Thursday, March 23, 2023

ಮೋದಿಯ ಮೇಲೆ ವಿಶಿಷ್ಟ ಪ್ರೀತಿ ಈ ಬಾಲೆಗೆ.. ಆಧುನಿಕ ಶಬರಿಯಾಗಿ ಕಾದಿದ್ದಾಳೆ ಈ ಪುಟ್ಟ ಹರಣಿ..!

ವಿಜಯನಗರ ಕೂಡ್ಲಿಗಿ : ನರೇಂದ್ರ ಮೋದಿ ನಮ್ಮ ಮನೆಗೆ ಬಂದು ಪಾಯಸ ಅನ್ನ ಸಾರು ಉಂಡು ಟೀ ಕುಡಿದು ಹೋಗಬೇಕು ಅದೇ ನನ್ನಾಸೆ..ಎಂದು ಮೂರು ವರ್ಷದ ಬಾಲೆ ಹೇಳುತ್ತಿರುವುದನ್ನು ಕೇಳಿದರೆ..!? ಎಂಥವರೂ ಕೂಡ ಅಚ್ಚರಿ ಪಡುವ ಸಂಗತಿಯಾಗಿದೆ.

ಕಾರಣ ‍ಅವಳಿಗೆ ನರೇಂದ್ರ ಮೋದಿ ಯಾವ ಪಕ್ಷ ಯಾವ ಜಾತಿ ಗೊತ್ತಿಲ್ಲ, ಆತ ಬಾರತದ ಪ್ರಧಾನಿ ಅಂತಾನು ತಿಳಿದಿಲ್ಲ ಆದ್ರೆ ಆತ ಅವಳಿಗೆ ಇಷ್ಟವಂತೆ ತುಂಬಾನೆ ಇಷ್ಟವಂತೆ.

ಬಾಲೆ ಹರಣಿಯ ಮನೆಯಲ್ಲಿ ಟಿವಿ ಕೂಡ ಇಲ್ಲ, ಆದ್ರೆ ನರೇಂದ್ರ ಮೋದಿ ಪರಿಚಯ ಹೇಗಾಯ್ತು..!?

ತನ್ನ ಹಳೆಯ ಸ್ನೇಹಿತನೇನೋ ಅನ್ನೋ ರೀತಿಯಲ್ಲಿ, ನರೇಂದ್ರ ಮೋದಿ ಬಗ್ಗೆ ವಿಚಾರ ಮಾಡುತ್ತಾಳೆ ಆತಿಥ್ಯ ಸ್ವೀಕರಿಸುವಂತೆ ತಮ್ಮ ಮನೆಗೆ ಆಹ್ವಾನಿಸುತ್ತಾಳೆ ಈ ಮೂರು ವರ್ಷದ ಪೋರಿ.

ನರೇಂದ್ರ ಗೊತ್ತಾ.. ಅವನು ನಮ್ಮ ಮನಗೆ ಊಟಕ್ಕೆ ಬರಬೇಕು ಅಷ್ಟೇ…ಅದೇ ನರೇಂದ್ರ ಮೋದಿ ಅವನೇ ನಮ್ಮ ಮನೆಗೆ ಬಂದು ಪ‍ಾಯಸ‍ಾ…ಅನ್ನ ಸಾರು ಉಂಡು ಟೀ ಕುಡಿದು ಹೋಗಬೇಕು..ಅಷ್ಟೇ ..ಅದು ನನ್ನಿಷ್ಟ.. ಅವನು ಬಂದೇ ಬರುತ್ತಾನೆ ಅದು ಅವನಿಷ್ಟ ಎನ್ನುತ್ತಾಳೆ ಹರಣಿ.

ದಿನಕ್ಕೊಮ್ಮೆಯಾದರೂ ಮೋದಿ ಬಗ್ಗೆ ತನ್ನ ತಾಯಿ ರೇಣುಕಮ್ಮಳೊಂದಿಗೆ ವಿಚಾರಿಸುತ್ತಿರುತ್ತಾಳೆ ಈ ಹರಣಿ,

ಆಕೆ ತನ್ನ ಸ್ನೇಹಿತರೊಂದಿಗೆ ಆಟ ಆಡುವಾಗ ಕೂಡ ಸ್ನೇಹಿತರಲ್ಲಿ ಯಾರಾದರೂ ಒಬ್ಬ ಹುಡುಗನಿಗೆ ನರೇಂದ್ರ ಮೋದಿ ಹೆಸರನ್ನಿಡುತ್ತಾಳೆ.

