Connect with us

LATEST NEWS

ಉಡುಪಿ: ಮನೆಗೆ ನುಗ್ಗಿ 25 ಲಕ್ಷ ಮೌಲ್ಯದ ಚಿನ್ನ-ಹಣ ಕದ್ದ ಕಳ್ಳ ಅಂದರ್

Published

on

ಉಡುಪಿ: ಮನೆಯ ಒಳಗೆ ನುಗ್ಗಿ 25 ಲಕ್ಷ ಮೌಲ್ಯದ ಚಿನ್ನ ಸಹಿತ ಹಣವನ್ನು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಉಡುಪಿಯ ಮೂಡನಿಡಂಬೂರು ಗ್ರಾಮದ ಕೋರ್ಟ್ ಬಳಿ ನಡೆದಿದೆ.

ಬಾಗಲಕೋಟೆ ಮೂಲದ ಮುತ್ರಪ್ಪ ಬಸಪ್ಪ ಮಾವರಾಣಿ ಬಂಧಿತ ಆರೋಪಿ.


ಜುಲೈ 19 ರಂದು ಉಡುಪಿಯ ವಾಣಿ ವಿ. ರಾವ್, ರಾಣೆ ಅವರ ರುಕ್ಷ್ಮಿಣಿ ಕೃಷ್ಣ ಮನೆಗೆ ಕಳ್ಳನೋರ್ವ ಬೆಳಿಗ್ಗೆ ಮನೆಗೆ ಪ್ರವೇಶಿಸಿ ಬೆಡ್‌ರೂಂನಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್‌ನಲ್ಲಿ ಇರಿಸಿದ ಬೂದು ಬಣ್ಣದ ಪರ್ಸ್‌ನಲ್ಲಿ ರೂ 45,000/- ನಗದು ಮತ್ತು

ಕಪ್ಪು ಬಣ್ಣದ ವ್ಯಾನಿಟಿ ಬ್ಯಾಗ್‌ನಲ್ಲಿರಿಸಿದ್ದ 5 ಪವನ್ ತೂಕದ ಪಚ್ಚೆಕಲು ಇರುವ ಚಿನ್ನದ ಬ್ರೇಸ್‌ಲೆಟ್ , 6 ಐವನ್ ತೂಕದ ಮುತ್ತಿನ ಬಳೆ-2, 5 ಪವನ್ ತೂಕದ ಚಿನ್ನದ ಖಡಗೆ ಬಳೆಗಳು-2,

6 ಪವನ್ ತೂಕದ ಚಿನ್ನದ ಸರ ಮತ್ತು 1 ಪವನ್ ತೂಕದ ಪೆಂಡೆಂಟ್, 6 ಪವನ್ ತೂಕದ ಮಲೆಗೆ ಮೊಗ್ಗು ಚಿನ್ನದ ಸರ, 14 ಪವನ್ ತೂಕದ ಚಿನ್ನದ ಸರ ಮತ್ತು ನೀಲಿ ಹರಳಿನ ಪೆಂಡೆಂಟ್ ,ನೀಲಿ ಕಲಿನ ಬೆಂಡೋಲೆ ಮತ್ತು ಕರಮಣಿ ಹರಳಿನ ಬೆಂಡೋಲೆ – 2ಜೊತೆ ಜುಮ್ಕಿ ಮತ್ತು ಮಾಟಿ- 2 ಜೊತೆ,

1 ಪವನ್‌ ತೂಕದ ಚಿನ್ನದ ತುಂಡುಗಳು ಮತ್ತು ಕೆಕ್ಕಿ: 10) 3 ಪವನ್ ತೂಕದ ಚಿನ್ನದ ನೆರೆಸ್ , 2 ಪವನ್ ತೂಕದ ಗ್ರೆನೆಟ್ ಹರಳಿನ ನೆರೆಸ್ ಮತ್ತು ಸುಮಾರು 3 ಪವನ್‌ನ ಗ್ರೇನೆಟ್ ಹರಳಿನ ಬಳೆ, 4 ಗ್ರಾಮ್ ನ ಚಿನ್ನದ ನಾಣ್ಯ-6, 4 ರೇಷ್ಮೆ ಸೀರೆಗಳು ಮತ್ತು 1 ಸಾಧಾರಣ ಸೀರೆಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂ. 25,00,000/- ಆಗಿರಬಹುದೆಂದು ಅಂದಾಜಿಸಲಾಗಿದೆ.

