Connect with us

    International news

    ಒಲಿಂಪಿಕ್ಸ್‌ ಗೇಮ್‌ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರ ಇದು..!

    Published

    on

    ಮಂಗಳೂರು : ಪ್ಯಾರಿಸ್‌ನಲ್ಲಿ 33ನೇ ಒಲಿಂಪಿಕ್ಸ್ ಕ್ರೀಡಾಕೂಟಗಳು ಆರಂಭವಾಗಿದ್ದು, ಜಗತ್ತಿನ ಬಹುತೇಕ ರಾಷ್ಟ್ರಗಳು ಈ ಕ್ರೀಡಾ ಹಬ್ಬದಲ್ಲಿ ಭಾಗವಹಿಸಿದೆ. ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಈ ಕ್ರೀಡಾ ಜಾತ್ರೆಗೆ ಎರಡು ಸಾವಿರ ವರ್ಷದ ಇತಿಹಾಸವಿದೆ. ಈ ಕ್ರೀಡಾ ಕೂಟ ಮೊದಲು ಆಯೋಜಿಸಿದ್ದು ಯಾರು? ಯಾವ ಉದ್ದೇಶಕ್ಕೆ ಆಯೋಜಿಸಿದ್ರು? ಆಗ ಹೇಗಿತ್ತು? ಈಗ ಹೇಗಾಗಿದೆ? ಈ ಎಲ್ಲಾ ಮಾಹಿತಿ ಇಲ್ಲಿದೆ.

    ಒಲಿಂಪಿಕ್ಸ್ ಕ್ರೀಡಾ ಕೂಟ ಆರಂಭವಾದ ಹಿನ್ನಲೆ


    ದಾಖಲೆಗಳ ಪ್ರಕಾರ ಕ್ರಿಸ್ತ ಪೂರ್ವ 776ರಲ್ಲಿ ಗ್ರೀಸ್ ದೇಶದಲ್ಲಿ ಈ ಕ್ರೀಡಾಕೂಟವನ್ನು ಆರಂಭಿಸಲಾಗಿತ್ತು. ಪ್ರಾಚೀನ ಒಲಿಂಪಿಯಾ ನಗರದಲ್ಲಿ ಇದು ಆಯೋಜಿಸುತ್ತಿದ್ದ ಕಾರಣ ಇದಕ್ಕೆ ಒಲಿಂಪಿಕ್ಸ್ ಎಂಬ ಹೆಸರು ಬರಲು ಕಾರಣವಾಯ್ತು. ಗ್ರೀಸ್‌ ದೇಶದ ಕ್ರೀಡಾಪಟುಗಳಿಗೆ ಮಾತ್ರ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಇತ್ತು. ಕ್ರಿಸ್ತಶಕ 393 ರಲ್ಲಿ ರೋಮನ್‌ ಸಾಮ್ರಾಟ್ ಥಿಯೋಡೋಸಿಯಸ್ ಎಂಬ ಕ್ರೂರ ರಾಜನ ಹಿಂಸೆಯ ಕಾರಣ ಈ ಕ್ರೀಡಾಕೂಟ ಸ್ಥಗಿತಗೊಂಡಿತ್ತು.

