ಮಂಗಳೂರು : ಸುಂದರವಾದ ಹಾಗೂ ಪ್ರವಾಸಿಗರನ್ನು ಸೆಳೆಯುವ ಬೀಚ್‌ಗಳು ಯಾವುದು ಅಂತ ಕೇಳಿದ್ರೆ ನಮ್ಮಲ್ಲಿ ನೆನಪಾಗೋದು ಗೋವಾದ ಬೀಚ್‌ಗಳು. ವಿದೇಶಿಯರು ಹೆಚ್ಚಾಗಿ ಬರೋ ಗೋವಾ , ಗೋಕರ್ಣ ಮೊದಲಾ ಬೀಚ್ ಹೋದವರಿಗೆ ಅಲ್ಲಿ ಬಿಕಿನಿಯಲ್ಲಿ ಕಾಣಿಸೋ ವಿದೇಶಿ ಮಹಿಳೆಯರು ಗಮನಸೆಳೆಯುತ್ತಾರೆ. ಆದ್ರೆ ಅಂತಹ ಬೀಚ್‌ಗಳ ಸಾಲಿನಲ್ಲಿ ಬರೋ ಕೆಲ ಬೀಚ್‌ಗಳಲ್ಲಿ ಮಹಿಳೆಯರು ಹಾಗೂ ಪುರುಷರು ಬಟ್ಟೆನೇ ಹಾಕದೆ ತಿರುಗಾಡ್ತಾರೆ. ಇಂತಹ ಬೀಚ್‌ಗಳು ಬತ್ತಲೆ ಬೀಚ್ ಅಂತಾನೇ ಫೇಮಸ್. ಅಂತಹ ಬೀಚ್‌ಗಳು ಯಾವುದು ಅನ್ನೋ ಡಿಟೈಲ್ ಇಲ್ಲಿದೆ.
ಸಂಪೂರ್ಣ ಬೆತ್ತಲಾಗಿ ಜನರು ಸೆಲೆಬ್ರೇಟ್ ಮಾಡೋ ಸಾಕಷ್ಟು ಉತ್ಸವಗಳ ವಿದೇಶಗಳಲ್ಲಿ ಹಲವೆಡೆ ನಡೆಯುತ್ತದೆ. ಅದೇ ರೀತಿ ಬೀಚ್‌ಗಳಲ್ಲೂ ಬೆತ್ತಲಾಗಿ ತಿರುಗಾಡೋ ಸಂಸ್ಕೃತಿಯನ್ನು ವಿದೇಶದ ಹಲವು ದೇಶಗಳಲ್ಲಿ ನಾವು ಕಾಣಬಹುದಾಗಿದೆ. ಅಂತಹ ಬೀಚ್‌ಗಳ ಲಿಸ್ಟ್ ಇಲ್ಲಿದೆ.
1. ಲುಕಾಟ್ ಬೀಚ್:
ಇಲ್ಲಿ ಬಟ್ಟೆ ಧರಿಸದೇ ಪೂರ್ಣವಾಗಿ ಬೆತ್ತಲೆ ದೇಹದಿಂದ ಅಲ್ಲಿಯ ಪ್ರಕೃತಿಯನ್ನು ಜನರು ಆನಂದಿಸುತ್ತಾರೆ. ಈ ಬೀಚ್ ಫ್ರಾನ್ಸ್ ದೇಶದಲ್ಲಿದ್ದು ಈ ಬೀಚ್ ಹೆಸರು ಲುಕಾಟ್ ಬೀಚ್. ಮೆಡಿಟರೇನಿಯನ್ ಸಮುದ್ರದ ಪಕ್ಕದಲ್ಲಿರುವ ಈ ಕಡಲತೀರದಲ್ಲಿ ನಗ್ನತೆಗೆ ಯಾವುದೇ ಮಿತಿ ಇಲ್ಲ. ಇಲ್ಲಿ ಯಾರು ಬೇಕಾದರೂ ಬೆತ್ತಲೆಯಾಗಿ ತಿರುಗಾಡಬಹುದು ಮತ್ತು ಯಾರೂ ಯಾರನ್ನೂ ಗಮನಿಸೋದಿಲ್ಲ ಅನ್ನೋದೇ ವಿಶೇಷ.
