DAKSHINA KANNADA
ಟ್ಯಾಂಕರ್‌ಗಳಿಂದ ಡಿಸೇಲ್ ಕಳ್ಳತನ; ಆರೋಪಿಗಳು ಅರೆಸ್ಟ್
Published
4 hours agoon
ಸುರತ್ಕಲ್ : ನಿಲ್ಲಿಸಿರುವ ಟ್ಯಾಂಕರ್‌ಗಳಿಂದ ಟ್ಯಾಂಕರ್‌ಯಾರ್ಡ್‌ನಲ್ಲಿ ಡೀಸೆಲ್ ಕಳ್ಳತನ ಮಾಡುವ ಗ್ಯಾಂಗ್ ಒಂದನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕುಳಾಯಿಗುಡ್ಡೆ ನಿವಾಸಿ ಸಂತೋಷ್(42), ಕಾಟಿಪಳ್ಳ ನಿವಾಸಿ ಐರನ್ ರಿತೇಶ್ ಮಿನೇಜ್(36), ಬೆಳ್ತಂಗಡಿ ನಿವಾಸಿ ನಾರಾಯಣ್(23), ಉಡುಪಿಯ ಹೆಜಮಾಡಿ ನಿವಾಸಿ ರವಿ ಜನಾರ್ದನ ಪುತ್ರನ್ (59) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ನಾಲ್ಕು ಮಕ್ಕಳಿರಲಿ, 1 ಲಕ್ಷ ರೂ. ಪಡೆಯಿರಿ !
ಈ ಗ್ಯಾಂಗ್ ಮಂಗಳೂರಿನ ಹೊರವಲಯದ ಬಾಳ ಗ್ರಾಮದ ಬಳಿ ಇರುವ ಟ್ಯಾಂಕರ್‌ಯಾರ್ಡ್‌ನಲ್ಲಿ ನಿಲ್ಲಿಸಿರುವ ಟ್ಯಾಂಕರ್‌ಗಳಿಂದ ಡೀಸೆಲ್ ಕಳವು ಮಾಡುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಡೀಸೆಲ್ ಕಳವುಗೈದು ದಾಸ್ತಾನು ಇರಿಸಿದ್ದ ಶೆಡ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ದಾಸ್ತಾನು ಇರಿಸಿಟ್ಟಿದ್ದ 1685 ಲೀಟರ್ ಡಿಸೇಲ್ ಮತ್ತು 20 ಲೀಟರ್ ಪೆಟ್ರೋಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
DAKSHINA KANNADA
ತುಳು ಸಿನೆಮಾಗೆ ‘ಜೈ’ ಅಂದ ಸುನೀಲ್ ಶೆಟ್ಟಿ; ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ
Published
2 hours agoon
14/01/2025ಮಂಗಳೂರು : ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ಎಂಬ ತುಳು ಸಿನೆಮಾದಲ್ಲಿ ನಟಿಸಲು ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಇಂದು ಮಂಗಳೂರಿಗೆ ಆಗಮಿಸಿದ್ದಾರೆ. ಸುನಿಲ್ ಶೆಟ್ಟಿ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ರೂಪೇಶ್ ಶೆಟ್ಟಿ ಅವರು ಹಾರ್ದಿಕವಾಗಿ ಸ್ವಾಗತಿಸಿದರು.
‘ಜೈ’ ಸಿನೆಮಾ ಬಿಗ್ ಬಜೆಟ್ ಸಿನೆಮಾ ಆಗಿದ್ದು, ಕರಾವಳಿಯ ಬಹುತೇಕ ಕಡೆಗಳಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ಜಿಲ್ಲೆಯ ಹಲವು ಖ್ಯಾತ ನಟರು ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಜನವರಿ 15 ರಿಂದ ನಡೆಯಲಿರುವ ಸಿನೆಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಸುನಿಲ್ ಶೆಟ್ಟಿ ಅವರು ಭಾಗಿಯಾಗಲಿದ್ದಾರೆ. ಗಿರಿಗಿಟ್ , ಗಮ್ಜಾಲ್, ಸರ್ಕಸ್ ಚಿತ್ರದ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರ ಬಿಗ್ ಬಜೆಟ್ ಸಿನೆಮಾ ‘ಜೈ’. ಆರ್ ಎಸ್ ಸಿನೆಮಾಸ್ ಶೂಲಿನ್ ಫಿಲಮ್ಸ್ , ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಸಿನೆಮಾ ನಿರ್ಮಾಣವಾಗುತ್ತಿದೆ.
