Connect with us

DAKSHINA KANNADA

ಕಾಂಗ್ರೆಸ್ ಪಾಠದ ಅಗತ್ಯವಿಲ್ಲ-ಕಾನೂನು ಬದ್ದ ತನಿಖೆಗೆ ನಾವು ಬದ್ದ :ಮಂಗಳೂರಿನಲ್ಲಿ ಗೃಹ ಸಚಿವ ಬೊಮ್ಮಾಯಿ

Published

on

ಮಂಗಳೂರು : ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸಿಡಿ ಪ್ರಕರಣವನ್ನು ಕಾನೂನುಬದ್ದವಾಗಿ ನಾವು ತನಿಖೆ ಮಾಡುತ್ತೇವೆ ಮತ್ತು ಇದಕ್ಕೆ ಕಾಂಗ್ರೆಸ್ಸಿಗರ ಪಾಠ ಅಗತ್ಯವಿಲ್ಲ ಎಂದು ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಕಾಸರಗೋಡಿನಲ್ಲಿ  ನಾಳೆ ನಡೆಯಲಿರುವ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿರುವ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾರೂ ಏನು ಹೇಳಿಕೆ ಕೊಟ್ರು ಅದು ನಮಗೆ ಸಂಬಧಪಟ್ಟಿದ್ದಲ್ಲ.

ಕಾಂಗ್ರೆಸ್ ನವರು ಏನ್ ಹೇಳ್ತಾರೆ. ಇನ್ನೊಬ್ಬರು ಏನ್ ಹೇಳ್ತಾರೆ,ಅದು ಇಂಪಾರ್ಟಂಟ್ ಅಲ್ಲ. ಈ ಹಿಂದೆ ಕಾಂಗ್ರೆಸ್ ನವರು ಮೇಟಿ ಪ್ರಕರಣದಲ್ಲಿ ಹೇಗೆ ನಡ್ಕೊಂಡ್ರು? ಒಂದು ಕೇಸ್ ಕೂಡ ಬುಕ್ ಮಾಡಿಲ್ಲ ಹೀಗಾಗೆ ಅವರ ಹೇಳಿಕೆಗೆ ನಾನು ಮಹತ್ವ ಕೊಡೋದಿಲ್ಲ ಎಂದು ಹೇಳಿದ ಅವರು ಎಸ್.ಐ.ಟಿ ಯಲ್ಲಿ ದಕ್ಷ ಅಧಿಕಾರಿಗಳಿದ್ದಾರೆ‌,

ಯಾರ ಪ್ರಭಾವಕ್ಕೆ ಮಣಿದು ಕೆಲಸ ಮಾಡೋದಿಲ್ಲ. ಕಾನೂನುಬದ್ದವಾಗಿ ಕೆಲಸ ಮಾಡುತ್ತಾರೆ.

ಈ ಹಿಂದೆ ಕೂಡ  ಹಲವಾರು ಸಿಡಿ, ವೀಡಿಯೋ, ಆಡಿಯೋ ಬಂದಿದೆ. ಅದೆಲ್ಲವನ್ನು ವೈಜ್ಞಾನಿಕ ತನಿಖೆಗೆ ಒಳಪಡಿಸಿದ್ದೇವೆ. ಈ ಪ್ರಕರಣ ತನಿಖೆ ಹಂತದಲ್ಲಿ ಇರುವಾಗ ನಾನು ಏನು ಹೇಳಲು ಇಚ್ಚೆಪಡಲ್ಲ.

ಆದ್ರೆ ಒಟ್ಟಾರೆ ತನಿಖೆ ಯಾವುದೇ ಪ್ರಭಾವಕ್ಕೆ ಒಳಗಾಗಲ್ಲ ಅನ್ನೊದು ಸ್ಪಷ್ಟ ಎಂದು ಅವರು ಸ್ಪಷ್ಟ ಪಡಿಸಿದರು.

