LATEST NEWS
ಕಳ್ಳತನಕ್ಕಾಗಿ ಮನೆಗೆ ನುಗ್ಗಿ ಗಾಢ ನಿದ್ರೆಗೆ ಜಾರಿದ ಕಳ್ಳ..!
Published
6 months agoon
By
NEWS DESK3ಉತ್ತರಪ್ರದೇಶ/ಮಂಗಳೂರು: ಮನೆಗೆ ಕಳ್ಳತನಕ್ಕೆಂದು ಬಂದ ಕಳ್ಳನೊಬ್ಬ ಎಸಿಯ ತಂಪು ಗಾಳಿಯಿಂದ ಗಾಢ ನಿದ್ರೆಗೆ ಜಾರಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಭಾನುವಾರ ಮುಂಜಾನೆ ಯಾರೂ ಇಲ್ಲದೇ ಇದ್ದ ಮನೆಯೊಂದಕ್ಕೆ ಕಳ್ಳನೊಬ್ಬ ಕಳ್ಳತನಕ್ಕೆಂದು ನುಗ್ಗಿದ್ದಾನೆ. ಈ ವೇಳೆ ಮದ್ಯಪಾನ ಸೇವಿಸಿದ್ದ ಈತ ಮನೆಯಲ್ಲಿ ಎಸಿ ಹಾಕಿದ್ದರಿಂದ ಅಲ್ಲೇ ಸ್ವಲ್ಪ ಹೊತ್ತು ಕುಳಿತು ತಂಪು ಗಾಳಿ ತೆಗೆದುಕೊಂಡಿದ್ದಾನೆ. ಬಳಿಕ ಕಳ್ಳ ಅಲ್ಲೇ ಗಾಢ ನಿದ್ರೆಗೆ ಜಾರಿದ್ದಾನೆ.
Read More..; ಟಾರ್ಚ್ ಬೆಳಕಿನಲ್ಲಿ ಮತದಾನ..! ರಾಯಚೂರಿನಲ್ಲೊಂದು ಅಪರೂಪದ ಘಟನೆ
ಡಾ. ಸುನಿಲ್ ಪಾಂಡೆ ಎಂಬವರಿಗೆ ಸೇರಿದ್ದ ಮನೆ ಇದಾಗಿದ್ದು ಘಟನೆಯ ವೇಳೆ ಮನೆಯಲ್ಲಿ ಯಾರೂ ಇದ್ದಿರಲಿಲ್ಲ. ಇನ್ನು ಗೇಟ್ ತೆರೆದಿರುವುದನ್ನು ಕಂಡ ಪಕ್ಕದ ಮನೆಯವರು ಮನೆಗೆ ಬಂದು ಪರೀಕ್ಷಿಸಿದ್ದಾರೆ. ಆ ವೇಳೆಗೆ ವ್ಯಕ್ತಿಯೊಬ್ಬ ಎಸಿಯ ಕೆಳಗೆ ಗಾಢ ನಿದ್ರೆಗೆ ಜಾರಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಢ ನಿದ್ರೆಯಲ್ಲಿದ್ದ ಕಳ್ಳನನ್ನು ಎಬ್ಬಿಸಿದ್ದಾರೆ. ತನಿಖೆ ವೇಳೆ ತಾನು ಕಳ್ಳತನಕ್ಕೆಂದು ಬಂದಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಇನ್ನು ಹೆಚ್ಚಿನ ತನಿಖೆಗಾಗಿ ಕಳ್ಳನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
You may like
LATEST NEWS
Viral Video: ಮಿಂಚಿನ ವೇಗದಲ್ಲಿ ಊಟ ಬಡಿಸಿದ ನಾಲ್ವರು ಯುವಕರು
Published
33 minutes agoon
23/11/2024By
NEWS DESK2ಭಂಡಾರ ಔತಣದಲ್ಲಿ ನಾಲ್ವರು ಯುವಕರ ಗುಂಪು ಮಿಂಚಿನ ವೇಗದಲ್ಲಿ ಆಹಾರ ಬಡಿಸುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಗಮನ ಸಳೆದಿದೆ.
