Connect with us

chikkamagaluru

ಚಾರ್ಮಾಡಿ ಘಾಟ್ ನಲ್ಲಿ ಕೆಳಕ್ಕೆ ಬಿದ್ದ ಕಾರಿನ ಚಕ್ರ ಕಿತ್ತುಕೊಂಡು ಹೋದ ಕಳ್ಳರು..!

Published

on

ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ ಅಪಘಾತವಾದ ಕಾರಿನ ನಾಲ್ಕು ಟೈರ್‌ ಮಾಯವಾಗಿದೆ. ಕಳ್ಳರು ನಾಲ್ಕು ಡಿಸ್ಕ್ ಸಮೇತ ಕಾರಿನ ಟೈರ್ ಗಳನ್ನೇ ಕದ್ದುಕೊಂಡು ಹೋಗಿದ್ದಾರೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಮಲಯ ಮಾರುತ ಬಳಿ ಈ ದುರಂತ ಘಟನೆ ನಡೆದಿತ್ತು.

ಚಾರ್ಮಾಡಿಯಲ್ಲಿ 30 ಅಡಿ ಆಳದ ಕಂದಕಕ್ಕೆ ಕಾರು ಬಿದ್ದು ಪಲ್ಟಿಯಾಗಿತ್ತು. ಧರ್ಮಸ್ಥಳಕ್ಕೆ ಹೋಗುತ್ತಿದ್ದ ಚಿತ್ರದುರ್ಗ ಮೂಲದ ಪ್ರವಾಸಿಗರ ಕಾರು ಇದಾಗಿದ್ದು, ಸೋಮವಾರ ಡಿಸ್ಕ್ ಸಮೇತ ಕಾರಿನ ನಾಲ್ಕು ಚಕ್ರ ಬಿಚ್ಚಿರೋ ಕಿಡಿಗೇಡಿಗಳು ಹಿಡಿದುಕೊಂಡು ಹೋಗಿದ್ದಾರೆ. ಇನ್ನು ಕಾರು ಮಕಾಡೆ ಬಿದ್ದದ್ದು ಕೂಡಾ ಕಾರಿನ ಟಯರ್ ಕೀಳಲು ಕಳ್ಳರಿಗೆ ಹೆಚ್ಚು ಅನುಕೂಲವಾಗಿದೆ. ಚಾರ್ಮಾಡಿಯಲ್ಲಿ ಹೆದ್ದಾರಿಗೆ ತಡೆಗೋಡೆ ಇಲ್ಲದಿರುವುದೇ ಈ ಅಪಘಾತಕ್ಕೆ ಕಾರಣವಾಗಿದೆ. ಅಪಘಾತವಾದ ವಾಹನದ ಬಿಡಿಭಾಗಗಳನ್ನ ಕದಿಯೋ ತಂಡ ಚಾರ್ಮಾಡಿಯಲ್ಲಿ ಸಕ್ರಿಯವಾಗಿದ್ದು, ಕಾರಿನ ಚಕ್ರದ ಜೊತೆ ಇತರೆ ವಸ್ತುಗಳು ಹಾಗೂ ಬಿಡಿಭಾಗಗಳನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ರಸ್ತೆ ನಿರ್ಮಾಣದ ಕಬ್ಬಿಣ, ಸಿಮೆಂಟ್ ಗಳನ್ನೂ ಕೂಡಾ ಇದೇ ತಂಡ ಕದಿಯುತ್ತಿರುವ ಆರೋಪ ಇದೆ. ಬಣಕಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

chikkamagaluru

ಕರ್ನಾಟಕ ಇನ್ನೂ ನಕ್ಸಲ್ ಮುಕ್ತ ರಾಜ್ಯವಾಗಿಲ್ಲ; ಹಾಗಾದರೆ ಉಳಿದಿರುವ ಆ ಮೋಸ್ಟ್ ವಾಂಟೆಡ್ ನಕ್ಸಲ್ ಯಾರು ?