ಇನ್ನು ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವ ಕುಮಾರ್ ಕಾರಿಗೆ ಚಪ್ಪಲಿ ಎಸೆದ ಪ್ರಕರಣ ಸಂಬಂಧಿಸಿದಂತೆ ಮಾತನಾಡಿದ ಅವರು ಡಿ‌.ಕೆ‌.ಶಿವಕುಮಾರ್ ಗೆ ಚಪ್ಪಲಿ ಹಾರ ಎಸೆದಿಲ್ಲ, ಹಿಂದುಗಡೆಯಲ್ಲಿದ್ದ ಕೊನೆಯ ಭಾಗದ ವಾಹನಕ್ಕೆ ಎಸೆದಿರಬಹುದು.

ಆದರೂ ಇದರಲ್ಲಿ ಯಾವುದೇ ರಾಜಿ ಇಲ್ಲ.ಯಾವುದೇ ಸಣ್ಣ ಘಟನೆ ಕೂಡ ಆಗಬಾರದು. ಯಾರೆಲ್ಲಾ ಬರ್ತಾರೆ ಅವರಿಗೆಲ್ಲಾ ಭದ್ರತೆ ನೀಡಬೇಕು ಎಂದು ಅಲ್ಲಿನ ಕಮಿಷನರ್ ಗೆ ಈಗಾಗ್ಲೆ ಸೂಚನೆ ಕೊಟ್ಟಿದ್ದೇನೆ.

ಯಾರು ಕಾನೂನು ಕೈಗೆತ್ತಿಕೊಳ್ತಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸೂಸಿಸಲಾಗಿದೆ ಎಂದರು.

 

DAKSHINA KANNADA

ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಲಕ್ಷಾಧಿಪತಿ….ಅವರ ಆಸ್ತಿ ವಿವರ ಇಲ್ಲಿದೆ!

Published

on

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಅವರ ಸ್ಥಿರ ಮತ್ತು ಚರಾಸ್ತಿ ಒಟ್ಟು ಮೊತ್ತ 70,81,365 ಲಕ್ಷ ರೂ. ಆಗಿದೆ. ಸ್ಥಿರ ಆಸ್ತಿಯ ಒಟ್ಟು ಮೊತ್ತ 27,31,365 ಲಕ್ಷ ರೂ. ಆಗಿದೆ. ಚರಾಸ್ತಿಯ ಒಟ್ಟು ಮೊತ್ತ 43,50,000 ಲಕ್ಷ ರೂ., ಇನ್ನು ಒಟ್ಟು 9,62,010 ರೂ. ಅನ್ನು ಇನ್ನೋವಾ ಕಾರಿಗಾಗಿ ಸಾಲ ಮಾಡಿದ್ದಾರೆ.
ಇನ್ನು ಬಿಎಸ್ಸಿ ಶಿಕ್ಷಣದ ಜೊತೆಗೆ ಐಐಎಂ ಅನ್ನು ಇಂದೋರ್​ನಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಡಿಫೆನ್ಸ್ ಆಫೀಸರ್ ಸರ್ಟಿಫಿಕೇಟ್ ಕೋರ್ಸ್ ಮಾಡಿದ್ದಾರೆ. ಅವರು, ಅವಿವಾಹಿತರಾಗಿದ್ದು 42 ವರ್ಷ ಪ್ರಾಯದವರಾಗಿದ್ದಾರೆ.

ಬ್ರಿಜೇಶ್‌ ಚೌಟ ಯಾರು?