    1896 ರಿಂದ ಅಸಲಿ ಒಲಿಂಪಿಕ್ಸ್ ಆರಂಭ


    ಕ್ರಿಸ್ತಶಕ 393 ರಲ್ಲಿ ನಿಂತು ಹೋಗಿದ್ದ ಈ ಒಲಿಂಪಿಕ್ಸ್ ಕ್ರೀಡಾಕೂಟ ಮತ್ತೆ ಮರು ಜನ್ಮ ಪಡೆದುಕೊಂಡಿದ್ದು 1896 ರಲ್ಲಿ. ಆಧುನಿಕತೆಯೊಂದಿಗೆ ಫ್ರೆಂಚ್ ಪೆಡಗೋಗ್ ಪಿಯರ್ ಡಿ ಕುಬರ್ಟಿನ್ ಎಂಬವರು ಏಥೇನ್ಸ್‌ನಲ್ಲಿ ಮೊದಲ ಅಧಿಕೃತ ಆಧುನಿಕ ಒಲಿಂಪಿಕ್ಸ್‌ ಆರಂಭಿಸಿದ್ರು. ಐದು ಖಂಡಗಳ ನಡುವಿನ ಶಾಂತಿ, ಸ್ನೇಹ, ಸಮಾನತೆಯ ಸಂಕೇತವಾಗಿ ಈ ಕ್ರೀಡಾಕೂಟವನ್ನು ಆರಂಭಿಸಲಾಗಿತ್ತು. ಆಫ್ರಿಕಾ , ಅಮೇರಿಕಾ, ಏಷ್ಯಾ, ಯೂರೋಪ್, ಓಷನಿಯಾ ಖಂಡಗಳನ್ನು ಒಂದಾಗಿ ಬೆಸೆಯುವ ಉದ್ದೇಶ ಈ ಕ್ರೀಡಾಕೂಟದಲ್ಲಿದೆ. ಇದೇ ಕಾರಣಕ್ಕೆ ಒಲಿಂಪಿಕ್ಸ್‌ ಲೋಗೋದಲ್ಲಿ ಐದು ರಿಂಗ್‌ಗಳನ್ನು ಬಳಸಿಕೊಳ್ಳಲಾಗಿದೆ.

    ಕ್ರೀಡಾಕೂಟದಲ್ಲಿ ಭಾಗವಹಿಸಲು ಮಾನ್ಯತೆ ಅಗತ್ಯ..!


    ಒಲಿಂಪಿಕ್ಸ್ ನಲ್ಲಿ ಎಲ್ಲಾ ಸ್ವತಂತ್ರ ರಾಷ್ಟ್ರಗಳಿಗೆ ಮತ್ತು ಆಂತರಿಕವಾಗಿ ಸ್ವಾಯತ್ತ ಪ್ರದೇಶಗಳಿಗೆ ಭಾಗವಹಿಸಲು ಅವಕಾಶವಿದೆ, ಆದರೆ, ಕೆಲವು ಕಾರಣಗಳಿಂದ ಕೆಲವೊಂದು ದೇಶಗಳಿಗೆ ಅಥವಾ ಪ್ರದೇಶಗಳಿಗೆ ಪ್ರವೇಶ ನೀಡಲಾಗುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಮಾನ್ಯತೆ ಇಲ್ಲದಿರುವುದು. ಕೆಲವು ದೇಶಗಳಿಗೆ IOCಯಿಂದ ಅಧಿಕೃತ ಮಾನ್ಯತೆ ಇಲ್ಲದಿದ್ದರೆ ಅವರು ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.
    ಉದಾಹರಣೆಗೆ, ಕಾಸೋವೊ ದೇಶ 2014ರಲ್ಲಿ IOCಯಿಂದ ಮಾನ್ಯತೆ ಪಡೆದುಕೊಂಡು 2016 ರಿಯೋ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಭಾಗವಹಿಸಿತು.

    ಇದನ್ನೂ ಓದಿ : WATCH : UDUPI : ಮನೆಯಂಗಳದಲ್ಲಿ ಚಿರತೆ ಪ್ರತ್ಯಕ್ಷ; ರಾತ್ರಿ ಇಡೀ ಕಣ್ಮರೆಯಾಗಿದ್ದ ಸಾಕು ನಾಯಿ ಬದುಕುಳಿದಿದ್ದು ಹೇಗೆ?

