Connect with us

    BANTWAL

    ವಿಟ್ಲದಲ್ಲಿ ಬ್ಯಾಂಕ್ ದರೋಡೆಗೆ ಯತ್ನಿಸಿ ಕಳ್ಳರು ಬರಿಗೈಯಲ್ಲಿ ವಾಪಸ್..

    Published

    on

    ವಿಟ್ಲ: ಬ್ಯಾಂಕ್ ಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಕಳ್ಳರು ಬರಿಗೈಯಲ್ಲಿ ವಾಪಾಸ್ ಆಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕೋಡಪದವು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ನಡೆದಿದೆ.


    ಮುಂಬಾಗಿಲಿನ ಶಟರ್ ನ ಕೊಯ್ದು ಬ್ಯಾಂಕ್ ನ ಒಳಗೆ ನುಗ್ಗಿದ ಕಳ್ಳರು ಎಲ್ಲಾ ಕಡೆ ಜಾಲಾಡಿದ್ದಾರೆ. ಶೇಪ್ ಲಾಕರ್ ವ್ಯವಸ್ಥೆ ಇರುವ ಬ್ಯಾಂಕ್ ಆಗಿದ್ದರಿಂದ ಕಳ್ಳರು ಬರಿಗೈಯಲ್ಲಿ ವಾಪಾಸು ಹೋಗಿದ್ದಾರೆ.

    ಬೀಗ ಹಾಕುವ ಸ್ಥಳದಲ್ಲಿ ಶಟರ್ ನ್ನು ಗ್ಯಾಸ್ ಕಟ್ಟಿಂಗ್ ಮೂಲಕ ತುಂಡು ಮಾಡಿ ಕಬ್ಬಿಣದ ಲಿವರ್ ಬಳಸಿ ಶಟರ್ ಮುರಿದು ಬ್ಯಾಂಕ್ ನ ಒಳಗೆ ನುಗ್ಗಿ ಜಾಲಾಡಿ ಕಳವಿಗೆ ಪ್ರಯತ್ನಿಸಿ ಸಾಧ್ಯವಾಗದೆ ವಾಪಾಸು ಹೋಗಿದ್ದಾರೆ.


    ಬ್ಯಾಂಕ್ ಗೆ ಅಳವಡಿಸಿದ ಸಿ.ಸಿ.ಕ್ಯಾಮರಾ ವನ್ನು ತಿರುಗಿಸಿ ಬಳಿಕ ಒಳಗೆ ನುಗ್ಗಿದ್ದಾರೆ ಅಂತ ಹೇಳಲಾಗುತ್ತಿದೆ.‌ ವಿಟ್ಲ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವ ಮೊದಲೇ ಸಾರ್ವಜನಿಕರು ಬ್ಯಾಂಕ್ ನೊಳಗೆ ಪ್ರವೇಶಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.


    ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    BANTWAL

    ಬಂಟ್ವಾಳ: ಗದ್ದೆಗೆ ಪಲ್ಟಿಯಾದ ಖಾಸಗಿ ಬಸ್

    Published

    on

    ಬಂಟ್ವಾಳ: ಅಜಿಲಮೊಗರು-ಸರಪಾಡಿ ರಸ್ತೆಯ ಮಣಿನಾಲ್ಕೂರು ಗ್ರಾಮದ ಕೊಟ್ಟುಂಜದಲ್ಲಿ ಸರಪಾಡಿ-ಬಿ.ಸಿ ರೋಡು ಮಧ್ಯೆ ಸಂಚರಿಸುವ ಖಾಸಗಿ ಬಸ್ ಪಲ್ಟಿಯಾದ ಘಟನೆ ಜುಲೈ 15 ರ ಸೋಮವಾರ ನಡೆದಿದೆ.

    ಬಸ್ ಸಂಪೂರ್ಣವಾಗಿ ಗದ್ದೆಗೆ ಪಲ್ಟಿಯಾಗಿದ್ದು, ಪ್ರಯಾಣಿಕರು ಯಾವೂದೇ ಗಾಯಗಳಿಲ್ಲದೇ ಪಾರಾಗಿದ್ದಾರೆ. ವಿಪರೀತ ಮೆಳೆಯಿಂದಾಗಿ ಗದ್ದೆಯಲ್ಲಿ ನೀರು ತುಂಬಿದ್ದು, ಹೀಗಾಗಿ ಕೆಲ ಪ್ರಯಾಣಿಕರು ಕೆಸರಿನಿಂದ ತುಂಬಿದ್ದರು ಎನ್ನಲಾಗಿದೆ.

    Continue Reading

    BANTWAL

    ಆಟೋ ರಿಕ್ಷಾದಲ್ಲೇ 4 ರಾಜ್ಯ ಸುತ್ತಿದ ಬಂಟ್ವಾಳದ ಯುವಕರು

    Published

    on

    ಬಂಟ್ವಾಳ: ನಗರದ ಯುವಕರಿಬ್ಬರು ಆಟೋ ರಿಕ್ಷಾದಲ್ಲೇ 11 ದಿನಗಳಲ್ಲಿ 4,200 ಕಿ.ಮೀ ಸಂಚರಿಸಿ ನಾಲ್ಕು ರಾಜ್ಯಗಳನ್ನು ಸುತ್ತಾಡಿ ಐದು ಜ್ಯೋತಿರ್ಲಿಂಗಗಳ ದರ್ಶನ ಮಾಡಿ ಬಂದಿದ್ದಾರೆ.