ಇದನ್ನ ಕಂಡ ನೆರೆ ಹೊರೆಯವರು ಬೆರಗಾಗಿದ್ದಾರೆ, ಆಟ ಆಡುವಾಗಲೂ ಕೂಡ ನರೇಂದ್ರ ಮೋದಿ ಯ ಬಗ್ಗೆ ಗುನುಗುಡುವ ಈ ಬಾಲೆ.

ಅವನು ತುಂಬಾ ಒಳ್ಳೆಯವನು ಅದಕ್ಕೇ ನನಗಿಷ್ಟ ಅವನು ತುಂಬಾ ಗೊತ್ತು ನನಗೆ.

ನಾನು ಅವನು ಎಲ್ಲರೂ ಆಟ ಆಡೀವಿ ಈಗ ಬರುವಲ್ಲ ಅಷ್ಟೇ.. ಅವನು ಒಳ್ಳೆವನು ಅದಕ್ಕೇ ಇಷ್ಟ ತುಂಬಾ ಇಷ್ಟ ನನಗೆ ಅನ್ನುತ್ತಾಳೆ ಮೂರರ ಪೋರಿ ಹರಣಿ.

ಬಾಲೆ ಹರಣಿಯ ತಂದೆ ಎರೆಡು ವರ್ಷದ ಹಿಂದೆಯಷ್ಟೇ, ಕೋವಿಡ್ ನಲ್ಲಿ ನಿಧನರಾಗಿದ್ದಾರೆ.

ತಾಯಿ ರೇಣುಕಾ ಹಾಗೂ ಇವಳ ಸಹೋದರ ಬಾಲಕ ವಿನಾಯಕ ಸೇರಿದಂತೆ, ಮೂರೇ ಮೂರು ಜನರಿರುವ ಪುಟ್ಟ ಬಡ ಕುಟುಂಬದಲ್ಲಿ ಜೀವಿಸುವ ಈ ಬಾಲೆಗೆ ನರೇಂದ್ರ ಮೋದಿ ಹೇಗೆ ಸ್ನೇಹಿತನಾದ ತಿಳಿಯದಾಗಿದೆ..

LEAVE A REPLY

Please enter your comment!
Please enter your name here

Hot Topics

ಉಡುಪಿ : ಕಳವಾದ 74 ಲಕ್ಷ ರೂಪಾಯಿ ಸೊತ್ತುಗಳು ಮರಳಿ ಮಾಲಕರಿಗೆ ಹಸ್ತಾಂತರಿಸಿದ ಪೊಲೀಸರು.!

ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ,ದರೋಡೆ ಮತ್ತಿತರ ಕಾರಣಗಳಿಂದ ಸುತ್ತುಗಳನ್ನು ಕಳೆದುಕೊಂಡವರಿಗೆ ಅವರ ಚಿನ್ನಾಭರಣ ಸೊತ್ತು ಮತ್ತು ನಗದನ್ನು ಹಸ್ತಾಂತರಿಸಲಾಯಿತು.ಉಡುಪಿ : ಉಡುಪಿ ಜಿಲ್ಲೆಯ ವಿವಿಧ ಪೊಲೀಸ್...

ಚಿಕ್ಕಮಗಳೂರು : ಬೈಕಿಗೆ ಬಸ್ ಡಿಕ್ಕಿ – ಇಬ್ಬರು ಸವಾರರು ಸ್ಥಳದಲ್ಲೇ ಮೃತ್ಯು..!

ಕೆಎಸ್ಆರ್ ಟಿಸಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರಿನಲ್ಲಿ ಸಂಭವಿಸಿದೆ. ಚಿಕ್ಕಮಗಳೂರು: ಕೆಎಸ್ಆರ್ ಟಿಸಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು...

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದ ಕುಮಟಾದ ಯುವತಿ ಡಿಡೀರ್ ನಾಪತ್ತೆ..! 

ಕುಟುಂಬಸ್ಥರ ಜೊತೆ ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದ ಶ್ರೀ ಕ್ಷೇತ್ರಗಳನ್ನು ಸಂದರ್ಶಿಸಲು ಬಂದಿದ್ದ ಹದಿ ಹರೆಯದ ಯುವತಿ ನಾಪತ್ತೆಯಾಗಿದ್ದಾಳೆ.ಬೆಳ್ತಂಗಡಿ : ಕುಟುಂಬಸ್ಥರ ಜೊತೆ ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದ ಶ್ರೀ ಕ್ಷೇತ್ರಗಳನ್ನು...