ಆರೋಪಿ ಪತ್ತೆಯ ಬಗ್ಗೆ ವಿಶೇಷ ಕರ್ತವ್ಯದಲ್ಲಿ ಹೋದ ಠಾಣಾ ಸಿಬ್ಬಂದಿಗಳಾದ ಹೆಚ್‌ ಸಿ 2209 ಸತೀಶ್‌ ಜಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮುತ್ತಪ್ಪನನ್ನು ಬಾಗಲಕೋಟೆ ಜಿಲ್ಲೆ, ನೀಲನಗರ, ಸಿದ್ಧೇಶ್ವರ ಕ್ರಾಸ್ ಬಳಿಯಿಂದ ವಶಕ್ಕೆ ಪಡೆದು ಆರೋಪಿಯಿಂದ 10ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 38,500 ನಗದನ್ನು ವಶಪಡಿಸಿ ಮಾನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆತನಿಗೆ ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಪ್ರಕರಣದಲ್ಲಿ, ಆರೋಪಿ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್. ವಿಷುವರ್ಧನ್, ಐಪಿಎಸ್, ಉಡುಪಿ ರವರ ಆದೇಶದಂತೆ, ಶ್ರೀ ಸಿದ್ಧಲಿಂಗಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ಸುಧಾಕರ ಸದಾನಂದ ನಾಯ್ಕ, ಡಿವೈಎಸ್‌ಪಿ ಉಡುಪಿ ರವರ ನಿರ್ದೇಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್‌

ನಾಯಿ, ಡಿವೈಎಸ್ಪಿ, ಉಡುಪಿ ರವರ ನಿರ್ದೇಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್‌  ಮಾರ್ಗದರ್ಶನದಂತೆ ಪಿ.ಎಸ್.ಐ-1 ಮಹೇಶ್ ಟಿ,ಎಮ್, ಪ್ರಸಾದ್‌ಕುಮಾರ್ , ಪೊಲೀಸ್‌ ಉಪ ನಿರೀಕ್ಷಕರು ತನಿಖೆ-1, ಹಾಗೂ ಸಿಬ್ಬಂದಿಯವರಾದ ಎ.ಎಸ್‌.ಐ ಆರುಣ್ ಸತೀಶ್ ಬೆಳ್ಳೆ ಹಿಡನ್: ಚೇತನ್ ಅನಂದ ಕಾರ್ತಿಕ್, ಕುಮಾರ್ ನಯ್, ಗಡಯ, ಹೇಮಂತ್, ಶಿವಕುಮಾರ್, ಸಹಕರಿಸಿದ್ದಾರೆ.

 

LATEST NEWS

ಏನಿದು ‘ವಿಮಲ್ ಪಾನ್ ಮಸಾಲಾ ಐಸ್‌ ಕ್ರೀಮ್’..! ಜನರು ಉಗಳಬೇಕೋ, ನುಂಗಬೇಕಾ ಎಂದು ಪ್ರಶ್ನೆ ಮಾಡಿದ್ಯಾಕೆ?