ಮಂಗಳೂರಿನ ರಥಬೀದಿಯಲ್ಲಿ ನೆಲೆಸಿರುವ ಕ್ಯಾಪ್ಟನ್ ಬೃಜೇಶ್ ಚೌಟ ಕಾಲೇಜು ದಿನಗಳಲ್ಲಿಯೇ ಎನ್ ಸಿಸಿಯಲ್ಲಿ ತೊಡಗಿಕೊಂಡಿದ್ದು, ಮಂಗಳೂರು ವಿವಿಯಲ್ಲಿ ಅತ್ಯುತ್ತಮ ಕೆಡೆಟ್ ಎಂಬ ಹೆಗ್ಗಳಿಕೆ ಪಡೆದಿದ್ದರು. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಪಡೆದ ಅವರು ಇಂದೋರ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಆಡಳಿತ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಯುಪಿಎಸ್ಸಿ ಮೂಲಕ ಡಿಫೆನ್ಸ್ ಪರೀಕ್ಷೆ ಬರೆದು ತೇರ್ಗಡೆಗೊಂಡು ಚೆನ್ನೈನಲ್ಲಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಭಾರತೀಯ ಭೂಸೇನೆ ಸೇರಿದ್ದರು. ಪ್ರತಿಷ್ಠಿತ ಎಂಟನೇ ಗೋರ್ಖಾ ರೈಫಲ್ಸ್ 7ನೇ ಬೆಟಾಲಿಯನ್ ನಲ್ಲಿ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್ ಹುದ್ದೆಗೇರಿದ್ದರು.

ಇದನ್ನೂ ಓದಿ ಐದು ವರ್ಷದಲ್ಲಿ ನಾಲ್ಕು ಪಟ್ಟು ಏರಿದ ಆಸ್ತಿ…! ಪ್ರಜ್ವಲ್ ರೇವಣ್ಣ ಘೋಷಿಸಿದ ಆಸ್ತಿ ವಿವರದಲ್ಲಿ ಬಹಿರಂಗ..!!

ನಳಿನ್ ಬದಲು ಚೌಟ ಕಣಕ್ಕೆ :

ಕಳೆದ 15 ವರ್ಷಗಳ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಹಿಡಿತದಲ್ಲಿದೆ. ಸತತ ಮೂರು ಬಾರಿ ನಳಿನ್ ಕುಮಾರ್ ಕಟೀಲ್ ಅವರು ಗೆದ್ದುಕೊಂಡು ಬಂದಿದ್ದರು. ಈ ಬಾರಿ ಮಾಜಿ ಯೋಧ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಆ ಮೂಲಕ ನಳಿನ್ ಕುಮಾರ್ ಕಟೀಲ್​ಗೆ ಟಿಕೆಟ್​ ಕೈತಪ್ಪಿ ಹೋಗಿದೆ. ಇದೀಗ ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಏಪ್ರಿಲ್ 4 ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅವರು ಸಲ್ಲಿಸಿರುವ ನಾಮಪತ್ರ ಅಫಿಡವಿಟ್‌ನಲ್ಲಿ ಲಕ್ಷಾಧಿಪತಿ ಎಂದು ಘೋಷಿಸಿಕೊಂಡಿದ್ದಾರೆ.

Continue Reading

DAKSHINA KANNADA

ಅನುಷ್ಕಾ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ…! ಯಾವ ಕ್ಷೇತ್ರದಿಂದ ಸ್ಪರ್ಧೆ..!?

Published

on

ಕ್ಷಿಣ ಕನ್ನಡ ಜಿಲ್ಲೆಯ ಚೆಲುವೆ…ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸದ್ಯ ರಾಜಕೀಯ ವಲಯದಲ್ಲಿ ಸುದ್ದಿಯಾಗಿದ್ದಾರೆ. ಟಾಲಿವುಡ್‌ನ ಬ್ಯೂಟಿ ಕ್ವೀನ್‌ ಆಗಿ ಮೆರೆದಿದ್ದ ಅನುಷ್ಕಾ ಶೆಟ್ಟಿಗೆ ಇರುವ ದೊಡ್ಡ ಅಭಿಮಾನಿ ಬಳಗ ಕೂಡಾ ಇಂತಹ ಒಂದು ಚರ್ಚೆ ನಡೆಸ್ತಾ ಇದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಅನುಷ್ಕಾ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಹೀಗಾಗಿ ಈ ಬಾರಿ ಅನುಷ್ಕಾ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ದೊಡ್ಡ ಚರ್ಚೆ ಆರಂಭವಾಗಿದೆ.