    ಅದೇ ರೀತಿ ದಕ್ಷಿಣ ಆಫ್ರಿಕಾ ದೇಶ ಅಲ್ಲಿನ ವರ್ಣಭೇದ ನೀತಿಯಿಂದಾಗಿ 1964 ರಿಂದ 1988 ರ ತನಕ ಒಲಿಂಪಿಕ್ಸ್‌ ನಿರ್ಬಂಧಕ್ಕೆ ಒಳಪಟ್ಟಿತ್ತು. ಭಾರತ ಮೊದಲು 1900ರಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತ್ತು. ನಾರ್ಮನ್‌ ಪ್ರೀಚರ್ಡ್‌ ಎಂಬ ಬ್ರಿಟನ್‌ ಮೂಲದ ಭಾರತೀಯ ಸಂಜಾತ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಪದಕ ಪಡೆದಿದ್ದರು. ಆದ್ರೆ, ಆ ವೇಳೆ ಭಾರತ ಬ್ರಿಟೀಷ್ ಆಳ್ವಿಕೆಯಲ್ಲಿ ಇದ್ದ ಕಾರಣ ಆ ದಾಖಲೆಯ ವಿಚಾರದಲ್ಲಿ ಇಂದಿಗೂ ಗೊಂದಲವಿದೆ.

    Click to comment

    Leave a Reply

    Your email address will not be published. Required fields are marked *

    International news

    ಶಾಲೆಯಲ್ಲಿ ಗುಂ*ಡಿನ ದಾ*ಳಿ ನಡೆಸಿದ 14 ರ ಬಾಲಕ..! ನಾಲ್ವರನ್ನು ಬ*ಲಿ ಪಡೆದ ವಿದ್ಯಾರ್ಥಿ..!

    Published

    on

    ಮಂಗಳೂರು/ಅಮೆರಿಕಾ :  ಶಾಲೆಯಲ್ಲಿ ಗುಂ*ಡಿನ ದಾ*ಳಿ ನಡೆಸಿ ಇಬ್ಬರು ಸಹ ವಿದ್ಯಾರ್ಥಿಗಳ ಸಹಿತ ಇಬ್ಬರು ಶಿಕ್ಷರನ್ನು 14 ವರ್ಷದ ವಿದ್ಯಾರ್ಥಿಯೊಬ್ಬ ಕೊಂ*ದಿರುವ ಆಘಾ*ತಕಾರಿ ಘಟನೆ ನಡೆದಿದೆ. ಅಮೆರಿಕಾದ ಜಾರ್ಜಿಯಾದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಯನ್ನು ಎಫ್‌ಬಿಐ ಅವರು ವಶಕ್ಕೆ ಪಡೆದಿದ್ದಾರೆ.


    ಜಾರ್ಜಿಯಾದ ರಾಜಧಾನಿ ಅಟ್ಲಾಂಟದಿಂದ ಸುಮಾರು ಒಂದು ಗಂಟೆಗಳ ಪ್ರಯಾಣದ ದೂರ ಇರುವ ವಿಂಡರ್‌ನ ಅಪಾಲಾಚಿ ಹೈಸ್ಕೂಲ್‌ನಲ್ಲಿ ಈ ಘಟನೆ ಬುಧವಾರ(ಸೆ.4) ನಡೆದಿದೆ. ವಿದ್ಯಾರ್ಥಿ ನಡೆಸಿದ ಗುಂ*ಡಿನ ದಾ*ಳಿಗೆ ಒಂಬತ್ತು ಮಂದಿ ಗಂಭೀರವಾಗಿ ಗಾ*ಯಗೊಂಡಿದ್ದು, ನಾಲ್ವರು ಇಹಲೋಕ ತ್ಯಜಿಸಿದ್ದಾರೆ.