2. ವಲಾಲ್ಟಾ ಬೀಚ್:
ಕ್ರೊಯೇಷಿಯಾದ ವಲಾಲ್ಟಾ ತುಂಬಾ ಸ್ವಚ್ಛವಾದ ಕಡಲತೀರವಾಗಿದ್ದು,ಈ ಬೀಚ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಯುರೋಪಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಯುರೋಪ್ ಅಲ್ಲದೆ ಜಗತ್ತಿನ ವಿವಿಧ ದೇಶಗಳ ಪ್ರವಾಸಿಗರು ಇಲ್ಲಿಗೆ ಬಂದು ಬಟ್ಟೆ ಇಲ್ಲದೆ ಸಮುದ್ರದಲ್ಲಿ ಮೋಜು ಮಸ್ತಿ ಮಾಡುತ್ತಾರೆ.
3. ಬೆಲ್ಲೆವ್ಯೂ ಬೀಚ್:
ಡೆನ್ಮಾರ್ಕ್‌ನ ಬೆಲ್ಲೆವ್ಯೂ ಬೀಚ್ ಪ್ರಪಂಚದ ಪ್ರಸಿದ್ಧ ಬೆತ್ತಲೆ ಬೀಚ್‌ಗಳಲ್ಲಿ ಒಂದಾಗಿದೆ. ಇಲ್ಲಿ ಯಾರೂ ಹೇಗೆ ಬೇಕಾದ್ರೂ ಇರಬಹುದು. ಆದರೆ ಅನ್ಯರಿಗೆ ಯಾವುದೇ ತೊಂದರೆ ಮಾಡುವಂತಿಲ್ಲ. ಇಲ್ಲಿಯ ಕಾನೂನುಗಳನ್ನು ಉಲ್ಲಂಘನೆ ಮಾಡಿದ್ರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
4. ಕಾರ್ನಿಗ್ಲಿಯಾ ಬೀಚ್:
ಇಟಲಿಯು ಕಾರ್ನಿಗ್ಲಿಯಾ ಬೀಚ್ ಕಡಲತೀರಗಳಿಗೆ ಪ್ರಸಿದ್ಧಿಯಾಗಿದೆ. ಈ ಕಡಲತೀರವನ್ನು ತಲುಪಲು ಸುರಂಗದ ಮೂಲಕ ಹೋಗಬೇಕು. ಇಲ್ಲಿ ಅನೇಕ ಮಹಿಳೆಯರು ಟಾಪ್ ಲೆಸ್ ಆಗಿ ಸ್ನಾನ ಮಾಡುವುದನ್ನು ಕಾಣಬಹುದು.
5. ಕೇಪ್ ಡಿ ಎಗ್ಡೆ ಬೀಚ್:
ಫ್ರಾನ್ಸ್‌ನ ಕ್ಯಾಪ್ ಡಿ’ಆಗ್ಡೆ ಬೀಚ್‌ಗೆ ಬಟ್ಟೆ ಇಲ್ಲದೆ ಹೋಗಬೇಕು. ಬೆತ್ತಲೆಯಾಗಿ ಹೋಗಿ ಅಲ್ಲಿ ಸ್ನಾನ ಮಾಡಬಹುದು. ಸ್ನಾನ ಮಾಡುವಾಗ ನಿಮ್ಮ ಮೈಮೇಲೆ ಬಟ್ಟೆ ಇದ್ದರೆ ಬೀಚ್ ಗಾರ್ಡ್ ಗಳು ನಿಮ್ಮನ್ನು ತಡೆಯಬಹುದು. ಆದ್ದರಿಂದ ನೀವು ವಿವಸ್ತ್ರಗೊಳ್ಳಬೇಕು.