ಲೋಕಸಭೆ ಚುನಾವಣೆಯ ಜೊತೆಯಲ್ಲೇ ಆಂಧ್ರ ವಿಧಾನಸಭೆಗೂ ಚುನಾವಣೆ ನಡೆಯುತ್ತಿರುವುದೇ ಈ ಚರ್ಚೆಗೆ ಕಾರಣವಾಗಿದೆ. ಅನುಷ್ಕಾ ಶೆಟ್ಟಿ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಅಭಿಮಾನಿಗಳು ಮಾತ್ರವಲ್ಲದೆ, ರಾಜಕೀಯ ವಲಯದಲ್ಲೂ ಚರ್ಚೆ ನಡೆದಿದೆ.

ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದಿಂದ ಅನುಷ್ಕಾ ಶೆಟ್ಟಿ ಚುನಾವಣಾ ಕಣಕ್ಕೆ ಧುಮುಕಲಿದ್ದಾರೆ ಅನ್ನೋ ಸುದ್ದಿ ಹರಡಿದೆ. ಬಿಜೆಪಿ ಹಾಗೂ ಟಿಡಿಪಿ ಪಕ್ಷದ ಬೆಂಬಲ ಹೊಂದಿರುವ ಜನಸೇನಾ ಪಕ್ಷದ ಪ್ರಮುಖ ನಾಯಕರ ಜೊತೆ ಅನುಷ್ಕಾ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದ್ರೆ ಅನುಷ್ಕಾ ಜನಸೇನಾ ಪಕ್ಷಕ್ಕೆ ಸ್ಟಾರ್ ಪ್ರಚಾರಕಿಯಾಗಿ ಹೋಗಲಿದ್ದಾರೆ. ಚುನಾವಣೆಗೆ ನಿಲ್ಲೋದು ಸುಳ್ಳು ಸುದ್ದಿ ಎಂದು ಕೆಲ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅನುಷ್ಕಾ ಶೆಟ್ಟಿ ರಾಜಕೀಯ ಪ್ರವೇಶ ಮಾಡ್ತಾರೆ ಅನ್ನೋದೊಂದು ನಕಲಿ ಸುದ್ದಿ ಎಂದು ಕೆಲ ಸುದ್ದಿ ವಾಹಿನಿಗಳು ಕೂಡಾ ವರದಿ ಮಾಡಿದೆ. ಅನುಷ್ಕಾ ಶೆಟ್ಟಿ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದು, ರಾಜಕೀಯದಿಂದ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನು ಓದಿ ಹಿಂದಿಗೆ ರಿಮೇಕ್ ಆಗುತ್ತಿದೆ ಝೀ ಕನ್ನಡದ ಫೇಮಸ್‌ ಸೀರಿಯಲ್‌…! ಪ್ರೋಮೋ ರಿಲೀಸ್‌..! 

ಮಲಯಾಳಂ ಸಿನಿಮಾದಲ್ಲಿ ಬಿಝಿ :

‘ಬಾಹುಬಲಿ’ ಸಿನಿಮಾದ ಬಳಿಕ ಅನುಷ್ಕಾ ಶೆಟ್ಟಿ ಭಾರಿ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದಾರೆ. ‘ಬಾಹುಬಲಿ 2’ ಸಿನಿಮಾದ ಬಳಿಕ ಕೇವಲ ಎರಡು ಸಿನಿಮಾಗಳಲ್ಲಿ ಮಾತ್ರವೇ ಅನುಷ್ಕಾ ನಟಿಸಿದ್ದಾರೆ. ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಕಾಮಿಡಿ ಹಾಗೂ ಡ್ರಾಮಾ ಕಥೆಯಾಗಿದ್ದ ಇದು ಪ್ರೇಕ್ಷಕರನ್ನು ರಂಜಿಸಿದೆ.ಇದೀಗ ಅನುಷ್ಕಾ ಶೆಟ್ಟಿ ಮಲಯಾಳಂ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ.

