ಮಂಗಳೂರು : ರಾಜ್ಯಾದ್ಯಂತ ವಕ್ಫ್ ನಲ್ಲಿರುವ ಸಾವಿರಾರು ಎಕ್ರೆ ಭೂಮಿಗೆ ಸುರಕ್ಷೆ ಇಲ್ಲ. ವಕ್ಫ್ ಭೂಮಿ ಉಳಿಸುವುದೇ ಒಂದು ಸವಾಲಾಗಿದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಕ್ಫ್ ನಲ್ಲಿರುವ ಭೂಮಿ ಸುರಕ್ಷಿತವಾಗಿಲ್ಲ, ಮೈಸೂರಿನಲ್ಲಿ ಟಿಪ್ಪು ಸುಲ್ತಾನ್, ಮೈಸೂರು ಒಡೆಯರು ನೀಡಿದ್ದ ಸಾವಿರಾರು ಎಕ್ರೆ ಭೂಮಿಗೆ ರಕ್ಷಣೆಯೇ ಇಲ್ಲ.
ಉತ್ತರ ಕರ್ನಾಟಕದಲ್ಲಿ ಬಹಮನಿ ಸುಲ್ತಾನರು ಕೊಟ್ಟ ಭೂಮಿಗೂ ರಕ್ಷಣೆ ಇಲ್ಲ. ಬೀದರ್ ಖಬರಸ್ತಾನ ಏಷ್ಯಾದಲ್ಲೆ ದೊಡ್ಡದು, 5 ಸಾವಿರ ಎಕ್ರೆ ಇದೆ, ಬೀದರ್ ಈದ್ಗಾಕ್ಕೆ ಆವರಣ ಬೇಲಿ ಹಾಕಲು ಕ್ರಮ ಕೈಗೊಳ್ಳಲಾಗಿದ್ದು ಇದಕ್ಕೆ 70 ಕೋಟಿ ರೂಪಾಯಿ ನೀಡಲಾಗಿದೆ.
ಬೀದರ್, ಗುಲ್ಬರ್ಗ, ಬೆಂಗಳೂರಿನಲ್ಲಿ ಅತಿ ಹೆಚ್ಚು ಆಸ್ತಿ ಇದೆ. ಇದ್ದ ಆಸ್ತಿಯನ್ನೇಉಳಿಸಿಕೊಳ್ಳುವುದು ಒಂದು ಸವಾಲಿನ ವಿಷಯವಾಗಿದೆ ಎಂದರು.
ಕಾನೂನು ಇಲಾಖೆಯ ವೈಫಲ್ಯವೂ ಇದರಲ್ಲಿದ್ದು ಇದರ ಬಗ್ಗೆ ಹಿರಿಯ ಕಾನೂನು ತಜ್ಞರಿಂದ ಸಲಹೆ ಕೇಳಿದ್ದೇವೆ.
ಜಾಗ ದುರುಪಯೋಗ ಮಾಡಿದರೆ, ಕೋರ್ಟಲ್ಲಿ ಸ್ಟೇ ತಗೊಂಡು ಬರುತ್ತಾರೆ, ಲೀಗಲ್ ಪಾಯಿಂಟ್ಸ್ ವ್ಯತ್ಯಯ ಆಗೋದು ಇದಕ್ಕೆ ಕಾರಣವಾಗಿದ್ದು ಸೀನಿಯರ್ ಲಾಯರ್ ಗಳಿಗೆ ಕೇಸ್ ಕೊಟ್ಟು ಭೂಮಿ ಉಳಿಸಲು ಯತ್ನ ಮಾಡಿದ್ದೇವೆ.
ಇದಕ್ಕಾಗಿ ಹಿರಿಯ ವಕೀಲರಾದ ಅಶೋಕ್ ಹಾರ್ನಳ್ಳಿ, ಜಯದೇವ ಪಾಟೀಲ್ ರನ್ನು ಕಾನೂನು ತಂಡಕ್ಕೆ ನೇಮಕ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
2,757 ಪ್ರಕರಣ ದಾಖಲಾಗಿವೆ, ಎಸಿ ಕೋರ್ಟಲ್ಲಿ 70 ಪ್ರಕರಣ ವಿಚಾರಣೆಯಲ್ಲಿದೆ, 1,451 ಪ್ರಕರಣ ಬಾಕಿ ಇವೆ. 153 ಕೇಸ್ ನಮ್ಮ ಪರವಾಗಿದೆ, ಅತಿಕ್ರಮಣ ತೆರವು ಮಾಡಿ ಜಾಗವನ್ನು ತಮ್ಮ ಸುಪರ್ದಿಗೆ ತಗೊಂಡಿದ್ದೇವೆ.
ಡೀಸಿ ಕೋರ್ಟಲ್ಲಿ 223 ಕೇಸ್ ಇದ್ದು ಬಹುತೇಕ ನಮ್ಮ ಕಡೆಯಾಗಿದೆ, 67 ಕೇಸ್ ಗಳು ಬಾಕಿ ಇವೆ ಎಂದು ಮಾಹಿತಿ ನೀಡಿದರು.
2020 ರಲ್ಲಿ ವಕ್ಫ್ ಬೋರ್ಡಲ್ಲಿ ಯೂಸುಫ್ ಅಧ್ಯಕ್ಷರಾಗಿದ್ದಾರೆ.
26 ಜಿಲ್ಲೆಗಳ ಅಧ್ಯಕ್ಷರ ನೇಮಕ ಇದೆ, ಅದರಲ್ಲಿ ರಾಜಕೀಯ ಇಲ್ಲ, ವಕ್ಫ್ ಯುನಾನಿಮಸ್ ಏಕ್ಟ್ ಇದೆ, 26 ರಂದು ರೆಸಾರ್ಟ್ ನಲ್ಲಿ ತರಬೇತಿ ಮಾಡುತ್ತೇವೆ,
2011 ರಲ್ಲಿ ಮೆಂಬರ್ ಆಗಿದ್ದೆ, ಮಾಣಿಪ್ಪಾಡಿ 2012ರಲ್ಲಿ ವರದಿ ಕೊಟ್ಟಿದ್ದಾರೆ, ಆಯೋಗದ ಅಧ್ಯಕ್ಷರಿಗೆ ಮಾತ್ರ ಅಧಿಕಾರ ಇದೆ, ಮೂರು ತಿಂಗಳ ಹಿಂದೆ ಫಾರೂಕ್ ನೇತೃತ್ವದಲ್ಲಿ ಚರ್ಚೆ ಆಗಿದೆ,
ಸರಕಾರಕ್ಕೆ ವರದಿ ಕೊಟ್ಟು ಲೋಕಾಯುಕ್ತ , ಸಿಬಿಐ ಯಾವುದೇ ತನಿಖೆಗೆ ರೆಡಿ ಇದ್ದೇವೆ, ಮಾಣಿಪ್ಪಾಡಿಯವರು ಮೌಲಾನಾ ಅಲ್ಲ ಹೈಕೋರ್ಟ್ ನಲ್ಲಿ ರಿಟ್ ಹಾಕಿದ್ದಾರೆ ಏನು ಹೇಳೋದು, ನಾನು 16 ವರ್ಷ ಮದ್ರಸಾದಲ್ಲಿ ಕಲಿತು ಮೌಲಾನಾ ಆದವನು. ಕೋರ್ಟಿಗೆ ಯಾರು ಬೇಕಾದ್ರೂ ದೂರು ಕೊಡಬಹುದು ಎಂದರು.