X ನಲ್ಲಿ ಹಂಚಿಕೊಳ್ಳಲಾದ ಕ್ಲಿಪ್ ನಲ್ಲಿ, ಕೆಂಪು ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುವ ನಾಲ್ವರು ಯುವಕರು ಜನರ ಸಾಲಿನಲ್ಲಿ ವೇಗವಾಗಿ ಚಲಿಸುತ್ತ ಪೇಪರ್ ಪ್ಲೇಟ್, ಕಪ್ ಮತ್ತು ಬೌಲ್‌ಗಳನ್ನು ಹಾಕುವುದನ್ನು ನೋಡಬಹುದಾಗಿದೆ.
ನಿಖರತೆಯೊಂದಿಗೆ ಏಕಕಾಲದಲ್ಲಿ ಇವರುಗಳು ಆಹಾರ ಬಡಿಸುವುದನ್ನು ವಿಡಿಯೋ ಒಳಗೊಂಡಿದೆ. ಮೊದಲ ಗುಂಪು ಕಾರ್ಯನಿರ್ವಹಿಸುತ್ತಿದ್ದಂತೆ, ಎರಡನೇ ಗುಂಪು ಅದೇ ವೇಗದ ಚಲನೆಯನ್ನು ಕಾಯ್ದುಕೊಳ್ಳುವ ಮೂಲಕ ಗಮನ ಸೆಳೆಯುತ್ತದೆ. “MBBS (ಮಾಸ್ಟರ್ ಇನ್ ಭಂಡಾರ ಮತ್ತು ಬ್ಯಾಚುಲರ್ ಆಫ್ ಸರ್ವಿಂಗ್)” ಎಂಬ ಶೀರ್ಷಿಕೆಯ ಈ ವೀಡಿಯೋ ಬಳಕೆದಾರರು ಬಡಿಸುವ ಅವರ ವೇಗ ಮತ್ತು ಕೌಶಲ್ಯದ ಬಗ್ಗೆ ವಿಸ್ಮಯ ವ್ಯಕ್ತಪಡಿಸಿದ್ದಾರೆ.
Watch Video:
LATEST NEWS
ವಿದ್ಯಾಸಿರಿ ವಿದ್ಯಾರ್ಥಿ ವೇತನ 2 ಸಾವಿರಕ್ಕೆ ಏರಿಕೆ: ಸಿಎಂ ಸಿದ್ದರಾಮಯ್ಯ
Published
1 hour agoon
23/11/2024By
NEWS DESK2ಮೈಸೂರು: ಕರ್ನಾಟಕದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ವಿದ್ಯಾಸಿರಿ ಯೋಜನೆಯಡಿ ಒದಗಿಸುವ 1500 ರೂ. ವಿದ್ಯಾರ್ಥಿ ವೇತನವನ್ನು ಮುಂದಿನ ವರ್ಷದಿಂದ 2000ಕ್ಕೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮೈಸೂರಿನ ಸಿದ್ದಾರ್ಥನಗರದ ಕನಕಭವನದಲ್ಲಿ ಆಯೋಜಿಸಿದ್ದ ‘ಶ್ರೀ ಭಕ್ತ ಕನಕದಾಸರ 537ನೇ ಜಯಂತ್ಯುತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಜೀವನದ ಅನುಭವದಿಂದ ಮೂಡಿಬಂದ ಯೋಜನೆಗಳು ಇವು ಎಂದು ತಿಳಿಸಿದರು.