Published

on

ಇತ್ತೀಚಿನ ದಿನಗಳಲ್ಲಿ ಫುಡ್‌ಗಳಲ್ಲಿ ಎಕ್ಸ್ಪ ರಿಮೆಂಟ್ ಮಾಡೋದು ಜಾಸ್ತಿ ಆಗಿದೆ. ಹಿಂದೆಲ್ಲ ಫುಡ್ ಅಂದ್ರೆ ಅದು ರುಚಿಕರವಾಗಿ ಸ್ವಾದಭರಿತವಾಗಿ ಇರುತ್ತಿತ್ತು.  ಜೊತೆಗೆ ಆರೋಗ್ಯಕರವಾಗಿಯೂ ಇರುತ್ತಿತ್ತು. ಆದರೆ ಈಗೀಗ ಫುಡ್‌ಗಳ ಎಕ್ಸ್ಪ ರಿಮೆಂಟ್‌ಗಳಿಂದಾಗಿ ಮನಷ್ಯನ ಆರೋಗ್ಯವೂ ಕೈ ತಪ್ಪಿ ಹೋಗುತ್ತಿದೆ. ಲೈಕ್ಸ್, ಕಮೆಂಟ್‌ಗಳ ಮೋಜಿಗೆ ಬಿದ್ದ ಜನರು ಸಿಕ್ಕ ಸಿಕ್ಕ ಒಂದಕ್ಕೊಂದು ಹೊಂದಾಣಿಕೆಯೇ ಇಲ್ಲದ ಐಟಂ ಗಳಿಂದ ಆಹಾರ ತಯಾರಿಸುತ್ತಿದ್ದಾರೆ.

ಇದೀಗ ವಿಮ್ ಪಾನ್ ಮಸಾಲಾ ಮಿಶ್ರಿತ ಐಸ್‌ಕ್ರೀಂ ಒಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಪಾನ್ ಮಸಾಲಾ ಸಹಿತವಾದ ಐಸ್‌ಕ್ರೀಮ ತಯಾರಿಸಿದ ರೀತಿ ಹಾಗೂ ಅದನ್ನು ಡೆಕೋರೇಟ್ ಮಾಡಿದ ರೀತಿಗೆ ಜನ ಫಿದಾ ಆಗಿದ್ದಾರೆ.

ಮುಂದೆ ಓದಿ..; ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋದರೆ ಒಳ್ಳೆಯದಾ..? ಕೆಟ್ಟದ್ದಾ..?

ಬಾಲಿವುಡ್ ಸ್ಟಾರ್ ಅಜಯ್ ದೇವಗನ್, ಶಾರುಖ್‌ ಖಾನ್‌ ಹಾಗೂ ಅಕ್ಷಯ್ ಕುಮಾರ್ ಅವರು ಪ್ರಚಾರ ಮಾಡ್ತಾ ಇರೋ ವಿಮಲ್ ಎಲೈಚಿ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಬೋಲೋ ಜುಬಾನ್ ಕೇಸರ್ ಕಿ ಅಂತ ಹೇಳೋ ಈ ಜಾಹಿರಾತು ಸಾಕಷ್ಟು ಫೇಮಸ್ ಆಗಿದೆ.  ಆದ್ರೆ ಇದೀಗ ಇದೇ ವಿಮಲ್ ಪಾನ್ ಮಸಾಲಾ ಐಸ್‌ ಕ್ರೀಮ್ ಜೊತೆಗೆ ಹೊಸ ರೂಪ ಪಡೆದುಕೊಂಡಿದೆ. ಈ ರೀತಿ ವಿಮಲ್ ಪಾನ್ ಮಸಾಲಾ ಜೊತೆಗೆ ಐಸ್‌ಕ್ರೀಂ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸಿದ್ದು, ಜನರು ಈ ವೀಡಿಯೋಗೆ ಕಮೆಂಟ್ ಮಾಡುತ್ತಿದ್ದಾರೆ.

ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಿಮಲ್ ಪಾನ್ ಮಸಾಲಾ ಬಳಸಿ ವಿಶೇಷ ಐಸ್ ಕ್ರೀಂ ತಯಾರಿಸಲಾಗಿದೆ. ಮೊದಲಿಗೆ ಐಸ್‌ಕ್ರೀಮ್ ಪ್ಲೇಟ್ ಮೇಲೆ ವಿಮಲ್ ಪಾನ್ ಮಸಾಲಾ ಹಾಕಿ ನಂತರ ಅದರ ಮೇಲೆ ಐಸ್‌ಕ್ರೀಂ ಹಾಕುತ್ತಾರೆ. ಬಳಿಕ ಅವೆರಡರ ಮಿಶ್ರಣ ಮಾಡಿ  ರೋಲ್ ಮಾಡಿ ಡೆಕೋರೇಟ್ ಮಾಡ್ತಾರೆ. ಇದಕ್ಕೆ ಕೆಲವೊಂದು ಸಾಸ್‌ಗಳನ್ನೂ ಕೂಡಾ ಬಳಸಿ ಚಾಕೋಲೇಟ್ ಚಿಪ್ಸ್‌ ಮುಂತಾದವುಗಳನ್ನು ಸೇರಿಸಿಕೊಂಡಿದ್ದಾರೆ. ಒಟ್ಟಾರೆ ಹೇಳ್ಬೇಕಂದ್ರೆ ಕಲರ್ ಫುಲ್ ಆಗಿ ರೆಡಿಯಾದ ಪಾನ್ ಐಸ್ ಕ್ರೀಂ ನೋಡಿ ಜನ ಅಂತು ಫಿದಾ ಆಗಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬರೋಬ್ಬರಿ 23ಮಿಲಿ ಜನರು ವೀಕ್ಷಕಣೆ ಮಾಡಿದ್ದು, ಪರ ವಿರೋಧ ಚರ್ಚೆಗಳಾಗುತ್ತಿದೆ. ಕೆಲವರು ಈ ಐಸ್‌ಕ್ರೀಂ ಅನ್ನು ಅಜಯ್ ದೇವಗನ್‌ಗೆ ನೀಡಿ ಎಂದರೆ ಇನ್ನು ಕೆಲವರು ಈ ಐಸ್‌ಕ್ರೀಂ ತಿಂದು ಉಗುಳಬೇಕಾ.. ನುಂಗಬೇಕಾ ಎಂದು ಪ್ರಶ್ನೆ ಮಾಡ್ತಾ ಇದ್ದಾರೆ. ಈ ಹಿಂದೆ ಮ್ಯಾಗಿ ಹಾಗೂ ಐಸ್‌ಕ್ರೀಂ ಮಿಕ್ಸ್‌ ಮಾಡಿ ರೋಲ್ ಮಾಡಿದ್ದು ಅದನ್ನು ಚಪ್ಪರಿಸಿಕೊಂಡು ತಿಂದ ವೀಡಿಯೊ ವೈರಲ್ ಆಗಿತ್ತು.

ಅದೇನೆ ಆಗಲಿ ಆಹಾರ ಯಾವತ್ತು ನಮ್ಮ ದೇಹಕ್ಕೆ ಆರೋಗ್ಯಕರವಾಗಿರಬೇಕೆ ಹೊರತು ಅನಾರೋಗ್ಯಕ್ಕೆ ತುತ್ತಾಗುವಂತೆ ಇರಬಾರದು.

 

Continue Reading

DAKSHINA KANNADA

ಮೊಬೈಲ್ ನೋಡುತ್ತಿದ್ದಾಗ 16 ವರ್ಷದ ಬಾಲಕ ದಿಢೀರ್ ಸಾ*ವು; ವೈದ್ಯರಿಂದ ಶಾಕಿಂಗ್‌ ರಿಪೋರ್ಟ್‌; ಆಗಿದ್ದೇನು?

