆ ಯಾರೆಲ್ಲಾ ಆಟಗಾರರು ಬಂದಿದ್ದಾರೆ ಇಲ್ಲಿದೆ ನೋಡಿ.
ಮೆಗಾ ಹರಾಜು ಪ್ರಕ್ರಿಯೆ ಇವತ್ತು ಕೂಡ ಮುಂದುವರಿಯಲ್ಲಿದ್ದು, ನಿನ್ನೆಯ ಹರಾಜಿನಲ್ಲಿ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ದಾಖಲೆಯ ಮೊತ್ತಕ್ಕೆ ಮಾರಾಟವಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಆದರೆ ಆರ್ ಸಿಬಿಯ ಅಭಿಮಾನಿಗಳಿಗೆ ಶಾಕ್ ಎದುರಾಗಿತ್ತು. ಕನ್ನಡಿಗ ಕೆ. ಎಲ್ ರಾಹುಲ್ ಈ ಬಾರಿಯಾದರು ಆರ್ ಸಿಬಿಗೆ ಬರಬಹುದು ಎಂಬ ನಿರೀಕ್ಷೆ ಈಡೆರಲಿಲ್ಲ.
ಅಲ್ಲದೆ, ಪ್ರಮುಖ ಆಟಗಾರರದ ರಿಷಭ್ ಪಂತ್, ಜೋಸ್ ಬಟ್ಲರ್, ಮಾಜಿ ಆಟಗಾರ ಯಜುವೇಂದ್ರ ಚಹಲ್ ರವರನ್ನು ಖರೀದಿಸಲು ವಿಫಲವಾಯಿತು. ಮತ್ತೊಂದೆಡೆ ಮೊಹಮ್ಮದ್ ಸಿರಾಜ್ ಅವರನ್ನು ಆರ್ ಟಿಎಂ ಬಳಸಿ ಉಳಿಸಿಕೊಳ್ಳದ ಆರ್ ಸಿಬಿ ಮ್ಯಾನೆಜ್ ಮೆಂಟ್ ನಿರ್ಧಾರಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು.
ಇನ್ನೂ ಮೊದಲನೇ ದಿನದ ಹರಾಜು ಪ್ರಕ್ರಿಯೆಯಲ್ಲಿ ಆರ್ ಸಿಬಿ 6 ಆಟಗಾರರನ್ನು ಖರೀದಿಸಿತು. ಅದರಲ್ಲಿ ಮೂವರು ವಿದೇಶಿಯರು ಹಾಗೂ ಉಳಿದ ಮೂವರು ಭಾರತೀಯ ಆಟಗಾರರಾಗಿದ್ದಾರೆ.
ಮಂಗಳೂರು : ಎಲನ್ ಮಸ್ಕ್ ಜಗತ್ತಿನ ನಂಬರ್ ಒನ್ ಶ್ರೀಮಂತ ವ್ಯಕ್ತಿ. ಮಸ್ಕ್ ಅಮೆರಿಕಾದ ಚುನಾವಣಾ ಪ್ರಕ್ರಿಯೆಯನ್ನು ಟೀಕಿಸಿ, ಭಾರತದ ಚುನಾವಣಾ ಪ್ರಕ್ರಿಯೆಯನ್ನು ಹೊಗಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಮಸ್ಕ್, ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಅದ್ಬುತವಾಗಿ ನಡೆಯುತ್ತದೆ. ಒಂದೇ ಒಂದು ದಿನದಲ್ಲಿ ಇಡೀ ಲೋಕಸಭಾ ಚುನಾವಣೆಯ ಮತ ಎಣಿಕೆ ಮಾಡಿದ ಶ್ರೇಯಸ್ಸು ಭಾರತದ್ದು ಎಂದಿದ್ದಾರೆ.
ಇದನ್ನೂ ಓದಿ: ಸಾಯಿ ಪಲ್ಲವಿಯವರ ಕೈಯಲ್ಲಿದೆ ಹಲವಾರು ಸಿನಿಮಾಗಳು !