Published

on

ಮಂಗಳೂರು/ಚಿಕ್ಕಮಗಳೂರು : ಆರು ಜನ ನಕ್ಸಲರ ಶರಣಾಗತಿಯೊಂದಿಗೆ ಕರ್ನಾಟಕ ರಾಜ್ಯ ನಕ್ಸಲ್ ಮುಕ್ತ ರಾಜ್ಯ ಎಂದು ಸರ್ಕಾರ ಹೇಳುತ್ತಿದ್ದರೂ, ಆ ಒಬ್ಬ ಕುಖ್ಯಾತ ನಕ್ಸಲ್ ಇನ್ನೂ ಶರಣಾಗತಿಯಾಗದೇ ತಲೆಮರೆಸಿಕೊಂಡಿದ್ದಾನೆ.

ರಾಜ್ಯದಲ್ಲಿ ಕೆಲ ತಿಂಗಳ ಹಿಂದೆ ಕಾಣಿಸಿಕೊಂಡಿದ್ದ ಎಂಟು ನಕ್ಸಲರ ಪೈಕಿ ವಿಕ್ರಮ್ ಗೌಡ ಎನ್ ಕೌಂಟರ್ ಆಗಿದ್ದರೆ, ಆರು ಮಂದಿ ಬುಧವಾರ ಶರಣಾಗತರಾಗಿದ್ದಾರೆ. ಆದರೆ ಓರ್ವ ನಕ್ಸಲ್ ರವಿಂದ್ರ ಮಾತ್ರ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾನೆ.

ಹೇಗಾದರೂ ಮಾಡಿ ಆತನನ್ನೂ ಶರಣಾಗತಿ ಮಾಡಿಸಲು ನಕ್ಸಲ್ ಶರಣಾಗತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ಪ್ರಯತ್ನಪಟ್ಟಿದ್ದರು. ಆದರೆ ಅದು ಸಾಧ್ಯವಾಗಿಲ್ಲ.

ಜಾತ್ರೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದ ರವೀಂದ್ರ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಕೊಟೆ ಹೊಂಡದ ಮರಾಠ ಕಾಲೋನಿ ನಿವಾಸಿಯಾಗಿರುವ ರವೀಂದ್ರ ನಾಯ್ಕ ಪೊಲೀಸರಿಗೆ ಬೇಕಾಗಿರುವ ಕೊನೆಯ ನಕ್ಸಲ್ ಮುಖಂಡನಾಗಿದ್ದಾನೆ. ಈತ 2007ರಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ನಡೆದ ಎಳ್ಳು ಅಮಾವಾಸ್ಯೆ ಜಾತ್ರೆಯಲ್ಲಿ, ಅಂದು ನಕ್ಸಲ್ ಸಂಘಟನೆಯಲ್ಲಿ ಸಕ್ರೀಯಳಾಗಿದ್ದ ಶ್ರೀಮತಿಯೊಂದಿಗೆ ಕಾಣಿಸಿಕೊಂಡಿದ್ದೇ ಕೊನೆ. ನಂತರ ಆತ ಬಹಿರಂಗವಾಗಿ ಕಾಣಿಸಿಕೊಳ್ಳಲೇ ಇಲ್ಲ.

ಇದನ್ನೂ ಓದಿ: ನಕ್ಸಲರ ಶರಣಾಗತಿ ಬೆನ್ನಲ್ಲೇ ಮುಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳು ಕೊನೆಗೂ ಪತ್ತೆ !

