Connect with us

    FILM

    ಬಿಕೋ ಎನ್ನುತ್ತಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ಮನೆ ಖರೀದಿಸಿದ ಈ ನಟಿ!

    Published

    on

    ಬಾಲಿವುಡ್ ಚಲನಚಿತ್ರ ನಟ ಸುಶಾಂತ್ ಸಿಂಗ್ ರಜಪೂತ್.. ದೇಶದೆಲ್ಲೆಡೆ ಸಂಚಲನ ಮೂಡಿಸಿತ್ತು ಸುಶಾಂತ್‌ರವರ ನಿಧನ…ಆತ್ಮಹ*ತ್ಯೆ ರೀತಿಯಲ್ಲಿ ಮೇಲ್ನೋಟಕ್ಕೆ ಕಂಡು ಬಂದರೂ ಕೊಲೆಯಾಗಿದ್ದಾರೆ ಎಂದು ಹಲವರ ವಾದವಾಗಿತ್ತು.  2020ರ ಜೂನ್ 14ರಂದು ತಾವು ವಾಸ ಮಾಡುತ್ತಿದ್ದ ಮುಂಬೈನ ಮೋಂಟ್ ಬ್ಲ್ಯಾಂಕ್ ಅಪಾರ್ಟ್​ಮೆಂಟ್​ನಲ್ಲಿ ನಿಗೂಢವಾಗಿ ಸಾ*ವನ್ನಪ್ಪಿದ್ದರು. ಅವರ ಸಾ*ವಿನ ಬಳಿಕ ಅಪಾರ್ಟ್‌ಮೆಂಟ್ ಬಿಕೋ ಅನ್ನುತ್ತಿತ್ತು. ಇದೀಗ ನಟಿಯೊಬ್ಬರು ಅವರ ಮನೆಯನ್ನು ಖರೀದಿಸಿದ್ದಾರೆ.

     

    ಮನೆ ಖರೀದಿಸಿದ ‘ಕೇರಳ ಸ್ಟೋರಿ’ ನಟಿ :

    ಅದಾ ಶರ್ಮಾ ಸುಶಾಂತ್ ರವರ ಅಪಾರ್ಟ್‌ಮೆಂಟ್‌ ನ್ನು ಖರೀದಿಸಿದ್ದಾರೆ. ಹೌದು, ದೇಶದೆಲ್ಲೆಡೆ  ‘ಕೇರಳ ಸ್ಟೋರಿ’ ಸಿನೆಮಾದ ಮೂಲಕ ಸಖತ್ ಸುದ್ದಿಯಲ್ಲಿರುವ ಈ ನಟಿ ಇದೀಗ ಸುಶಾಂತ್ ಇದ್ದ ಮನೆಯನ್ನು ಖರೀದಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

    ಈ ಬಗ್ಗೆ ಆದಾ ಶರ್ಮಾ ಪ್ರತಿಕ್ರಿಯಿಸಿದ್ದು, ‘ನಾನು ಈ ಮನೆಯನ್ನು ನೋಡಲು ಬಂದಾಗ ಎಲ್ಲಾ ಮಾಧ್ಯಮದವರ ಗಮನ ನನ್ನಲ್ಲಿ ಇತ್ತು. ಆದರೆ ನಾನು ನನ್ನ ವೈಯಕ್ತಿಕ ವಿಚಾರವನ್ನು ನನ್ನಲ್ಲಿ ಇಟ್ಟುಕೊಳ್ಳಲು ಬಯಸುತ್ತೇನೆ. ಅದರನ್ನು ಪ್ರಚಾರ ಪಡಿಸಲು ಇಷ್ಟಪಡುವುದಿಲ್ಲ. ಕೇವಲ ಸಿನೆಮಾಗಳಿಗೆ ಮಾತ್ರ ಪ್ರಚಾರ ಬಯಸಲು ಇಷ್ಟಪುಡುತ್ತೇನೆ. ನನ್ನ ಪ್ರೈವೆಟ್ ವಿಚಾರಗಳನ್ನು ಗೌಪ್ಯವಾಗಿ ಇಡಲು ಬಯಸುತ್ತೇನೆ. ಪಬ್ಲಿಸಿಟಿ ಮಾಡಿ ಅದರಿಂದ ಪ್ರಚಾರಗಳಿಸುವ ವ್ಯಕ್ತಿ ನಾನಲ್ಲ’ ಎಂದಿದ್ದಾರೆ.

