Thursday, November 26, 2020

ತಾ.ಪಂ.ಅಧ್ಯಕ್ಷರಿಗೆ  ಕಾರ್ಯಕ್ರಮಕ್ಕೆ ಆಮಂತ್ರಣವಿಲ್ಲ .ಕುಕ್ಕೆ ದೇವಳದ ನಾಮಫಲಕದಲ್ಲಿ  ಸುಳ್ಯ ತಾಲೂಕಿನ ಹೆಸರು!ಸ್ಥಳೀಯರ ಆಕ್ರೋಶ

ಭಾರತದಲ್ಲಿ ಕರಾಳ ಅಧ್ಯಾಯ ಬರೆದ 2008 ಉಗ್ರರ ಮುಂಬೈ ದಾಳಿಗೆ ಬರೋಬ್ಬರಿ 12ವರ್ಷ

ಭಾರತದಲ್ಲಿ ಕರಾಳ ಅಧ್ಯಾಯ ಬರೆದ 2008 ಉಗ್ರರ ಮುಂಬೈ ದಾಳಿಗೆ ಬರೋಬ್ಬರಿ 12ವರ್ಷ ಭಾರತದಲ್ಲಿ ಕರಾಳ ಅಧ್ಯಾಯ ಬರೆದ  ನವೆಂಬರ್ 26.11. 2008ರ ಮುಂಬೈ ಭಯೋತ್ಪಾದಕ ದಾಳಿಗೆ 12 ವರ್ಷಗಳು ಕಳೆದಿದ್ದು, ಅಮಾಯಕ ಜನರು,...

ಮಂಗಳೂರು ಉತ್ತರ ಭಾಜಪಾ ವತಿಯಿಂದ ಮಂಡಲ ಪ್ರಶಿಕ್ಷಣ ವರ್ಗ ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟನೆ

ಮಂಗಳೂರು ಉತ್ತರ ಭಾಜಪಾ ವತಿಯಿಂದ ಮಂಡಲ ಪ್ರಶಿಕ್ಷಣ ವರ್ಗ ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟನೆ ಮಂಗಳೂರು: ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಭಾಜಪಾ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಹಲವು...

ಮಲ್ಪೆ ಬಸ್ಸು ನಿಲ್ದಾಣದ ಬಳಿ ಹೈಟೆನ್ಶನ್‌ ಕಂಬಕ್ಕೇರಿದ ಮಾನಸಿಕ ಅಸ್ವಸ್ಥ..!

ಮಲ್ಪೆ ಬಸ್ಸು ನಿಲ್ದಾಣದ ಬಳಿ ಹೈಟೆನ್ಶನ್‌ ಕಂಬಕ್ಕೇರಿದ ಮಾನಸಿಕ ಅಸ್ವಸ್ಥ..! ಉಡುಪಿ: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ‌ ಘಟ‌ನೆ ನಿನ್ನೆ ನಡೆದಿದೆ. ಉಡುಪಿ ತಾಲೂಕಿನ ಮಲ್ಪೆಯಲ್ಲಿ‌ ಈ‌ ಘಟನೆ‌...

 ಬ್ರೆಝಿಲ್: ಭೀಕರ ರಸ್ತೆ ಅಪಘಾತ :37 ಕಾರ್ಮಿಕರ ದಾರುಣ ಸಾವು..!

 ಬ್ರೆಝಿಲ್: ಭೀಕರ ರಸ್ತೆ ಅಪಘಾತ :37 ಕಾರ್ಮಿಕರ ದಾರುಣ ಸಾವು..! ಬ್ರೆಝಿಲ್:   ಹೆದ್ದಾರಿಯಲ್ಲಿ  ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 37 ಮಂದಿ ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬ್ರೆಜಿಲ್ ನಲ್ಲಿ  ನಡೆದಿದೆ.ಬ್ರೆಜಿಲ್ ನ ಸಾವೋಪೋಲೋ...

ಭೀಕರ ನಿವಾರ್ ಚಂಡಮಾರುತ: ಚೆನ್ನೈನಲ್ಲಿ ಐವರು ಬಲಿ..!

ಭೀಕರ ನಿವಾರ್ ಚಂಡಮಾರುತ: ಚೆನ್ನೈನಲ್ಲಿ ಐವರು ಬಲಿ..! ಚೆನ್ನೈ: ಬುಧವಾರ ತಡರಾತ್ರಿ ಪುದುಚೇರಿ ಮತ್ತು ಕಡಲೂರು ಜಿಲ್ಲೆಯ ಕರಾವಳಿಗೆ ನಿವಾರ್ ಚಂಡಮಾರುತ ಪ್ರವೇಶಿಸಲಾರಂಭಿಸಿದೆ. ಭಾರೀ ಮಳೆಯಿಂದ ಸಂಭವಿಸಿದ ವಿವಿಧ ಅನಾಹುತಗಳಲ್ಲಿ ಚೆನ್ನೈನಲ್ಲಿ 5ಮಂದಿ ಸಾವನ್ನಪ್ಪಿದ್ದಾರೆ...

