ಮೂಡುಬಿದಿರೆ: ಇಂದು ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ ಬಿಡುಗಡೆಯಾಗಿ ಧೂಳಿಬ್ಬಿಸುತ್ತಿದೆ. ವಿಶ್ವಾದ್ಯಂತ ಸಿನಿಮಾ ನೋಡಿದ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ.
ಈ ಮಧ್ಯೆ ಮೂಡುಬಿದಿರೆಯ ಯುವ ಕಲಾವಿದನೊಬ್ಬ ವಿಶೇಷ ಕಲಾಕೃತಿ ಮೂಲಕ ರಾಕಿಭಾಯ್‌ಗೆ ಸಲಾಂ ಹೇಳಿದ್ದಾರೆ.
ಮೂಡುಬಿದಿರೆಯ ಯುವ ಕಲಾವಿದ ತಿಲಕ್ ಕುಲಾಲ್ 30 ಅಡಿ ಉದ್ದ ಹಾಗೂ 30 ಅಡಿ ಅಗಲವಾದ ಬೃಹದಾಕಾರದ ಭಾವಚಿತ್ರವನ್ನು ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ಬಿಡಿಸಿದ್ದಾರೆ.
ತಮ್ಮ ಸ್ನೇಹಿತರಾದ ಅಕ್ಷಿತ್ ಕುಲಾಲ್ ಹಾಗೂ ರೋಹಿತ್ ನಾಯ್ಕ್ ಅವರ ಜೊತೆಗೂಡಿ 80 ಕೆ.ಜಿ ಇದ್ದಿಲು ಮತ್ತು 90 ಕೆ.ಜಿ ಮರಳನ್ನು ಬಳಸಿ ರಾಕಿಂಗ್ ಸ್ಟಾರ್ ಯಶ್ ಪೋಸ್ಟರ್ ಬಿಡಿಸಿದ್ದಾರೆ.