ನಕ್ಸಲ್ ಸಂಘಟನೆ ತೊರೆದ ಶ್ರೀಮತಿ
ರವೀಂದ್ರ ನಾಯಕ ಅವರ ಶ್ರೀಮತಿ ನಕ್ಸಲ್ ಸಂಘಟನೆ ತೊರೆದು ಜಿಲ್ಲಾಡಳಿತದೆದುರು ಶರಣಾದರೂ ರವೀಂದ್ರ ನಾಯ್ಕ ಮಾತ್ರ ಚಳುವಳಿಯಲ್ಲೇ ಸಕ್ರೀಯನಾಗಿದ್ದ. ಆತನ ವಿರುದ್ದ ಶೃಂಗೇರಿ ಪೊಲೀಸ್ ಠಾಣೆಯಲ್ಲೇ ಸುಮಾರು 15 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಚಿಕ್ಕಮಗಳೂರಿನ ಬೇರೆ ಬೇರೆ ಠಾಣೆಗಳು, ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು ಸುಮಾರು 38 ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಹೊರ ರಾಜ್ಯಗಳಲ್ಲೂ ಪ್ರಕರಣಗಳಿವೆ ಎನ್ನಲಾಗಿದೆ.

ಶರಣಾಗತಿಗೆ ಒಪ್ಪುತ್ತಿಲ್ಲ ರವೀಂದ್ರ
ಕಳೆದ 18 ವರ್ಷಗಳ ಹಿಂದೆ ನಕ್ಸಲ್ ಸಂಘಟನೆ ಸೇರಿಕೊಂಡಿದ್ದ ರವೀಂದ್ರ ನಾಯ್ಕ ಈಗ ಶರಣಾಗತಿ ಹೊಂದಿರುವ ಆರು ಜನರಿಗಿಂತಲೂ ಕಿರಿಯ ಎನ್ನಲಾಗುತ್ತಿದೆ. ಇನ್ನೂ ಹೋರಾಟದ ಕಿಚ್ಚಿರುವುದರಿಂದ ಆತ ಶರಣಾಗತಿಗೆ ಒಪ್ಪುತ್ತಿಲ್ಲ ಎಂದೂ ನಿನ್ನೆ ಪ್ರವಾಸಿಮಂದಿರದ ಬಳಿ ನಕ್ಸಲ್ ಸಹಾನುಭೂತಿ ಹೊಂದಿದ ಕೆಲವರು ಈ ಕುರಿತು ಮಾತನಾಡಿಕೊಂಡಿದ್ದಾರೆ.

ಸ್ಪಷ್ಟನೆ ಕೊಟ್ಟ ಗೃಹ ಸಚಿವರು
ಈ ಬಗ್ಗೆ ಸ್ಪಷ್ಟನೆ ಕೊಟ್ಟ ಗೃಹ ಸಚಿವ ಡಾ.ಜಿ. ಪರಮೇಶ್ವರ್, “ನಕ್ಸಲ್ ಚಟುವಟಿಕೆ ಬಗ್ಗೆ ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಶರಣಾಗತರಾಗಿರುವ ಆರು ಜನರೇ ಕೊನೆ ಎಂಬುದಾಗಿದೆ. ನಕ್ಸಲ್ ರವೀಂದ್ರನನ್ನು ಶರಣಾಗತರಾಗಿರುವ ಗುಂಪಿನವರು ಹೊರ ಹಾಕಿದ್ದರು ಎನ್ನುವ ಮಾಹಿತಿ ಇದೆ. ಯಾವ ಕಾರಣಕ್ಕೆ ಹೊರಹಾಕಿದ್ದರು ಎಂಬುದು ಗೊತ್ತಿಲ್ಲ, ತನಿಖೆ ನಡೆದಿದೆ. ನಕ್ಸಲರ ಶಸ್ತ್ರಾಸ್ತ್ರಗಳಿಗೆ ಸಂಬಂಧಪಟ್ಟಂತೆ ಪೊಲೀಸರು ಅಗತ್ಯಕ್ರಮ ಕೈಗೊಳ್ಳಲಿದ್ದಾರೆ” ಎಂದು ಹೇಳಿದ್ದಾರೆ.

ನಕ್ಸಲ್ ಮುಕ್ತ ರಾಜ್ಯ ಎನ್ನುವ ಅಧಿಕೃತ ಘೋಷಣೆ ಹೊರಬೀಳಲು ಅಡ್ಡಿಯಾಗಿರುವ ಕೊನೆಯ ಹೆಸರು ಈಗ ರವೀಂದ್ರ ನಾಯ್ಕನದ್ದಾಗಿದೆ. ಆದರೆ ಈತ ಮಾತ್ರ ನಾಪತ್ತೆಯಾಗಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದೆ.

