Tuesday, March 28, 2023

ಸಾರ್ವಜನಿಕರ ವಿರುದ್ದವೇ ಪೊಲೀಸರಿಗೆ ದೂರು ಕೊಟ್ಟ ಕಳ್ಳ !!

ಸಾಮಾನ್ಯವಾಗಿ ದರೋಡೆಕೋರನ ಮೇಲೆ ನಾವು ಪ್ರಕರಣಗಳನ್ನು ದಾಖಲಿಸುವುದನ್ನ ನೋಡಿದ್ದೇವೆ, ಆದರೆ ಇಲ್ಲೊಬ್ಬ ದರೋಡೆಕೋರ ಜನರ ಮೇಲೆ ಪ್ರಕರಣ ದಾಖಲಿಸಿರುವ ವಿಚಿತ್ರ ಪ್ರಕರಣ ರಾಜ್ಯರಾಜಧಾನಿಯಲ್ಲಿ ವರದಿಯಾಗಿದೆ.

ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ರಿಚ್‌ಮಂಡ್ ರಸ್ತೆಯಲ್ಲಿ ಶಸ್ತ್ರಗಳನ್ನು ಹೊಂದಿದ್ದ ದರೋಡೆ ಕೋರನೊಬ್ಬ ನನ್ನನ್ನು ಜನರು ಹಿಡಿದು ಸರಿಯಾಗಿ ಥಳಿಸಿದ್ದರು.

ದೈಹಿಕವಾಗಿ ಹಲ್ಲೆಗೊಳಗಾಗಿದ್ದ ಈ ದರೋಡೆಕೋರ ನನ್ನ ಮೇಲೆ ಹಲ್ಲೆ ಮಾಡಿರುವ ಜನರ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ನೀಡಿದ್ದಾನೆ.

ಡೊಮ್ಮಲೂರಿನ 18 ವರ್ಷದ ರಿತೇಶ್ ಜಯಕುಮಾರ್ ಎನ್ನುವ ವ್ಯಕ್ತಿ ಕಳ್ಳತನ ಮಾಡಲು ಪ್ರಯತ್ನಿಸಿ ಸೆ .2 ರಂದು ಮಧ್ಯಾಹ್ನ ಸಿಕ್ಕಿಬಿದ್ದಿದ್ದು, ಕಳ್ಳತನ ವಿಫಲವಾದ ನಂತರ ತಪ್ಪಿಸಿಕೊಳ್ಳಲು ಯತ್ನಿಸಿ ಜನರ ಕೈಗೆ ಸಿಕ್ಕಿದ್ದಾನೆ.

ಚಾಕು ಹೊಂದಿದ್ದ ಆತ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕ್ಯಾಬ್‌ ಬಳಿ ಬಂದು ತನ್ನ ಸೆಲ್ ಫೋನ್ ಮತ್ತು ಹಣ ನೀಡುವಂತೆ ಚಾಲಕ ಪ್ರತಾಪ ಪಾಟೀಲ್‌ಗೆ ಬೆದರಿಕೆ ಹಾಕಿದ್ದ.

ಚಾಲಕ ಪಾಟೀಲ್ ಆತನ್ನ ಕಾರಿನಿಂದಲೇ ಹೊರಗೆ ತಳ್ಳಿ, ಜನರನ್ನು ಸಹಾಯಕ್ಕಾಗಿ ಕರೆದಿದ್ದಾರೆ. ಅಲ್ಲೇ ಇದ್ದ ಕೆಲವು ದಾರಿಹೋಕರು ಮತ್ತು ವಾಹನ ಸವಾರರು ಪಾಟೀಲರ ಸಹಾಯಕ್ಕೆ ಧಾವಿಸಿ ಜಯಕುಮಾರ್‌ನನ್ನು ಹಿಡಿಯಲು ಪ್ರಯತ್ನಿಸಿದರು.

ಕಳ್ಳ ದಾಳಿ ಮಾಡಲು ಪ್ರಯತ್ನಿಸಿದ್ದ ಕಾರಣ ಕೋಪಗೊಂಡ ಜನರು , ಅವನಿಗೆ ಒಂದೆರಡು ಹೊಡೆತಗಳನ್ನು ಹೊಡೆದಿದ್ದಾರೆ.

ಹೆದ್ದಾರಿಯಲ್ಲಿ ಬೇರೆ ಜನರು ವಾಹನ ಸಂಚಾರಕ್ಕೆ ತೊಂದರೆಯಾದ ಹಿನ್ನೆಲೆ ಗಲಾಟೆ ಮಾಡಿದ ಕಾರಣ ಕಳ್ಳ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ. ನಾವು ಗಾಯಗೊಂಡ ದರೋಡೆಕೋರನನ್ನು ಪತ್ತೆ ಮಾಡಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ಇದಕ್ಕೆ ಪ್ರತಿಯಾಗಿ ಪೊಲೀಸರಿಗೆ ದೂರು ನೀಡಿರುವ ಜಯಕುಮಾರ್, ರಿಚ್ಮಂಡ್ ಟೌನ್ ನಲ್ಲಿ ತನ್ನ ವಾಹನದಲ್ಲಿ ಕುಳಿತಿದ್ದ ಚಾಲಕನನ್ನ ಸಂಜೆ 4 ಗಂಟೆಯ ಸುಮಾರಿಗೆ ಚಾಕುವಿನಲ್ಲಿ ಬೆದರಿಸಿ ದರೋಡೆ ಮಾಡಲು ಯತ್ನಿಸಿದ್ದೇನೆ.