    ಸುಶಾಂತ್ ಸಿಂಗ್ ಸಾವಿನ ಬಳಿಕ ನಾನಾ ರೀತಿಯ ಕಾರಣಗಳು ಓಡಾಡುತ್ತಿದ್ದವು. ಕೆಲವರು ಡ್ರಗ್ ಅಡಿಕ್ಟ್‌ ಆಗಿದ್ದರು ಎಂದೆಲ್ಲಾ ಸುದ್ದಿ ಮಾಡಿದ್ದರು. ಈ ಬಗ್ಗೆ ಆದಾ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ. ‘ನನಗೆ ಅವರ ಬಗ್ಗೆ ತುಂಬಾ ಗೌರವ ಇದೆ. ಹಾಗಾಗಿ ಈ ಮನೆಯನ್ನು ಖರೀದಿಸಿದ್ದೇನೆ. ಒಬ್ಬ ವ್ಯಕ್ತಿಯ ಮ*ರಣ ನಂತರ ಅವರ ಬಗ್ಗೆ ಕೆಟ್ಟ ರೀತಿಯಲ್ಲಿ ಕಮೆಂಟ್ ಗಳನ್ನು ಮಾಡಬಾರದು. ಟ್ರೋಲ್‌ಗಳನ್ನು ಮಾಡುವುದು ತಪ್ಪು. ನನ್ನನ್ನು ಟ್ರೋಲ್ ಮಾಡುತ್ತೀರಾ? ಮಾಡಿ. ಜಗತ್ತಿನಲ್ಲಿ ಇಲ್ಲದ ವ್ಯಕ್ತಿಯ ಬಗ್ಗೆ ಮಾತನಾಡಬೇಡಿ ಎಂದು ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ.

    ಸುಶಾಂತ್ ಮನೆ ಹೇಗಿದೆ?

     

     

    ಸುಶಾಂತ್ ವಾಸವಾಗಿದ್ದು 4 ಬಿಎಚ್​ಕೆ ಮನೆಯಲ್ಲಿ. ಸಮುದ್ರಕ್ಕೆ ಮುಖ ಮಾಡಿರುವ ಈ ಮನೆ 2500 ವಿಸ್ತೀರ್ಣದಲ್ಲಿದೆ. 6ನೇ ಅಂತಸ್ತಿನಲ್ಲಿ ಈ ಮನೆ ಇದೆ. ಹಲವು ವರ್ಷಗಳಿಂದ ಸುಶಾಂತ್ ಇಲ್ಲಿ ವಾಸವಾಗಿದ್ದರು. ಆದರೆ, ಯಾರೂ ಈ ಮನೆ ಖರೀದಿಸಲು ಮುಂದಾಗಿರಲಿಲ್ಲ. ಇದೀಗ ಆ ಮನೆಯನ್ನು ಅದಾ ಶರ್ಮ ಖರೀದಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    FILM

    ತೆಲಂಗಾಣ ಸರ್ಕಾರದಿಂದ ಟಾಲಿವುಡ್‌ಗೆ ಭಾರೀ ದೊಡ್ಡ ಹೊಡೆತ !!

    Published

    on

    ಮಂಗಳುರು/ ತೆಲಂಗಾಣ : ‘ಪುಷ್ಪ 2’ ಸಿನಿಮಾ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬಳು ಅ*ಪಘಾತದಿಂದ ಜೀ*ವ ಕಳೆದುಕೊಂಡ ಘಟನೆ ತೆಲಂಗಾಣದ ಸಂಧ್ಯಾ ಟಾಕೀಸ್ ಬಳಿ ನಡೆದಿದೆ.