Published

on

ಸಾ*ವು ಹೇಗೆ, ಎಲ್ಲಿ ಬೇಕಾದರೂ ಬರಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. 16 ವರ್ಷದ ಬಾಲಕ ಮೊಬೈಲ್ ಫೋನ್ ನೋಡುತ್ತಿದ್ದಾಗಲೇ ಕುಸಿದು ಬಿದ್ದು ಸಾ*ವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಈ ದುರಂತ ನಡೆದಿದೆ.

16 ವರ್ಷದ ಅಮನ್ ಖುರೇಷಿ ಮೃ*ತ ದುರ್ದೈವಿ. ಖುರೇಷಿ ಮೊಬೈಲ್ ಫೋನ್ ನೋಡುತ್ತಿದ್ದಾಗ ಹಾಸಿಗೆ ಮೇಲೆ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಮನ್ ಖುರೇಷಿ ಆಸ್ಪತ್ರೆ ತಲುಪುವಷ್ಟರಲ್ಲೇ ಪ್ರಾ*ಣ ಕಳೆದುಕೊಂಡಿದ್ದಾರೆ.

ಅಮನ್ ಖುರೇಷಿ ಸಾ*ವನ್ನಪ್ಪಿದ್ದನ್ನು ವೈದ್ಯರು ಖಚಿತ ಪಡಿಸಿದ್ದು, ಹಾರ್ಟ್ ಅಟ್ಯಾಕ್‌ನಿಂದ ಪ್ರಾ*ಣ ಬಿಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮೃ*ತಪಟ್ಟ ಬಾಲಕ ಮೊಬೈಲ್ ಫೋನ್‌ನಲ್ಲಿ ವಿಡಿಯೋ ನೋಡುತ್ತಿದ್ದಾಗ ಈ ದುರಂತ ನಡೆದಿದೆ.

ಇತ್ತೀಚೆಗೆ ದೇಶಾದ್ಯಾಂತ ಹೃದಯಾಘಾತಕ್ಕೆ ಸಾ*ವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಹದಿ ಹರಿಯದ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರೋದು ನಿಜಕ್ಕೂ ಶಾಕಿಂಗ್‌ ಘಟನೆಯಾಗಿದೆ.

ಹೃದಯಾಘಾತವು ವ್ಯಕ್ತಿಯ ಮಾನಸಿಕ ಒತ್ತಡ ಮತ್ತು ದೈಹಿಕ ಪರಿಶ್ರಮದಿಂದ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೈನಂದಿನ ಕೆಲಸಗಳಲ್ಲಿ ಒತ್ತಡ ಹೆಚ್ಚಾಗುವುದರಿಂದ ಹೃದಯದ ಮೇಲೆ ಒತ್ತಡವೂ ಹೆಚ್ಚಾಗುತ್ತದೆ.

ಪ್ರಮುಖವಾಗಿ ನಮ್ಮ ದಿನನಿತ್ಯದ ಜೀವನಶೈಲಿ ಹಾಗೂ ಆಹಾರ ಕ್ರಮಗಳು ಸಣ್ಣ ವಯಸ್ಸಿನವರಿಂದ ವಯಸ್ಸಾದವರಿಗೂ ಹೃದಯಾಘಾತ ಆಗಲು ಕಾರಣವಾಗಿದೆ. ನ್ಯುಮೋನಿಯದಂತಹ ತೀವ್ರ ಸೋಂಕು ಹೃದಯ ಸ್ನಾಯುವಿನ ಊತಕವೂ ಸಾ*ವನ್ನು ಉಂಟು ಮಾಡಬಹುದು. ರಕ್ತನಾಳದಲ್ಲಿ ಬೇಗ ರಕ್ತು ಹೆಪ್ಪುಗಟ್ಟುವುದನ್ನು ತಡೆದರೆ ಹೃದಯಾಘಾತದಿಂದ ಪಾರಾಗಬಹುದು.