ಮಲಯಾಳಂನಲ್ಲಿ RIAL 5- ಹಾರ‌ರ್ ಸಿನಿಮಾ ಒಂದರಲ್ಲಿ ಅನುಷ್ಕಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಅನುಷ್ಕಾ ಶೆಟ್ಟಿ ರಾಜಕೀಯ ಪ್ರವೇಶ ಮಾಡುವ ಬದಲಿಗೆ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿರಲಿ ಎಂಬುದು ಅಭಿಮಾನಿಗಳ ಆಶಯ. ಆದ್ರೆ, ಅನುಷ್ಕಾ ರಾಜಕೀಯ ಎಂಟ್ರಿಯನ್ನೂ ತಳ್ಳಿ ಹಾಕಲು ಸಾದ್ಯವಿಲ್ಲ ಅನ್ನೋದು ಸದ್ಯ ಚಾಲ್ತಿಯಲ್ಲಿರುವ ಚರ್ಚಾ ವಿಷಯ.

Continue Reading

DAKSHINA KANNADA

ಟಿಕೆಟ್ ಕೈ ತಪ್ಪಿದ್ರೂ ಕೈ ಬಿಡದ ಹೈಕಮಾಂಡ್‌..! ಕೇರಳದ ಸಹ ಉಸ್ತುವಾರಿಯಾದ ನಳಿನ್ ಕುಮಾರ್ ಕಟೀಲ್‌

Published

on

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈ ತಪ್ಪಿದ್ದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌ ಅವರಿಗೆ ಬಿಜೆಪಿ ಹೈಕಮಾಂಡ್ ಮಹತ್ವದ ಜವಾಬ್ದಾರಿ ವಹಿಸಿದೆ. ನಳಿನ್ ಕುಮಾರ್ ಕಟೀಲ್ ಅವರನ್ನು ಕೇರಳದ ಚುನಾವಣಾ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದ್ದು ಬಾರಿ ನಿರಾಸೆ ತಂದಿತ್ತು. ಕ್ಯಾಪ್ಟನ್ ಬ್ರಿಜೇಶ್ ಚೌಟರ ಮೂಲಕ ಹೊಸ ಮುಖವನ್ನು ಪಕ್ಷ ಕಣಕ್ಕೆ ಇಳಿಸಿದೆ. ಇದು ನಳಿನ್ ಕುಮಾರ್ ಕಟೀಲ್‌ ಅವರಿಗೆ ಬೇಸರ ತಂದಿದ್ದರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದರು. ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಬಹಳಷ್ಟು ಭಾವುಕರಾಗಿದ್ದ ನಳಿನ್ ಕುಮಾರ್ ಕಟೀಲ್ ಪಕ್ಷ ನಿಂತ ನೀರಾಗಬಾರದು, ಹೊಸ ಮುಖಗಳು ಬರುತ್ತಿರಬೇಕು, ನಾನು ಪಕ್ಷ ಗುಡಿಸಿ ಒರೆಸು ಅಂತ ಹೇಳಿದ್ರೂ ಮಾಡ್ತೇನೆ ಅಂತ ಹೇಳಿದ್ದರು. ಆದ್ರೆ ಇದೀಗ ಪಕ್ಷ ಅವರಿಗೆ ಕೇರಳದ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಪಕ್ಷದಲ್ಲಿ ದೊಡ್ಡ ಜವಾಬ್ದಾರಿಯನ್ನೇ ನೀಡಿದೆ.

ಇದನ್ನೂ ಓದಿ : ಅನುಷ್ಕಾ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ…! ಯಾವ ಕ್ಷೇತ್ರದಿಂದ ಸ್ಪರ್ಧೆ..!?

Continue Reading

LATEST NEWS

Trending