Continue Reading

chikkamagaluru

ನಕ್ಸಲರ ಶರಣಾಗತಿ ಬೆನ್ನಲ್ಲೇ ಮುಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳು ಕೊನೆಗೂ ಪತ್ತೆ !

Published

on

ಮಂಗಳೂರು/ಚಿಕ್ಕಮಗಳೂರು : ಆರು ಜನ ನಕ್ಸಲರು ಶರಣಾಗತಿ ಆದ ಬೆನ್ನಲ್ಲೇ ಪೊಲೀಸರು ಶಸ್ತ್ರಾಸ್ತ್ರ, ಮದ್ದು ಗುಂಡು ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ಘಟಗಳಲ್ಲಿ ಎರಡು ದಶಕದಿಂದ ಬೇರೂರಿದ್ದ 6 ನಕ್ಸಲರು ಸರ್ಕಾರದ ಮುಂದೆ ಶರಣಾಗಿದ್ದಾರೆ. ಶರಣಾದ ಎಲ್ಲರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಶರಣಾದ ಒಂದೇ ದಿನದಲ್ಲಿ ಮೂರು ಲಕ್ಷ ಪ್ಯಾಕೇಜ್ ಜಿಲ್ಲಾಧಿಕಾರಿ ಖಾತೆಗೆ ವರ್ಗಾವಣೆ ಆಗಿದೆ. ಮತ್ತೊಂದು ಕಡೆ ಎನ್ ಐಎ ತನಿಖೆಗೆ ಆಗ್ರಹಿಸಿ ಕೇಂದ್ರ ಗೃಹ ಇಲಾಖೆಗೆ ಬಿಜೆಪಿ ಮೊರೆ ಹೋಗುತ್ತಿದೆ.

ಶರಣಾಗತಿ ನಂತರ ನ್ಯಾಯದ ಪ್ರಕ್ರಿಯೆ ಶುರುವಾಗಿದೆ. 6 ಜನ ನಕ್ಸಲರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಎನ್ ಐಎ ವಿಶೇಷ ಕೋರ್ಟ್ ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು 6 ನಕ್ಸಲರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಒಟ್ಟು 14 ದಿನಗಳ ಕಾಲ ಅಂದ್ರೆ ಜನವರಿ 30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ್ಯಾಯಾಂಗ ಬಂಧನ ಬೆನ್ನಲ್ಲೆ ನಕ್ಸಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ: ಬೆಳಗಾವಿ ಯೋಧ ರವಿ ಯಲ್ಲಪ್ಪ ಹುತಾತ್ಮ

ಇದೆಲ್ಲದರ ನಡುವೆ ನಿನ್ನೆ ಕೊಪ್ಪ ತಾಲೂಕು ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತಲೆಗುಳಿ ಕುಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ವಶಪಡಿಸಿಕೊಳ್ಳಲಾಗಿದೆ.
ಎಕೆ 56, 303 ರೈಫಲ್, ಸ್ವದೇಶೀ ನಿರ್ಮಿತ ಪಿಸ್ತೂಲ್ ಸೇರಿದಂತೆ ಒಟ್ಟು ಶಸ್ತ್ರಾಸ್ತ್ರಗಳು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅದರಂತೆ 7.62 ಎಂಎಂ ಎಕೆ ಮದ್ದುಗುಂಡು, ಬೋರ್ ಕರ್ಟ್ರಿಜ್ಗಳು, ಸ್ವದೇಶಿ ನಿರ್ಮಿತ ಪಿಸ್ತೂಲ್, ಮದ್ದುಗುಂಡುಗಳು ಸೇರಿದಂತೆ ಒಟ್ಟು 176 ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.