ರೂಪೇಶ್ ಶೆಟ್ಟಿ ಸಿನೆಮಾಗೆ ಅ್ಯಕ್ಷನ್ ಕಟ್ ಹೇಳಿದ್ದು, ಕತೆ ಹಾಗೂ ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ. ಕ್ಯಾಮೆರಾದಲ್ಲಿ ವಿನುತ್ ಕೆ. ಸಂಗೀತ ಲೋಯ್ ವೆಲೆಂಟಿನ್ ಸಲ್ಡಾನ್ಹಾ ಹಾಗೂ ಸಂಕಲನ ರಾಹುಲ್ ವಸಿಷ್ಠ ಅವರದ್ದಾಗಿದೆ. ಅನಿಲ್ ಶೆಟ್ಟಿ , ಸುಧಾಕರ ಶೆಟ್ಟಿ ಮುಗ್ರೋಡಿ ಮಂಜುನಾಥ ಅತ್ತಾವರ ಅವರು ಚಿತ್ರ ನಿರ್ಮಾಪಕರಾಗಿದ್ದಾರೆ. ಸುನಿಲ್ ಶೆಟ್ಟಿ ಮೊದಲ ಬಾರಿಗೆ ತುಳು ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತುಳು ನಮ್ಮ ತುಳುನಾಡಿನ ಭಾಷೆ. ತುಳು ಭಾಷೆಯಲ್ಲಿ ಚಿತ್ರ ನಿರ್ಮಾಣ ಮಾಡ ಬೇಕೆಂಬುದು ಬಹು ಕಾಲದ ಕನಸು. ಉತ್ತಮ ವಿಷಯದ ತುಳು ಚಿತ್ರ ಬಂದರೆ ನಟಿಸ ಬೇಕೆಂದು 2- 3 ವರ್ಷಗಳ ಹಿಂದೆ ಇಂಗಿತ ವ್ಯಕ್ತ ಪಡಿಸಿದ್ದೆ. ಇದೀಗ ಒಂದು ಅವಕಾಶ ಸಿಕ್ಕಿದೆ. ಇದು ನಾನು ಅಭಿನಯಿಸುವ ಮೊದಲ ತುಳು ಚಿತ್ರ ಎಂದರು. ತುಳುವಿನಲ್ಲಿ ಇತ್ತೀಚೆಗೆ ಉತ್ತಮ ಸಿನೆಮಾಗಳು ಬರುತ್ತಿವೆ. ಇತರ ಎಲ್ಲಾ ಭಾಷೆಗಳ ಸಿನೆಮಾಗಳಿಗೆ ಸಮಾನವಾದ ಚಿತ್ರಗಳು ತುಳುವಿನಲ್ಲಿ ಬರುತ್ತಿವೆ. ಇದು ತುಂಬಾ ಖುಷಿಯ ವಿಚಾರ ಎಂದರು.
DAKSHINA KANNADA
ಮೂಡುಬಿದಿರೆ : ಗೂಡಂಗಡಿ ಕಳವು ಪ್ರಕರಣ ಭೇದಿಸಿದ ಪೊಲೀಸರು; ಮೂವರು ಅರೆಸ್ಟ್
Published
6 hours agoon
14/01/2025By
NEWS DESK4ಮೂಡುಬಿದಿರೆ : ಮೂಡುಬಿದಿರೆ ಹೊರವಲಯದ ಪುತ್ತಿಗೆ ಗ್ರಾಮದ ಮೂಲ್ಕಿ ಕ್ರಾಸ್ ಬಳಿ ಜನವರಿ 9 ರಂದು ರಾತ್ರಿ ಜಯಶ್ರೀ ಸ್ಟೋರ್ ಎಂಬ ಗೂಡಂಗಡಿಯಿಂದ ನಗದು ಮತ್ತು ಸೊತ್ತುಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೂಡುಬಿದಿರೆ ತಾಲೂಕು ನಿಡ್ಡೋಡಿ ನೀರುಡೆಯ ರೋಷನ್ ಕ್ವಾಡ್ರಸ್ (37), ಕೊಂಪದವು ನೆಲ್ಲಿತೀರ್ಥದ ನಿಶಾಂಕ್ ಪೂಜಾರಿ (18) ಮತ್ತು ನೀರುಡೆ 5 ಸೆಂಟ್ಸ್‌ನ ರೋಹಿತ್ ಮಸ್ಕರೇನ್ಹಸ್ (21) ಬಂಧಿತರು.