    ಕೋಲ್ಟ್‌ ಗ್ರೇ ಈ ಕೃ*ತ್ಯ ಎಸಗಿದ ವಿದ್ಯಾರ್ಥಿ. ವಿಶೇಷ ಅಂದ್ರೆ ಈತನ ಬಗ್ಗೆ 2023 ರಲ್ಲೇ ಎಫ್‌ಬಿಐ ಒಂದು ಕಣ್ಣು ಇಟ್ಟಿತ್ತಂತೆ. ಕಳೆದ ವರ್ಷವೇ ಈತ ತನ್ನ ಮನೆಯ ಪಕ್ಕದ ಶಾಲೆಗಳಿಗೆ ಆನ್‌ಲೈನ್‌ ಮೂಲಕ ಬೆದರಿಕೆ ಹಾಕಿದ ಆರೋಪ ಎದುರಾಗಿತ್ತು. ಆದ್ರೆ, ಆ ವೇಳೆ ಆತನ ವಿರುದ್ಧ ಸರಿಯಾದ ಸಾಕ್ಷ್ಯ ಸಿಗದ ಕಾರಣ ಆತನ ಬಂಧನವಾಗಿರಲಿಲ್ಲ ಎಂದು ಎಫ್‌ಬಿಐ ಮಾಹಿತಿ ನೀಡಿದೆ.

    ಆರೋಪಿ ಕೋಲ್ಟ್‌ ಗ್ರೇಯ ತಂದೆಯ ಬಳಿ ಬೇಟೆಯಾಡುವ ಬಂದೂಕುಗಳಿದ್ದು, ಅದು ಅವರ ಮೇಲ್ವಿಚಾರಣೆಯಲ್ಲೇ ಇತ್ತು. ಆದ್ರೆ, ಇದೇ ಬಂದೂಕನ್ನು ಶಾಲೆಗೆ ತೆಗೆದುಕೊಂಡು ಬಂದಿದ್ದ ಆರೋಪಿ ವಿದ್ಯಾರ್ಥಿ ಶಾಲೆಯಲ್ಲಿ ಮನ ಬಂದಂತೆ ಗುಂ(ಡು ಹಾರಿಸಿ ಇಬ್ಬರು ವಿದ್ಯಾರ್ಥಿ ಹಾಗೂ ಇಬ್ಬರು ಶಿಕ್ಷರನ್ನು ಬ*ಲಿ ಪಡೆದಿದ್ದಾನೆ.

    ಇದನ್ನೂ ಓದಿ : ಪ್ರೇಯಸಿಯನ್ನು ಹ*ತ್ಯೆಗೈದಿದ್ದವನಿಗೆ ಜೀ*ವಾವಧಿ ಶಿಕ್ಷೆ; ಪೊಲೀಸ್ ಆಗಬೇಕಾಗಿದ್ದವನು ಕೊ*ಲೆಗಾರನಾದ ಕಥೆ
    ಘಟನೆಯ ಬಳಿಕ ವಿದ್ಯಾರ್ಥಿ ಪೊಲೀಸರಿಗೆ ಶರಣಾಗತನಾಗಿದ್ದು, ಎಫ್‌ಬಿಐ ಅಧಿಕಾರಿಗಳು ಆರೋಪಿ ಬಾಲಕನನ್ನು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಶ್ವೇತ ಭವನ ಕೂಡ ಈ ಘಟನೆಯನ್ನು ಖಂಡಿಸಿದ್ದು, ದೇಶದಲ್ಲಿ ನಡೆಯುತ್ತಿರುವ ಬಂದೂಕು ದುರ್ಬಳಕೆಯ ಬಗ್ಗೆ ಸೂಕ್ತ ಕ್ರಮದ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.