ನಾನು ಅವನ ಮೊಬೈಲ್ ಮತ್ತು ವ್ಯಾಲೆಟ್ ಕಸಿದುಕೊಳ್ಳಲು ಬಯಸಿದ್ದೆ. ಆದರೆ ಆತ ತಪ್ಪಿಸಿಕೊಂಡು ಸಹಾಯಕ್ಕಾಗಿ ಕೂಗಿದ. ಆತನ ಕಿರುಚಾಟವನ್ನು ಕೇಳಿ 30-40 ಜನರು ನನ್ನನ್ನು ಸುತ್ತುವರಿದು ಥಳಿಸಿದರು.

ನನ್ನ ತಲೆ, ತುಟಿ, ಕೈ ಮತ್ತು ಕಾಲುಗಳ ಮೇಲೆ ಗಾಯಗಳಾಗಿವೆ.

ನನ್ನ ಮೇಲೆ ದಾಳಿ ಮಾಡಿದ ಮತ್ತು ಹೊಡೆದ ಅಪರಿಚಿತ ವ್ಯಕ್ತಿಗಳ ವಿರುದ್ಧ ನಾನು ಕಾನೂನು ಕ್ರಮವನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾನೆ.

ಆತನ ದೂರಿನ ನಂತರ, ಪೋಲಿಸರು ಅಲ್ಲಿದ್ದ ಜನರ ವಿರುದ್ಧ ಸೆಕ್ಷನ್ 323 (ಸ್ವಯಂಪ್ರೇರಣೆಯಿಂದ ಹಾನಿ) ಮತ್ತು 341(ತಪ್ಪು ನಡುವಳಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಾಕು ಹೊಂದಿದ್ದ ದರೋಡೆಕೋರನನ್ನು ಹಿಡಿಯಲು ತಮ್ಮ ಜೀವವನ್ನು ಪಣಕ್ಕಿಟ್ಟವರ ವಿರುದ್ಧ ಪೊಲೀಸರು ಹೇಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದಾಗ,

ದುಷ್ಕರ್ಮಿಗಳನ್ನು ಹಿಡಿಯುವಲ್ಲಿ ನಾವು ಸಾರ್ವಜನಿಕ ಸಹಕಾರವನ್ನು ಬಯಸುತ್ತೇವೆ.

ಆದರೆ ಶಂಕಿತರನ್ನು ಹೊಡೆದುರುಳಿಸಿ ಕಾನೂನನ್ನು ಕೈಗೆ ತೆಗೆದುಕೊಳ್ಳದಂತೆ ನಾವು ಜನರನ್ನು ವಿನಂತಿ ಮಾಡುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಕಾರ್ಕಳ : ಅನಾರೋಗ್ಯದಿಂದ ಸಾವನ್ನಪ್ಪಿದ ಮನೆ ಮಗನ ಆಘಾತದಿಂದ ತಾಯಿ ಜೀವಾಂತ್ಯ..!

ಮಗನನ್ನು ಕಳೆದುಕೊಂಡ ನೋವಿನಲ್ಲಿ ತಾಯಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ಸೋಮವಾರ ನಡೆದಿದೆ.ಕಾರ್ಕಳ : ಮಗನನ್ನು ಕಳೆದುಕೊಂಡ ನೋವಿನಲ್ಲಿ ತಾಯಿಯೊಬ್ಬರು...

ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ-20 ಉಮ್ರಾ ಯಾತ್ರಾರ್ಥಿಗಳ ದಾರುಣ ಮೃತ್ಯು..!

ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 20 ಉಮ್ರಾ ಯಾತ್ರಿಕರು ಸಾವನ್ನಪ್ಪಿದ್ದಾರೆ ಮತ್ತು 29 ಮಂದಿ ಗಾಯಗೊಂಡಿದ್ದಾರೆ.ಜಿದ್ದಾ: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 20 ಉಮ್ರಾ...

ಮಂಗಳೂರು : ಅಡ್ಯಾರ್ ಬಳಿ ಐಸ್ ಕ್ರೀಮ್ ದಾಸ್ತಾನು ಮಳಿಗೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸೊತ್ತು ನಾಶ..!

ಮಂಗಳೂರು ಹೊರವಲಯದ ಅಡ್ಯಾರ್ ಬಳಿ ಐಸ್ ಕ್ರೀಮ್ ದಾಸ್ತಾನು ಮಳಿಗೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿದೆ.ಮಂಗಳೂರು : ಮಂಗಳೂರು ಹೊರವಲಯದ ಅಡ್ಯಾರ್ ಬಳಿ ಐಸ್ ಕ್ರೀಮ್ ದಾಸ್ತಾನು ಮಳಿಗೆಗೆ ಬೆಂಕಿ...