ಬಂಧಿತರಿಂದ ಕೃ*ತ್ಯಕ್ಕೆ ಬಳಸಿದ ಕಾರು, ಸ್ಕೂಟರ್ ಮತ್ತು 5,000 ರೂ. ನಗದು ಹಣ ಸಹಿತ ಒಟ್ಟು 3.55 ಲಕ್ಷ ರೂಪಾಯಿ ಮೌಲ್ತದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪುತ್ತಿಗೆಯ ಗೂಡಂಗಡಿಯಿಂದ ಛಾವಣಿ ಶೀಟ್‌ಗಳನ್ನು ತೆರೆದು 20,000 ರೂ. ನಗದು, 48,000 ರೂ. ಮೌಲ್ಯದ ಸಿಗರೇಟು, ಪಾನೀಯ, ತಿಂಡಿತಿನಿಸು ಮೊದಲಾದ ಸೊತ್ತುಗಳನ್ನು ಕಳವು ಮಾಡಲಾಗಿತ್ತು.
ಇದನ್ನೂ ಓದಿ : ನಾಲ್ಕು ಮಕ್ಕಳಿರಲಿ, 1 ಲಕ್ಷ ರೂ. ಪಡೆಯಿರಿ !
ಈ ಆರೋಪಿಗಳು ಈ ಹಿಂದೆ ಮೂಲ್ಕಿ, ಬಜಪೆ, ಕಾರ್ಕಳ ಮತ್ತು ವೇಣೂರು ಠಾಣೆಗಳ ವ್ಯಾಪ್ತಿಯಲ್ಲಿ ಮೂರು ವರ್ಷಗಳಿಂದ 25ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗೂಡಂಗಡಿಗಳಲ್ಲಿ ಕಳವು ಮಾಡಿರುವ ಪ್ರಕರಣಗಳಲ್ಲಿ ಪಾಲ್ಗೊಂಡವರಾಗಿದ್ದಾರೆ. ಮೂಡುಬಿದಿರೆ ಸರ್ಕಲ್ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ. ನಡೆಸಿದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ನವೀನ್, ಎಎಸ್‌ಐ ರಾಜೇಶ್, ಅಪರಾಧ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.
DAKSHINA KANNADA
ಯಕ್ಷ ಸಾಧಕರಿಗೆ ಪೂಲ ವಿಠ್ಠಲ ಶೆಟ್ಟಿ ಪ್ರಶಸ್ತಿ ಪ್ರದಾನ
Published
7 hours agoon
14/01/2025By
NEWS DESK4ಮಂಗಳೂರು : ಶ್ರೀ ಕಟೀಲು ಮೇಳದ ಭಾಗವತ ಅಂಡಾಲ ದೇವಿ ಪ್ರಸಾದ ಆಳ್ವ ಹಾಗೂ ಬಣ್ಣದ ವೇಷಧಾರಿ ಸುರೇಶ ಕುಪ್ಪೆಪದವು ಅವರಿಗೆ ಈ ವರ್ಷದ “ಪೂಲ ವಿಠ್ಠಲ ಶೆಟ್ಟಿ ಪ್ರಶಸ್ತಿ” ಪ್ರದಾನ ಮಾಡಲಾಗಿದೆ. ಪಡುಬಿದ್ರೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಪಡುಬಿದ್ರೆ ಕಲ್ಲಟೆಗುತ್ತು ಮೂಲ ಕುಟುಂಬಸ್ಥರಾದ ರಾಧಾ ವಿಠ್ಠಲ ಶೆಟ್ಟಿ ಮತ್ತು ಮಕ್ಕಳ ಶ್ರೀ ಕಟೀಲು ಮೇಳದ 28ನೇ ವರ್ಷದ ಸೇವೆ ಬಯಲಾಟದ ವೇದಿಕೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಟೀಲು ಲಕ್ಷ್ಮೀ ನಾರಾಯಣ ಅಸ್ರಣ್ಣ ಅವರು, ಪರಾಧೀನವಾಗಿದ್ದ ಕಟೀಲು ಮೂಲ ಕುದುರನ್ನು ಶ್ರೀ ಕ್ಷೇತ್ರಕ್ಕೆ ಮರಳಿಸಿದ ದಾನಿಗಳಾದ ಪೂಲ ವಿಠ್ಠಲ ಶೆಟ್ಟಿ ಪರಿವಾರದ ಸೇವೆಯನ್ನು ಸ್ಮರಿಸಿದರು.