    Continue Reading

    International news

    WATCH VIDEO : ಅಯ್ಯೋ! ಉದ್ಘಾಟನೆಯಾದ ಅರ್ಧ ಗಂಟೆಯಲ್ಲೇ ಮಾಲ್ ಲೂಟಿ ಮಾಡಿದ ಪಾಕಿಸ್ತಾನಿಯರು

    Published

    on

    ಮಂಗಳೂರು/ಕರಾಚಿ : ಸಾಮಾನ್ಯವಾಗಿ ಮಾಲ್ ಉದ್ಘಾಟನೆ ಆದಾಗ ಆಫರ್ ಗಳನ್ನು ಇಡಲಾಗುತ್ತದೆ.  ಹಾಗಾಗಿ ನೂಕು ನುಗ್ಗಲು ಸಾಮಾನ್ಯ. ಈ ವೇಳೆ ಅಲ್ಲಿನ ಸಿಬ್ಬಂದಿ ನಿಭಾಯಿಸುವ ಅನಿವಾರ್ಯತೆ ಇದೆ. ಆದ್ರೆ, ಪಾಕಿಸ್ತಾನದಲ್ಲಿ ಮಾತ್ರ ಇಡೀ ಮಾಲ್ ನಲ್ಲಿ ಅಲ್ಲೋಲ ಕಲ್ಲೋಲವಾಗಿದೆ.

    ಹೌದು, ಪಾಕಿಸ್ತಾನದ ಕರಾಚಿಯಲ್ಲಿ ‘ಡ್ರೀಮ್ ಬಜಾರ್’ ಹೆಸರಿನ ಮಾಲ್ ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಜನರು ಲೂಟಿ ಮಾಡಿದ್ದಾರೆ.

    ಮಾಲ್ ಉದ್ಘಾಟನೆಯ ಪ್ರಯುಕ್ತ ಬಟ್ಟೆ, ಆಭರಣ, ಮನೆಯ ಅಲಂಕಾರಿಕ ವಸ್ತುಗಳು,  ಗೃಹೋಪಯೋಗಿ ವಸ್ತುಗಳ ಮೇಲೆ ಭಾರಿ ಪ್ರಮಾಣದ ಕೊಡುಗೆ ನೀಡಲಾಗಿತ್ತು. ಮಾಲ್ ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ನುಗ್ಗಿದ ಸಾವಿರಾರು ಜನರು ಅಲ್ಲಿರುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ.

    ಜನರನ್ನು ನಿಯಂತ್ರಿಸಲು ಸೆಕ್ಯುರಿಟಿಗಳು, ಮಾಲ್ ಆಡಳಿತ ಮಂಡಳಿ ಪ್ರಯತ್ನಿಸಿದರೂ ಗ್ಲಾಸ್ ಬಾಗಿಲುಗಳನ್ನು ಒಡೆದು ಜನರು ನುಗ್ಗಿದ್ದಾರೆ. ಮಧ್ಯಾಹ್ನ ಮೂರು ಗಂಟೆಗೆ ಮಾಲ್ ತೆರೆದಿದೆ. 3.30 ಆಗುವಷ್ಟರಲ್ಲಿ ಮಾಲ್ ಸಂಪೂರ್ಣವಾಗಿ ಲೂಟಿಯಾಗಿದೆ.

    ಇದನ್ನೂ ಓದಿ : ಝೈದ್‌ ಖಾನ್‌ ‘ಕಲ್ಟ್’ ಸಿನೆಮಾದಲ್ಲಿ ರಚಿತಾ ರಾಮ್..!

    ಮಾಲ್ ನಲ್ಲಿ ನೂಕು ನುಗ್ಗಲಾದ ದೃಶ್ಯಗಳ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.  ಮಾಲ್ ಸುತ್ತಲೂ ಭಾರಿ ಪ್ರಮಾಣದ ಸಂಚಾರ ದಟ್ಟಣೆ ಉಂಟಾಗಿತ್ತು. ಅಲ್ಲದೇ, ಅಪಾರ ಪ್ರಮಾಣದ ಆಸ್ತಿಗಳಿಗೆ ಹಾ*ನಿಯಾಗಿವೆ. ಮಾಲ್ ನ ಹೊರಗೆ ಸಾವಿರಾರು ಜನರು ಸಿಲುಕಿರುವ ದೃಶ್ಯಗಳು ವೈರಲ್ ವೀಡಿಯೋಗಳಲ್ಲಿವೆ.

    ವಿದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿ ಉದ್ಯಮಿಯೊಬ್ಬರು ಈ ಮಾಲ್ ನಿರ್ಮಿಸಿದ್ದಾರೆ ಎಂದು ಹೇಳಲಾಗಿದೆ.