ಕ್ಯಾಲಿಫೋರ್ನಿಯಾದ ಚುನಾವಣಾ ಪ್ರಕ್ರಿಯೆಯನ್ನು ಟೀಕಿಸಿರುವ ಅವರು, ತಮ್ಮ ಎಕ್ಸ್ ಖಾತೆಯಲ್ಲಿ ಈ ಪೊಸ್ಟ್ ಹಾಕಿದ್ದಾರೆ. ಅದರ ಅಡಿಬರಹದಲ್ಲಿ, ಭಾರತದಲ್ಲಿ ಚುನಾವಣೆ ಎಂದರೆ ವಂಚನೆಯೇ ಮೊದಲ ಗುರಿ ಇರುವಲ್ಲಿ ಒಂದೇ ಒಂದು ದಿನದಲ್ಲಿ 64 ಕೋಟಿ ಮತಗಳನ್ನು ಎಣಿಕೆ ಮಾಡಿದ್ದಾರೆ. ಆದ್ರೆ ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ಕೂಡ ಮತಗಳು ಎಣಿಕೆ ಆಗುತ್ತಲೇ ಇವೆ ಎಂದು ಬರೆದಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ಮತ ಎಣಿಕೆ ಕಾರ್ಯ ವಿಳಂಬ ಯಾಕೆ :
ಅಮೆರಿಕಾದಲ್ಲಿ ಮೇಲ್ ಇನ್ ವೋಟಿಂಗ್ ವ್ಯವಸ್ಥೆ ಇದೆ. ಇದನ್ನು ಎಣಿಕೆ ಮಾಡುವ ಅನೇಕ ರೀತಿಯ ಪ್ರಕ್ರಿಯೆಗಳನ್ನು ಮಾಡುವ ಕಾರಣ ಚುನಾವಣಾ ಪ್ರಕ್ರಿಯೆ ವಿಳಂಬವಾಗುತ್ತಿದೆ. ಅದರಲ್ಲೂ ಕ್ಯಾಲಿಫೋರ್ನಿಯಾದಂತಹ ದೊಡ್ಡ ದೊಡ್ಡ ನಗರಗಳಲ್ಲಿ ಈ ಮೇಲ್ ಇನ್ ವೋಟಿಂಗ್ ಗಳು ತುಂಬಾ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಈ ವಿಳಂಬ ನೀತಿಯನ್ನು ಎಲನ್ ಮಸ್ಕ್ ಟೀಕಿಸಿ ಭಾರತವನ್ನು ಹೊಗಳಿದ್ದಾರೆ.
ಅಮೇರಿಕಾದಲ್ಲಿ ಹಿಂದಿನಿಂದಲೂ ಮೇಲ್ ಇನ್ ವೋಟಿಂಗ್ ವ್ಯವಸ್ಥೆ ಇದ್ದು, ಈಗಲೂ ಮುಂದುವರಿದುಕೊಂಡು ಬಂದಿದೆ.
ಮಂಗಳೂರು : ವಯಸ್ಸು ಎಂಬುದು ಕೇವಲ ಅಂಕೆಗಳು ಅಷ್ಟೇ. ಸಾಧನೆಗೆ ವಯಸ್ಸು ಅಡ್ಡಿ ಅಲ್ಲ, ಅದು ನೆಪ ಅಷ್ಟೇ. 80ರ ವಯಸ್ಸಿನಲ್ಲೂ ಫ್ಯಾಶನ್ ಲೋಕವನ್ನೆ ನಿದ್ದೆಗೆಡಿಸಿರುವ ಈ ಅಜ್ಜಿಯ ಸ್ಟೋರಿ ತುಂಬಾ ಕುತೂಹಲದಾಯಕವಾಗಿದೆ.