    ಮೆಲ್ಕಾರಿನ ಕ್ಯಾಟರಿಂಗ್ ಉದ್ಯಮಿ ವಿಜೇತ್ ನಾಯಕ್ ಹಾಗೂ ಕಲ್ಲಡ್ಕದ ಸಾಫ್ಟ್‌ವೇರ್ ಇಂಜಿನಿಯರ್ ವಿಶ್ವಾಸ್ ಪ್ರಭು ಅವರು ಜೂ.26 ರಂದು ಮುಂಜಾನೆ 4 ಗಂಟೆಗೆ ಪ್ರವಾಸ ಆರಂಭಿಸಿ ಜು.9 ರಂದು ಊರಿಗೆ ಮರಳಿದ್ದಾರೆ.

    ಊರಿನಿಂದ ಹೊರಟ ಯುವಕರು ಕರ್ನಾಟಕ, ಗೋವಾವನ್ನು ದಾಡಿ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿ ಗೃಷ್ಣೇಶ್ವರ, ಭೀಮಾಶಂಕರ, ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ಕ್ಷೇತ್ರಗಳ ದರ್ಶನ ಮಾಡಿ ಮುಂದೆ ಗುಜರಾತ್‌ನ ನಾಗೇಶ್ವರ, ಸೋಮನಾಥ ಜ್ಯೋತಿರ್ಲಿಂಗ ಕ್ಷೇತ್ರಗಳಿಗೆ ತೆರಳಿದ್ದಾರೆ. ಜತೆಗೆ ಎಲ್ಲೋರ, ದ್ವಾರಕಾ, ಏಕತಾ ವಿಗ್ರಹ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

    ಇದಕ್ಕಾಗಿ ತಲಾ 14 ಸಾವಿರ ರೂ. ಖರ್ಚಾಗಿದೆ. 1 ದಿನಗಳ ಪ್ರವಾಸದಲ್ಲಿ ಊಟ-ಉಪಾಹಾರವನ್ನು ಇವರೇ ತಯಾರಿಸಿದ್ದಾರೆ. ಇದಕ್ಕಾಗಿ ದಿನಸಿ ಸಾಮಾನು, ಗ್ಯಾಸ್, ಪಾತ್ರೆಗಳನ್ನು ಜತೆಯಲ್ಲಿ ಕೊಂಡೊಯ್ದಿದ್ದರು.

    ಇವರಿಬ್ಬರೂ ಬಾಲ್ಯ ಸ್ನೇಹಿತರಾಗಿದ್ದು, ಈ ಹಿಂದೆ ಆಟೋ ರಿಕ್ಷಾದ ಮೂಲಕ ಅನಂತಪುರ, ಚಾರ್ಮಾಡಿ ಮೊದಲಾದ ಭಾಗಗಳಿಗೆ ಸಾಕಷ್ಟು ಬಾರಿ ತೆರಳಿದ್ದರು. ಆದರೆ ಇಷ್ಟು ದೂರದ ಪ್ರವಾಸವನ್ನು ಇದೇ ಮೊದಲ ಬಾರಿಗೆ ಕೈಗೊಂಡಿದ್ದರು.

    Continue Reading

    BANTWAL

    ಬಂಟ್ವಾಳದ ನೇತ್ರಾವತಿ ನದಿಯಲ್ಲಿ ನೀರಿನ‌ ಮಟ್ಟ ಹೆಚ್ಚಳ

    Published

    on

    ಬಂಟ್ವಾಳ: ಬಂಟ್ವಾಳದ ನೇತ್ರಾವತಿ ನದಿಯಲ್ಲಿ ನೀರಿನ‌ ಮಟ್ಟ ಹೆಚ್ಚಳವಾಗಿದ್ದು, ಸದ್ಯಕ್ಕೆ ನೀರಿನ ಮಟ್ಟ 6.1 ಮೀ.ನಷ್ಟಿದೆ.ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿರುವ ಪರಿಣಾಮ ನೀರಿನ ಮಟ್ಟ ಹೆಚ್ಚಳಗೊಂಡಿದೆ.

    ನೀರು ಹೆಚ್ಚಳದಿಂದ ತುಂಬೆ ಡ್ಯಾಮ್ ನ ಎಲ್ಲಾ ಗೇಟ್ ಗಳನ್ನು ತೆರವು ಮಾಡಿದರೆ ನೀರು ತೀರಾ ಇಳಿಕೆಯಾಗುವ ಸಾಧ್ಯತೆಯೂ ಇದೆ. ಉಪ್ಪಿನಂಗಡಿಯಲ್ಲೂ ನೀರಿನ ಮಟ್ಟ ಹೆಚ್ಚಳಗೊಂಡಿದೆ ಎನ್ನಲಾಗಿದೆ.

    ಬಂಟ್ವಾಳದಲ್ಲಿ 8 ಮೀ. ಅಪಾಯಕಾರಿ ಮಟ್ಟವಾಗಿದ್ದು, 8.5 ಮೀ. ತಲುಪಿದರೆ ಪಾಣೆಮಂಗಳೂರಿನ ಭಾಗದಲ್ಲಿ ಪ್ರವಾಹದ ನೀರು ಮನೆಯೊಳಗೆ ನುಗ್ಗುತ್ತದೆ.

    Continue Reading

    LATEST NEWS

    Trending