ಪ್ರೌಢಶಾಲೆಗೆ ಬರುವವರೆಗೂ ತಾವು ಚಪ್ಪಲಿಯನ್ನು ಹಾಕಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ ಮುಖ್ಯಮಂತ್ರಿಗಳು ಎಲ್ಲಾ ಶಾಲಾ ಮಕ್ಕಳು ಶೂ ಹಾಕಬೇಕೆಂದು ಶೂಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ರಾಜ್ಯದಲ್ಲಿ ಹೆಚ್ಚುವರಿ ಹಾಲು ಉತ್ಪಾದನೆಯಾದ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಹಾಲು ಕೊಡಲಾಯಿತು. ಪ್ರಸ್ತುತ ವಾರದಲ್ಲಿ ಆರು ದಿನಗಳು ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಲಾಗುತ್ತಿದೆ ಎಂದರು. ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಅನ್ನಭಾಗ್ಯ ಸಿಗಲಿ ಎನ್ನುವ ಉದ್ದೇಶದಿಂದಲೇ ಆ ಯೋಜನೆ ಶುರು ಮಾಡಿದ್ದಾಗಿ ಹೇಳಿದರು.
ಶಿಕ್ಷಣ ಹಾಗೂ ಪ್ರತಿಭೆ ಯಾರ ಅಥವಾ ಯಾವ ಜಾತಿಯ ಸ್ವತ್ತು ಕೂಡಾ ಅಲ್ಲ. ಶೇಕಡ 90 ಅಂಕಗಳನ್ನು ಪಡೆಯುವುದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ಸಾಧ್ಯ. ಅದಕ್ಕಾಗಿ ಅವರು ಸಾಕಷ್ಟು ಶ್ರಮವಹಿಸಿರುತ್ತಾರೆ. ನಾನು ಕೂಡಾ ಹತ್ತನೇ ತರಗತಿವರೆಗೆ ವಿದ್ಯಾವರ್ಧಕ ಶಾಲೆಯಲ್ಲಿ ಮೊದಲಿಗನಾಗಿದ್ದೆ. ನಂತರ ಪಿಯುಸಿ ತರಗತಿಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆಯ್ದುಕೊಂಡಿದ್ದರಿಂದ ಸ್ವಲ್ಪ ಶ್ರಮ ವಹಿಸಬೇಕಾಯಿತು. ಪಿಯುಸಿ ಹಾಗೂ ಬಿಎಸ್‌ಸಿ ಮತ್ತು ಲಾ ವ್ಯಾಸಂಗವನ್ನು ಸೆಕೆಂಡ್ ಕ್ಲಾಸಿನಲ್ಲಿ ಪಾಸ್ ಮಾಡಿದೆ. ಆದರೆ ವಿದ್ಯಾರ್ಥಿ ಜೀವನದಲ್ಲಿ ಒಮ್ಮೆಯೂ ಫೇಲ್ ಆಗಲಿಲ್ಲ ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.
Baindooru
ಜಾರ್ಖಂಡ್‌ನಲ್ಲಿ ಬಿಗ್ ಟ್ವಿಸ್ಟ್; ಜೆಎಂಎಂ ಮುನ್ನಡೆ – ಎನ್‌ಡಿಎ ಹಿಂದಿಕ್ಕಿದ ಇಂಡಿಯಾ ಒಕ್ಕೂಟ
Published
1 hour agoon
23/11/2024By
NEWS DESK2ರಾಂಚಿ: ಜಾರ್ಖಂಡ್‌ನಲ್ಲಿ ಆಡಳಿತಾರೂಢ ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ಒಳಗೊಂಡ ‘ಇಂಡಿಯಾ’ ಮೈತ್ರಿಕೂಟ ವಿಧಾನಸಭಾ ಚುನಾವಣೆಯಲ್ಲಿ ಬಹುಮತದ ಗಡಿ ದಾಟಿದೆ.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾದ ನಂತರ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜೆಎಂಎಂ ಮತ್ತೆ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ಬೆಳಗ್ಗೆ 10.30ಕ್ಕೆ ರಾಜ್ಯದ 81 ಸ್ಥಾನಗಳ ಪೈಕಿ 51ರಲ್ಲಿ ಇಂಡಿಯಾ ಮೈತ್ರಿಕೂಟ ಮುಂದಿದೆ. 28 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ.