ಕದ್ರಿ ನವನೀತ ಶೆಟ್ಟಿ ಮಾತನಾಡಿ, ಅಂಡಾಲ ದೇವಿಪ್ರಸಾದ ಅವರು ಕಳೆದ ಮೂರುವರೆ ದಶಕಗಳಿಂದ ಯಕ್ಷಗಾನ ರಂಗದಲ್ಲಿ ಪ್ರಸಂಗ ರಚನೆ ಹಾಗೂ ಭಾಗವತಿಕೆಯಲ್ಲಿ ಪ್ರಬುದ್ಧತೆ ಮೆರೆದವರು. ತೆಂಕು ಹಾಗೂ ಬಡಗುತಿಟ್ಟಿನ ಟೆಂಟ್ ಮೇಳಗಳಲ್ಲೂ ಅವರ ಪ್ರಸಂಗಗಳು ಯಶಸ್ವಿ ಪ್ರದರ್ಶನ ಕಂಡಿವೆ. ಕಟೀಲು ಮೇಳದಲ್ಲೇ ಬಣ್ಣದ ವೇಷಧಾರಿಯಾಗಿ ರೂಪುಗೊಂಡು ಕಳೆದ 35 ವರ್ಷ ಗಳಿಂದ ಕಲಾ ಸೇವೆಗೈಯ್ಯುತ್ತಿರುವ ಸುರೇಶ ಕುಪ್ಪೆಪದವು ಅವರು ಮಹಿಷಾಸುರ ಪಾತ್ರ ನಿರ್ವಹಣೆಯಲ್ಲಿ ಸಿದ್ದಿ ಪ್ರಸಿದ್ದಿ ಪಡೆದಿದ್ದಾರೆ ಎಂದು ಅಭಿನಂದಿಸಿದರು.
ಕಂಬಳ ಕೋಣಗಳ ಮಾಲಕರಾಗಿ ಖ್ಯಾತಿ ಪಡೆದಿದ್ದ ಮುಂಬೈ ಘಾಟಿಕೋಪರ್‌ನ ಭಾರತ್ ಕೆಫೆ ಸಂಸ್ಥಾಪಕ ಪೂಲ ವಿಠ್ಠಲ ಶೆಟ್ಟಿ ಅವರ ಸ್ಮರಣಾರ್ಥ ಪ್ರತೀ ವರ್ಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಇದನ್ನೂ ಓದಿ : ಉಕ್ರೇನ್ ಯುದ್ದದಲ್ಲಿ ರಷ್ಯಾ ಪರ ಹೋರಾಡುತ್ತಿದ್ದ ಕೇರಳದ ವ್ಯಕ್ತಿ ಸಾವು
ಉದಯ ಶೆಟ್ಟಿ ಎರ್ಮಾಳ್, ಐಕಳ ವಿಶ್ವನಾಥ ಶೆಟ್ಟಿ, ವಿಶುಕುಮಾರ್ ಬ್ರಹ್ಮಾವರ ಉಪಸ್ಥಿತರಿದ್ದರು. ಸೇವಾಕರ್ತ ಸತೀಶ್ ವಿಠ್ಠಲ ಶೆಟ್ಟಿ ಸ್ವಾಗತಿಸಿದರು. ಶ್ರೀ ಕಟೀಲು ಮೇಳದವರಿಂದ “ರಾಮ-ಕೃಷ್ಣ-ಗೋವಿಂದ” ಯಕ್ಷಗಾನ ಬಯಲಾಟ ಜರಗಿತು.
LATEST NEWS
ಅಧಿಕಪ್ರಸಂಗದ ಪ್ರಶ್ನೆ ಕೇಳಿದ ಯೂಟ್ಯೂಬರನ್ನು ಹೊಡೆದ ನಾಗಾಸಾಧು
ತುಳು ಸಿನೆಮಾಗೆ ‘ಜೈ’ ಅಂದ ಸುನೀಲ್ ಶೆಟ್ಟಿ; ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ
ಮಕರ ಜ್ಯೋತಿ ಯಾವ ಹೊತ್ತಲ್ಲಿ ಕಾಣುತ್ತದೆ ಗೊತ್ತಾ ?
ನಟ ದರ್ಶನ್ ಸಂಕ್ರಾಂತಿ ಆಚರಣೆ…ಪತ್ನಿ ಮಾಡಿರುವ ಪೋಸ್ಟ್ ವೈರಲ್!
ಟೀಮ್ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್; ಕಟ್ಟುನಿಟ್ಟಿನ ಕ್ರಮಕೈಗೊಂಡ ಬಿಸಿಸಿಐ
ಟ್ಯಾಂಕರ್‌ಗಳಿಂದ ಡಿಸೇಲ್ ಕಳ್ಳತನ; ಆರೋಪಿಗಳು ಅರೆಸ್ಟ್
Trending
- BIG BOSS3 days ago
BBK11: ಐವರು ನಾಮಿನೇಟ್, ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್ಪಾಸ್ ಯಾರಿಗೆ..?
- LATEST NEWS4 days ago
ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!
- FILM6 days ago
ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್ಡೇ ಸಂಭ್ರಮ
- FILM5 days ago
ಮಗುವಿನೊಂದಿಗೆ ಕೊಲ್ಲೂರು ದೇಗುಲಕ್ಕೆ ಹರ್ಷಿಕಾ ದಂಪತಿ ಭೇಟಿ