Continue Reading

International news

WATCH VIDEO : ಆಗಸದಲ್ಲೇ ಡಿ*ಕ್ಕಿಯಾದ ಸೇನಾ ಹೆಲಿಕಾಪ್ಟರ್; 10 ಮಂದಿ ಸಾ*ವು

Published

on

ಕೌಲಾಲಂಪುರ : ಅಭ್ಯಾಸದ ವೇಳೆ 2 ಹೆಲಿಕಾಪ್ಟರ್ ಗಳು ಡಿ*ಕ್ಕಿಯಾದ ಪರಿಣಾಮ ಅದರೊಳಗಿದ್ದ 10 ಮಂದಿ ಇಹಲೋಕ ತ್ಯಜಿಸಿರುವ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಮುಂದಿನ ತಿಂಗಳು ನಡೆಯಲಿರುವ ಮಲೇಷ್ಯಾ ನೌಕಾಪಡೆಯ 90ನೇ ವಾರ್ಷಿಕೋತ್ಸವದ ಅಂಗವಾಗಿ ಹೆಲಿಕಾಪ್ಟರ್‌ಗಳು ನಾರ್ತ್ ಪೆರಾಕ್ ಸ್ಟೇಟ್‌ನ ನೌಕಾ ನೆಲೆಯಲ್ಲಿ ಕಸರತ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಈ ದುರಂ*ತ ಸಂಭವಿಸಿದೆ.


ರಾಯಲ್ ಮಲೇಷ್ಯಾ ನೇವಿ ಹೆಲಿಕಾಪ್ಟರ್ ಗಳು ಪರಸ್ಪರ ಡಿಕ್ಕಿಯಾಗಿದ್ದು, ವೈಮಾನಿಕ ಕಸರತ್ತು ನಡೆಸುತ್ತಿದ್ದ ಎಲ್ಲಾ 10 ಸಿಬ್ಬಂದಿ ವಿ*ಧಿವಶರಾಗಿದ್ದಾರೆ. ಮೃ*ತರ ದೇಹಗಳನ್ನು ಮಲೇಷ್ಯಾ ನೌಕಾಪಡೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ

ತನಿಖೆಗೆ ಆದೇಶ:


ಘಟನೆಗೆ ಸಂಬಂಧಪಟ್ಟಂತೆ ಮಲೇಷ್ಯಾ ತನಿಖೆಗೆ ಆದೇಶಿಸಿದೆ. ಮಲೇಷ್ಯಾದ ವಸತಿ ಮತ್ತು ಸ್ಥಳೀಯ ಸರ್ಕಾರದ ಸಚಿವಾಲಯದ ಪ್ರಕಾರ, ಎರಡು ಹೆಲಿಕಾಪ್ಟರ್‌ಗಳು ಯುರೋಕಾಪ್ಟರ್ ಫೆನೆಕ್ ಮತ್ತು ಅಗಸ್ಟಾ-ವೆಸ್ಟ್‌ಲ್ಯಾಂಡ್ ಸಂಸ್ಥೆ ನಿರ್ಮಿಸಿದ AW-1 ಚಾಪರ್ ಮೇ ತಿಂಗಳಲ್ಲಿ ಬೇಸ್‌ನಲ್ಲಿ ನಿಗದಿಪಡಿಸಲಾದ TLDM ಫ್ಲೀಟ್ ಓಪನ್ ಡೇಗಾಗಿ ಫ್ಲೈಪಾಸ್ಟ್ ರಿಹರ್ಸಲ್‌ ಮಾಡುತ್ತಿದ್ದವು.
ಈ ವೇಳೆ ಹೆಲಿಕಾಪ್ಟರ್ ಗಳ ರೆಕ್ಕೆಗಳು ಪರಸ್ಪರ ಬಡಿದಿದ್ದು, ಈ ವೇಳೆ ಕಾಪ್ಟರ್ ಗಳನ್ನು ಪತನವಾಗಿದೆ ಎಂದು ಹೇಳಿದೆ.

Continue Reading

LATEST NEWS

Trending