ಬೆಂಗಳೂರು: ಮಹಿಳೆಯೋರ್ವರು ಬಾಡಿಗೆ ಕೇಳುವ ನೆಪದಲ್ಲಿ ಬಂದು ಚಿನ್ನಾಭರಣ ಕಳ್ಳತನ ಮಾಡಿರೋ ಘಟನೆ ಎ.18ರಂದು ರಾಜಾಜಿನಗರದ ಪ್ರಕಾಶ ನಗರದಲ್ಲಿ ನಡೆದಿದೆ.
ಶ್ರೀರಾಂಪುರದ ನಿವಾಸಿ ಗ್ರೇಸಿಯು ಬಂಧಿತ ಆರೋಪಿ.
ಚಿಕ್ಕಮ್ಮನಿಗೆ ಮನೆ ಬಾಡಿಗೆ ಬೇಕು ಎಂದು ಆಗಮಿಸಿದ್ದ ಮಹಿಳೆ ಮನೆ ನೋಡಿ ಹೋಗಿದ್ದಳು. ಆ ಬಳಿಕ 8 ದಿನ ಬಿಟ್ಟು ಬಂದಿದ್ದ ಆರೋಪಿ ಮನೆಯನ್ನೆಲ್ಲ ಗಮನಿಸಿದ್ದಳು.
ಮತ್ತೆ 15 ದಿನಗಳ ಬಳಿಕ ಬಾಡಿಗೆ ಸಂಬಂಧ ಮಾತುಕತೆಗೆ ಬಂದು ತನ್ನ ಕೈ ಚಳಕವನ್ನು ತೋರಿಸಿದ್ದಳು.
ಮನೆಗೆ ಎಂಟ್ರಿ ಕೊಟ್ಟು ಮನೆಯಲ್ಲಿದ್ದ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೆಪ್ ಆಗಿದ್ದಳು.
ಈ ಖತರ್ನಾಕ್ ಮಹಿಳೆಯನ್ನು ರಾಜಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಆರೋಪಿ ಮನೆಯಿಂದ ಎಸ್ಕೆಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದನ್ನು ಗಮನಿಸಿ ಕಾರ್ಯಾಚರಣೆ ನಡೆಸಿ ಖತರ್ನಾಕ್ ಮಹಿಳೆಯನ್ನು ಬಂಧಿಸಿದ್ದಾರೆ.