    Continue Reading

    International news

    ಜಪಾನ್ ಗೆ ಅಪ್ಪಳಿಸಿದ ಚಂಡಮಾರುತ; ಮೂವರು ಬ*ಲಿ

    Published

    on

    ಮಂಗಳೂರು/ಟೋಕಿಯೊ : ನೈಋತ್ಯ ಜಪಾನ್ ನ ಪ್ರಾಂತ್ಯಕ್ಕೆ ‘ಶಾನ್ ಶಾನ್’ ಚಂಡಮಾರುತ ಅಪ್ಪಳಿಸಿದೆ. ಪರಿಣಾಮ ಮೂರು ಮಂದಿ ಸಾ*ವನ್ನಪ್ಪಿದ್ದಾರೆ ಎಂಬುದಾಗಿ ವರದಿಯಾಗಿದೆ.  ಅಲ್ಲದೇ, ಒಬ್ಬರು ನಾಪತ್ತೆಯಾಗಿದ್ದು, ಇಬ್ಬರು ಗಂಭೀ*ರವಾಗಿ ಗಾ*ಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ನೈಋತ್ಯ ಕ್ಯುಶು ದ್ವೀಪ ಪ್ರದೇಶದಲ್ಲಿ ಘಂಟೆಗೆ 198 ಕಿ.ಮೀ.  ವೇಗದಲ್ಲಿ ಚಂಡಮಾರುತ ಅಪ್ಪಳಿಸಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಭಾರಿ ಮಳೆ, ಗಾಳಿಯಿಂದಾಗಿ ಅನೇಕ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.  2.5 ಲಕ್ಷ ಮನೆಗಳ ವಿದ್ಯುತ್ ಕಡಿತ ಉಂಟಾಗಿದೆ. ಚಂಡಮಾರುತವು ವಾರಾಂತ್ಯದಲ್ಲಿ ರಾಜಧಾನಿ ಟೋಕಿಯೊ ಸೇರಿದಂತೆ ಮಧ್ಯ ಮತ್ತು ಪೂರ್ವ ಪ್ರದೇಶಗಳಿಗೆ ವ್ಯಾಪಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಇದನ್ನೂ ಓದಿ : ಗುಜರಾತ್‌ನ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ – ಮಳೆಗೆ 15 ಸಾ*ವು, 23 ಸಾವಿರ ಮಂದಿ ಸ್ಥಳಾಂತರ

    ಅತ್ಯಂತ ಪ್ರಬಲ ಚಂಡಮಾರುತದ ಎಚ್ಚರ ನೀಡಿರುವ ಅಧಿಕಾರಿಗಳು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಲಕ್ಷಾಂತರ ಮಂದಿಗೆ ಸೂಚನೆ ನೀಡಿದ್ದಾರೆ.

    ವಿಮಾನ, ರೈಲು ಸೇವೆ ರದ್ದು :

    ಈಗಾಗಲೇ ಜಪಾನ್ ಏರ್‌ಲೈನ್ಸ್, ಎಎನ್‌ಎ ಹೋಲ್ಡಿಂಗ್ಸ್‌ ಸೇರಿದಂತೆ ವಿಮಾನಯಾನ ಸಂಸ್ಥೆಗಳು 600ಕ್ಕೂ ಹೆಚ್ಚು ದೇಶೀಯ ವಿಮಾನಗಳನ್ನು ರದ್ದುಗೊಳಿಸುವುದಾಗಿ ಪ್ರಕಟಿಸಿದೆ. ಕ್ಯುಶು ದ್ವೀಪದ ಹಲವೆಡೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ವಾಹನ ತಯಾರಿಕಾ ಸಂಸ್ಥೆಗಳಾದ ಟೊಯೊಟಾ ಹಾಗೂ ನಿಸ್ಸಾನ್ ತನ್ನ ಘಟಕಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

    Continue Reading

    LATEST NEWS

    Trending