    ಅ*ಪಘಾತದ ವೇಳೆ ತಾಯಿ ಹಾಗೂ ಮಗ ವಾಹನದಲ್ಲಿದ್ದರು. ತಾಯಿ ಮೃ*ತಪಟ್ಟಿದ್ದು, ಮಗ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೃ*ತ ಮಹಿಳಯ ಕುಟುಂಬವನ್ನು ಭೇಟಿ ಮಾಡಿದ ತೆಲಂಗಾಣ ಸಿನಿಮಾಟೊಗ್ರಫಿ ಸಚಿವ ವೆಂಕಟ ರೆಡ್ಡಿ ಅವರಿಗೆ 25 ಲಕ್ಷ ಹಣ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೆಂಕಟ ರೆಡ್ಡಿ ‘ಪುಷ್ಪ 2’ ಸಿನಿಮಾ, ಅಲ್ಲು ಅರ್ಜುನ್ ಅನ್ನು ಟೀಕೆ ಮಾಡಿದ್ದಾರೆ. ತೆಲಂಗಾಣ ವಿಧಾನಸಭೆಯಲ್ಲಿಯೂ ಈ ಬಗ್ಗೆ ಮಾತನಾಡಿರುವ ಸಚಿವ ವೆಂಕಟ ರೆಡ್ಡಿ, ಚಿತ್ರರಂಗಕ್ಕೆ ನೀಡುತ್ತಿರುವ ಎಲ್ಲ ಸವಲತ್ತುಗಳನ್ನು ನಿಲ್ಲಿಸುತ್ತಿರುವದಾಗಿ ಘೋಷಣೆ ಮಾಡಿದ್ದಾರೆ.

    ಈ ಘಟನೆ, ತೆಲಂಗಾಣ ಸರ್ಕಾರ ತೆಲುಗು ಚಿತ್ರರಂಗಕ್ಕೆ ಭಾರಿ ಹೊಡೆತ ಕೊಟ್ಟಿದೆ. ಬಾಲಿವುಡ್ ನಂತರ ತೆಲುಗು ಚಿತ್ರರಂಗವೇ ಭಾರತದ ಅತ್ಯಂತ ದೊಡ್ಡ ಚಿತ್ರರಂಗ. ಬಾಕ್ಸ್ ಕಲೆಕ್ಷನ್​ ಲೆಕ್ಕಹಾಕಿ ನೋಡಿದರೆ ಇಡೀ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡುವ ಚಿತ್ರರಂಗ ಟಾಲಿವುಡ್. ಆದರೆ ಈಗ ತೆಲಂಗಾಣ ಸರ್ಕಾರ ತೆಲುಗು ಚಿತ್ರರಂಗಕ್ಕೆ ಭಾರಿ ದೊಡ್ಡ ಹೊಡೆತ ನೀಡಿದೆ. ಹಾಗಾಗಿ ತೆಲುಗು ಚಿತ್ರರಂಗದ ದೊಡ್ಡ ನಿರ್ಮಾಪಕರು, ಸ್ಟಾರ್ ನಟರು ಚಿಂತಾಮಗ್ನರಾಗಿದ್ದಾರೆ. ತೆಲುಗು ರಾಜ್ಯಗಳಲ್ಲಿ ಸಿನಿಮಾ ಟಿಕೆಟ್ ದರಗಳು ಕಡಿಮೆ ಇವೆ. ಆದರೆ ಯಾವುದೇ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆ ಆಗುವ ಸಮಯದಲ್ಲಿ ನಿರ್ಮಾಪಕರು, ಸರ್ಕಾರದ ಬಳಿ ಮನವಿ ಮಾಡಿಕೊಂಡು ಟಿಕೆಟ್ ಬೆಲೆ ಹೆಚ್ಚಳ ಹಾಗೂ ಹೆಚ್ಚುವರಿ ಶೋ ಹಾಕಿಕೊಳ್ಳಲು ಅನುಮತಿ ಪಡೆದುಕೊಳ್ಳುತ್ತಾರೆ.

