BELTHANGADY
ಉಜಿರೆಯಲ್ಲಿ ಫ್ಯಾನ್ಸಿ & ಬಟ್ಟೆ ಅಂಗಡಿಗೆ ನುಗ್ಗಿ ನಗದು ಕಳವು
ಉಜಿರೆ: ಕಾಲೇಜು ರಸ್ತೆಯ ಫ್ಯಾನ್ಸಿ ಅಂಗಡಿ ಹಾಗೂ ಬಟ್ಟೆ ಅಂಗಡಿವೊಂದರ ಬೀಗ ಒಡೆದು ಕಳ್ಳತನ ನಡೆಸಿರುವ ಘಟನೆ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿ ನಡೆದಿದೆ.
ಫ್ಯಾನ್ಸಿ ಅಂಗಡಿಯಿಂದ ರೂ.9,000 ನಗದು ಹಾಗೂ ಬಟ್ಟೆ ಅಂಗಡಿಯಿಂದ ಚಿಲ್ಲರೆ ಹಣವನ್ನು ಕಳ್ಳರು ದೋಚಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಅಹರ್ನಿಶಿ ಜನ, ವಾಹನ ಓಡಾಟವಿರುವ ಪೇಟೆಯ ಹೃದಯ ಭಾಗದಲ್ಲೆ ಕಳ್ಳತನ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ತಿಳಿಸಿದ್ದಾರೆ.
BELTHANGADY
ಸೈಕಲ್ ರಿಪೇರಿ ವಿಚಾರಕ್ಕೆ ಜೀ*ವಾಂತ್ಯಗೊಳಿಸಿದ ಬಾಲಕ..!
ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ 8 ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಎಂಬಲ್ಲಿ ಏ.19ರಂದು ನಡೆದಿದೆ. ಉಪ್ಪಿನಂಗಡಿಯ ಖಾಸಗಿ ಶಾಲೆಯ ಮುಂದಿನ ಅವಧಿಯಲ್ಲಿ 8 ನೇ ತರಗತಿ ವಿದ್ಯಾರ್ಥಿಯಾಗಿದ್ದ ನಂದನ್ (13) ಎಂಬಾತ ಆತ್ಮಹತ್ಯೆಗೆ ಶರಣಾದ ಬಾಲಕ.
Read More..; ನಗರ ಸಭೆ ಉಪಾಧ್ಯಕ್ಷೆ ಮಗ ಸೇರಿ ನಾಲ್ವರ ಹ*ತ್ಯೆ! ಹಂ*ತಕರ ಪತ್ತೆಗೆ ವಿಶೇಷ ತಂಡ ರಚನೆ
ಪಂಜದ ದಿವಂಗತ ರೋಹಿತ್ ಗೌಡ ಎಂಬವರ ಮಗನಾಗಿದ್ದ ಈತ ತನ್ನ ತಂದೆಯ ನಿಧನದ ನಂತರ ದುಗಲಾಡಿಯ ಮಾವನ ಮನೆಯಲ್ಲಿದ್ದ. ಅಲ್ಲಿಂದಲೆ ಉಪ್ಪಿನಂಗಡಿಯ ಖಾಸಗಿ ಶಾಲೆಗೆ ಹೋಗುತ್ತಿದ್ದ. ಈತ ಈ ಬಾರಿ ಏಳನೇ ತರಗತಿ ಉತ್ತೀರ್ಣನಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಗೆ ತೇರ್ಗಡೆ ಹೊಂದಿದ್ದ. ಏ.19ರಂದು ತನ್ನ ಕೆಟ್ಟು ಹೋಗಿದ್ದ ಸೈಕಲ್ ಅನ್ನು ರಿಪೇರಿ ಮಾಡಿಕೊಡಬೇಕೆಂದು ಮನೆಯಲ್ಲಿ ಒತ್ತಾಯಿಸಿದ್ದ. ಮನೆಯ ಇನ್ವಾರ್ಟರ್ ರಿಪೇರಿಗೆ ಬಂದಿರುವುದರಿಂದ ಇವತ್ತು ಬೇಡ ನಾಳೆ ಸೈಕಲ್ ರಿಪೇರಿ ಮಾಡಿಕೊಡಲಾಗುವುದೆಂದು ಮನೆಯವರು ಹೇಳಿದ್ದಾರೆ ಎನ್ನಲಾಗಿದೆ. ಇದೇ ನೆಪವನ್ನು ಇಟ್ಟುಕೊಂಡು ಮನನೊಂದ ಬಾಲಕ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಎಲ್ಲಾ ವಿಚಾರವನ್ನು ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
BELTHANGADY
ಶ್ವಾನ ಪ್ರಿಯರೇ ಎಚ್ಚರ..ಎಚ್ಚರ..! ಮಾಲಕಿಯ ತಲೆ ಸೀಳಿದೆ ಸಾಕು ನಾಯಿ..!