ತಾ.ಪಂ.ಅಧ್ಯಕ್ಷರಿಗೆ  ಕಾರ್ಯಕ್ರಮಕ್ಕೆ ಆಮಂತ್ರಣವಿಲ್ಲ .ಕುಕ್ಕೆ ದೇವಳದ ನಾಮಫಲಕದಲ್ಲಿ  ಸುಳ್ಯ ತಾಲೂಕಿನ ಹೆಸರು!ಸ್ಥಳೀಯರ ಆಕ್ರೋಶ

ಕಡಬ: ರಾಜ್ಯದ ಪ್ರಸಿದ್ದ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಳ್ಯ ತಾಲೂಕಿಗೆ ಸೇರಿದೆಯೋ ಅಥಾವ ಸರಕಾರ ಅನುಷ್ಠಾನಗೊಳಿಸಿದ ಕಡಬ ತಾಲೂಕಿಗೆ ಸೇರ್ಪಡೆಗೊಂಡಿದೆಯೋ  ಅನ್ನೋ ಪ್ರಶ್ನೆ ಉದ್ಬವಿಸಿದೆ, ಯಾಕೆಂದರೆ ಕಡಬ ತಾಲೂಕು ಅನುಷ್ಠಾನಗೊಂಡು ಎರಡು ವರ್ಷ ಪೂರ್ಣಗೊಳ್ಳುತ್ತಿದೆ.  ಬಳಿಕ ಕಡಬದಲ್ಲಿ ಹೊಸ ತಾಲೂಕು ಪಂಚಾಯತ್ ರಚನೆಗೊಂಡು ಎರಡು ಮೂರು ಸಭೆಗಳು ನಡೆದಿವೆ. ಆ ಸಭೆಗೆ ಕಡಬ ತಾಲೂಕಿಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದಾರೆ, ಇಷ್ಟಾದರೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಅಧಿಕಾರಿಗಳು ಮಾತ್ರ ಇನ್ನೂ ಸುಳ್ಯ ತಾಲೂಕಿನಲ್ಲ್ಲೇ ಬಾಕಿಯಾಗಿದ್ದಾರೆ..

ಅನಘ ವಸತಿಗೃಹ ಉದ್ಘಾಟನಾ ಕಾರ್‍ಯಕ್ರಮದಲ್ಲಿ  ಕಡಬ ತಾಲೂಕು ಪಂಚಾಯತ್ ಅಧ್ಯಕ್ಷರ ಹೆಸರು ನಾಪತ್ತೆ!

ಇಂದು(ನ.22) ಮಧ್ಯಾಹ್ನ  ನಡೆಯುವ ಕುಕ್ಕೆಶ್ರೀ ದೇವಳದ ಸಮಗ್ರ ಅಭಿವೃದ್ದಿಯ ಮಾಸ್ಟರ್ ಪ್ಲಾನ್ ಯೋಜನೆಯಡಿಯಲ್ಲಿ

ಆದಿ ಸುಬ್ರಹ್ಮಣ್ಯದಲ್ಲಿ ನಿರ್ಮಿಸಿರುವ ಅನಘ ವಸತಿಗೃಹ ಉದ್ಘಾಟನಾ ಕಾರ್ಯಕ್ರಮ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರಿಂದ ಉದ್ಘಾಟನೆಗೊಂಡಿದ್ದು, ಕ್ಷೇತ್ರದ ಶಾಸಕ ಎಸ್. ಅಂಗಾರ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಉಳಿದಂತೆ ಪ್ರೊಟೋಕಾಲ್ ಪ್ರಕಾರ ಸಂಸದರು, ಜಿ.ಪಂ. ಅಧ್ಯಕ್ಷರು ಜಿಲ್ಲಾ ಮಟ್ಟದ ಅಧಿಕಾರಿಗಳು, ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷರ ಹೆಸರುಗಳನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಲಾಗಿದೆ. ಆದರೆ ವಿಶೇಷತೆಯೆಂದರೆ ಕಡಬ ತಾಲೂಕು ಪಂಚಾಯತ್ ಅಧ್ಯಕ್ಷರ ಹೆಸರನ್ನೇ ಉಲ್ಲೇಖಿಸಲಾಗಿಲ್ಲ ಮತ್ತು ಕಾರ್ಯಕ್ರಮಕ್ಕೆ ಅವರನ್ನು ಆಮಂತ್ರಿಸಿಲ್ಲ. ಈ ಬಗ್ಗೆ ಈಗಾಗಲೇ ದೇವಸ್ಥಾನದ ಆಡಳಿತ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದು ಅಪರಾಹ್ನ ಈ ವಿಚಾರವನ್ನು ಸಚಿವರ ಗಮನಕ್ಕೂ ತರಲಾಗುತ್ತಿದೆ.