    “ಇಷ್ಟು ದಿನ ತೆಲುಗು ಸಿನಿಮಾಗಳಿಗೆ ನೀಡಲಾಗುತ್ತಿದ್ದ ವಿಶೇಷ ಸವಲತ್ತುಗಳು, ಬೆನಿಫಿಟ್ ಶೋಗಳನ್ನು ರದ್ದು ಮಾಡಲಾಗುತ್ತಿದೆ. ಮಾತ್ರವಲ್ಲದೆ ತೆಲುಗು ಸಿನಿಮಾಗಳಿಗೆ ನೀಡಲಾಗುತ್ತಿದ್ದ ಟಿಕೆಟ್ ದರ ಹೆಚ್ಚಳ ಸವಲತ್ತನ್ನು ಸಹ ಹಿಂಪಡೆಯಲಾಗಿದೆ” ಎಂದು ಸಚಿವ ವೆಂಕಟ ರೆಡ್ಡಿ ತೆಲಂಗಾಣ ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಅಲ್ಲದೆ ತಮ್ಮ ಸ್ವಂತ ಖಾತೆಯಿಂದ 25 ಲಕ್ಷ ರೂಪಾಯಿ ಹಣವನ್ನು ಮೃ*ತ ಮಹಿಳೆಯ ಕುಟುಂಬಕ್ಕೆ ನೀಡುತ್ತಿರುವಾಗಿ ಹಾಗೂ ಐಸಿಯುನಲ್ಲಿರುವ ಬಾಲಕ ಶ್ರೀತೇಜ ಅವರ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.

    ತೆಲಂಗಾಣ ಸರ್ಕಾರದ ಈ ನಿರ್ಣಯ ತೆಲುಗು ಚಿತ್ರರಂಗಕ್ಕೆ ಭಾರಿ ದೊಡ್ಡ ಪೆಟ್ಟು ನೀಡಲಿದೆ. ಟಿಕೆಟ್ ದರ ಹೆಚ್ಚಳ ಮತ್ತು ಹೆಚ್ಚುವರಿ ಶೋಗಳು ಇಲ್ಲದಿದ್ದರೆ ತೆಲುಗು ಸಿನಿಮಾಗಳು ಭಾರಿ ನಷ್ಟವನ್ನು ಎದುರಿಸಬೇಕಾಗುತ್ತದೆ. ತೆಲಂಗಾಣ ಸರ್ಕಾರದ ಈ ನಿರ್ಧಾರದಿಂದಾಗಿ ಬಿಗ್ ಬಜೆಟ್ ಸಿನಿಮಾಗಳು ಚಿಂತೆಗೆ ದೂಡಲ್ಪಟ್ಟಿವೆ. ಇದೀಗ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾದ ಮೇಲೆ ಭಾರಿ ಪರಿಣಾಮ ಬೀರಲಿದೆ. ಸಂಕ್ರಾಂತಿಗೆ ಸಹ ಕೆಲವು ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆ ಆಗಲಿದ್ದು, ಅವುಗಳಿಗೂ ಸಹ ಸಮಸ್ಯೆ ಆಗಲಿದೆ.

    Continue Reading

    BIG BOSS

    ಸಾಕು ನಾಯಿಗೋಸ್ಕರ ಬ್ರೇಕಪ್ ಮಾಡಿಕೊಂಡ ‘ಬಿಗ್ ಬಾಸ್ ಸೀಸನ್ 10’ರ ಸ್ಪರ್ಧಿ !

    Published

    on

    ಮಂಗಳೂರು/ಬೆಂಗಳೂರು: ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಹಾಗೂ ಮಾಡೆಲ್ ಆಗಿರುವ ಪವಿ ಪೂವಪ್ಪ ಅವರು ‘ಬಿಗ್ ಬಾಸ್ ಸೀಸನ್ 10’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಸದ್ಯ ಇವರ ಬ್ರೇಕಪ್ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ.