ಬೆಳ್ತಂಗಡಿ : ಮನೆಯಲ್ಲಿ ಪ್ರಾಣಿಗಳನ್ನು ಸಾಕುವುದೆಂದರೆ ಹೆಚ್ಚಿನವರಿಗೆ ಇಷ್ಟ. ಅದರಲ್ಲೂ ನಾಯಿ ಪ್ರಿಯರು ಅನೇಕ ಮಂದಿ ಇದ್ದಾರೆ. ತಮ್ಮ ಮನೆಗಳಲ್ಲಿ ವಿವಿಧ ತಳಿಯ ನಾಯಿಗಳನ್ನು ಸಾಕುತ್ತಾರೆ. ಈ ನಾಯಿಗಳನ್ನು ಪ್ರೀತಿಸಿದಾಗ ಅವೂ ಅದಕ್ಕೆ ಪ್ರತಿಯಾಗಿ ಪ್ರೀತಿ ಕೊಡೋದು ಸಹಜ. ಆದರೆ, ಅದಕ್ಕೆ ವಿರುದ್ಧವಾದ ಘಟನೆಯೂ ನಡೆಯಬಹುದು ಎಂಬುದಕ್ಕೆ ಗುರುವಾರ(ಏ.18) ಬೆಳ್ತಂಗಡಿಯಲ್ಲಿ ನಡೆದ ಈ ಸುದ್ದಿ ನಿದರ್ಶನವಾಗಿದೆ.
ಮನೆ ಮಾಲಕಿ ತನ್ನ ಸಾಕು ನಾಯಿಯನ್ನು ಮುದ್ದಾಡುವಾಗ ಅದು ಏಕಾಏಕಿ ದಾ*ಳಿ ಮಾಡಿ, ತಲೆ ಭಾಗವನ್ನು ಸೀಳಿ ಹಾಕಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಮುಂಡಾಜೆ ಗ್ರಾಮ ನಿಡಿಕಲ್ ಓಂಕಾರ್ ನಿವಾಸಿ ದಿವಂಗತ ರಾಮ್ ದಾಸ್ ಎಂಬವರ ಪತ್ನಿ 49 ವರ್ಷದ ಪೂರ್ಣಿಮಾ ಗಂಭೀ*ರ ಗಾ*ಯಗೊಂಡ ಮಹಿಳೆ.
ಇದನ್ನೂ ಓದಿ : Viral Video; ಸ್ಮೋಕ್ ಬಿಸ್ಕೆಟ್ ತಿನ್ನುತ್ತಿದ್ದಂತೆಯೇ ಬಾಲಕ ಅಸ್ವಸ್ಥ
ಪೂರ್ಣಿಮಾ ತನ್ನ ಮನೆಯ ಸಾಕು ನಾಯಿಯನ್ನು ಎಂದಿನಂತೆ ಮುದ್ದಾಡುತ್ತಿದ್ದರು. ಈ ವೇಳೆ ಅವರು ಕಾಲು ಜಾರಿ ನೆಲಕ್ಕೆ ಬಿದ್ದಿದ್ದಾರೆ. ಅದೇನಾಯ್ತೋ ಗೊತ್ತಿಲ್ಲ, ಸಾಕು ನಾಯಿ ಪೂರ್ಣಿಮಾ ಮೇಲೆ ದಾ*ಳಿ ನಡೆಸಿದೆ. ತಲೆ ಭಾಗ ಸೀ*ಳಿ ಹಾಕಿದೆ. ಕೈ ಕಚ್ಚಿ ಗಂಭೀ*ರ ಗಾ*ಯಗೊಳಿಸಿದೆ. ಸದ್ಯ, ಪೂರ್ಣಿಮಾ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
BELTHANGADY
ಸೌದೆ ಒಡೆಯಲೂ ಬಂತು ಯಂತ್ರ… ಹೇಗಿದೆ ನೋಡಿ..!
ದಕ್ಷಿಣ ಕನ್ನಡ: ಇತ್ತೀಚಿನ ದಿನಗಳಲ್ಲಿ ಎಲ್ಲಾ ಕೆಲಸಗಳೂ ಯಂತ್ರದ ಮೂಲಕವೇ ನಡೆಯುತ್ತಿದೆ. ಮನೆಯಲ್ಲಿ ನೆಲ ಒರಸಲು ಮಿಷಿನ್, ಅಡುಗೆ ಮಾಡಲು ಮಿಷಿನ್ ಹಾಗೆಯೇ ವಾಷಿಂಗ್ ಮಿಷಿನ್ನಲ್ಲಿ ಬಟ್ಟೆ ಒಗೆದರೂ ಅದನ್ನು ಆರಿಸಲೂ ಒಂದು ಮಿಷಿನ್ ಬಂದಿದೆ. ಹೀಗೆ ಪ್ರತಿ ಕೆಲಸಕ್ಕೂ ಜನರು ಯಂತ್ರಗಳನ್ನು ಅವಲಂಭಿಸಿದ್ದಾರೆ. ಹಿಂದೆ ಮರ ಕಡಿಯಲೂ ಜನರೇ ಬೇಕಿತ್ತು. ಆದರೆ ಆ ಜಾಗಕ್ಕೂ ಮಿಷಿನ್ ಬಂತು. ಈಗ ಕಟ್ಟಿಗೆ ಒಡೆಯಲೂ ಮಿಷಿನ್ ಬಂದಿದೆ.
ಹೌದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೇ ಬೇಕಾದ ಸೈಝ್ಗೆ ಕಟ್ಟಿಗೆಯನ್ನು ಒಡೆಯಲು ವಿಶೇಷ ರೀತಿಯ ಯಂತ್ರವೊಂದು ಬಂದಿದೆ. ಈಗ ಬೇಸಿಗೆಯ ಬಿಸಿ ಏರಿದೆ. ಆದರೆ ನಾಳೆಯ ದಿನ ಮಳೆ ಬರಬಹುದು. ಆಗ ಸ್ನಾನ ಮಾಡಲು ನೀರು ಕಾಯಿಸಲು, ಅಡುಗೆಗೆ ಕಟ್ಟಿಗೆಯ ಉಪಯೋಗ ಆಗುತ್ತದೆ ಎಂದು ಜನರು ಈಗಲೇ ಅದನ್ನು ಸಂಗ್ರಹಿಸಿಡುತ್ತಾರೆ. ಇನ್ನು ಬೇಸಿಗೆಯಲ್ಲಿ ಸೋಲಾರ್ ಬಿಸಿ ಆದರೂ ಮಳೆಗಾಲದಲ್ಲಿ ಅದರ ಕೆಲಸ ಕಮ್ಮಿ. ಆಗ ಜನರು ಕಟ್ಟಿಗೆಗಾಗಿಯೇ ಅವಲಂಬಿತರಾಗುತ್ತಾರೆ. ಈಗ ಸೌದೆ ಒಡೆಯುವ ಕೆಲಸ ಯಂತ್ರಗಳೇ ಮಾಡುತ್ತಿದೆ. ಈ ಯಂತ್ರ ಜನರು ಪರಿಶ್ರಮಕ್ಕೆ ಬ್ರೇಕ್ ಹಾಕಿದ್ದು, ಕಷ್ಟದ ಕೆಲಸ ಸುಲಭ ಮಾಡುತ್ತಿದೆ.
ಈ ಮಿಷಿನ್ನ ಬೆಲೆ 2.5 ಲಕ್ಷ ರೂಪಾಯಿ. ಬೆಳ್ತಂಗಡಿ ತಾಲೂಕಿನ ಸವಣಾಲಿನ ಕೇಶವ ಗೌಡ ಎನ್ನುವವರು ಇದನ್ನು ತಮಿಳುನಾಡಿನಿಂದ ತರಿಸಿದ್ದಾರೆ. ಇದು ಪೆಟ್ರೋಲ್ ಚಾಲಿತ ಯಂತ್ರವಾಗಿದ್ದು, ಸಣ್ಣ ಕಟ್ಟಿಗೆಯಿಂದ ಹಿಡಿದು ದೊಡ್ಡ ಕಟ್ಟಿಗೆಯವರೆಗೆ ನಮಗೆ ಬೇಕಾದ ಗಾತ್ರಕ್ಕೆ ಈ ಯಂತ್ರದಲ್ಲಿ ತುಂಡು ಮಾಡಬಹುದು.
ಇದನ್ನೂ ಓದಿ : ಈಶ್ವರಪ್ಪ ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ಮೋದಿ ಭಾಗಿ!?
ಯಂತ್ರ ಚಾಲನೆಗೊಂಡಂತೆ ಚೂಪಾದ ಕೊಡಲಿಯ ಮೊನೆಯೊಂದು ಮೇಲಿನಿಂದ ಕೆಳಗೆ ಬರುತ್ತದೆ. ಇದು ಕಟ್ಟಿಗೆಯನ್ನು ಕ್ಷಣ ಮಾತ್ರದಲ್ಲಿ ಸೀಳಿ ಹಾಕುತ್ತದೆ. ಈ ಕೆಲಸಕ್ಕೆ ಇಬ್ಬರು ಇದ್ದಾರೆ.
ಜನರ ಶ್ರಮದಿಂದ ದಿನಗಟ್ಟಲೇ ಆಗುವ ಕೆಲಸ ಈ ಯಂತ್ರದ ಸಹಾಯದಿಂದ ಒಂದೆರಡು ಗಂಟೆಗಳಲ್ಲಿ ಆಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಕಟ್ಟಿಗೆ ಒಡೆಯಲು ಈಗ ಕಾರ್ಮಿಕರು ಸಿಗುತ್ತಿಲ್ಲ. ಆದ್ದರಿಂದ, ಈ ಯಂತ್ರ ಜನರ ಸಹಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎನ್ನುವುದು ಜನರ ಅಭಿಪ್ರಾಯ.