ದೇವಸ್ಥಾನದ ಮುಖ್ಯ ದ್ವಾರದಲ್ಲಿ ಅಳವಡಿಸಲಾಗಿರುವ ನಾಮಫಲಕದಲ್ಲಿ ದೇವಸ್ಥಾನ ಇನ್ನೂ ಸುಳ್ಯ ತಾಲೂಕಿನಲ್ಲಿಯೇ ಇರುವುದು ಸ್ವಷ್ಟವಾಗುತ್ತಿದೆ, ಈ ನಾಮಫಲಕದಲ್ಲಿ ತಾಲೂಕು ಹೆಸರು ಬದಲಾವಣೆ ಮಾಡಬೇಕೆಂದು  ತಾ.ಪಂ. ಸಭೆಯಲ್ಲಿ ಪ್ರಸ್ತಾಪಿಸಿ ನಿರ್ಣಯ ಕೈಗೊಳ್ಳಲಾಗಿತ್ತು, ಆದರೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕಾರಿಗಳಿಗೆ ಮಾತ್ರ ಈ ನಿರ್ಣಯಗಳು ತಲುಪದಿರುವುದು ಮಾತ್ರ ಆಶ್ಚರ್ಯವೇ ಸರಿ

ಈ ಬಗ್ಗೆ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಂ.ಎಚ್.ಅವರನ್ನು ಸಂಪರ್ಕಿಸಿದಾಗ ಕೂಡಲೇ ಮಾತನಾಡಿದ ಅವರು, ನಮ್ಮಿಂದ ತಪ್ಪಾಗಿದೆ, ಕೂಡಲೇ ಕಡಬ ತಾ.ಪಂ. ಅಧ್ಯಕ್ಷರ ಹೆಸರನ್ನು ಸೇರ್ಪಡೆಗೊಳಿಸುತ್ತೇವೆ, ಎಂದು ಉತ್ತರ ನೀಡಿ, ಬದಲಿ ಆಮಂತ್ರಣ ಪತ್ರಿಕೆಯಲ್ಲಿ ತಿದ್ದುಪಡಿ ಮಾಡಿ ಅಧ್ಯಕ್ಷರ ಹೆಸರನ್ನು ಸೇರಿಸಿದ್ದಾರೆ.

ಈ ಬಗ್ಗೆ ಆಡಳಿತಾಧಿಕಾರಿ ಎಂ.ಜೆ. ರೂಪ ಅವರಿಗೂ ಮಾಹಿತಿ ನೀಡಲಾಗಿತ್ತು ಈ ಬಗ್ಗೆ ವಿಚಾರಿಸುತ್ತೇನೆ ಎಂದಷ್ಟೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ.

ಅಧಿಕಾರಿಗಳೇ ಎಚ್ಚೆತ್ತುಕೊಳ್ಳಿ, ಸರಕಾರದ ಆದೇಶ ಪಾಲಿಸಿ
ಸರಕಾರ ಯಾವ ಆದೇಶಗಳನ್ನು ಮಾಡಿದರೂ ಅದನ್ನು ಕಾರ್ಯರೂಪಕ್ಕೆ ತರುವವರು ಅಧಿಕಾರಿಗಳು, ಆದರೇ ಅಧಿಕಾರಿಗಳು ಇಂತಹ ಘೋರ ನಿದ್ದೆಯಲ್ಲಿದ್ದರೆ ಸರಕಾರದ ಕಾರ್ಯಕ್ರಮಗಳು ಯಾವಗ ಜಾರಿಗೆ ಬರುವುದು ಎಂಬ ಪ್ರಶ್ನೆ ಉದ್ಘವಿಸಿದೆ,

ಇನ್ನಾದರೂ ಸರಕಾರದ ಆದೇಶವನ್ನು ಪಾಲಿಸಿ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದ್ದು ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಚಾರವನ್ನು ಸಚಿವರು, ಶಾಸಕರ ಗಮನಕ್ಕೆ ತರಲಾಗುತ್ತದೆ ಎಂದು ಸುಬ್ರಹ್ಮಣ್ಯ ನಾಗರಿಕರು ತಿಳಿಸಿದ್ದಾರೆ.

ಈ ಬಗ್ಗೆ ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅವರನ್ನು ಸಂಪರ್ಕಿಸಿದಾಗ, ಸುಬ್ರಹ್ಮಣ್ಯದ ಕಾರ್ಯಕ್ರಮದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.