‘ಆಗದು ಎಂದು ಕೈ ಕಟ್ಟಿ ಕುಳಿತರೆ ಆಗದು ಎಂದು ಕೆಲಸವ’ ಎಂಬ ಹಾಡಿನ ಸಾಲಿನಂತೆ ಈ ಅಜ್ಜಿಗೆ ತನ್ನ ಮೊಮ್ಮಗಳೇ ಸ್ಪೂರ್ತಿ. ಕೆಲವೊಬ್ಬರು ಅಜ್ಜಿಯಂದಿರು, ಮೊಮ್ಮಕ್ಕಳು ಏನೇ ಹೇಳಿದರು ಅದನ್ನು ಮಾಡುತ್ತಾರೆ. ಹಾಗೆನೇ ಈ ಅಜ್ಜಿ ಕೂಡ ತನ್ನ ಮೊಮ್ಮಗಳ ಆಸೆ ಈಡೇರಿಸಲು ಹೋಗಿ ಇಂದು ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ಜಾಂಬಿಯಾ ದೇಶದ 80ರ ಹರೆಯದ ಈ ವೃದ್ದೆಯ ಹೆಸರು ಮಾರ್ಗರೇಟಾ ಚೋಲಾ. ಕಟ್ಟಿಗೆ ಚೇರಲ್ಲಿ ಕೂತು, ಕಣ್ಣಿಗೆ ಸ್ಟೈಲಿಶ್ ಗ್ಲಾಸ್ ಹಾಕಿಕೊಂಡು, ಬಣ್ಣ ಬಣ್ಣದ ಕಾಸ್ಟ್ಯೂಮ್ ಗಳು ಹಾಕಿಕೊಂಡಿರುವುದನ್ನು ನೋಡಿದರೆ ಎಂಥವರಿಗೂ, ಒಂದು ಕ್ಷಣ ರೋಮಾಂಚನಕಾರಿಯಾಗಬೇಕು. ಹಾಗಂತ ಇವರು ಯಾವುದೋ ರಾಯಲ್ ಫ್ಯಾಮೀಲಿಗೆ ಸೇರಿದವರಲ್ಲ. ಮಾರ್ಗರೇಟ್ ಚೋಲಾ 12-13 ವರ್ಷದಲ್ಲಿಯೇ ಶಿಕ್ಷಣಕ್ಕೆ ಗುಡ್ ಬೈ ಹೇಳಿ, 30ನೇ ವಯಸ್ಸಿಗೆ ಮದುವೆಯಾಗಿ ಬಡತನ, ಕಷ್ಟ ಎಲ್ಲವನ್ನೂ ಕಂಡವರು.
ಆದರೆ ಮೊಮ್ಮಗಳಾದ ಡಿಯಾನಾ ಕುಂಬಾ ನ್ಯೂಯಾರ್ಕ್ ಮೂಲದ ಸ್ಟೈಲಿಸ್. ಈಕೆಗೆ, ತನ್ನ ಅಜ್ಜಿಯನ್ನು ಹೊಸ ಹೊಸ ಅವತಾರದಲ್ಲಿ ನೋಡಲು ಇಷ್ಟವಂತೆ. ಈಗಾಗೀ ಹೊಸ ಹೊಸ ಬಗೆಯ ಕಾಸ್ಟ್ಯೂಮ್ ಹಾಕಿ ಖುಷಿ ಪಡುತ್ತಾರೆ. ಈ ಅಜ್ಜಿಯ ಜನಪ್ರೀಯತೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ, ಅಂತರಾಷ್ಟ್ರೀಯ ಸುದ್ದಿ ಮಾಧ್ಯಮಗಳೇ ಸಂದರ್ಶನ ಮಾಡಲು ಬರುತ್ತಿವೆ. ತನ್ನ ಫ್ಯಾಶನ್ ಬಗ್ಗೆ ಮಾರ್ಗರೇಟ್ ಹೆಳೋದು ಹೀಗೆ, ನಾನು ಈ ರೀತಿಯ ಉಡುಗೆ-ತೊಡುಗೆಗಳನ್ನು ಹಾಕಿಕೊಳ್ಳುವುದರಿಂದ ನನ್ನನ್ನು ನಾನು ಉಳಿದವರಿಗಿಂತ ಭಿನ್ನ ಎಂದುಕೊಳ್ಳುವಂತಹ ಭಾವ ಬರುತ್ತದೆ. ನಾನು ಇಂತಹ ಬಟ್ಟೆಗಳನ್ನು ಧರಿಸಿಕೊಳ್ಳುತ್ತಾ ಮತ್ತಷ್ಟು ಜೀವಂತಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಮಾರ್ಗರೇಟ್ ರವರ ಈ ಫ್ಯಾಶನ್ ಫೋಟೋಗಳಿಗೆ, ಕ್ಲೀನ್ ಬೊಲ್ಡ್ ಆಗಿರುವ ಅವರ ಅಭಿಮಾನಿಗಳು ಅಜ್ಜಿಯನ್ನು ಕೊಂಡಾಡುತ್ತಿದ್ದಾರೆ. ಇವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇದ್ದಾರೆ ಮತ್ತು ಇನ್ ಸ್ಟಾ ಗ್ರಾಮ್ ನಲ್ಲಿ 1 ಲಕ್ಷ 13 ಸಾವಿರದಷ್ಟು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ನಿಮ್ಮ ವಯಸ್ಸು, ನಿಮ್ಮ ಗುರಿ ಸಾಧನೆಗೆ ಅಡ್ಡಿಯಾಗುವುದಿಲ್ಲ. ಗುರು ಮತ್ತು ಗುರಿ ಎರಡು ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಮಾರ್ಗರೇಟ್ ಚೋಲಾ ನಿದರ್ಶನ.