ಜಾರ್ಖಂಡ್ ವಿಧಾನಸಭೆಗೆ ಬಹುಮತಕ್ಕೆ 41 ಸ್ಥಾನಗಳು ಅಗತ್ಯವಿದೆ. ರಾಜ್ಯಕ್ಕೆ ನ.13 ರಂದು ಮೊದಲ ಹಂತದ ಮತದಾನವು 43 ಕ್ಷೇತ್ರಗಳಿಗೆ ಹಾಗೂ ಎರಡನೇ ಹಂತದಲ್ಲಿ 38 ಸ್ಥಾನಗಳಿಗೆ ಮತದಾನ ನಡೆದಿತ್ತು.
ಮ್ಯಾಟ್ರಿಜ್ ಪ್ರಕಾರ, ಎನ್‌ಡಿಎ 42-47 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿತ್ತು. ಜೆಎಂಎಂ ನೇತೃತ್ವದ ಮೈತ್ರಿಕೂಟವು 25-30 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಬಹುದು ಎಂದು ಸಮೀಕ್ಷೆಗಳು ಹೇಳಿತ್ತು. ಆದರೆ, ಬಹುಪಾಲು ಸಮೀಕ್ಷೆಗಳು ಉಲ್ಟ ಆದಂತಿದೆ. ಆದಾಗ್ಯೂ, ಆಕ್ಸಿಸ್ ಮೈ ಇಂಡಿಯಾ ಮತ್ತು ಪಿ ಮಾರ್ಕ್ ಸಮೀಕ್ಷೆ ಭಿನ್ನವಾಗಿತ್ತು. ಜೆಎಂಎಂ ನೇತೃತ್ವದ ಇಂಡಿಯಾ ಬ್ಲಾಕ್ 49-59 ಮತ್ತು ಎನ್‌ಡಿಎ ಮೈತ್ರಿಕೂಟ 37-47 ಸ್ಥಾನ ಪಡೆಯಬಹುದು ಎಂದು ಅಂದಾಜಿಸಿದ್ದವು. ಬಹುಪಾಲು ಇದು ನಿಜವಾದಂತೆ ಕಾಣುತ್ತಿದೆ.
LATEST NEWS
ಕರ್ನಾಟಕ ಉಪಚುನಾವಣೆ : ‘ಕೈ’ ಹಿಡಿದ ಮತದಾರ…ಕಮಲಕ್ಕೆ ಶಾಕ್
ಮಹಾರಾಷ್ಟ್ರದಲ್ಲಿ ಮಹಾಯುತಿಗೆ 200+ ಕ್ಷೇತ್ರಗಳಲ್ಲಿ ಮುನ್ನಡೆ
ಬಾಗಲಕೋಟೆ ಹೇರ್ ಡ್ರೈಯರ್ ಸ್ಫೋಟಕ್ಕೆ ಬಿಗ್ ಟ್ವಿಸ್ಟ್: ಪ್ರಕರಣದ ಹಿಂದಿದೆ ಪ್ರೇಮ ಪುರಾಣ
ಪತಿ ಮೇಲೆ ಅನುಮಾನ; ಇಬ್ಬರು ಮಕ್ಕಳನ್ನು ಕೊಂ*ದ ಪಾಪಿ ತಾಯಿ!
ನೀರಸ ಪ್ರದರ್ಶನ ಮುಂದುವರಿಸಿದ ಭಾರತ: ವಿವದಾತ್ಮಕ ತೀರ್ಪಿಗೆ ರಾಹುಲ್ ಬಲಿ !
ನ್ಯೂ ಇಯರ್ ನಶೆಗೆ ಸಿಸಿಬಿ ಬ್ರೇಕ್..! 6 ಕೋಟಿ ಮೌಲ್ಯದ ಡ್ರ*ಗ್ಸ್ ಜಪ್ತಿ..!
Trending
- LATEST NEWS3 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS5 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- LIFE STYLE AND FASHION2 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- Baindooru21 hours ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!