     

    ನಾನು ಏಕೆ ಬ್ರೇಕಪ್ ಮಾಡಿಕೊಂಡೆ ಅನ್ನುವ ವಿಚಾರವನ್ನು ಅವರು ತಿಳಿಸಿದ್ದಾರೆ. ಯುಟ್ಯೂಬ್ ಚಾನಲ್ ವೊಂದಕ್ಕೆ ನೀಡಿರುವ ಸಂದರ್ಶನವಿಗ ಸಖತ್ ವೈರಲ್ ಆಗುತ್ತಿದೆ. ಬಿಗ್ ಬಾಸ್ ಸಮಯದಲ್ಲಿ ತಮ್ಮ ಪ್ರೀತಿ ಬಗ್ಗೆ ಮಾತನಾಡಿದ್ದ ಪವಿ,’ನನ್ನ ಬಾಯ್ ಫ್ರೆಂಡ್ ಐರ್ ಲ್ಯಾಂಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶೀಘ್ರವೇ ನಾವಿಬ್ಬರು ಮದುವೆಯಾಗುತ್ತಿದ್ದೇವೆ’ ಅಂತಾ ಹೇಳಿದ್ದರು.

    ಹೌದು, ಡಿಜೆ ಮ್ಯಾಡಿ ಎಂಬುವವರ ಜೊತೆ ಪವಿ ಪೂವಪ್ಪ ಕಳೆದ ಐದು ವರ್ಷಗಳಿಂದ ರಿಲೇಷನ್ ಶಿಪ್ ನಲ್ಲಿದ್ದರು. ಈ ಜೋಡಿ ಶೀಘ್ರವೇ ಮದುವೆ ಆಗಲಿದೆ ಅಂತಾ ಅನೇಕರು ಅಂದುಕೊಂಡಿದ್ದರಂತೆ. ಆದರೆ ಇದು ಹುಸಿಯಾಗಿದ್ದು, ‘ನಮ್ಮಿಬ್ಬರ ನಡುವೆ ಬ್ರೇಕಪ್ ಆಗಿದೆ’ ಅಂತಾ ಸ್ವತಃ ಪವಿ ಅವರೇ ಯೂಟ್ಯೂಬ್ ಚಾನೆಲ್ ನ ಸಂದರ್ಶನದಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಟೀಂ ಇಂಡಿಯಾದ WTC ಫೈನಲ್ ಭವಿಷ್ಯ !

    ಈ ಬಗ್ಗೆ ಮಾತನಾಡಿರುವ ಪವಿ,”ನಾವು ಐದು ವರ್ಷಗಳಿಂದ ಜೊತೆಗಿದ್ದೇವೆ. ನಮ್ಮಿಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ ಇತ್ತು. ಆದರೆ ಬರುಬರುತ್ತಾ ನನ್ನ ನಾಯಿ ಬಗ್ಗೆ ಅವರಿಗೆ ಸಮಸ್ಯೆ ಶುರುವಾಯಿತು. ಮದುವೆಯಾದ ಮೇಲೆ ಮನೆಯಲ್ಲಿ ನಾಯಿಯನ್ನು ಬಿಡುವುದಿಲ್ಲ ಅಂತಾ ಹೇಳಿದರು. ಇದರಿಂದಲೇ ನಮ್ಮಿಬ್ಬರ ನಡುವೆ ಸಮಸ್ಯೆ ಶುರುವಾಯ್ತು. ಸಣ್ಣಪುಟ್ಟ ವಿಚಾರಗಳಿಗೆ ಕಾರಣ ಕೊಡಲು ಶುರು ಮಾಡಿದರು. ಹೀಗಾಗಿ ನಾನು ಬ್ರೇಕಪ್ ತೀರ್ಮಾನಕ್ಕೆ ಬಂದೆ. ಇದರಿಂದ ನಾನೇ ಹಿಂದೆ ಸರಿದರೆ ಒಳ್ಳೆದು ಅನಿಸಿತು” ಅಂತಾ ಅವರು ಹೇಳಿಕೊಂಡಿದ್ದಾರೆ.

    ಐದು ವರ್ಷಗಳ ಕಾಲ ರಿಲೇಷನ್ ಶಿಪ್ ನಲ್ಲಿದ್ದ ಜೋಡಿ ಇದೀಗ ಬ್ರೇಕಪ್ ಮಾಡಿಕೊಂಡಿರುವುದು ಸಾಕಷ್ಟು ಚರ್ಚೆಯಲ್ಲಿದೆ.