ಜಯಪುರ ಪಿಎಸ್ ನಲ್ಲಿ ಅಪರಾಧ ಸಂಖ್ಯೆ 14/25 ರಲ್ಲಿ ಕಲಂ 3, 25(1), 7 ಮತ್ತು 25(10) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ವಿಕ್ರಂ ಅಮಟೆ ತಿಳಿಸಿದ್ದಾರೆ.
ಶರಣಾದ ನಕ್ಸಲರು ನೀಡಿರುವ ಮಾಹಿತಿ ಆಧರಿಸಿ ಈ ಕಾರ್ಯಚರಣೆ ನಡೆದಿದೆ ಎನ್ನಲಾಗಿದೆ. ನಕ್ಸಲರು ಶಸ್ತ್ರಾಸ್ತ್ರ ಒಪ್ಪಿಸಿಲ್ಲ ಎಲ್ಲಿ ಅಡಗಿಸಿದ್ದಾರೆ ಎನ್ನುವ ಪ್ರಶ್ನೆಗೆ ಮೊದಲ ಹಂತದ ಉತ್ತರ ಸಿಕ್ಕಿದಂತಾಗಿದೆ.

Continue Reading

Baindooru

3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ

Published

on

ವಿಜಯಪುರ: ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. 3ಕ್ಕೆ 3 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದು, ಕೈ ನಾಯಕರ ಆತ್ಮವಿಶ್ವಾಸ ಹೆಚ್ಚಾಗಿದೆ. ಮೂರು ಉಪಚುನಾವಣೆ ಗೆದ್ದ ಕಾಂಗ್ರೆಸ್‌ ನಾಯಕರು ವಿಜಯೋತ್ಸವದಲ್ಲಿ ಬ್ಯುಸಿಯಾಗಿದ್ದಾರೆ.

ಕಾಂಗ್ರೆಸ್ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದರೆ ಬಿಜೆಪಿ ನಾಯಕರಿಗೆ ಬಹಳ ದೊಡ್ಡ ನಿರಾಸೆಯಾಗಿದೆ. ಬಿಜೆಪಿ ನಾಯಕರು ನಿರೀಕ್ಷೆ ಮಾಡದ ತೀರ್ಪನ್ನು ಮೂರು ವಿಧಾನಸಭಾ ಕ್ಷೇತ್ರದ ಮತದಾರರು ನೀಡಿದ್ದು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಸೋಲು ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ಬೇಸರಕ್ಕೆ ಕಾರಣವಾಗಿದೆ.

ಬೈಎಲೆಕ್ಷನ್ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ಮನೆಯಲ್ಲಿನ ಟಿವಿ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲ್ಹಾರ ಪಟ್ಟಣದ ವೀರಭದ್ರಪ್ಪ ಬಾಗಿ ಎಂಬುವವರು ಇಂದು ಬೆಳಗ್ಗೆಯಿಂದ ಉಪಚುನಾವಣಾ ಫಲಿತಾಂಶವನ್ನು ಟಿವಿಯಲ್ಲಿ ನೋಡುತ್ತಾ ಇದ್ದರು. 3ಕ್ಕೆ 3 ಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತಿದ್ದಂತೆ ಟಿವಿ ಒಡೆದು ರಾಜ್ಯ ಬಿಜೆಪಿ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ಒಗ್ಗಟ್ಟಿನ ಕೊರತೆಯಿಂದ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲಾಗಿದೆ. ಬಿಜೆಪಿ ವರಿಷ್ಠರು ಮೊದಲು ಬಿಜೆಪಿ ನಾಯಕರು, ಮುಖಂಡರ ಸಭೆ ಕರೆಯಬೇಕು. ಬಿಜೆಪಿ ನಾಯಕರ ನಡುವಿನ ಒಡಕಿನಿಂದ ಕಾರ್ಯಕರ್ತರು ಹಾಳಾಗುವ ಪರಿಸ್ಥಿತಿ ಬಂದಿದೆ ಎಂದು ವೀರಭದ್ರಪ್ಪ ಬಾಗಿ ಆಗ್ರಹಿಸಿದ್ದಾರೆ.

Continue Reading

LATEST NEWS

Trending

Exit mobile version