    Continue Reading

    FILM

    ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳುತ್ತಿರುವ ಶಿವಣ್ಣನ ಭೇಟಿಯಾಗಿ ಶುಭ ಹಾರೈಸಿದ ಗಣ್ಯರು

    Published

    on

    ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯ ಉಂಟಾಗಿದ್ದು ಪ್ರಮುಖ ಶಸ್ತ್ರಚಿಕಿತ್ಸೆಯೊಂದಕ್ಕಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಇಂದು ಶಿವಣ್ಣ ತೆರಳಲಿದ್ದು, ಸುದೀಪ್ ಸೇರಿದಂತೆ ಹಲವು ಗಣ್ಯರು ಶಿವಣ್ಣನ ಭೇಟಿಯಾಗಿ ಶುಭ ಹಾರೈಸಿದ್ದಾರೆ.

    ಕಿಚ್ಚ ಸುದೀಪ್ ಅವರು ಶಿವಣ್ಣ ಅವರ ನಿವಾಸಕ್ಕೆ ತೆರಳಿ ಅವರಿಗೆ ಶುಭ ಹಾರೈಸಿದ್ದಾರೆ. ಧೈರ್ಯ ತುಂಬವ ಕಾರ್ಯ ಮಾಡಿದ್ದಾರೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಹಲವು ವರ್ಷಗಳಿಂದ ಅಣ್ಣ ತಮ್ಮಂದಿರಂತೆ ಇದ್ದಾರೆ.

    ಮಾಜಿ ಸಚಿವ, ನಟ ಬಿಸಿ ಪಾಟೀಲ್ ಸಹ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಹೂಗುಚ್ಛ ನೀಡಿ ಶೀಘ್ರ ಗುಣಮುಖವಾಗಿ ಮರಳುವಂತೆ ಶುಭ ಹಾರೈಸಿದ್ದಾರೆ.

    ಸಚಿವ ಮಧು ಬಂಗಾರಪ್ಪ ಅವರು ಸಹ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಶುಭ ಹಾರೈಸಿದ್ದಾರೆ. ಮಧು ಬಂಗಾರಪ್ಪ ಅವರು ಶಿವಣ್ಣ ಅವರ ಆಪ್ತ ಸಂಬಂಧಿ. ಗೀತಾ ಶಿವರಾಜ್ ಕುಮಾರ್ ಅವರ ಸಹೋದರ ಸಹ.

    ನಟ ವಿನೋದ್ ರಾಜ್​ ಕುಮಾರ್ ಅವರು ಸಹ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಅವರೊಟ್ಟಿಗೆ ಕೆಲ ಸಮಯ ಕಳೆದಿದ್ದಾರೆ. ಹಳೆಯ ಗೆಳೆಯರಾದ ಇಬ್ಬರೂ ತುಸು ಸಮಯ ಹರಟೆ ಹೊಡೆದಿದ್ದಾರೆ. ವಿನೋದ್ ತಮ್ಮ ತೋಟದಿಂದ ಹಣ್ಣು-ತರಕಾರಿಗಳನ್ನು ಶಿವಣ್ಣನಿಗೆ ನೀಡಿದ್ದಾರೆ.

     

    ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯ ಉಂಟಾಗಿದ್ದು, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅಮೆರಿಕಕ್ಕೆ ಹೋಗುತ್ತಿದ್ದಾರೆ. ಇಂದು ರಾತ್ರಿ 8:30ಗೆ ಶಿವಣ್ಣ ತೆರಳಲಿದ್ದು, ಅವರೊಟ್ಟಿಗೆ ಪತ್ನಿ ಗೀತಾ ಮತ್ತು ಮಗಳು ನಿವೇದಿತಾ ಸಹ ತೆರಳುವ ಸಾಧ್ಯತೆ ಇದೆ.

    Continue Reading

    LATEST NEWS

    Trending